Realme 13 5G: ಇಂದು 2 ಹೊಸ ಫೋನ್ ಲಾಂಚ್; ಬೆಲೆಯೂ ಕಡಿಮೆ!
ರಿಯಲ್‌ಮಿ ಪ್ರಿಯರಿಗೆ ಇಂದು ಎರಡು ಸಿಹಿ ಸುದ್ದಿ. ಒಂದೇ ದಿನ ಎರಡು ಹೊಸ ಫೋನ್ ಬಿಡುಗಡೆ. ಹೌದು, ರಿಯಲ್‌ಮಿ (Realme) ಕಂಪನಿಯು ಇಂದು ತನ್ನ ರಿಯಲ್‌ಮಿ 13 5G (Realme 13 5G) ಸರಣಿಯನ್ನು ಬಿಡುಗಡೆ ಮಾಡಲಿದೆ. ಈ ಸರಣಿಯಲ್ಲಿ ಎರಡು ಹೊಸ ಫೋನ್‌ಗಳು ಮಾರುಕಟ್ಟೆಗೆ ಲಗ್ಗೆ ಇಡಲಿವೆ. ಅದುವೇ, ರಿಯಲ್‌ಮಿ 13 (Realme 13 5G) ಮತ್ತು ರಿಯಲ್‌ಮಿ 13+ (Realme 13+ 5G) ಸ್ಮಾರ್ಟ್‌ಫೋನ್. ಇದು 6 ತಿಂಗಳ ಹಿಂದೆ ಬಿಡುಗಡೆಯಾದ ರಿಯಲ್‌ಮಿ 12 ಸರಣಿಯ ಉತ್ತರಾಧಿಕಾರಿಯಾಗಿ ಬರುತ್ತದೆ.
ಹೌದು, ರಿಯಲ್‌ಮಿ ಭಾರತದಲ್ಲಿ ತನ್ನ ಬಹುನಿರೀಕ್ಷಿತ ರಿಯಲ್‌ಮಿ 13 5G ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಇಂದು (ಆಗಸ್ಟ್ 29) ಮಧ್ಯಾಹ್ನ 12 ಗಂಟೆಗೆ ಈವೆಂಟ್ ಅನ್ನು ಆಯೋಜಿಸಿದೆ. ಕಂಪನಿಯ ಅಧಿಕೃತ YouTube ಚಾನಲ್‌ನಿಂದ ಈವೆಂಟ್ ಅನ್ನು ಲೈವ್-ಸ್ಟ್ರೀಮ್ ಮಾಡಲಾಗುತ್ತದೆ. ಫ್ಲಿಪ್‌ಕಾರ್ಟ್‌ನಲ್ಲಿ ಮುಂಬರುವ ರಿಯಲ್‌ಮಿ ಫೋನ್‌ಗಳಿಗಾಗಿ ಮೈಕ್ರೋಸೈಟ್ ಈಗಾಗಲೇ ಲಭ್ಯವಿದೆ. ಕೆಳಗೆ ಎಂಬೆಡ್ ಮಾಡಲಾದ ವಿಡಿಯೋ ಮೂಲಕ ನೀವು ಬಿಡುಗಡೆ ಸಮಾರಂಭವನ್ನು ಲೈವ್ ಆಗಿ ವೀಕ್ಷಿಸಬಹುದು.

ರಿಯಲ್‌ಮಿ 13 ಸರಣಿಯ ನಿರೀಕ್ಷಿತ ಬೆಲೆ
ವರದಿಯ ಪ್ರಕಾರ, ರಿಯಲ್‌ಮಿ 13 ಸರಣಿಯು ಆಫರ್‌ಗಳನ್ನು ಒಳಗೊಂಡಂತೆ ಸುಮಾರು 15,000 ರೂ.ನಿಂದ 20,000 ರೂ.ಗಳ ಆರಂಭಿಕ ಬೆಲೆಯೊಂದಿಗೆ ಬಿಡುಗಡೆಯಾಗಲಿದೆ. ರಿಯಲ್‌ಮಿ 13 ಸರಣಿಯು ಕನಿಷ್ಠ ಎರಡು ಬಣ್ಣಗಳ ಆಯ್ಕೆಗಳಲ್ಲಿ ಬರುತ್ತದೆ. ನೀಲಿ ಮತ್ತು ಗೋಲ್ಡ್ ಬಣ್ಣದಲ್ಲಿ ಲಭ್ಯವಿರುತ್ತದೆ. ಬಿಡುಗಡೆ ಬಳಿಕ ಈ ಫೋನ್‌ಗಳು ಫ್ಲಿಪ್‌ಕಾರ್ಟ್, ರಿಯಲ್‌ಮಿ ವೆಬ್‌ಸೈಟ್ ಮತ್ತು ಇನ್ನಿತರ ಸ್ಟೋರ್‌ಗಳಲ್ಲಿ ಖರೀದಿಗೆ ಲಭ್ಯವಿರುತ್ತವೆ.
ರಿಯಲ್‌ಮಿ ಕಂಪನಿಯು ಈ ಸ್ಮಾರ್ಟ್‌ಫೋನ್‌ಗಳನ್ನು ಶಕ್ತಿಯುತ ಚಿಪ್‌ಸೆಟ್, ವೇಗದ RAM ಮತ್ತು ಚಾರ್ಜಿಂಗ್ ತಂತ್ರಜ್ಞಾನದೊಂದಿಗೆ ಬಿಡುಗಡೆ ಮಾಡಲಿದೆ. ಹೊಸ ಸರಣಿಯು ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಚಿಪ್‌ಸೆಟ್‌ನೊಂದಿಗೆ ಮೊದಲ ಸ್ಮಾರ್ಟ್‌ಫೋನ್ ಆಗಿರುತ್ತದೆ. ಇದು ತುಂಬಾ ವೇಗವಾಗಿರುತ್ತದೆ. ಇದನ್ನು 4nm ಪ್ರಕ್ರಿಯೆ ತಂತ್ರಜ್ಞಾನದಲ್ಲಿ ನಿರ್ಮಿಸಲಾಗಿದೆ.
ರಿಯಲ್‌ಮಿ 13 5G ಸರಣಿಯ ವೈಶಿಷ್ಟ್ಯಗಳು
ಡಿಸ್ಲ್ಪೇ: ರಿಯಲ್‌ಮಿ 13 ಸರಣಿಯ ಎರಡೂ ಫೋನ್‌ಗಳು 6.7 ಇಂಚಿನ FHD+ ಡಿಸ್ಲ್ಪೇಯನ್ನು ಹೊಂದಿರಲಿದೆ. ಆದರೆ, ರಿಯಲ್‌ಮಿ 13+ AMOLED ಡಿಸ್ಲ್ಪೇಯೊಂದಿಗೆ ಬರಲಿದೆ. ಇದು 2400 x 1080 ಪಿಕ್ಸೆಲ್ ರೆಸಲ್ಯೂಶನ್ ಪಡೆದಿರಲಿದೆ.
ಪ್ರೊಸೆಸರ್: ರಿಯಲ್‌ಮಿ 13 ಸರಣಿಯ Geekbench ಪಟ್ಟಿಯು ಇದು MediaTek ಡೈಮೆನ್ಸಿಟಿ 6300 SoC ಅನ್ನು ಹೊಂದಿರುತ್ತದೆ ಎಂದು ಸೂಚಿಸುತ್ತದೆ. ಮತ್ತೊಂದೆಡೆ, ರಿಯಲ್‌ಮಿ 13+ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7300E ಪ್ರೊಸೆಸರ್ ಅನ್ನು ಹೊಂದಿರಲಿದೆ. ಈ ಫೋನ್ ನಾಲ್ಕು RAM ರೂಪಾಂತರಗಳಲ್ಲಿ ಬರುವ ಸಾಧ್ಯತೆಯಿದೆ. ಇದು 6GB, 8GB, 12GB ಮತ್ತು 16GB RAM ಜೊತೆಗೆ 128GB, 256GB, 512GB ಮತ್ತು 1 TB ಇಂಟರ್ನಲ್ ಸ್ಟೋರೇಜ್ ಒಳಗೊಂಡಿರಲಿದೆ.

ಕ್ಯಾಮೆರಾ: ರಿಯಲ್‌ಮಿ 13 ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಒಳಗೊಂಡಿರುತ್ತದೆ. ಇದು 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ಸೆಕೆಂಡರಿ ಕ್ಯಾಮೆರಾ ಹೊಂದಿರಲಿದೆ. ಮತ್ತೊಂದೆಡೆ, ರಿಯಲ್‌ಮಿ 13+ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿರುತ್ತದೆ. 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 8 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಸಂವೇದಕ ಮತ್ತು 2 ಮೆಗಾಪಿಕ್ಸೆಲ್ ಸ್ನ್ಯಾಪರ್ ಒಳಗೊಂಡಿರುತ್ತದೆ. ರಿಯಲ್‌ಮಿ 13 ಸರಣಿಯ ಎರಡೂ ಫೋನ್‌ಗಳು ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನು ಹೊಂದಿರಲಿವೆ.
ಬ್ಯಾಟರಿ: ಈ ಫೋನ್‌ಗಳು 5,000mAh ಬ್ಯಾಟರಿಯನ್ನು ಹೊಂದಿರುವ ನಿರೀಕ್ಷೆಯಿದೆ. ರಿಯಲ್‌ಮಿ 13 ಫೋನ್ 45W VOOC ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಆದರೆ, ರಿಯಲ್‌ಮಿ 13+ ಮೊಬೈಲ್ 80W ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ.
ಇತರೆ ಫೀಚರ್ಸ್: ರಿಯಲ್‌ಮಿ 13 5G ಸರಣಿಯು ಭದ್ರತೆಗಾಗಿ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಹೊಂದಿರಲಿದೆ. Android 14 ಆಧಾರಿತ Realme UI 5 ನಲ್ಲಿ ಕಾರ್ಯನಿರ್ವಹಿಸಲಿದೆ. ಈ ಸರಣಿಯು 161.7 x 74.7 x 7.6mm ಅಳತೆ ಮತ್ತು 185 ಗ್ರಾಂ ತೂಕ ಹೊಂದಿರಲಿದೆ.


Click it and Unblock the Notifications








