Home
ಮೊಬೈಲ್

ಆ.29ಕ್ಕೆ Realme 13 ಸರಣಿ ಬಿಡುಗಡೆ: ಫೀಚರ್ಸ್ ಬಹಿರಂಗ, ಬೆಲೆಯೂ ಲೀಕ್!

ರಿಯಲ್‌ಮಿ ಕಂಪನಿಯು ತನ್ನ ಹೊಸ 13 (Realme 13 5G) ಸರಣಿಯ 5G ಸ್ಮಾರ್ಟ್‌ಫೋನ್‌ಗಳನ್ನು ಭಾರತದಲ್ಲಿ ಆಗಸ್ಟ್ 29 ರಂದು ಬಿಡುಗಡೆ ಮಾಡಲಿದೆ. ಈ ಸರಣಿಯಲ್ಲಿ ಎರಡು ಹೊಸ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಲಗ್ಗೆ ಇಡಲಿವೆ. ಒಂದು ರಿಯಲ್‌ಮಿ 13 5G (Realme 13 5G). ಮತ್ತೊಂದು, ರಿಯಲ್‌ಮಿ 13+ 5G (Realme 13+ 5G) ಹೆಸರಿನೊಂದಿಗೆ ಲಾಂಚ್ ಆಗಲಿದೆ. ಕಂಪನಿಯು ಬಿಡುಗಡೆಗೆ ಮುನ್ನವೇ, ಕೆಲವು ವೈಶಿಷ್ಟ್ಯಗಳನ್ನು ಬಹಿರಂಗಪಡಿಸಿದೆ. ಬನ್ನಿ, ರಿಯಲ್‌ಮಿ 13 5G ಸರಣಿಯ ವಿಶೇಷತೆಗಳನ್ನು ತಿಳಿಯೋಣ.

ಆಗಸ್ಟ್ ಮೊದಲ ವಾರದಲ್ಲಿ ಶುರುವಾದ ಸ್ಮಾರ್ಟ್‌ಫೋನ್‌ಗಳ ಬಿಡುಗಡೆ ಭರಾಟೆ ತಿಂಗಳ ಅಂತ್ಯದ ವರೆಗೂ ನಿಂತಿಲ್ಲ. ಈ ಪೈಕಿ ರಿಯಲ್‌ಮಿ ಕಂಪನಿಯ ಫೋನ್‌ಗಳೇ ಹೆಚ್ಚು ಸದ್ದು ಮಾಡಿವೆ. ಇದೀಗ, ಆಗಸ್ಟ್ ಅಂತ್ಯದ ವೇಳೆಗೆ ರಿಯಲ್‌ಮಿ ನಂಬರ್ ಸರಣಿಯಲ್ಲಿ ಹೊಸ ಫೋನ್‌ಗಳು ಭಾರತದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. ರಿಯಲ್‌ಮಿ 13 ಪ್ರೊ ಸರಣಿಯನ್ನು ಕಳೆದ ತಿಂಗಳು ಬಿಡುಗಡೆ ಮಾಡಲಾಗಿದೆ. ಇದೀಗ, ರಿಯಲ್‌ಮಿ 13 5G ಸರಣಿಯನ್ನು ರಿಲೀಸ್ ಮಾಡಲಿದೆ.

ಆ.29ಕ್ಕೆ Realme 13 ಸರಣಿ ಬಿಡುಗಡೆ: ಫೀಚರ್ಸ್ ಬಹಿರಂಗ, ಬೆಲೆಯೂ ಲೀಕ್!

ರಿಯಲ್‌ಮಿ 13 ಸರಣಿಯ ಬಿಡುಗಡೆ ದಿನಾಂಕ

ರಿಯಲ್‌ಮಿ ಪ್ರತಿ 6 ತಿಂಗಳಿಗೊಮ್ಮೆ ತನ್ನ ನಂಬರ್ ಸರಣಿಯನ್ನು ವಿಸ್ತರಿಸುತ್ತದೆ. ಕಳೆದ ಮಾರ್ಚ್‌ನಲ್ಲಿ ರಿಯಲ್‌ಮಿ 12 (Realme 12) ಸರಣಿಯನ್ನು ಭಾರತದಲ್ಲಿ ಪ್ರಾರಂಭಿಸಲಾಯಿತು. ಪ್ರಸ್ತುತ, ರಿಯಲ್‌ಮಿ 13 ಸರಣಿಯ ಬಿಡುಗಡೆ ಈವೆಂಟ್ ಭಾರತದಲ್ಲಿ ಆಗಸ್ಟ್ 29 ರಂದು ಮಧ್ಯಾಹ್ನ 12 ಗಂಟೆಗೆ ನಡೆಯಲಿದೆ. ಈ ಫೋನ್‌ಗಳು ಆನ್‌ಲೈನ್ ಮತ್ತು ಆಫ್‌ಲೈನ್ ಚಿಲ್ಲರೆ ವ್ಯಾಪಾರಿಗಳಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಮಾರಾಟವಾಗುವ ಸಾಧ್ಯತೆಯಿದೆ. ಮುಂಬರುವ ಫೋನ್‌ಗಳಿಗಾಗಿ ಮೈಕ್ರೋಸೈಟ್ ಈಗ ಫ್ಲಿಪ್‌ಕಾರ್ಟ್ ಲಭ್ಯವಿದೆ.

ರಿಯಲ್‌ಮಿ 13 ಸರಣಿಯ ನಿರೀಕ್ಷಿತ ಬೆಲೆ

ರಿಯಲ್‌ಮಿ 13 ಸರಣಿಯ ಆರಂಭಿಕ ಬೆಲೆ ಆಫರ್‌ಗಳನ್ನು ಒಳಗೊಂಡಂತೆ 15,000 ರೂ.ನಿಂದ 20,000 ರೂ. ಇರುವ ಸಾಧ್ಯತೆಯಿದೆ. ಈ ಹಿಂದೆ ರಿಯಲ್‌ಮಿ 12 ಮತ್ತು ರಿಯಲ್‌ಮಿ 12+ ಫೋನನ್ನು ಕ್ರಮವಾಗಿ 16,999 ರೂ. ಮತ್ತು 20,999 ರೂ. ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡಲಾಗಿತ್ತು. ರಿಯಲ್‌ಮಿ 12 ಫೋನಿನ 8RAM ಮತ್ತು 128GB ರೂಪಾಂತರದ ಬೆಲೆ 17,999 ರೂ. ಮತ್ತು ರಿಯಲ್‌ಮಿ 12+ ಫೋನಿನ 8RAM ಮತ್ತು 256GB ರೂಪಾಂತರದ ಬೆಲೆ 21,999 ರೂ. ಇದೆ.

ರಿಯಲ್‌ಮಿ 13 ಸರಣಿಯ ವಿನ್ಯಾಸ

ರಿಯಲ್‌ಮಿ 13 ಸರಣಿಯು ಹುವಾವೇ ಮೇಟ್ 60 ಪ್ರೊ (HUAWEI Mate 60 Pro) ಫೋನಿನಿಂದ ಸ್ಫೂರ್ತಿ ಪಡೆದ ವಿನ್ಯಾಸವನ್ನು ಹೊಂದಿರಲಿದೆ. ರಿಯಲ್‌ಮಿ ನಾರ್ಜೊ 70 ಪ್ರೋ ಫೋನ್‌ ಅನ್ನು ಹೋಲುತ್ತದೆ. ಸೋರಿಕೆಯಾಗಿರುವ ಈ ಫೋನಿನ ಚಿತ್ರಗಳ ಪ್ರಕಾರ, ಇದು ಕ್ಲೀನ್ ಮ್ಯಾಟ್ ಫಿನಿಶ್ ಮತ್ತು ಕೆಳಭಾಗದಲ್ಲಿ ವೃತ್ತಾಕಾರದ ಕ್ಯಾಮೆರಾ ಹೊಂದಿದೆ. ಡ್ಯುಯಲ್ ಟೋನ್ ಫಿನಿಶ್ ಇದೆ. ಕ್ಯಾಮರಾ ಬಂಪ್ ಸುತ್ತಲೂ ಇರುವ ರಿಂಗ್ ವಿವೋ X100 ಫೋನಿನಂತೆ ಕಾಣುತ್ತದೆ. ಇದು ಫ್ಲಾಟ್ AMOLED ಪ್ಯಾನೆಲ್ ಒಳಗೊಂಡಿರುವ ನಿರೀಕ್ಷೆಯಿದೆ.

ಆ.29ಕ್ಕೆ Realme 13 ಸರಣಿ ಬಿಡುಗಡೆ: ಫೀಚರ್ಸ್ ಬಹಿರಂಗ, ಬೆಲೆಯೂ ಲೀಕ್!

ರಿಯಲ್‌ಮಿ 13 ಪ್ಲಸ್ 5G ಫೋನಿನ ವೈಶಿಷ್ಟ್ಯಗಳು

ರಿಯಲ್‌ಮಿ 13 ಪ್ಲಸ್ 5G ಫೋನ್ 6.67 ಇಂಚಿನ AMOLED FHD+ ಡಿಸ್ಪ್ಲೇಯನ್ನು ಹೊಂದಿರಲಿದೆ. ಇದು 2400 x 1080 ಪಿಕ್ಸೆಲ್ ರೆಸಲ್ಯೂಶನ್‌ ಪಡೆದಿರಲಿದೆ. ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಚಿಪ್‌ಸೆಟ್‌ನೊಂದಿಗೆ ಬರುವ ನಿರೀಕ್ಷೆಯಿದೆ. ಈ ಫೋನ್ ಸುಮಾರು ನಾಲ್ಕು RAM ರೂಪಾಂತರಗಳಲ್ಲಿ ಬರುವ ಸಾಧ್ಯತೆಯಿದೆ. 6GB, 8GB, 12GB ಮತ್ತು 16GB RAM ಜೊತೆಗೆ 128GB, 256GB, 512GB ಮತ್ತು 1 TB ಸ್ಟೋರೇಜ್‌ ಆಯ್ಕೆ ಒಳಗೊಂಡಿರಲಿದೆ.

ರಿಯಲ್‌ಮಿ 13 ಪ್ಲಸ್ 5G ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿರುವ ಸಾಧ್ಯತೆಯಿದೆ. ಈ ಫೋನ್ 50MP ಮುಖ್ಯ ಕ್ಯಾಮೆರಾ ಮತ್ತು 2MP ಸೆಕೆಂಡರಿ ಕ್ಯಾಮೆರಾವನ್ನು ಹಿಂಬದಿಯ ಪ್ಯಾನೆಲ್‌ನಲ್ಲಿ ಒಳಗೊಂಡಿರುತ್ತದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇರಲಿದೆ. ಈ ಸ್ಮಾರ್ಟ್‌ಫೋನ್ 5,000mAhಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಲಿದೆ. ಆದರೆ, ಇದರ ಸಾಮಾನ್ಯ ಸಾಮರ್ಥ್ಯವು 5,000mAh ಆಗಿರಬಹುದು. ಇದು 45W ವೇಗದ ಚಾರ್ಜಿಂಗ್ ಸಪೋರ್ಟ್‌ ಪಡೆಯಬಹುದು.

ಮುಂಬರುವ ರಿಯಲ್‌ಮಿ 13 ಪ್ಲಸ್ 5G ಫೋನ್ ಭದ್ರತೆಗಾಗಿ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಹೊಂದಿರುವ ಸಾಧ್ಯತೆಯಿದೆ. ಇನ್ನೂ ಸಾಫ್ಟ್‌ವೇರ್‌ ಬಗ್ಗೆ ಹೇಳುವುದಾದರೆ, ಈ ರಿಯಲ್‌ಮಿ 13 ಪ್ಲಸ್ 5G ಫೋನ್ Android 14 ಆಧಾರಿತ Realme UI 5 ನಲ್ಲಿ ಕೆಲಸ ನಿರ್ವಹಿಸಲಿದೆ. ಇದು 161.7 x 74.7 x 7.6mm ದಪ್ಪ ಮತ್ತು ಸುಮಾರು 185 ಗ್ರಾಂ ತೂಕ ಇರಲಿದೆ.

ಆ.29ಕ್ಕೆ Realme 13 ಸರಣಿ ಬಿಡುಗಡೆ: ಫೀಚರ್ಸ್ ಬಹಿರಂಗ, ಬೆಲೆಯೂ ಲೀಕ್!

ರಿಯಲ್‌ಮಿ 13 5G ಸರಣಿಯ ವೈಶಿಷ್ಟ್ಯಗಳು

ಮುಂಬರುವ ಫೋನ್‌ಗಳನ್ನು ಶಕ್ತಿಯುತ ಪ್ರೊಸೆಸರ್, ವೇಗದ RAM ಮತ್ತು ಚಾರ್ಜಿಂಗ್ ತಂತ್ರಜ್ಞಾನದೊಂದಿಗೆ ಬಿಡುಗಡೆ ಮಾಡಲಾಗುತ್ತದೆ ಎಂದು ರಿಯಲ್‌ಮಿ ಕಂಪನಿ ಸ್ಪಷ್ಟಪಡಿಸಿದೆ. ಹೊಸ ಸರಣಿಯ ಫೋನ್‌ಗಳು ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಚಿಪ್‌ಸೆಟ್‌ ಹೊಂದಿರುವ ಮೊದಲ ಸ್ಮಾರ್ಟ್‌ಫೋನ್ ಆಗಿರಲಿದೆ. ಇದನ್ನು 4nm ಪ್ರಕ್ರಿಯೆ ತಂತ್ರಜ್ಞಾನದಲ್ಲಿ ನಿರ್ಮಿಸಲಾಗಿದೆ. ಉನ್ನತ ಶಕ್ತಿ ಮತ್ತು ದಕ್ಷತೆಯನ್ನು ನೀಡಲು, ತಡೆರಹಿತ ಬಹುಕಾರ್ಯಕ ಮತ್ತು ಗೇಮಿಂಗ್ ಅನುಭವಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ.

ಕಂಪನಿಯ ಪ್ರಕಾರ, ಈ ಸರಣಿಯ ಫೋನ್‌ಗಳ ಅಂತುಟು ಸ್ಕೋರ್ (Antutu score) 750K ಬಂದಿದೆ. ಈ ಸರಣಿಯ ಫೋನ್‌ಗಳಲ್ಲಿ 26GB RAM ಇರಲಿದೆ. ಕಂಪನಿಯು 5,000mAh ಸಾಮರ್ಥ್ಯದ ಬ್ಯಾಟರಿಯನ್ನು ನೀಡಲಿದೆ. ಇದು 80Hz ಅಲ್ಟ್ರಾ ಫಾಸ್ಟ್ ಚಾರ್ಜಿಂಗ್ ಸಪೋರ್ಟ್‌ ಹೊಂದಿರುತ್ತದೆ. 5 ನಿಮಿಷಗಳಲ್ಲಿ ಒಂದು ಗಂಟೆ ಗೇಮಿಂಗ್‌ಗೆ ಈ ಫೋನನ್ನು ಚಾರ್ಜ್ ಮಾಡಲಾಗುತ್ತದೆ ಎಂದು ಕಂಪನಿ ಹೇಳಿದೆ. ಅಲ್ಲದೆ, ಮೃದುವಾದ ಗೇಮಿಂಗ್‌ಗಾಗಿ ಈ ಫೋನ್‌ಗಳು 90 FPS ಎಡ್ಜ್ ಅನ್ನು ಪಡೆಯುತ್ತವೆ.

Best Mobiles in India

English summary
Realme 13 Series 5G to launch in India on August 29: Realme 13+ key Specs confirmed ahead of India launch
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+