Home
ಮೊಬೈಲ್

ಹೊಸ Realme 5G ಫೋನ್ ಬಿಡುಗಡೆ; 32MP ಸೆಲ್ಫಿ ಕ್ಯಾಮೆರಾ.. 5200mAh ಬ್ಯಾಟರಿ.. ಬೆಲೆಯೂ ಕಡಿಮೆ!

ರಿಯಲ್‌ಮಿ ಕಂಪನಿಯು ಭಾರತದಲ್ಲಿ ಹೊಸ 5G ಫೋನನ್ನು ಬಿಡುಗಡೆ ಮಾಡಿದೆ. ಇದನ್ನು ತನ್ನ ನಂಬರ್ ಸರಣಿಯ ಅಡಿಯಲ್ಲಿ ಪರಿಚಯಿಸಲಾಗಿದೆ. ಹೌದು, ಬಹುನಿರೀಕ್ಷಿತ ರಿಯಲ್‌ಮಿ 14 ಪ್ರೊ ಲೈಟ್ 5G (Realme 14 Pro Lite 5G) ಮೊಬೈಲ್ ಅಧಿಕೃತವಾಗಿ ದೇಶೀಯ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ. ಇದನ್ನು ಬಜೆಟ್ ವಿಭಾಗದಲ್ಲಿ ರಿಲೀಸ್ ಮಾಡಲಾಗಿದೆ. ಬನ್ನಿ, ರಿಯಲ್‌ಮಿ 14 ಪ್ರೊ ಲೈಟ್ 5G ಬೆಲೆ ಎಷ್ಟು? ಯಾವೆಲ್ಲಾ ವಿಶೇಷತೆಗಳನ್ನು ಹೊಂದಿದೆ ಅಂತ ತಿಳಿಯೋಣ.

ರಿಯಲ್‌ಮಿ 14 ಪ್ರೊ ಲೈಟ್ 5G ಮೊಬೈಲ್ ಎರಡು ಸ್ಟೋರೇಜ್ ರೂಪಾಂತರಗಳಲ್ಲಿ ಬಿಡುಗಡೆಯಾಗಿದೆ. ಈ ಫೋನಿನ ವಿಶೇಷತೆಗಳ ಬಗ್ಗೆ ಹೇಳುವುದಾದರೆ, ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಲಭ್ಯವಿದೆ. ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 7s ಜೆನ್ 2 ಪ್ರೊಸೆಸರ್‌ನೊಂದಿಗೆ ಕೆಲಸ ಮಾಡುತ್ತದೆ. ಈ ಮೊಬೈಲ್ 6.7 ಇಂಚಿನ ಡಿಸ್ಪ್ಲೇ ಹೊಂದಿದೆ. ಜೊತೆಗೆ 8GB RAM + 256GB ಸ್ಟೋರೇಜ್, 5200mAh ಬ್ಯಾಟರಿ ಮತ್ತು 45W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳೊಂದಿಗೆ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ.

ಪ್ರಸಿದ್ಧ Realme ಕಂಪನಿಯ ಹೊಸ ಫೋನ್ ಬಿಡುಗಡೆ.. ಬೆಲೆ ಎಷ್ಟು, ಫೀಚರ್ಸ್ ಹೇಗಿವೆ?

ರಿಯಲ್‌ಮಿ 14 ಪ್ರೊ ಲೈಟ್ 5G ಬೆಲೆ ಮತ್ತು ಲಭ್ಯತೆ

8GB RAM + 128GB ಸ್ಟೋರೇಜ್ ಬೆಲೆ = 21,999 ರೂ.
8GB RAM + 256GB ಸ್ಟೋರೇಜ್ ಬೆಲೆ = 23,999 ರೂ.

ರಿಯಲ್‌ಮಿ 14 ಪ್ರೊ ಲೈಟ್ 5G ಫೋನ್ 8GB RAM ನೊಂದಿಗೆ ಬಿಡುಗಡೆಯಾಗಿದೆ. ನೀವು 128GB ಮತ್ತು 256GB ಸ್ಟೋರೇಜ್ ಆಯ್ಕೆಯಲ್ಲಿ ಖರೀದಿಸಬಹುದು. ಈ ಎರಡು ರೂಪಾಂತರಗಳ ಬೆಲೆ 21,999 ಮತ್ತು 23,999 ರೂ. ಆಗಿದೆ. ಈ ಮೊಬೈಲ್ ಕಂಪನಿಯ ವೆಬ್‌ಸೈಟ್‌ ಮತ್ತು ಆಫ್‌ಲೈನ್ ಚಿಲ್ಲರೆ ಅಂಗಡಿಗಳ ಮೂಲಕ ಮಾರಾಟವಾಗಲಿದೆ. ಇದು ಗ್ಲಾಸ್ ಗೋಲ್ಡ್ ಮತ್ತು ಗ್ಲಾಸ್ ಪರ್ಪಲ್ ಬಣ್ಣಗಳ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ.

ರಿಯಲ್‌ಮಿ 14 ಪ್ರೊ ಲೈಟ್ 5G ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ರಿಯಲ್‌ಮಿ 14 ಪ್ರೊ ಲೈಟ್ 5G ಫೋನ್ 6.7 ಇಂಚಿನ ಡಿಸ್ಪ್ಲೇ ಹೊಂದಿದೆ. ಇದು ಪಂಚ್ ಹೋಲ್ ಶೈಲಿಯ ಅಮೋಲೆಡ್ ಡಿಸ್ಪ್ಲೇ ಆಗಿದೆ. ಈ ಡಿಸ್ಪ್ಲೇಯು 2412 x 1080 ಪಿಕ್ಸೆಲ್ ರೆಸಲ್ಯೂಶನ್ ಬೆಂಬಲದೊಂದಿಗೆ ಬರುತ್ತದೆ. ಇದರೊಂದಿಗೆ 120Hz ರಿಫ್ರೆಶ್ ದರ ಮತ್ತು 2000 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಪಡೆದಿದೆ. ಈ ಮೊಬೈಲ್ ಆಪ್ಟಿಕಲ್ ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಸಹ ಹೊಂದಿದೆ. ಜೊತೆಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್‌ ರಕ್ಷಣೆಯನ್ನು ಹೊಂದಿದೆ.

ಪ್ರೊಸೆಸರ್ ಸಾಮರ್ಥ್ಯ

ರಿಯಲ್‌ಮಿ 14 ಪ್ರೊ ಲೈಟ್ 5G ಮೊಬೈಲ್ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 7S ಜೆನ್ 2 ಆಕ್ಟಾಕೋರ್ ಪ್ರೊಸೆಸರ್ ಹೊಂದಿದೆ. ಈ ಪ್ರೊಸೆಸರ್ ಅನ್ನು 4 ನ್ಯಾನೊಮೀಟರ್ ಫ್ಯಾಬ್ರಿಕೇಶನ್ ಆಧಾರದ ಮೇಲೆ ತಯಾರಿಸಲಾಗಿದೆ. ಈ ಫೋನ್ ಆಂಡ್ರಾಯ್ಡ್ 14 ಆಧಾರಿತ ರಿಯಲ್‌ಮಿ ಯುಐ ಓಎಸ್‌ನೊಂದಿಗೆ ಕೆಲಸ ಮಾಡುತ್ತದೆ. ಗ್ರಾಫಿಕ್ಸ್‌ಗಾಗಿ, ಇದು ಅಡ್ರಿನೊ 710 ಜಿಪಿಯು ಸಹ ಹೊಂದಿದೆ.

ಸ್ಟೋರೇಜ್ ಆಯ್ಕೆ

ರಿಯಲ್‌ಮಿ 14 ಪ್ರೊ ಲೈಟ್ 5G ಸ್ಮಾರ್ಟ್‌ಫೋನ್‌ 8GB RAM ನೊಂದಿಗೆ ಬಿಡುಗಡೆಯಾಗಿದೆ. ಜೊತೆಗೆ 8GB ಡೈನಾಮಿಕ್ RAM ತಂತ್ರಜ್ಞಾನ ಸಹ ಒಳಗೊಂಡಿದೆ. ನೀವು ಭೌತಿಕ RAMಗೆ ವರ್ಚುವಲ್ RAM ಸೇರಿಸುವ ಮೂಲಕ, 16GB RAM ವರೆಗೆ ಬಳಸಬಹುದು. ಈ ಫೋನಿನಲ್ಲಿ ಮೆಮೊರಿ ಕಾರ್ಡ್ ಸಹ ಅಳವಡಿಸಬಹುದು.

ಪ್ರಸಿದ್ಧ Realme ಕಂಪನಿಯ ಹೊಸ ಫೋನ್ ಬಿಡುಗಡೆ.. ಬೆಲೆ ಎಷ್ಟು, ಫೀಚರ್ಸ್ ಹೇಗಿವೆ?

ಕ್ಯಾಮೆರಾ ಸೆಟಪ್

ರಿಯಲ್‌ಮಿ 14 ಪ್ರೊ ಲೈಟ್ 5G ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ OIS ಬೆಂಬಲದೊಂದಿಗೆ 50 ಮೆಗಾಪಿಕ್ಸೆಲ್ ಸೋನಿ ಮುಖ್ಯ ಕ್ಯಾಮೆರಾ ಲಭ್ಯವಿದೆ. ಇದರೊಂದಿಗೆ 8 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನಿನಲ್ಲಿ 32 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಲಭ್ಯವಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ರಿಯಲ್‌ಮಿ 14 ಪ್ರೊ ಲೈಟ್ 5G ಮೊಬೈಲ್ 5200mAh ಸಾಮರ್ಥ್ಯ ಶಕ್ತಿಶಾಲಿ ಬ್ಯಾಟರಿ ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 45W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ.

Best Mobiles in India

English summary
Realme 14 Pro Lite 5G Launched in India with Qualcomm Snapdragon 7s Gen 2: check price, specs and sale details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+