Realme 14 Pro Series: ನಾಳೆ ಎರಡು ಫೋನ್ ಗ್ರ್ಯಾಂಡ್ ಎಂಟ್ರಿ; ಬೆಲೆಯೂ ಕಡಿಮೆ.. ಹೇಗಿವೆ ಫೀಚರ್ಸ್
ರಿಯಲ್‌ಮಿ 14 ಪ್ರೊ (Realme 14 Pro Series) ಸರಣಿಯು ಬಿಡುಗಡೆಗೆ ಸಿದ್ಧವಾಗಿದೆ. ಕಂಪನಿಯು ನಾಳೆ (ಜನವರಿ 16) ಅಧಿಕೃತವಾಗಿ ಭಾರತದಲ್ಲಿ ಅನಾವರಣಗೊಳಿಸಲಿದೆ. ಹೌದು, ಈ ಸರಣಿಯಲ್ಲಿ ಎರಡು ಹೊಸ ಫೋನ್‌ಗಳು ಮಾರಕಟ್ಟೆಗೆ ಎಂಟ್ರಿ ಕೊಡಲಿವೆ. ಅವುಗಳೇ ರಿಯಲ್‌ಮಿ 14 ಪ್ರೊ (Realme 14 Pro) ಮತ್ತು ರಿಯಲ್‌ಮಿ 14 ಪ್ರೊ+ (Realme 14 Pro+) ಸ್ಮಾರ್ಟ್‌ಫೋನ್‌ಗಳು. ಈ ಪೈಕಿ ರಿಯಲ್‌ಮಿ 14 ಪ್ರೊ+ ವಿಶ್ವದ ಮೊದಲ ಕೋಲ್ಡ್ ಸೆನ್ಸಿಟಿವ್ ಕಲರ್ ಚೇಂಜಿಂಗ್ ಫೋನ್ ಆಗಿದೆ. ಬನ್ನಿ, ಈ ಫೋನ್‌ಗಳ ವಿಶೇಷತೆಗಳನ್ನು ತಿಳಿಯೋಣ.
ರಿಯಲ್‌ಮಿ ಜನವರಿ 16 ರಂದು (ನಾಳೆ) ಮಧ್ಯಾಹ್ನ 12 ಗಂಟೆಗೆ ಲಾಂಚ್ ಈವೆಂಟ್ ಆಯೋಜಿಸಿದೆ. ಈ ಸಮಾರಂಭದಲ್ಲಿ ರಿಯಲ್‌ಮಿ 14 ಪ್ರೊ ಮತ್ತುರಿಯಲ್‌ಮಿ 14 ಪ್ರೊ+ ಮೊಬೈಲ್ ಬಿಡುಗಡೆಯಾಗುತ್ತಿದೆ. ಈ ಕಾರ್ಯಕ್ರಮವು ಕಂಪನಿಯ ವೆಬ್‌ಸೈಟ್ (realme.in) ಮತ್ತು ಕಂಪನಿಯ ಎಲ್ಲಾ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಲೈವ್ ಆಗಲಿದೆ. ಈ ಫೋನ್‌ಗಳ ಬೆಲೆ ತಿಳಿಯಲು ಮುಂದೆ ಓದಿ.

ರಿಯಲ್‌ಮಿ 14 ಪ್ರೊ ಸರಣಿಯ ಬೆಲೆ (ನಿರೀಕ್ಷಿತ)
ರಿಯಲ್‌ಮಿ 14 ಪ್ರೊ ಬೆಲೆ = 27,999 ರೂ.
ರಿಯಲ್‌ಮಿ 14 ಪ್ರೊ + ಬೆಲೆ = 32,999 ರೂ.
ರಿಯಲ್‌ಮಿ 14 ಪ್ರೊ ಮತ್ತು ರಿಯಲ್‌ಮಿ 14 ಪ್ರೊ+ ಸ್ಮಾರ್ಟ್‌ಫೋನ್‌ಗಳನ್ನು ಮಧ್ಯ ಬಜೆಟ್ ವಿಭಾಗದಲ್ಲಿ ಬಿಡುಗಡೆ ಮಾಡಲಾಗುವುದು. ರಿಯಲ್‌ಮಿ 14 ಪ್ರೊ ಬೆಲೆ 25 ಸಾವಿರದಿಂದ 30 ಸಾವಿರ ರೂ. ಇರಬಹುದು. ರಿಯಲ್‌ಮಿ 14 ಪ್ರೊ ಪ್ಲಸ್ ಬೆಲೆ 30 ಸಾವಿರಕ್ಕಿಂತ ಹೆಚ್ಚು ಇರುತ್ತದೆ. ಈ ಎರಡೂ ಫೋನ್‌ಗಳು 12GB RAM ನೊಂದಿಗೆ ಬಿಡುಗಡೆಯಾಗಲಿವೆ. ರಿಯಲ್‌ಮಿ 14 ಪ್ರೊ ಸರಣಿಯು ಪರ್ಲ್ ವೈಟ್, ಸ್ಯೂಡ್ ಗ್ರೇ, ಬಿಕಾನರ್ ಪರ್ಪಲ್ ಮತ್ತು ಜೈಪುರ ಪಿಂಕ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರುತ್ತದೆ.
ರಿಯಲ್‌ಮಿ 14 ಪ್ರೊ ವೈಶಿಷ್ಟ್ಯಗಳು
ರಿಯಲ್‌ಮಿ 14 ಪ್ರೊ ಸ್ಮಾರ್ಟ್‌ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 7300 ಎನರ್ಜಿ ಪ್ರೊಸೆಸರ್ ಹೊಂದಿರುತ್ತದೆ. ಈ ಫೋನ್ ಇತ್ತೀಚಿನ ಆಂಡ್ರಾಯ್ಡ್ 15 ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕೆಲಸ ಮಾಡುತ್ತದೆ. ಈ ಫೋನಿನಲ್ಲಿ 8GB RAM ಲಭ್ಯವಿರುತ್ತದೆ. ಈ ಮೊಬೈಲ್ OIS ಜೊತೆಗೆ ಸೋನಿ ಮುಖ್ಯ ಕ್ಯಾಮೆರಾ ಹೊಂದಿರುತ್ತದೆ. ಈ ಕ್ಯಾಮೆರಾ ಸೆಟಪ್ ಟ್ರಿಪಲ್ ಫ್ಲ್ಯಾಷ್ ಆಧಾರಿತ 'ಸ್ಟುಡಿಯೋ ಲೆವೆಲ್' ಫಿಲ್ ಲೈಟ್‌ನೊಂದಿಗೆ ಬರುತ್ತದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನಿನಲ್ಲಿ 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಲಭ್ಯವಿರುತ್ತದೆ.
ರಿಯಲ್‌ಮಿ 14 ಪ್ರೊ ಮೊಬೈಲ್ 6000mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯಲ್ಲಿ ಬಿಡುಗಡೆಯಾಗಲಿದೆ. ಇದು ದೊಡ್ಡ ಬ್ಯಾಟರಿಯೊಂದಿಗೆ ಮಾರುಕಟ್ಟೆಯಲ್ಲಿ ಲಭ್ಯವಿರುವ ತೆಳುವಾದ ಫೋನ್ ಆಗಿರುತ್ತದೆ ಎಂದು ಹೇಳಲಾಗುತ್ತಿದೆ. ಈ ಫೋನ್‌ನಲ್ಲಿ 45W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗುವುದು. ಇದು 1.5K ರೆಸಲ್ಯೂಶನ್‌ನೊಂದಿಗೆ ಬಾಗಿದ ಡಿಸ್ಪ್ಲೇ ಹೊಂದಿರುತ್ತದೆ.
ರಿಯಲ್‌ಮಿ 14 ಪ್ರೊ+ ವೈಶಿಷ್ಟ್ಯಗಳು
ರಿಯಲ್‌ಮಿ 14 ಪ್ರೊ+ ಸ್ನಾಪ್‌ಡ್ರಾಗನ್ 7s ಜೆನ್ 3 ಪ್ರೊಸೆಸರ್‌ನೊಂದಿಗೆ ಮಾರುಕಟ್ಟೆಗೆ ಬರಲಿದೆ. ಈ ಫೋನ್ 12GB RAM ಹೊಂದಿರಲಿದೆ. ಇದು ಆಂಡ್ರಾಯ್ಡ್ 15 ಆಧಾರಿತ ರಿಯಲ್‌ಮಿ ಯುಐ 6.0 ಓಎಸ್ ನೊಂದಿಗೆ ಕೆಲಸ ಮಾಡುತ್ತದೆ. ಈ ಫೋನ್ 1.5K ರೆಸಲ್ಯೂಶನ್ ಹೊಂದಿರುವ 6.83 ಇಂಚಿನ ಬಾಗಿದ ಡಿಸ್ಪ್ಲೇ ಹೊಂದಿರುತ್ತದೆ. ಈ ಸ್ಮಾರ್ಟ್‌ಫೋನ್ 6,000mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯನ್ನು ಹೊಂದಿರಲಿದೆ. ಇದನ್ನು ಚಾರ್ಜ್ ಮಾಡಲು, ಈ ಫೋನ್ 80W ವೇಗದ ಚಾರ್ಜಿಂಗ್ ತಂತ್ರಜ್ಞಾನವನ್ನು ಹೊಂದಿದೆ.
ರಿಯಲ್‌ಮಿ 14 ಪ್ರೊ+ ಸ್ಮಾರ್ಟ್‌ಫೋನ್ ಹೈಪರ್‌ಇಮೇಜ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿರುತ್ತದೆ. ಇದು ಟ್ರಿಪಲ್ ಫ್ಲ್ಯಾಷ್‌ನೊಂದಿಗೆ ಬರುತ್ತಿರುವ ವಿಶ್ವದ ಮೊದಲ ಫೋನ್ ಆಗಿದೆ. ಫೋನಿನಲ್ಲಿ 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇರುತ್ತದೆ. ಜೊತೆಗೆ 50 ಮೆಗಾಪಿಕ್ಸೆಲ್ ಸೋನಿ ಮುಖ್ಯ ಕ್ಯಾಮೆರಾ, 50 ಮೆಗಾಪಿಕ್ಸೆಲ್ ಸೋನಿ ದ್ವಿತೀಯ ಕ್ಯಾಮೆರಾ ಮತ್ತು 8 ಮೆಗಾಪಿಕ್ಸೆಲ್ ತೃತೀಯ ಕ್ಯಾಮೆರಾ ಹೊಂದಿರಲಿದೆ.


Click it and Unblock the Notifications








