Home
ಮೊಬೈಲ್

ಮಾರುಕಟ್ಟೆಗೆ Realme 13 Pro+ ಎಂಟ್ರಿ.. ಈ ಫೀಚರ್‌ ಹೊಂದಿರುವ ವಿಶ್ವದ ಮೊದಲ ಫೋನ್ ಇದು!

ಇದುವೇ ನೋಡಿ, Sony LYT ಲೆನ್ಸ್‌ ಹೊಂದಿರುವ ವಿಶ್ವದ ಮೊದಲ ಸ್ಮಾರ್ಟ್‌ಫೋನ್! ಹೌದು, ರಿಯಲ್‌ಮಿ (Realme) ಕಂಪನಿಯು ಭಾರತದಲ್ಲಿ 13 Pro ಸರಣಿಯನ್ನು ಬಿಡುಗಡೆ ಮಾಡಿದೆ. ಈ ಸರಣಿಯ ಅಡಿಯಲ್ಲಿ Realme 13 Pro 5G ಮತ್ತು Realme 13 Pro+ 5G ಎಂಬ ಎರಡು ಫೋನ್‌ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಸರಣಿಯ ಅತಿದೊಡ್ಡ ಮಾದರಿಯಾದ Realme 13 Pro Plus ಡ್ಯುಯಲ್ ಸೋನಿ LYT ಕ್ಯಾಮೆರಾ, 12GB RAM ಮತ್ತು 5,200mAh ಬ್ಯಾಟರಿ ಜೊತೆಗೆ, ಇದು AI ವೈಶಿಷ್ಟ್ಯಗಳನ್ನು ಸಹ ಹೊಂದಿದೆ.

Realme 13 Pro Plus ಸ್ಮಾರ್ಟ್‌ಫೋನ್ ಟಾಪ್ 5 ವೈಶಿಷ್ಟ್ಯಗಳೊಂದಿಗೆ ಎಂಟ್ರಿ ಕೊಟ್ಟಿದೆ. ಮೊದಲನೆಯದಾಗಿ, ಇದು ಎರಡು Sony LYT ಲೆನ್ಸ್‌ಗಳನ್ನು ಹೊಂದಿರುವ ವಿಶ್ವದ ಮೊದಲ ಸ್ಮಾರ್ಟ್‌ಫೋನ್ ಆಗಿದೆ. ಈ ಫೋನ್ HyperImage+ ತಂತ್ರಜ್ಞಾನವನ್ನು ಹೊಂದಿದೆ. ಇದಲ್ಲದೆ, AI ಅಲ್ಟ್ರಾ ಕ್ಲಾರಿಟಿ, AI ಸ್ಮಾರ್ಟ್ ರಿಮೂವಲ್ ಮತ್ತು AI ಆಡಿಯೋ ಜೂಮ್‌ನಂತಹ ಕೃತಕ ಬುದ್ಧಿಮತ್ತೆ ವೈಶಿಷ್ಟ್ಯಗಳನ್ನು ಸಹ ಹೊಂದಿದೆ. ಈ ಫೋನಿನ ಬೆಲೆ ಮತ್ತು ಫೀಚರ್ಸ್‌ಗಳನ್ನು ತಿಳಿಯೋಣ ಬನ್ನಿ.

Realme 13 Pro+ ಫೋನ್ ಲಾಂಚ್.. ಈ ಫೀಚರ್‌ ಹೊಂದಿರುವ ವಿಶ್ವದ ಮೊದಲ ಫೋನ್ ಇದು!

Realme 13 Pro+ 5G ಫೋನಿನ ಬೆಲೆ ಎಷ್ಟು?

8GB RAM + 256GB ಸ್ಟೋರೇಜ್‌ ಬೆಲೆ = ರೂ. 32,999
12GB RAM + 256GB ಸ್ಟೋರೇಜ್‌ ಬೆಲೆ = ರೂ. 34,999
12GB RAM + 512GB ಸ್ಟೋರೇಜ್‌ ಬೆಲೆ = ರೂ. 36,999

Realme 13 Pro+ 5G ಫೋನಿನ ಬೆಲೆ 32,999 ರೂ.ನಿಂದ ಪ್ರಾರಂಭವಾಗುತ್ತದೆ. 12GB RAM ಮತ್ತು 256GB ಸ್ಟೋರೇಜ್‌ ಮಾದರಿಯ ಬೆಲೆ 34,999 ರೂ. ಇದೆ. 512GB ರೂಪಾಂತರದ ಬೆಲೆ 36,999 ರೂ. ಆಗಿದೆ. ಈ ರಿಯಲ್‌ಮಿ ಸ್ಮಾರ್ಟ್‌ಫೋನ್ ಅನ್ನು ಮೊನೆಟ್ ಗೋಲ್ಡ್ ಮತ್ತು ಎಮರಾಲ್ಡ್ ಗ್ರೀನ್ ಬಣ್ಣಗಳಲ್ಲಿ ಖರೀದಿಸಬಹುದು.

ಈ Realme 13 Pro 5G ಮತ್ತು Realme 13 Pro+ 5G ಫೋನ್‌ಗಳು realme.com, Flipkart ಮತ್ತು ಆಫ್‌ಲೈನ್ ಸ್ಟೋರ್‌ಗಳಲ್ಲಿ ಆಗಸ್ಟ್ 6 ರಿಂದ ಮಾರಾಟ ಪ್ರಾರಂಭಿಸಲಿವೆ. ಇಂದಿನಿಂದ (ಜುಲೈ 30 ರಂದು ಸಂಜೆ 6PM ನಿಂದ 12AM ವರೆಗೆ) ಆರಂಭಿಕ ಮಾರಾಟ ಪ್ರಾರಂಭವಾಗಲಿದ್ದು, ನಾಳೆಯಿಂದ (ಜುಲೈ 31) ಮುಂಗಡ ಬುಕಿಂಗ್ ಪ್ರಾರಂಭವಾಗುತ್ತದೆ. ಕಂಪನಿಯು 3,000 ರೂಪಾಯಿಗಳ ಡಿಸ್ಕೌಂಟ್‌ ಅನ್ನು ಘೋಷಿಸಿದೆ.

Realme 13 Pro+ 5G ಫೋನಿನ ಕ್ಯಾಮೆರಾ

ಇದು 50MP ಸೋನಿ LYT-701 ಮುಖ್ಯ ಕ್ಯಾಮೆರಾ ಹೊಂದಿದೆ. ಇದರೊಂದಿಗೆ, 50MP ಸೋನಿ LYT-600 ಪೆರಿಸ್ಕೋಪ್ ಲೆನ್ಸ್ ಇದೆ. ಈ ಎರಡೂ ಕ್ಯಾಮೆರಾ ಸಂವೇದಕಗಳು OIS ತಂತ್ರಜ್ಞಾನವನ್ನು ಹೊಂದಿವೆ. ಫೋನಿನ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ 8MP ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್ ಹೊಂದಿದೆ. ಸೆಲ್ಫಿಗಾಗಿ 32 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇದೆ. 3x ಆಪ್ಟಿಕಲ್ ಜೂಮ್, 73 ಎಂಎಂ ಫೋಕಲ್ ಲೆಂತ್, ಇನ್-ಸೆನ್ಸರ್ ಜೂಮ್ ತಂತ್ರಜ್ಞಾನದಂತಹ ವೈಶಿಷ್ಟ್ಯಗಳನ್ನು ಹೊಂದಿದೆ.

Realme 13 Pro+ 5G ಫೋನಿನ ಫೀಚರ್ಸ್‌

ಡಿಸ್ಪ್ಲೇ: ಇದು 2412 x 1080 ಪಿಕ್ಸೆಲ್ ರೆಸಲ್ಯೂಶನ್ ಜೊತೆಗೆ 6.7 ಇಂಚಿನ FullHD+ ಡಿಸ್ಪ್ಲೇ ಹೊಂದಿದೆ. ಈ ಪಂಚ್-ಹೋಲ್ ಶೈಲಿಯ ಡಿಸ್ಲ್ಪೇಯನ್ನು AMOLED ಪ್ಯಾನೆಲ್‌ನಲ್ಲಿ ಮಾಡಲಾಗಿದ್ದು, ಅದು 120Hz ರಿಫ್ರೆಶ್ ದರದಲ್ಲಿ ಕಾರ್ಯನಿರ್ವಹಿಸುತ್ತದೆ. ಇದು 2000nits ಬ್ರೈಟ್‌ನೆಸ್ ಮತ್ತು ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕವನ್ನು ಹೊಂದಿದೆ. ಡಿಸ್ಲ್ಪೇ ರಕ್ಷಣೆಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 7i ಪಡೆದಿದೆ.

ಪ್ರೊಸೆಸರ್: ಈ ಫೋನನ್ನು Qualcommನ ಸ್ನಾಪ್‌ಡ್ರಾಗನ್ 7S Gen 2 ಚಿಪ್‌ಸೆಟ್‌ನಲ್ಲಿ 4ನ್ಯಾನೋಮೀಟರ್ ಫ್ಯಾಬ್ರಿಕೇಶನ್‌ಗಳಲ್ಲಿ ಸ್ಥಾಪಿಸಲಾಗಿದೆ. ಈ ಆಕ್ಟಾಕೋರ್ ಪ್ರೊಸೆಸರ್ 2.4GHz ಗಡಿಯಾರದ ವೇಗದೊಂದಿಗೆ ನಾಲ್ಕು ARM ಕಾರ್ಟೆಕ್ಸ್-A78 ಕೋರ್‌ಗಳನ್ನು ಮತ್ತು 1.95GHz ಗಡಿಯಾರದ ವೇಗದೊಂದಿಗೆ ನಾಲ್ಕು ARM ಕಾರ್ಟೆಕ್ಸ್-A55 ಕೋರ್‌ಗಳನ್ನು ಒಳಗೊಂಡಿದೆ. ಈ ಹೊಸ ಸ್ಮಾರ್ಟ್‌ಫೋನ್ Adreno 710 GPU ಅನ್ನು ಬೆಂಬಲಿಸುತ್ತದೆ.

ಆಪರೇಟಿಂಗ್ ಸಿಸ್ಟಮ್: ಈ ಹೊಸ Realme ಸ್ಮಾರ್ಟ್‌ಫೋನ್ ಅನ್ನು Androidನ ಇತ್ತೀಚಿನ ಆಪರೇಟಿಂಗ್ ಸಿಸ್ಟಮ್ Android 14ನಲ್ಲಿ ಬಿಡುಗಡೆ ಮಾಡಲಾಗಿದೆ. ಇದು ಬ್ರ್ಯಾಂಡ್‌ನ ಸ್ವಂತ Realme UI 5.0 ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಕಂಪನಿಯು 2 ವರ್ಷಗಳ OS ನವೀಕರಣಗಳೊಂದಿಗೆ ಮತ್ತು 3 ವರ್ಷಗಳ ಭದ್ರತಾ ನವೀಕರಣಗಳೊಂದಿಗೆ ಪರಿಚಯಿಸಿದೆ.

ಸ್ಟೋರೇಜ್: ಈ ಫೋನನ್ನು ಭಾರತೀಯ ಮಾರುಕಟ್ಟೆಯಲ್ಲಿ ಮೂರು ಮೆಮೊರಿ ಆಯ್ಕೆಗಳಲ್ಲಿ ಬಿಡುಗಡೆ ಮಾಡಲಾಗಿದೆ. ಇದರ ಮೂಲ ಮಾದರಿಯು 8GB RAM ಜೊತೆಗೆ 256GB ಸ್ಟೋರೇಜ್ ಹೊಂದಿದ್ದರೆ, ಇತರ ಎರಡು ರೂಪಾಂತರಗಳು 256GB ಮತ್ತು 512GB ಸ್ಟೋರೇಜ್‌ನೊಂದಿಗೆ 12GB RAM ಅನ್ನು ಹೊಂದಿದೆ.

ಬ್ಯಾಟರಿ: Realme 13 Pro+ 5G ಫೋನ್ 5,200 mAh ಬ್ಯಾಟರಿಯನ್ನು ಹೊಂದಿದೆ. ಇದು ಸ್ಮಾರ್ಟ್‌ಫೋನ್ 80W SuperVOOC ವೇಗದ ಚಾರ್ಜಿಂಗ್ ತಂತ್ರಜ್ಞಾನವನ್ನು ಹೊಂದಿದೆ.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+