Realme 14 5G ಸ್ಮಾರ್ಟ್‌ಫೋನ್ ಬಿಡುಗಡೆ: ಬೆಲೆ ಮತ್ತು ಫೀಚರ್ಸ್ ಮಾಹಿತಿ ಇಲ್ಲಿದೆ!
ಶೀಘ್ರದಲ್ಲೇ ಭಾರತೀಯರ ಕೈಸೇರಬಹುದು ಎನ್ನಲಾಗಿರುವ Realme ಕಂಪೆನಿಯ ಇತ್ತೀಚಿನ Realme 14 5G ಸ್ಮಾರ್ಟ್‌ಫೋನ್ ಇಂದು ಆಯ್ದ ಜಾಗತಿಕ ಮಾರುಕಟ್ಟೆಗಳಲ್ಲಿ ಅನಾವರಣಗೊಂಡಿದೆ. ಮೊಬೈಲ್ ಮಾರುಕಟ್ಟೆಯ ನಿರೀಕ್ಷೆಯಂತೆಯೇ ಈ ಸ್ಮಾರ್ಟ್‌ಫೋನ್ ಚೀನಾದಲ್ಲಿ ಪರಿಚಯಿಸಲಾದ Realme Neo 7x ನಂತೆಯೇ ಇದ್ದು, ಈ ಸ್ಮಾರ್ಟ್‌ಫೋನ್ ಕೂಡ 12GB RAM ಜೊತೆಗೆ ಜೋಡಿಸಲಾದ Snapdragon 6 Gen 4 ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸಲಿದೆ. ಜೊತೆಗೆ 45W SuperVOOC ಚಾರ್ಜಿಂಗ್ ಮತ್ತು ಬೈಪಾಸ್ ಚಾರ್ಜಿಂಗ್ ಬೆಂಬಲದೊಂದಿಗೆ 6,000mAh ಬ್ಯಾಟರಿ, 6,050mm² VC ಲಿಕ್ವಿಡ್ ಕೂಲಿಂಗ್ ಸಿಸ್ಟಮ್‌ನಂತಹ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಹಾಗಾದರೆ, ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿರುವ ನೂತನ Realme 14 5G ಸ್ಮಾರ್ಟ್‌ಫೋನಿನ ಸಂಪೂರ್ಣ ವೈಶಿಷ್ಟ್ಯಗಳು ಯಾವುವು ಮತ್ತು ಬೆಲೆ ಎಷ್ಟು ಎಂಬ ಸಂಪೂರ್ಣ ವಿವರಗಳನ್ನು ನೋಡೋಣ ಬನ್ನಿ.
Realme 14 5G ವಿಶೇಷಣಗಳು, ವೈಶಿಷ್ಟ್ಯಗಳು
ಹೊಸ Realme 14 5G ಸ್ಮಾರ್ಟ್‌ಫೋನ್ 6.67-ಇಂಚಿನ ಫುಲ್-HD+ (1,080x2,400 ಪಿಕ್ಸೆಲ್‌ಗಳು) AMOLED ಡಿಸ್‌ಪ್ಲೇಯನ್ನು ಹೊಂದಿದೆ. ಇದರಲ್ಲಿ 120Hz ರಿಫ್ರೆಶ್ ರೇಟ್, 240Hz ಟಚ್ ಸ್ಯಾಂಪ್ಲಿಂಗ್ ರೇಟ್, 2,000nits ಗರಿಷ್ಠ ಹೊಳಪು ಮತ್ತು 92.65% ಸ್ಕ್ರೀನ್-ಟು-ಬಾಡಿ ಅನುಪಾತವಿದೆ. ಈ Realme 14 5G ಸ್ನಾಪ್‌ಡ್ರಾಗನ್ 6 Gen 4 SoC ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸುತ್ತದೆ, ಇದು 12GB RAM ಮತ್ತು 51GB ವರೆಗೆ ಆನ್‌ಬೋರ್ಡ್ ಸ್ಟೋರೇಜ್‌ನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 15 ಮೇಲೆ ರಿಯಲ್‌ಮಿ UI 6 ಅನ್ನು ಔಟ್-ಆಫ್-ದಿ-ಬಾಕ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.

ಕ್ಯಾಮೆರಾ ವಿಭಾಗದಲ್ಲಿ, Realme 14 5G ಸ್ಮಾರ್ಟ್‌ಫೋನ್ AI ಬೆಂಬಲಿತ 50-ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕವನ್ನು f/1.8 ಅಪರ್ಚರ್ ಮತ್ತು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಸಹಿತ ಹೊಂದಿಸಿದೆ. ಇದಲ್ಲದೆ, ಇದರಲ್ಲಿ ಅನಿರ್ದಿಷ್ಟ ದ್ವಿತೀಯ ಸಂವೇದಕ ಮತ್ತು ಹಿಂಭಾಗದಲ್ಲಿ LED ಫ್ಲ್ಯಾಷ್ ಘಟಕವಿದೆ. ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ, f/2.4 ಅಪರ್ಚರ್‌ನೊಂದಿಗೆ 16-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾ ಒದಗಿಸಲಾಗಿದೆ.
Realme 14 5G ಸ್ಮಾರ್ಟ್‌ಫೋನಿನಲ್ಲಿ ಉಷ್ಣ ನಿರ್ವಹಣೆಗೆ 6,050mm² VC ಲಿಕ್ವಿಡ್ ಕೂಲಿಂಗ್ ಸಿಸ್ಟಮ್ ಅನ್ನು ಬಳಸಲಾಗಿದೆ. ಇದು ಸುಗಮ ಆಟಕ್ಕಾಗಿ 120fps ವರೆಗೆ ಬೆಂಬಲಿಸುತ್ತದೆ ಮತ್ತು ಒಟ್ಟಾರೆ ಗೇಮಿಂಗ್ ಅನುಭವವನ್ನು ಸುಧಾರಿಸಲು GT ಬೂಸ್ಟ್ ಮೋಡ್ ಅನ್ನು ಒಳಗೊಂಡಿದೆ. ಕಂಪನಿಯ ಪ್ರಕಾರ, ಈ ಸ್ಮಾರ್ಟ್‌ಫೋನ್ 45W SuperVOOC ಚಾರ್ಜಿಂಗ್ ಮತ್ತು ಬೈಪಾಸ್ ಚಾರ್ಜಿಂಗ್ ತಂತ್ರಜ್ಞಾನವನ್ನು ಬೆಂಬಲಿಸುವ 6,000mAh ಬ್ಯಾಟರಿಯನ್ನು ಹೊಂದಿದೆ. ಹ್ಯಾಂಡ್‌ಸೆಟ್ IP66, IP68, ಮತ್ತು IP69 ಧೂಳು ಮತ್ತು ನೀರಿನಿಂದ ರಕ್ಷಿತ ಎಂದು ತಿಳಿಸಲಾಗಿದೆ.
Realme 14 5G ಬೆಲೆ, ಬಣ್ಣ ಆಯ್ಕೆಗಳು
ಇದೀಗ ಥೈಲ್ಯಾಂಡ್‌ನಲ್ಲಿ ಪರಿಚಯಗೊಂಡಿರುವ ಈ Realme 14 5G ಸ್ಮಾರ್ಟ್‌ಫೋನ್ 12GB + 256GB ಆಯ್ಕೆಗೆ THB 13,999 (ಸರಿಸುಮಾರು ರೂ. 35,300) ರಿಂದ ಬೆಲೆ ಪ್ರಾರಂಭವಾಗುತ್ತದೆ, ಇದರ 12GB + 512GB ಮಾದರಿಯು THB 15,999 (ಸರಿಸುಮಾರು ರೂ. 40,400) ಬೆಲೆಯಲ್ಲಿ ಬಿಡುಗಡೆಗೊಂಡಿದೆ. ಮತ್ತು ಸಿಲ್ವರ್, ಸ್ಟಾರ್ಮ್ ಟೈಟಾನಿಯಂ ಮತ್ತು ವಾರಿಯರ್ ಪಿಂಕ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರಲಿದೆ. ಇನ್ನು ಈ ರಿಯಲ್‌ಮಿ 14 5G ಸ್ಮಾರ್ಟ್‌ಫೋನ್ ಭಾರತದಲ್ಲಿ ಯಾವಾಗ ಬಿಡುಗಡೆಯಾಗಲಿದೆ ಎಂಬ ಬಗ್ಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿ ಇಲ್ಲ. ದೇಶದಲ್ಲಿ ಈಗಾಗಲೇ ರಿಯಲ್‌ಮಿ 14 ಪ್ರೊ+ ಮತ್ತು ರಿಯಲ್‌ಮಿ 14 ಪ್ರೊ ಈಗಾಗಲೇ ಇಲ್ಲಿ ಲಭ್ಯವಿದೆ. ಇವುಗಳ ಸಾಲಿಗೆ ಶೀಘ್ರವೇ Realme 14 5G ಸ್ಮಾರ್ಟ್‌ಫೋನ್ ಸೇರುವ ನಿರೀಕ್ಷೆಯಿದೆ.


Click it and Unblock the Notifications








