Home
ಮೊಬೈಲ್

Realme 13 Pro: ಜು.30ಕ್ಕೆ 2 ಹೊಸ ಫೋನ್ ಬಿಡುಗಡೆ: ಫೀಚರ್ಸ್ ಬಹಿರಂಗ! ಬೆಲೆ ಎಷ್ಟು?

ರಿಯಲ್‌ಮಿ (Realme) ತನ್ನ 'ನಂಬರ್' ಸರಣಿಯಲ್ಲಿ ಮಧ್ಯಮ ಶ್ರೇಣಿಯ ಪ್ರೀಮಿಯಂ ಗುಣಮಟ್ಟದ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸುವಲ್ಲಿ ಸೈ ಎನಿಸಿಕೊಂಡಿದೆ. ಇದೀಗ, Realme 13 Pro 5G ಮತ್ತು Realme 13 Pro Plus 5G ಫೋನ್‌ಗಳು ಜುಲೈ 30 ರಂದು ಭಾರತದಲ್ಲಿ ಬಿಡುಗಡೆಯಾಗಲಿವೆ. ಈ ಎರಡೂ ಸ್ಮಾರ್ಟ್‌ಫೋನ್‌ಗಳು ಅದ್ಭುತ ವಿನ್ಯಾಸ, ಅತ್ಯುತ್ತಮ ಫೀಚರ್ಸ್‌ ಮತ್ತು AI ವೈಶಿಷ್ಟ್ಯಗಳೊಂದಿಗೆ ಎಂಟ್ರಿ ಕೊಡಲಿವೆ. ಕಂಪನಿಯು ತನ್ನ ಮುಂಬರುವ 13 ಪ್ರೊ ಸರಣಿಯ ಪ್ರಮುಖ ವಿಶೇಷತೆಗಳನ್ನು ಅಧಿಕೃತವಾಗಿ ಬಹಿರಂಗಪಡಿಸಿದೆ. ಪ್ರೊಸೆಸರ್ ಮತ್ತು ಬ್ಯಾಟರಿ ಮೇಲೆ ಹೆಚ್ಚು ಒತ್ತು ನೀಡಿದೆ.

ಹೌದು, ಚೀನಾದ ಟೆಕ್ ದೈತ್ಯ ರಿಯಲ್‌ಮಿ ಭಾರತೀಯ ಮಾರುಕಟ್ಟೆಗೆ ಹೊಸ ಫೋನ್‌ಗಳನ್ನು ತರುತ್ತಿದೆ. ರಿಯಲ್‌ಮಿ 13 ಪ್ರೊ 5G ಮತ್ತು ರಿಯಲ್‌ಮಿ 13 ಪ್ರೊ ಪ್ಲಸ್ 5G ಫೋನ್‌ಗಳು ಜುಲೈ 30 ರಂದು ಮಧ್ಯಾಹ್ನ 12 ಗಂಟೆಗೆ ಬಿಡುಗಡೆಯಾಗಲಿವೆ. ಕಂಪನಿಯು ಪ್ಲಾಟ್‌ಫಾರ್ಮ್‌ನಿಂದ ದೊಡ್ಡ ಈವೆಂಟ್ ಆಯೋಜಿಸುತ್ತಿದೆ. ಅದರಲ್ಲಿ ರಿಯಲ್‌ಮಿ 13 ಪ್ರೊ ಸರಣಿಯು ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಈ ಫೋನ್ ಬಿಡುಗಡೆ ಕಾರ್ಯಕ್ರಮವನ್ನು ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಮತ್ತು ಬ್ರ್ಯಾಂಡ್‌ನ ಎಲ್ಲಾ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಲೈವ್ ಆಗಿ ವೀಕ್ಷಿಸಬಹುದು.

Realme 13 Pro: ಜು.30ಕ್ಕೆ 2 ಹೊಸ ಫೋನ್ ಬಿಡುಗಡೆ: ಫೀಚರ್ಸ್ ಬಹಿರಂಗ!

ನಿಮ್ಮ ಫೋನಿನಲ್ಲಿ ರಿಯಲ್‌ಮಿ 13 ಪ್ರೊ ಸರಣಿಯ ಲಾಂಚ್ ಈವೆಂಟ್‌ ಲೈವ್ ವೀಕ್ಷಿಸಲು (ಇಲ್ಲಿ ಕ್ಲಿಕ್ ಮಾಡಿ)

ರಿಯಲ್‌ಮಿ 13 ಪ್ರೊ ಸರಣಿಯ ಬೆಲೆ ಮತ್ತು ಲಭ್ಯತೆ

ಕಂಪನಿಯು ಈವರೆಗೆ Realme 13 Pro ಸರಣಿಯ ಬೆಲೆಯ ಬಗ್ಗೆ ಮಾಹಿತಿ ನೀಡಿಲ್ಲ. ಆದರೆ, Realme 13 Pro+ ಭಾರತದಲ್ಲಿ 34,990 ರೂ. ಆರಂಭಿಕ ಬೆಲೆಗೆ ಬಿಡುಗಡೆಯಾಗಬಹುದು. ಈ ಫೋನ್‌ಗಳು Monet Gold ಮತ್ತು Monet Purple ಬಣ್ಣಗಳಲ್ಲಿ ಬರಲಿವೆ. ಬಿಡುಗಡೆ ಬಳಿಕ, Realme 13 Pro Series 5G ಫ್ಲಿಪ್‌ಕಾರ್ಟ್, ಅಧಿಕೃತ ರಿಯಲ್‌ಮಿ ವೆಬ್‌ಸೈಟ್ ಮತ್ತು ಆಫ್‌ಲೈನ್ ಸ್ಟೋರ್‌ಗಳಲ್ಲಿ ಖರೀದಿಗೆ ಲಭ್ಯವಿರುತ್ತದೆ.

ರಿಯಲ್‌ಮಿ 13 ಪ್ರೊ ಸರಣಿಯ ವಿಶೇಷತೆಗಳು

ಡಿಸ್ಲ್ಪೇ: ರಿಯಲ್‌ಮಿ 13 ಪ್ರೊ ಸರಣಿಯ ಎರಡೂ ಸ್ಮಾರ್ಟ್‌ಫೋನ್‌ಗಳು AMOLED ಡಿಸ್ಪ್ಲೇಯನ್ನು ಹೊಂದಿರಲಿದೆ. ಇದು ಪಂಚ್-ಹೋಲ್ ಶೈಲಿಯ ಡಿಸ್ಲ್ಪೇ ಆಗಿರಬಹುದು. ಎರಡೂ ಫೋನಿನಲ್ಲಿ 6.7 ಇಂಚುಗಳಷ್ಟು ಡಿಸ್ಲ್ಪೇ ಕಾಣಬಹುದು. 120Hz ರಿಫ್ರೆಶ್ ರೇಟ್, ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್ ತಂತ್ರಜ್ಞಾನವನ್ನು ಹೊಂದಿರುವ ನಿರೀಕ್ಷೆಯಿದೆ.

ಪ್ರೊಸೆಸರ್‌: ಹೊಸ ರಿಯಲ್‌ಮಿ 13 ಪ್ರೊ ಸರಣಿಯು ಕ್ವಾಲ್ಕಾಮ್ ಮೊಬೈಲ್ ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ಕಂಪನಿ ಹೇಳಿದೆ. ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 7s Gen 2 ಆಕ್ಟಾ-ಕೋರ್ ಪ್ರೊಸೆಸರ್‌ನೊಂದಿಗೆ ಬಿಡುಗಡೆಯಾಗಲಿದೆ.

Realme 13 Pro: ಜು.30ಕ್ಕೆ 2 ಹೊಸ ಫೋನ್ ಬಿಡುಗಡೆ: ಫೀಚರ್ಸ್ ಬಹಿರಂಗ!

ಸ್ಟೋರೇಜ್: ಈ ಸರಣಿಯು 8GB ಮತ್ತು 12GB RAM ನೊಂದಿಗೆ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಬಹುದು. ಇವುಗಳನ್ನು 8GB RAM ಜೊತೆಗೆ 128GB ಸ್ಟೋರೇಜ್ ಮತ್ತು 12GB RAM ಜೊತೆಗೆ 256GB ಸ್ಟೋರೇಜ್‌ನೊಂದಿಗೆ ಲಾಂಚ್ ಮಾಡಬಹುದು ಎಂದು ನಿರೀಕ್ಷಿಸಲಾಗಿದೆ. ಆದರೆ, ಸರಣಿಯ ದೊಡ್ಡ ಮಾದರಿ ಅಂದರೆ Realme 13 Pro+ 5G ಫೋನನ್ನು 12GB RAM ಮತ್ತು 512GB ಸ್ಟೋರೇಜ್‌ನೊಂದಿಗೆ ಪರಿಚಯಿಸಬಹುದು.

ಕ್ಯಾಮೆರಾ: ರಿಯಲ್‌ಮಿ 13 ಪ್ರೊ ಸರಣಿಯ ಸ್ಮಾರ್ಟ್‌ಫೋನ್‌ಗಳು ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಹೊಂದಿರುವ ನಿರೀಕ್ಷೆಯಿದೆ. OIS ವೈಶಿಷ್ಟ್ಯದೊಂದಿಗೆ 50MP Sony LYT-701 ಮುಖ್ಯ ಕ್ಯಾಮೆರಾ ಇರಲಿದೆ. ಜೊತೆಗೆ, 3x ಆಪ್ಟಿಕಲ್ ಜೂಮ್ ಸಾಮರ್ಥ್ಯದೊಂದಿಗೆ 50MP ಸೋನಿ LYT-600 ಪೆರಿಸ್ಕೋಪ್ ಲೆನ್ಸ್ ಸಹ ಇರುತ್ತದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 32MP ಸೆಲ್ಫಿ ಕ್ಯಾಮೆರಾವನ್ನು ಪಡೆಯುವ ಸಾಧ್ಯತೆಯಿದೆ.

ಬ್ಯಾಟರಿ: ಈ ಸ್ಮಾರ್ಟ್‌ಫೋನ್‌ಗಳು ಶಕ್ತಿಯುತವಾದ ಬ್ಯಾಟರಿಯನ್ನು ಸಹ ಹೊಂದಿರುತ್ತವೆ. ಕಂಪನಿಯ ಪ್ರಕಾರ, Realme 13 Pro ಸರಣಿಯಲ್ಲಿ 5,200mAh ಬ್ಯಾಟರಿಯನ್ನು ಒದಗಿಸಲಾಗುವುದು. ಇದು 4 ವರ್ಷಗಳ ಬ್ಯಾಟರಿ ಬಾಳಿಕೆಯೊಂದಿಗೆ ಬರುತ್ತದೆ. ಬ್ಯಾಟರಿಯನ್ನು ವೇಗವಾಗಿ ಚಾರ್ಜ್ ಮಾಡಲು, 80W ವೇಗದ ಚಾರ್ಜಿಂಗ್ ತಂತ್ರಜ್ಞಾನವೂ ಮೊಬೈಲ್ ಫೋನ್‌ಗಳಲ್ಲಿ ಇರಲಿದೆ.

Best Mobiles in India

English summary
Realme 13 Pro Series 5G launch date has been revealed to be July 30: Snapdragon 7s Gen 2, VC Cooling, 5200mAh battery confirmed: Check Features, Specs Price.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+