Home
ಮೊಬೈಲ್

ಇಂದು Realme 13 Pro+ ಸೇಲ್: ಈ ಫೋನ್ ಖರೀದಿಸಿದ್ರೆ 7,000 ಡಿಸ್ಕೌಂಟ್!

ರಿಯಲ್‌ಮಿ ಸ್ಮಾರ್ಟ್‌ಫೋನ್‌ಗಳಿಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಇದೆ. ಕಂಪನಿಯು ಇತ್ತೀಚೆಗೆ ರಿಯಲ್‌ಮಿ 13 ಪ್ರೊ ಪ್ಲಸ್ 5G (Realme 13 Pro+ 5G) ಫೋನನ್ನು ಹೊಸ ಬಣ್ಣದಲ್ಲಿ ಪರಿಚಯಿಸಿದೆ. ಅಂದಹಾಗೆ, ಈ ಫೋನ್ ಇಂದು (ಸೆಪ್ಟಂಬರ್ 2) ತನ್ನ ಮೊದಲ ಮಾರಾಟ ಪ್ರಾರಂಭಿಸಿದೆ. ಮೊದಲೇ ದಿನವೇ ಈ ಫೋನನ್ನು ಖರೀದಿಸುವ ಗ್ರಾಹಕರಿಗೆ ಕಂಪನಿಯು ಹಲವು ಆಫರ್‌ ಘೋಷಿಸಿದೆ. ಈ ಹೊಸ ಬಣ್ಣದ ರೂಪಾಂತರವು ಫ್ಲಿಪ್‌ಕಾರ್ಟ್, ರಿಯಲ್‌ಮೆ ಇಂಡಿಯಾ ವೆಬ್‌ಸೈಟ್ ಮತ್ತು ಆಫ್‌ಲೈನ್ ಸ್ಟೋರ್‌ಗಳಲ್ಲಿ ಖರೀದಿಗೆ ಲಭ್ಯವಿದೆ.

ರಿಯಲ್‌ಮಿ 13 ಪ್ರೊ ಪ್ಲಸ್ 5G ಅನ್ನು ಪ್ರಾರಂಭದಲ್ಲಿ ಹಸಿರು ಮತ್ತು ಗೋಲ್ಡ್‌ ಬಣ್ಣದಲ್ಲಿ ಮಾರುಕಟ್ಟೆಗೆ ಪರಿಚಯಿಸಲಾಗಿತ್ತು. ಇದೀಗ, ಮೊನೆಟ್ ಪರ್ಪಲ್ ಬಣ್ಣದಲ್ಲಿ ಖರೀದಿಗೆ ಲಭ್ಯವಿದೆ. ಇದು ಸ್ನಾಪ್‌ಡ್ರಾಗನ್ 7s Gen 2 SoC ಅನ್ನು ಒಳಗೊಂಡಿದೆ. 6.7 ಇಂಚಿನ ಪೂರ್ಣ HD+ AMOLED ಡಿಸ್ಪ್ಲೇ, 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಇದು 5,200mAh ಬ್ಯಾಟರಿ ಜೊತೆಗೆ ಎಐ ವೈಶಿಷ್ಟ್ಯಗಳನ್ನು ಸಹ ಹೊಂದಿದೆ.

ಇಂದು Realme 13 Pro+ ಸೇಲ್: ಈ ಫೋನ್ ಖರೀದಿಸಿದ್ರೆ 7,000 ಡಿಸ್ಕೌಂಟ್!

ರಿಯಲ್‌ಮಿ 13 ಪ್ರೊ ಪ್ಲಸ್ 5G ಫೋನಿನ ಬೆಲೆ

ರಿಯಲ್‌ಮಿ 13 ಪ್ರೊ ಪ್ಲಸ್ 5G ಮೊನೆಟ್ ಪರ್ಪಲ್ ಕಲರ್‌ ಎರಡು ಸ್ಟೋರೇಜ್‌ ಆಯ್ಕೆಗಳಲ್ಲಿ ಲಭ್ಯವಿದೆ. ಈ ಫೋನಿನ 8GB RAM ಮತ್ತು 256GB ಸ್ಟೋರೇಜ್‌ ಬೆಲೆ 32,999 ರೂ. ಇದೆ. 12GB ಮತ್ತು 256GB ಸ್ಟೋರೇಜ್‌ ಬೆಲೆ 34,999 ರೂ.ಗೆ ಮಾರಾಟವಾಗಲಿದೆ. ಕಂಪನಿಯು 3,000 ರೂ. ಬ್ಯಾಂಕ್‌ ಆಫರ್‌ ಮತ್ತು 4,000 ರೂ. ಎಕ್ಸ್‌ಚೇಂಜ್‌ ಆಫರ್‌ ನೀಡುತ್ತದೆ. ಇಂದು (ಸೆಪ್ಟೆಂಬರ್ 2) ಮಧ್ಯಾಹ್ನ 12 ಗಂಟೆಯಿಂದ ಖರೀದಿಗೆ ಲಭ್ಯವಿರುತ್ತದೆ.

ರಿಯಲ್‌ಮಿ 13 ಪ್ರೊ ಪ್ಲಸ್ 5G ಮೊನೆಟ್ ಗೋಲ್ಡ್ ಮತ್ತು ಪಚ್ಚೆ ಹಸಿರು ರೂಪಾಂತರವು ಸಹ ಇಂದಿನಿಂದ ಮಾರಾಟವಾಗಲಿದೆ. ಇದು ಸಹ ಎರಡು ಸ್ಟೋರೇಜ್‌ ಆಯ್ಕೆ ಹೊಂದಿದೆ. 8GB ಮತ್ತು 256GB ಸ್ಟೋರೇಜ್‌ ಬೆಲೆ 34,999 ರೂ. ಇದೆ. 12GB ಮತ್ತು 512GB ಸ್ಟೋರೇಜ್‌ ಬೆಲೆ 36,999 ರೂ.ಗೆ ಲಭ್ಯವಿದೆ.

ಇನ್ನೂ ಮೊನೆಟ್ ಗೋಲ್ಡ್, ಪಚ್ಚೆ ಹಸಿರು ಮತ್ತು ಮೊನೆಟ್ ಪರ್ಪಲ್ ರೂಪಾಂತರವು ನಾಳೆಯಿಂದ (ಸೆಪ್ಟೆಂಬರ್ 3) ಮಾರಾಟವಾಗಲಿದೆ. ಇದನ್ನು ಮೂರು ಸ್ಟೋರೇಜ್‌ನಲ್ಲಿ ಲಭ್ಯಗೊಳಿಸಲಾಗಿದೆ. 8GB ಮತ್ತು 256GB ಸ್ಟೋರೇಜ್‌ ಬೆಲೆ 32,999 ರೂ. ಇದೆ. 12GB ಮತ್ತು 256GB ಸ್ಟೋರೇಜ್‌ ಬೆಲೆ 34,999 ರೂ. ಆಗಿದೆ. 12GB ಮತ್ತು 512GB ಸ್ಟೋರೇಜ್‌ ಬೆಲೆ 36,999 ರೂ.ಗೆ ಮಾರಾಟವಾಗಲಿದೆ.

ರಿಯಲ್‌ಮಿ 13 ಪ್ರೊ ಪ್ಲಸ್ 5G ಫೋನಿನ ಫೀಚರ್ಸ್‌

ರಿಯಲ್‌ಮಿ 13 ಪ್ರೊ ಪ್ಲಸ್ 5G ಫೋನ್ 120Hz ರಿಫ್ರೆಶ್ ದರದೊಂದಿಗೆ 6.7 ಇಂಚಿನ FullHD+ ಡಿಸ್ಪ್ಲೇ ಹೊಂದಿದೆ. ಈ ಪಂಚ್-ಹೋಲ್ ಶೈಲಿಯ ಡಿಸ್ಲ್ಪೇಯನ್ನು AMOLED ಪ್ಯಾನೆಲ್‌ನಲ್ಲಿ ಮಾಡಲಾಗಿದೆ. ಇದು 2412 x 1080 ಪಿಕ್ಸೆಲ್ ರೆಸಲ್ಯೂಶನ್, 2000nits ಬ್ರೈಟ್‌ನೆಸ್ ಹೊಂದಿದೆ. ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕ ಮತ್ತು ಡಿಸ್ಲ್ಪೇ ರಕ್ಷಣೆಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 7i ಪಡೆದಿದೆ.

ರಿಯಲ್‌ಮಿ 13 ಪ್ರೊ ಪ್ಲಸ್ 5G ಫೋನ್ Qualcommನ ಸ್ನಾಪ್‌ಡ್ರಾಗನ್ 7S Gen 2 ಪ್ರೊಸೆಸರ್‌ ಅನ್ನು ಹೊಂದಿದೆ. ಇದು Adreno 710 GPU ಬೆಂಬಲಿಸುತ್ತದೆ. ಇದನ್ನು Android 14ನಲ್ಲಿ ಬಿಡುಗಡೆ ಮಾಡಲಾಗಿದೆ. ಇದು ಬ್ರ್ಯಾಂಡ್‌ನ ಸ್ವಂತ Realme UI 5.0 ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಕಂಪನಿಯು 2 ವರ್ಷಗಳ OS ನವೀಕರಣಗಳೊಂದಿಗೆ ಮತ್ತು 3 ವರ್ಷಗಳ ಭದ್ರತಾ ನವೀಕರಣಗಳೊಂದಿಗೆ ಪರಿಚಯಿಸಿದೆ.

50 ಮೆಗಾಪಿಕ್ಸೆಲ್ ಸೋನಿ ಕ್ಯಾಮೆರಾ

ಇದು 50 ಮೆಗಾಪಿಕ್ಸೆಲ್ ಸೋನಿ LYT-701 ಮುಖ್ಯ ಕ್ಯಾಮೆರಾ ಹೊಂದಿದೆ. ಜೊತೆಗೆ, 50 ಮೆಗಾಪಿಕ್ಸೆಲ್‌ ಸೋನಿ LYT-600 ಪೆರಿಸ್ಕೋಪ್ ಲೆನ್ಸ್ ಇದೆ. ಈ ಎರಡೂ ಕ್ಯಾಮೆರಾ ಸಂವೇದಕಗಳು OIS ತಂತ್ರಜ್ಞಾನವನ್ನು ಹೊಂದಿವೆ. ಫೋನಿನ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್ ಹೊಂದಿದೆ. ಸೆಲ್ಫಿಗಾಗಿ 32 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇದೆ.

ರಿಯಲ್‌ಮಿ 13 ಪ್ರೊ ಪ್ಲಸ್ 5G ಮೊಬೈಲ್ 5,200mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 80W SuperVOOC ವೇಗದ ಚಾರ್ಜಿಂಗ್ ತಂತ್ರಜ್ಞಾನವನ್ನು ಒಳಗೊಂಡಿದೆ.

Best Mobiles in India

English summary
Realme 13 Pro+ 5G Monet Purple Color Variant goes sale on Today via Flipkart: Price, Offer and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+