Realme: 2 ಹೊಸ ಫೋನ್ ಲಾಂಚ್‌ಗೆ ಡೇಟ್ ಫಿಕ್ಸ್.. ಬೆಲೆ ಎಷ್ಟು? ಲಾಂಚ್ ಯಾವಾಗ?
ರಿಯಲ್‌ಮಿ (Realme) ತನ್ನ ಮುಂಬರುವ Realme 13 Pro ಸರಣಿಯ ಹೊಸ ಟೀಸರ್ ಅನ್ನು ಬಿಡುಗಡೆ ಮಾಡಿದೆ. ಕಂಪನಿಯು ಈವರೆಗೆ ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಿಲ್ಲ. ಆದರೆ, ಕಂಪನಿಯ ಇತ್ತೀಚಿನ ಪ್ರಕಟಣೆಯಲ್ಲಿ ಆಕಸ್ಮಿಕವಾಗಿ ಲಾಂಚ್ ಡೇಟ್ ಸೋರಿಕೆಯಾಗಿದೆ. ರಿಯಲ್‌ಮಿ ಬಹಿರಂಗಪಡಿಸಿದ ಇತ್ತೀಚಿನ ಪೋಸ್ಟರ್ ಪ್ರಕಾರ, ಇದೇ ಜುಲೈ 30 ರಂದು ನಿಗದಿಪಡಿಸಲಾದ ಕಾರ್ಯಕ್ರಮದಲ್ಲಿ Realme 13 Pro 5G ಮತ್ತು Realme 13 Pro+ ಸ್ಮಾರ್ಟ್‌ಫೋನ್‌ಗಳು ಅಧಿಕೃತವಾಗಿ ಮಾರುಕಟ್ಟೆಗೆ ಎಂಟ್ರಿ ಕೊಡಲಿವೆ.
ರಿಯಲ್‌ಮಿನ ಈ ಎರಡೂ ಫೋನ್‌ಗಳು ಮೂರು ಬಣ್ಣ ಆಯ್ಕೆಗಳಲ್ಲಿ ಲಭ್ಯವಿರುತ್ತವೆ. ಇದು ಪಚ್ಚೆ ಹಸಿರು, ಮೊನೆಟ್ ಗೋಲ್ಡ್ (ಗ್ಲಾಸ್ ಬ್ಯಾಕ್) ಮತ್ತು ಮೊನೆಟ್ ಪರ್ಪಲ್ (ಗ್ಲಾಸ್ ಬ್ಯಾಕ್) ಅನ್ನು ಒಳಗೊಂಡಿದೆ. ಈ ಹಿಂದೆ ಸೋರಿಕೆಯಾಗಿದ್ದ ಮಾಹಿತಿಯ ಪ್ರಕಾರ, ಗ್ರಾಹಕರು ಈ ಫೋನ್‌ಗಳನ್ನು ನಾಲ್ಕು ಸ್ಟೋರೇಜ್ ವೇರಿಯಂಟ್ ಆಯ್ಕೆಗಳಲ್ಲಿ ಖರೀದಿಸಲು ಸಾಧ್ಯವಾಗಲಿದೆ.

ಇದು 8GB RAM ಜೊತೆಗೆ 128GB ಸ್ಟೋರೇಜ್, 8GB RAM ಜೊತೆಗೆ 256GB ಸ್ಟೋರೇಜ್, 12GB RAM ಜೊತೆಗೆ 256GB ಸ್ಟೋರೇಜ್ ಮತ್ತು 12GB RAM ಜೊತೆಗೆ 512GB ಸ್ಟೋರೇಜ್ ಅನ್ನು ಹೊಂದಿರುತ್ತದೆ. ಇದರ ಹೊರತಾಗಿ ಇನ್ನೂ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. ಈ ಫೋನ್ ಬಹುಶಃ ಆಂಡ್ರಾಯ್ಡ್ 14 ಆಧಾರಿತ Realme UI 5 ನಲ್ಲಿ ಕೆಲಸ ನಿರ್ವಹಿಸುತ್ತದೆ.
Realme 13 Pro ಸರಣಿಯ ವಿಶೇಷತೆಗಳೇನು?
Realme 13 Pro+ ಅನ್ನು TENAA ಪ್ರಮಾಣೀಕರಣದಲ್ಲಿ ಗುರುತಿಸಲಾಗಿದೆ. ಈ ಮೂಲಕ ಇದರ ಕೆಲವು ವಿಶೇಷತೆಗಳು ಬೆಳಕಿಗೆ ಬಂದಿವೆ. ಈ ಫೋನ್ FHD+ ರೆಸಲ್ಯೂಶನ್ ಮತ್ತು ಇನ್-ಸ್ಕ್ರೀನ್ ಫಿಂಗರ್‌ಪ್ರಿಂಟ್ ಸಂವೇದಕದೊಂದಿಗೆ 6.7-ಇಂಚಿನ ಬಾಗಿದ AMOLED ಡಿಸ್ಪ್ಲೇಯನ್ನು ಹೊಂದಿರುತ್ತದೆ ಎಂದು ಹೇಳಲಾಗಿದೆ. ಪ್ರೊಸೆಸರ್ ಬಗ್ಗೆ ಹೇಳುವುದಾದರೆ, Snapdragon 7s Gen 2 ಅಥವಾ 7s Gen 3 ಅನ್ನು ಹೊಂದಿರಬಹುದು. ಇದು 16GB ಯ RAM ಮತ್ತು 1TB ಅತ್ಯುತ್ತಮ ಸ್ಟೋರೇಜ್‌ನೊಂದಿಗೆ ಜೋಡಿಸಲ್ಪಟ್ಟಿರುತ್ತದೆ.

ಈ ಫೋನ್‌ನ ಕ್ಯಾಮೆರಾ ಸೆಟಪ್ ಹೇಗಿರಲಿದೆ?
Realme 13 Pro ಸರಣಿಯ ಸ್ಮಾರ್ಟ್‌ಫೋನ್‌ಗಳು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಜೊತೆಗೆ 50 ಮೆಗಾಪಿಕ್ಸೆಲ್ ಸೋನಿ LYT-701 ಪ್ರಾಥಮಿಕ ಕ್ಯಾಮೆರಾವನ್ನು ಹೊಂದಿದೆ. 8 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಲೆನ್ಸ್ ಮತ್ತು 50 ಮೆಗಾಪಿಕ್ಸೆಲ್ LYT-600 ಪೆರಿಸ್ಕೋಪ್ ಟೆಲಿಫೋಟೋ ಲೆನ್ಸ್ 3x ಆಪ್ಟಿಕಲ್ ಜೂಮ್ ಆಗಿದೆ. ಇದರಲ್ಲಿ ಸೆಲ್ಫಿ ಮತ್ತು ವಿಡಿಯೋ ಕಾಲ್‌ಗಳಿಗಾಗಿ 32 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನು ಹೊಂದಿರಲಿದೆ. ಪ್ಯಾಕೇಜ್ AI ಚಾಲಿತ ಫೋಟೋಗ್ರಫಿ ಫೀಚರ್ಸ್ ಅನ್ನು ಒಳಗೊಂಡಿರುತ್ತದೆ ಎಂದು ಹೇಳಲಾಗಿದೆ.
5,050mAh ಬ್ಯಾಟರಿ, 80W ವೇಗದ ಚಾರ್ಜಿಂಗ್
ಈ ಫೋನ್‌ನ ಬ್ಯಾಟರಿ ಬ್ಯಾಕಪ್ ಬಗ್ಗೆ ನೋಡುವುದಾದರೆ, Realme 13 Pro+ ಅನ್ನು 5,050mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಒದಗಿಸಬಹುದು. ಇದು 80W ವೇಗದ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ ಬರಲಿದೆ. ಅಧಿಕೃತ ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಿದ ನಂತರ ರಿಯಲ್‌ಮಿ, ಶೀಘ್ರದಲ್ಲೇ Realme 13 Pro ಸರಣಿಯ ಕುರಿತು ಹೆಚ್ಚಿನ ಮಾಹಿತಿಯನ್ನು ನೀಡುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

ಭಾರತದಲ್ಲಿ ಬೆಲೆ ಎಷ್ಟಿರಲಿದೆ?
ಕಂಪನಿಯು ಈವರೆಗೆ Realme 13 Pro ಸರಣಿಯ ಬೆಲೆಯ ಬಗ್ಗೆ ಗುಟ್ಟು ಬಿಟ್ಟುಕೊಟ್ಟಿಲ್ಲ. ಆದಾಗ್ಯೂ, ಭಾರತದಲ್ಲಿ Realme 13 Pro+ ಫೋನಿನ ಆರಂಭಿಕ ಬೆಲೆ ಸುಮಾರು 34,990 ರೂ. ಇರುವ ಸಾಧ್ಯತೆಯಿದೆ. Realme 13 Pro ಮತ್ತು Realme 13 Pro+ ಎರಡೂ ಸಹ ಇದೇ ತಿಂಗಳು ಚೀನಾದಲ್ಲಿ ಪಾದಾರ್ಪಣೆ ಮಾಡುವ ನಿರೀಕ್ಷೆಯಿದೆ. ಭಾರತದಲ್ಲೂ ಲಾಂಚ್ ಮಾಡುವ ಸಾಧ್ಯತೆಗಳಿವೆ. ಈ ಹೊಸ ಫೋನ್‌ಗಳ ಕುರಿತು ಹೆಚ್ಚಿನ ವಿವರಗಳನ್ನು ನಾವು ಶೀಘ್ರದಲ್ಲೇ ನಿರೀಕ್ಷಿಸಬಹುದಾಗಿದೆ.


Click it and Unblock the Notifications








