Home
ಮೊಬೈಲ್

ಬರ್ತಿದೆ Realme 14 Pro Lite ಫೋನ್; ಫೆ.28 ರಿಂದ ಸೇಲ್.. ಬಜೆಟ್ ಬೆಲೆ.. ವಿಶೇಷತೆಗಳೇನು ಗೊತ್ತಾ?

ರಿಯಲ್‌ಮಿ ಕಳೆದ ತಿಂಗಳು ತನ್ನ 14 Pro ಸರಣಿಯನ್ನು ಬಿಡುಗಡೆ ಮಾಡಿತ್ತು. ಇದರ ಅಡಿಯಲ್ಲಿ ಕಂಪನಿಯು ರಿಯಲ್‌ಮಿ 14 ಪ್ರೊ ಮತ್ತು ರಿಯಲ್‌ಮಿ 14 ಪ್ರೊ+ ಫೋನನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಇದೀಗ ಕಂಪನಿಯು ಈ ಸರಣಿಯಲ್ಲಿ ಹೊಸ ಮೊಬೈಲ್ ಲಾಂಚ್ ಮಾಡಲು ಸಿದ್ಧತೆ ನಡೆಸಿದೆ. ಹೌದು, ರಿಯಲ್‌ಮಿ 14 ಪ್ರೊ ಲೈಟ್ 5G (Realme 14 Pro Lite 5G) ಶೀಘ್ರದಲ್ಲೇ ಅನಾವರಣಗೊಳ್ಳಲಿದೆ. ಮುಂಬರುವ ರಿಯಲ್‌ಮಿ 5G ಫೋನಿನ ಬೆಲೆ, ಮಾರಾಟದ ವಿವರಗಳು ಮತ್ತು ವಿಶೇಷತೆಗಳನ್ನು ತಿಳಿಯಲು ಮುಂದೆ ಓದಿ.

ರಿಯಲ್‌ಮಿ 14 ಪ್ರೊ ಲೈಟ್ 5G ಅನೇಕ ಅತ್ಯುತ್ತಮ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್‌ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿರುತ್ತದೆ. ಹಾಗೆಯೇ 32 ಮೆಗಾಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾ ಲಭ್ಯವಿರುತ್ತದೆ. ಇದು 6.7 ಇಂಚಿನ ಡಿಸ್ಪ್ಲೇಯೊಂದಿಗೆ ಬರುತ್ತದೆ. ಈ ಮೊಬೈಲ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 7s ಜೆನ್ 2 ಪ್ರೊಸೆಸರ್‌ನೊಂದಿಗೆ ಕೆಲಸ ಮಾಡುತ್ತದೆ. ಜೊತೆಗೆ 8GB RAM + 256GB ಸ್ಟೋರೇಜ್, 5200mAh ಬ್ಯಾಟರಿ ಮತ್ತು 45W ವೇಗದ ಚಾರ್ಜಿಂಗ್‌ ಒಳಗೊಂಡಿದೆ.

ಶೀಘ್ರ Realme 14 Pro Lite ಲಾಂಚ್; ಫೆ.28ಕ್ಕೆ ಸೇಲ್.. ಫೀಚರ್ಸ್, ಬೆಲೆ ನೋಡಿ

ರಿಯಲ್‌ಮಿ 14 ಪ್ರೊ ಲೈಟ್ 5G ಬೆಲೆ

ರಿಯಲ್‌ಮಿ 14 ಪ್ರೊ ಲೈಟ್ 5G ಮೊಬೈಲ್ 8GB RAM ನೊಂದಿಗೆ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಈ ಫೋನಿನ 8GB RAM + 128GB ಸ್ಟೋರೇಜ್ ರೂಪಾಂತರವನ್ನು 21,999 ರೂ.ಗೆ ಪರಿಚಯಿಸಲಾಗುವುದು. 8GB RAM + 256GB ಸ್ಟೋರೇಜ್ ವೇರಿಯಂಟ್ ಬೆಲೆ 23,999 ರೂ.ಗೆ ಲಭ್ಯವಿರುತ್ತದೆ. ಇದೇ ಫೆಬ್ರವರಿ 28 ರಿಂದ ಈ ಫೋನಿನ ಮಾರಾಟ ಆಫ್‌ಲೈನ್ ಅಂಗಡಿಗಳಲ್ಲಿ ಪ್ರಾರಂಭವಾಗಲಿದೆ. ಕಂಪನಿಯು ಈ ಹೊಸ ಫೋನ್ ಖರೀದಿಸುವ ಗ್ರಾಹಕರಿಗೆ 1,999 ರೂ.ಗಳ ಸ್ಮಾರ್ಟ್ ಲ್ಯಾಪ್‌ಟಾಪ್ ಬ್ಯಾಗ್ ಉಚಿತವಾಗಿ ನೀಡುತ್ತದೆ.

ಡಿಸ್ಪ್ಲೇ ವಿವರ

ರಿಯಲ್‌ಮಿ 14 ಪ್ರೊ ಲೈಟ್ 5G ಫೋನ್ 6.7 ಇಂಚಿನ ಫುಲ್ ಎಚ್‌ಡಿ ಪ್ಲಸ್ ಹೊಂದಿರುತ್ತದೆ. ಇದು ಪಂಚ್ ಹೋಲ್ ಶೈಲಿಯ ಅಮೋಲೆಡ್ ಡಿಸ್ಪ್ಲೇ ಆಗಿದೆ. ಈ ಸ್ಕ್ರೀನ್ 120Hz ರಿಫ್ರೆಶ್ ದರ ಬೆಂಬಲ ಪಡೆದಿದೆ. ಈ ಮೊಬೈಲ್ ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ತಂತ್ರಜ್ಞಾನ ಹೊಂದಿದೆ. ಇದು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ರಕ್ಷಣೆಯನ್ನು ಸಹ ಹೊಂದಿದೆ.

ಪ್ರೊಸೆಸರ್ ಸಾಮರ್ಥ್ಯ

ರಿಯಲ್‌ಮಿ 14 ಪ್ರೊ ಲೈಟ್ 5G ಮೊಬೈಲ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 7S ಜೆನ್ 2 ಆಕ್ಟಾ ಕೋರ್ ಪ್ರೊಸೆಸರ್ ಹೊಂದಿದೆ. ಇದನ್ನು 4 ನ್ಯಾನೊಮೀಟರ್ ಫ್ಯಾಬ್ರಿಕೇಶನ್‌ಗಳಲ್ಲಿ ತಯಾರಿಸಲಾಗಿದೆ. ಇದು ಆಂಡ್ರಾಯ್ಡ್‌ 15 ಆಧಾರಿತ ರಿಯಲ್‌ಮಿ ಯುಐ 6.0 ಓಎಸ್‌ನೊಂದಿಗೆ ಕೆಲಸ ಮಾಡುತ್ತದೆ.

RAM ಮತ್ತು ಸ್ಟೋರೇಜ್ ಆಯ್ಕೆ

ರಿಯಲ್‌ಮಿ 14 ಪ್ರೊ ಲೈಟ್ 5G ಸ್ಮಾರ್ಟ್‌ಫೋನ್‌ 8GB RAM ಹೊಂದಿರುತ್ತದೆ. ಇದು ಡೈನಾಮಿಕ್ RAM ತಂತ್ರಜ್ಞಾನೊಂದಿಗೆ ಬರುತ್ತದೆ. ನೀವು 8GB ವರ್ಚುವಲ್ RAM ಜೊತೆಗೆ 16GB RAM ವರೆಗೆ ಬಳಸಬಹುದು. ಈ ಫೋನ್ 128GB ಮತ್ತು 256GB ಸ್ಟೋರೇಜ್ ಆಯ್ಕೆ ಲಭ್ಯವಿದೆ.

ಕ್ಯಾಮೆರಾ ಸೆಟಪ್

ರಿಯಲ್‌ಮಿ 14 ಪ್ರೊ ಲೈಟ್ 5G ಫೋನ್‌ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿರುತ್ತದೆ. ಈ ಫೋನಿನಲ್ಲಿ OIS ಜೊತೆಗೆ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಜೊತೆಗೆ 8 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ತೃತೀಯ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನಿನಲ್ಲಿ 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಲಭ್ಯವಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್‌

ರಿಯಲ್‌ಮಿ 14 ಪ್ರೊ ಲೈಟ್ 5G ಮೊಬೈಲ್ 5200mAh ಸಾಮರ್ಥ್ಯ ಬ್ಯಾಟರಿ ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 45W ವೇಗದ ಚಾರ್ಜಿಂಗ್‌ ಸೌಲಭ್ಯ ಒದಗಿಸಲಾಗಿದೆ.

Best Mobiles in India

English summary
Realme 14 Pro Lite 5G To Launch in India Soon: Check Expected Price, Specifications and more Details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+