Home
ಮೊಬೈಲ್

Realme; ಶೀಘ್ರದಲ್ಲೇ ರಿಯಲ್‌ಮಿ 13 pro ಮಾದರಿ ಸ್ಮಾರ್ಟ್‌ಫೋನ್ ಲಾಂಚ್ !; ಫೀಚರ್ಸ್‌ ಏನಿರಲಿವೆ ?

ಕಡಿಮೆ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಫೀಚರ್ಸ್‌ ಹೊಂದಿರುವ ಸ್ಮಾರ್ಟ್‌ಫೋನ್‌ಗಳನ್ನು ಗ್ರಾಹಕರಿಗೆ ನೀಡುತ್ತಾ ಬಂದಿರುವ ರಿಯಲ್‌ಮಿ (Realme) ಸಂಸ್ಥೆ 6 ತಿಂಗಳ ಹಿಂದೆ ರಿಯಲ್‌ಮಿ 12 Pro (Realme 12 Pro) ಸರಣಿಯ ಸ್ಮಾರ್ಟ್‌ಫೋನ್‌ ಅನ್ನು ಲಾಂಚ್ ಮಾಡಿತ್ತು. ಇದೀಗ ಸುಮಾರು 6 ತಿಂಗಳ ಬಳಿಕ ರಿಯಲ್‌ಮಿ 13pro ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಲು ಮುಂದಾಗಿದೆ ಎಂದು ತಿಳಿದು ಬಂದಿದೆ. ಹಾಗಾದ್ರೆ ಬನ್ನಿಈ 13ಪ್ರೊ ಸಿರೀಸ್ ಏನೆಲ್ಲಾ ಫೀಚರ್ಸ್‌ ಹೊಂದಿದೆ, ಯಾವ ಬಣ್ಣಗಳಲ್ಲಿ ಗ್ರಾಹಕರಿಗೆ ದೊರೆಯಲಿದೆ ಎಂಬ ಎಲ್ಲಾ ಅಂಶಗಳನ್ನು ಈ ಲೇಖನದಲ್ಲಿ ತಿಳಿಯೋಣ.

ರಿಯಲ್‌ಮಿ 12pro ಉತ್ತರಾಧಿಕಾರಿಯಾಗಿ ರಿಯಲ್‌ಮಿ 13 Pro ಮತ್ತು 13 Pro+ ಸರಣಿಯ ಎರಡು ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡಲಿವೆ ಎಂಬ ಅಂಶಗಳು ಕೇಳಿ ಬರುತ್ತಿವೆ. ಅಧಿಕೃತ ಬಿಡುಗಡೆ ದಿನಾಂಕ ಸ್ಪಷ್ಟವಾಗದಿದ್ದರೂ, ಇತ್ತೀಚಿಗೆ ಸೋರಿಕೆಯಾಗಿರುವ ಮಾಹಿತಿ ಅನುಸಾರ ನಿರೀಕ್ಷಿತ RAM, ಶೇಖರಣಾ ಸಾಮರ್ಥ್ಯ, ಭಾರತೀಯ ಮಾರುಕಟ್ಟೆಗೆ ಬರಲಿರುವ ಬಣ್ಣ ವೇರಿಯಂಟ್‌ಗಳು ಮೊಬೈಲ್‌ ಬಿಡುಗಡೆ ಕುರಿತು ಸಂಪೂರ್ಣ ಮಾಹಿತಿ ನೀಡಲಿವೆ.

Realme; ಶೀಘ್ರದಲ್ಲೇ ರಿಯಲ್‌ಮಿ 13 pro ಮಾದರಿ ಸ್ಮಾರ್ಟ್‌ಫೋನ್ ಲಾಂಚ್

ಹೆಚ್ಚಿನ ಮೆಮೊರಿ ಆಯ್ಕೆಗಳು: ಮೂಲ ಮಾದರಿಯು 8GB RAM ಮತ್ತು 128GB ಸ್ಟೋರೇಜ್‌ ಹೊಂದಿರಲಿದೆ ಎನ್ನಲಾಗಿದೆ, ಇನ್ನೂ ಹೆಚ್ಚಿನ ಆಯ್ಕೆಗಳಿದ್ದು ಹೆಚ್ಚಿನ ಸ್ಟೋರೇಜ್‌ ಸಿಗಲಿವೆ. ಅಗತ್ಯವಿರುವವರಿಗೆ 256GB ಸ್ಟೋರೇಜ್‌ ಅನ್ನು ನೀಡಲಿದೆ.

12GB RAM ಆಯ್ಕೆ: 12GB RAM ಹೊಂದಿರುವ ಉನ್ನತ ಶ್ರೇಣಿಯ ವೇರಿಯಂಟ್‌ ಜೊತೆಗೆ 256GB ಮತ್ತು 512GB ಸ್ಟೋರೇಜ್ ಕಾನ್ಫಿಗರೇಶನ್‌ಗಳಲ್ಲಿ ಲಭ್ಯವಿರುತ್ತದೆ, ಇದು ಬಹು ಕಾರ್ಯಕ್ಕೆ ಮತ್ತು ದೊಡ್ಡ ಫೈಲ್‌ಗಳನ್ನು ಸಂಗ್ರಹಿಸಲು ಸೂಕ್ತವಾಗಿದೆ.

ಬಣ್ಣಗಳ ಆಯ್ಕೆ: ಸೋರಿಕೆಯ ಆಧಾರದಲ್ಲಿ ನೋಡುವುದಾದರೆ ಭಾರತೀಯ ಮಾರುಕಟ್ಟೆಗೆ ಬರುವ ನಿರೀಕ್ಷಿತ ಬಣ್ಣದ ಆಯ್ಕೆಗಳನ್ನು ಸಹ ಬಹಿರಂಗಪಡಿಸಿದೆ. ಯಾವ ಯಾವ ಬಣ್ಣಗಳು ಲಭ್ಯವಿರಬಹುದು ಎಂಬುದನ್ನು ಇಲ್ಲಿ ನೋಡೋಣ.

ಮೊನೆಟ್ ಗೋಲ್ಡ್: ಇದು ಮೂಲ ವೇರಿಯಂಟ್ ಆಗಿರುವ 8GB RAM + 128GB ಸ್ಟೋರೇಜ್ ಮಾದರಿ ಜೊತೆ ಬರುವ ಸಾಧ್ಯತೆಯಿದೆ.

ಮೊನೆಟ್ ಪರ್ಪಲ್: ಈ ಬಣ್ಣವನ್ನು ಮೂರು ಕಾನ್ಫಿಗರೇಶನ್‌ಗಳಲ್ಲಿ ನಿರೀಕ್ಷಿಸಲಾಗಿದ್ದು, 8GB RAM + 128GB, 8GB RAM + 256GB, ಮತ್ತು 256GB ಮತ್ತು 512GB ಸ್ಟೋರೇಜ್ ಆಯ್ಕೆಗಳೊಂದಿಗೆ ಬರುವ ಸಾಧ್ಯತೆಹಗವೆ.

ಸ್ಕೈ ಗ್ರೀನ್: ಈ ರೋಮಾಂಚಕ ಆಯ್ಕೆಯು 256GB ಮತ್ತು 512GB ಸಂಗ್ರಹಣೆಯೊಂದಿಗೆ ಉನ್ನತ ಮಟ್ಟದ 12GB RAM ವೇರಿಯಂಟ್‌ಗಳ ಜೊತೆ ಬರುವ ಸಾಧ್ಯತೆಗಳಿವೆ.

ರಿಯಲ್‌ಮಿ 13 Pro+ (Realme 13 Pro+): ಜೂಮ್ ಅಪ್‌ಗ್ರೇಡ್‌ ಜೊತೆಗೆ ಪ್ರೊ ಮಾದರಿಯ ಫೀಚರ್ಸ್‌ಗಳನ್ನೇ ಹೊಂದಿದೆ. ಇದು 128GB ಯಿಂದ 512GB ವರೆಗಿನ ಸ್ಟೋರೇಜ್ ಆಯ್ಕೆಗಳೊಂದಿಗೆ ಮೂಲ 8GB RAM ಯಿಂದ ಪ್ರಬಲ 12GB RAM ವರೆಗೆ ಬರುವ ನಿರೀಕ್ಷೆ ಇದೆ. ಅದರ ಹೊರತಾಗಿಯು Pro+ ರೂಪಾಂತರವು ಗಮನಾರ್ಹವಾದ ಕ್ಯಾಮರಾ ಅಪ್‌ಗ್ರೇಡ್ ಅನ್ನು ಹೊಂದಿರುವ ಸಾಧ್ಯತೆಗಳಿವೆ. ನೂತನ 50MP 3x ಪೆರಿಸ್ಕೋಪ್ ಕ್ಯಾಮೆರಾ, ಉನ್ನತ ಜೂಮ್ ಸಾಮರ್ಥ್ಯಗಳಿಗೆ ಆದ್ಯತೆ ನೀಡುವವರಿಗೆ Realme 13 Pro+ ಉತ್ತಮ ಆಯ್ಕೆಯಾಗಿರಲಿದೆ ಎಂದು ಊಹಿಸಲಾಗಿದೆ.

ರಿಯಲ್‌ಮಿ 13 (Realme 13) ಸರಣಿಯನ್ನು ನಾವು ಯಾವಾಗ ನಿರೀಕ್ಷಿಸಬಹುದು?

ರಿಯಲ್‌ಮಿ 13 Pro ಮತ್ತು 13 Pro+ ಎರಡೂ ಕೂಡ ಇದೇ ತಿಂಗಳು ಚೀನಾದಲ್ಲಿ ಪಾದಾರ್ಪಣೆ ಮಾಡುವ ನಿರೀಕ್ಷೆಯಿದೆ, ಭಾರತದಲ್ಲೂ ಲಾಂಚ್‌ ಮಾಡುವ ಸಾಧ್ಯತೆಗಳಿವೆ. ರಿಯಲ್‌ಮಿ ನಿಂದ ಯಾವುದೇ ಮಾಹಿತಿ ಅಧಿಕೃತವಾಗಿಲ್ಲದಿದ್ದರೂ, ಹೊಸ ಫೋನ್‌ಗಳ ಕುರಿತು ಹೆಚ್ಚಿನ ವಿವರಗಳನ್ನು ನಾವು ಶೀಘ್ರದಲ್ಲೇ ತಿಳಿಯಬಹುದಾಗಿದೆ.

Best Mobiles in India

English summary
Realme is rumored to launch two smartphones of the 13 Pro model. Although the official release date is not clear, some features have been leaked
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+