Home
ಮೊಬೈಲ್

Redmi: ಬರುತ್ತಿದೆ ಹೊಸ ಫೋನ್.. ಈ ಫೀಚರ್‌ ಹೊಂದಿರುವ ವಿಶ್ವದ ಮೊದಲ ಫೋನ್ ಇದು!

Realme 13 Pro 5G: ಭಾರತೀಯ ಮಾರುಕಟ್ಟೆಯಲ್ಲಿ ವಿದೇಶಿ ಕಂಪನಿಗಳ ಸ್ಮಾರ್ಟ್‌ಫೋನ್‌ಗಳು ಭಾರೀ ಸದ್ದು ಮಾಡುತ್ತಿವೆ. ಪ್ರಸ್ತುತ, ಕ್ಯಾಮೆರಾ ವಿಭಾಗದಲ್ಲಿ ಹೆಚ್ಚಿನ ಆದ್ಯತೆಯೊಂದಿಗೆ ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಲಾಗುತ್ತಿದೆ. ಅದರಂತೆ, ಚೀನಾದ ಪ್ರಮುಖ ಸ್ಮಾರ್ಟ್‌ಫೋನ್ ದೈತ್ಯ ರಿಯಲ್‌ಮಿ (Realme) ಹೊಸ ಸ್ಮಾರ್ಟ್‌ಫೋನ್ ಅನ್ನು ಮಾರುಕಟ್ಟೆಗೆ ತರುತ್ತಿದೆ. ಈ ಫೋನ್ ಅನ್ನು Redmi 13 Pro ಹೆಸರಿನಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಹಾಗಾದರೆ, ಈ ಫೋನ್ ಯಾವ ವೈಶಿಷ್ಟ್ಯಗಳನ್ನು ಹೊಂದಿರುತ್ತದೆ? ಬೆಲೆ ಎಷ್ಟು? ಬಿಡುಗಡೆ ಯಾವಾಗ? ಈ ಬಗ್ಗೆ ಸಂಪೂರ್ಣ ವಿವರಗಳನ್ನು ತಿಳಿಯೋಣ.

ಚೀನಾದ ಸ್ಮಾರ್ಟ್‌ಫೋನ್ ದೈತ್ಯ ರಿಯಲ್‌ಮಿ ಭಾರತೀಯ ಮಾರುಕಟ್ಟೆಗೆ ಹೊಸ ಫೋನ್ ಅನ್ನು ತರುತ್ತಿದೆ. ಈ ಫೋನ್ ಅನ್ನು ಈ ತಿಂಗಳ 30 ರಂದು (ಜುಲೈ 30) Realme 13 Pro ಹೆಸರಿನಲ್ಲಿ ಬಿಡುಗಡೆ ಮಾಡಲಾಗುವುದು. Realme 13 Pro ಜೊತೆಗೆ, Realme 13 Pro+ ಫೋನ್‌ಗಳನ್ನು ಪ್ರಾರಂಭಿಸಲಾಗುವುದು. Realme 13 Pro TENAA ಪ್ರಮಾಣೀಕರಣದಲ್ಲಿ ಗುರುತಿಸಿಕೊಂಡಿದೆ. ಮುಂಬರುವ ಈ ಫೋನನ್ನು ಮಾಡೆಲ್ ಸಂಖ್ಯೆ RMX3989 ನೊಂದಿಗೆ ಗುರುತಿಸಲಾಗಿದೆ.

Redmi: ಬರುತ್ತಿದೆ ಹೊಸ ಫೋನ್.. ಈ ಫೀಚರ್‌ ಹೊಂದಿರುವ ವಿಶ್ವದ ಮೊದಲ ಫೋನ್ ಇದು!

ಸೋನಿ LVT 600 ಲೆನ್ಸ್ ಹೊಂದಿರುವ ಮೊದಲ ಫೋನ್

ಕಂಪನಿಯು ಕ್ಯಾಮೆರಾಗೆ ಹೆಚ್ಚಿನ ಆದ್ಯತೆ ನೀಡಿರುವ ಈ ಫೋನಿನಲ್ಲಿ ಸೋನಿ LVT 600 ಲೆನ್ಸ್ ಒದಗಿಸುತ್ತಿದೆ. ಈ ವೈಶಿಷ್ಟ್ಯವನ್ನು ಹೊಂದಿರುವ ವಿಶ್ವದ ಮೊದಲ ಫೋನ್ ಇದು ಎಂದು ಕಂಪನಿ ಹೇಳಿದೆ. ಬಲಭಾಗದಲ್ಲಿ ಪವರ್ ಬಟನ್ ಮತ್ತು ವಾಲ್ಯೂಮ್ ರಾಕರ್ ಇರುತ್ತದೆ. ಫೀಚರ್ಸ್‌ಗಳ ವಿಷಯದಲ್ಲಿ, ಈ ಫೋನ್ 6.7 ಇಂಚಿನ AMOLED ಡಿಸ್ಪ್ಲೇಯನ್ನು ಹೊಂದಿದೆ. ಈ ಫೋನ್ 161.3 x 73.9 x 8.2 mm ಮತ್ತು 188 ಗ್ರಾಂ ತೂಕ ಹೊಂದಿರಲಿದೆ.

ಭಾರತದಲ್ಲಿ ಬೆಲೆ ಎಷ್ಟಿರಲಿದೆ?

ಕಂಪನಿಯು ಈವರೆಗೆ Realme 13 Pro ಸರಣಿಯ ಬೆಲೆಯ ಬಗ್ಗೆ ಗುಟ್ಟು ಬಿಟ್ಟುಕೊಟ್ಟಿಲ್ಲ. ಆದಾಗ್ಯೂ, ಭಾರತದಲ್ಲಿ Realme 13 Pro+ ಫೋನಿನ ಆರಂಭಿಕ ಬೆಲೆ ಸುಮಾರು 34,990 ರೂ. ಇರುವ ಸಾಧ್ಯತೆಯಿದೆ. ಈ ಹೊಸ ಫೋನ್‌ಗಳ ಕುರಿತು ಹೆಚ್ಚಿನ ವಿವರಗಳನ್ನು ನಾವು ಶೀಘ್ರದಲ್ಲೇ ನಿರೀಕ್ಷಿಸಬಹುದಾಗಿದೆ.

Realme 13 Pro 5G ವಿಶೇಷತೆಗಳು

ಡಿಸ್‌ಪ್ಲೇ: Realme 13 Pro 5G ಸ್ಮಾರ್ಟ್‌ಫೋನ್ 6.7 ಇಂಚಿನ AMOLED ಡಿಸ್ಪ್ಲೇ ಹೊಂದಿರಬಹುದು. ಇದು 2412 x 1080 ಪಿಕ್ಸೆಲ್‌ಗಳ ರೆಸಲ್ಯೂಶನ್ ಪಡೆಯಬಹುದು.

ಪ್ರೊಸೆಸರ್: ಈ ಸ್ಮಾರ್ಟ್‌ಫೋನ್ 2.4 GHz ಆಕ್ಟಾ-ಕೋರ್ ಪ್ರೊಸೆಸರ್‌ನಿಂದ ಚಾಲಿತವಾಗಿದೆ. ಮಾಹಿತಿಯ ಪ್ರಕಾರ, ಈ ಫೋನ್ Adreno 710 GPU ಪ್ರೊಸೆಸರ್ ಅನ್ನು ಹೊಂದಿರುತ್ತದೆ.

ಸ್ಟೋರೇಜ್: ಮೊಬೈಲ್ ಅನ್ನು 6GB, 8GB, 12GB ಮತ್ತು 16GB RAM ಜೊತೆಗೆ 128GB, 256GB, 512GB ಮತ್ತು 1TB ಇಂಟರ್ನಲ್ ಸ್ಟೋರೇಜ್‌ನೊಂದಿಗೆ ಪರಿಚಯಿಸುವ ನಿರೀಕ್ಷೆಯಿದೆ.

Redmi: ಬರುತ್ತಿದೆ ಹೊಸ ಫೋನ್.. ಈ ಫೀಚರ್‌ ಹೊಂದಿರುವ ವಿಶ್ವದ ಮೊದಲ ಫೋನ್ ಇದು!

ಕ್ಯಾಮೆರಾ: Realme 13 Pro 5G ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿರುತ್ತದೆ. ಇದು 50MP ಪ್ರಾಥಮಿಕ ಕ್ಯಾಮೆರಾ, 8MP ಅಲ್ಟ್ರಾವೈಡ್ ಕ್ಯಾಮೆರಾ ಮತ್ತು 2MP ಮ್ಯಾಕ್ರೋ ಕ್ಯಾಮೆರಾವನ್ನು ಪಡೆಯಬಹುದು. ಅಲ್ಲದೆ, ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 32MP ಸೆಲ್ಫಿ ಕ್ಯಾಮೆರಾವನ್ನು ಪಡೆಯುವ ಸಾಧ್ಯತೆಯಿದೆ.

ಬ್ಯಾಟರಿ: Realme 13 Pro 5G ಅನ್ನು ಬೃಹತ್ ಬ್ಯಾಕಪ್‌ಗಾಗಿ ಬೃಹತ್ 5,050mAh ಬ್ಯಾಟರಿಯೊಂದಿಗೆ ಬಿಡುಗಡೆಗೊಳಿಸಬಹುದು. ಇದು 80W ವೇಗದ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ ಬರಲಿದೆ.

ಇತರೆ ಫೀಚರ್ಸ್: ಈ ಫೋನ್ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕ, ಫೇಸ್ ಅನ್‌ಲಾಕ್ ವೈಶಿಷ್ಟ್ಯ ಮತ್ತು 5G ಸಂಪರ್ಕವನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ.

ಬಣ್ಣಗಳು: Realme 13 Pro+ ಮತ್ತು Realme 13 Pro ಫೋನ್‌ಗಳು Monet Gold ಮತ್ತು Monet Purple ಬಣ್ಣಗಳಲ್ಲಿ ಲಭ್ಯ ಆಗಲಿವೆ.

Best Mobiles in India

English summary
realme 13 Pro Series launch date has been revealed to be July 30: Check out the specifications, features and other details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+