Realme 14 Pro Series: ಜ.16ಕ್ಕೆ ಎರಡು ಹೊಸ ಫೋನ್ ಲಾಂಚ್; ಕಡಿಮೆ ಬೆಲೆ.. ವಿಶೇಷತೆಗಳೇನು?
2025 ವರ್ಷ ಮೊಬೈಲ್ ಪ್ರಿಯರಿಗೆ ಹಬ್ಬವೇ ಸರಿ! ಕೇವಲ ಹತ್ತು ದಿನಗಳಲ್ಲಿ 10ಕ್ಕೂ ಹೆಚ್ಚು ಮೊಬೈಲ್‌ಗಳು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿವೆ. ಈ ಸ್ಮಾರ್ಟ್‌ಫೋನ್‌ಗಳ ಬೆಲೆ 6 ಸಾವಿರ ರೂ.ನಿಂದ 60 ಸಾವಿರ ರೂ. ವರೆಗೆ ಇದೆ. ಇದೀಗ, ಈ ವಾರದಲ್ಲಿ ಅಂದರೆ, ಜನವರಿ 13 ಮತ್ತು ಜನವರಿ 19ರ ನಡುವೆ ಹೊಸ ರಿಯಲ್‌ಮಿ (Realme) ಮೊಬೈಲ್‌ಗಳು ಭಾರತದಲ್ಲಿ ಲಾಂಚ್ ಆಗಲಿವೆ. ಬನ್ನಿ, ಭಾರತದಲ್ಲಿ ಬಿಡುಗಡೆಗೆ ಸಿದ್ಧವಾಗಿರುವ ಈ ಫೋನ್‌ಗಳ ಬೆಲೆ ಮತ್ತು ವಿಶೇಷತೆಗಳನ್ನು ತಿಳಿಯೋಣ.
ದೇಶೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ 2025 ವರ್ಷವು ಉತ್ತಮವಾಗಿ ಪ್ರಾರಂಭವಾಗಿದೆ. ಪ್ರಸಿದ್ಧ ಕಂಪನಿಗಳಾದ ಒನ್‌ಪ್ಲಸ್, ಒಪ್ಪೋ, ರೆಡ್ಮಿ ಸೇರಿದಂತೆ ಅಗ್ಗದ ಮೊಬೈಲ್‌ಗಳಿಗೆ ಹೆಸರುವಾಸಿಯಾಗಿರುವ ಟೆಕ್ನೋ ಸಹ ಹೊಸ ಫೋನ್‌ಗಳನ್ನು ಪರಿಚಯಿಸಿದೆ. ಇದೀಗ, ರಿಯಲ್‌ಮಿ 14 ಪ್ರೊ (Realme 14 Pro) ಸರಣಿ ಭಾರತದಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಇದರಲ್ಲಿ ಎರಡು ಸೊಸಗಾದ ಮೊಬೈಲ್‌ಗಳು ಮಾರುಕಟ್ಟೆಗೆ ಲಗ್ಗೆ ಇಡಲಿವೆ. ಈ ಫೋನ್‌ಗಳ ಬಿಡುಗಡೆ ದಿನಾಂಕ ತಿಳಿಯಲು ಮುಂದೆ ಓದಿ.

ಈ ವಾರ ಲಾಂಚ್ ಆಗುವ ಫೋನ್‌ಗಳಿವು!
ರಿಯಲ್‌ಮಿ 14 ಪ್ರೊ
ರಿಯಲ್‌ಮಿ 14 ಪ್ರೊ (Realme 14 Pro) ಸರಣಿಯನ್ನು ಭಾರತದಲ್ಲಿ ಜನವರಿ 16 ರಂದು ಬಿಡುಗಡೆ ಮಾಡಲಾಗುವುದು. ಈ ಫೋನಿನ ಮೂಲ ರೂಪಾಂತರದ ಬೆಲೆ 25 ಸಾವಿರದಿಂದ 30 ಸಾವಿರ ರೂ. ಬಜೆಟ್‌ನಲ್ಲಿ ಇರಲಿದೆ. ವರದಿಯ ಪ್ರಕಾರ, ರಿಯಲ್‌ಮಿ 14 ಪ್ರೊ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್‌ನ ಡೈಮೆನ್ಸಿಟಿ 7300 ಎನರ್ಜಿ ಪ್ರೊಸೆಸರ್‌ನೊಂದಿಗೆ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಈ ಫೋನ್ ಇತ್ತೀಚಿನ ಆಂಡ್ರಾಯ್ಡ್ 15 ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕೆಲಸ ಮಾಡುತ್ತದೆ.
ರಿಯಲ್‌ಮಿ 14 ಪ್ರೊ ಮೊಬೈಲ್ 6,000mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯಲ್ಲಿ ಬಿಡುಗಡೆಯಾಗಲಿದೆ. ಇದು ದೊಡ್ಡ ಬ್ಯಾಟರಿಯೊಂದಿಗೆ ಮಾರುಕಟ್ಟೆಯಲ್ಲಿ ಲಭ್ಯವಿರುವ ತೆಳುವಾದ ಫೋನ್ ಆಗಿರುತ್ತದೆ ಎಂದು ಹೇಳಲಾಗುತ್ತಿದೆ. ಹಾಗೆಯೇ ಈ ಫೋನ್‌ನಲ್ಲಿ 45W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗುವುದು. ಇದು 1.5K ರೆಸಲ್ಯೂಶನ್ ಮತ್ತು 3840Hz PWM ಮಬ್ಬಾಗಿಸುವಿಕೆಯೊಂದಿಗೆ ಬಾಗಿದ ಡಿಸ್ಪ್ಲೇಯನ್ನು ಹೊಂದಿರುತ್ತದೆ. ಈ ಮೊಬೈಲ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿರುತ್ತದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನಿನಲ್ಲಿ 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಲಭ್ಯವಿರುತ್ತದೆ.
ರಿಯಲ್‌ಮಿ 14 ಪ್ರೊ+
ರಿಯಲ್‌ಮಿ 14 ಪ್ರೊ ಸರಣಿಯ ಅತಿ ದೊಡ್ಡ ಫೋನ್ ಇದಾಗಿದೆ. ಈ ರಿಯಲ್‌ಮಿ 14 ಪ್ರೊ+ (Realme 14 Pro+) ಸ್ಮಾರ್ಟ್‌ಫೋನ್ ಜನವರಿ 16 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ. ಇದನ್ನು 32,999 ರೂ.ಗೆ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಇದು ಸ್ನಾಪ್‌ಡ್ರಾಗನ್ 7s ಜೆನ್ 3 ಪ್ರೊಸೆಸರ್‌ನೊಂದಿಗೆ ಭಾರತೀಯ ಮಾರುಕಟ್ಟೆಗೆ ಬರಲಿದೆ. ಈ ಫೋನ್ 12GB RAM ಹೊಂದಿರಲಿದೆ. ಜೊತೆಗೆ ಇತ್ತೀಚಿನ ಆಂಡ್ರಾಯ್ಡ್ 15 ಆಧಾರಿತ ರಿಯಲ್‌ಮಿ ಯುಐ 6.0 ಓಎಸ್ ಸಹ ಈ ಮೊಬೈಲ್‌ನಲ್ಲಿ ಲಭ್ಯವಿರುತ್ತದೆ.
ರಿಯಲ್‌ಮಿ 14 ಪ್ರೊ+ ಸ್ಮಾರ್ಟ್‌ಫೋನ್‌ನಲ್ಲಿ ಹೈಪರ್‌ಇಮೇಜ್ ಕ್ಯಾಮೆರಾ ಸೆಟಪ್ ಅಳವಡಿಸಲಗುತ್ತದೆ. ಇದನ್ನು ಕಂಪನಿಯು ಟ್ರಿಪಲ್ ಫ್ಲ್ಯಾಷ್‌ನೊಂದಿಗೆ ವಿಶ್ವದ ಮೊದಲ ಫೋನ್ ಆಗಿ ಪರಿಚಯಿಸುತ್ತಿದೆ. ಈ ಫೋನ್ 1.5K ರೆಸಲ್ಯೂಶನ್ ಹೊಂದಿರುವ 6.83 ಇಂಚಿನ ಬಾಗಿದ ಓಎಲ್‌ಇಡಿ ಡಿಸ್ಪ್ಲೇ ಹೊಂದಿರುತ್ತದೆ. ಈ ಸ್ಮಾರ್ಟ್‌ಫೋನ್ 6,000mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯನ್ನು ಹೊಂದಿರಲಿದೆ. ಇದನ್ನು ಚಾರ್ಜ್ ಮಾಡಲು, ಈ ಫೋನ್ 80W ವೇಗದ ಚಾರ್ಜಿಂಗ್ ತಂತ್ರಜ್ಞಾನವನ್ನು ಹೊಂದಿದೆ.


Click it and Unblock the Notifications








