Home
ಮೊಬೈಲ್

ಜ.16ಕ್ಕೆ Realme 14 Pro ಸರಣಿ ಲಾಂಚ್; ಬರ್ತಿವೆ 2 ಸೊಗಸಾದ ಫೋನ್‌.. ಕ್ಯಾಮೆರಾ, ಬ್ಯಾಟರಿ ಸೂಪರ್‌!

ರಿಯಲ್‌ಮಿ ಎರಡು ಹೊಸ ಫೋನ್ ಪರಿಚಯಿಸಲು ಸಿದ್ಧವಾಗಿದೆ. ಇದೀಗ, ಕಂಪನಿಯು ಬಿಡುಗಡೆ ದಿನಾಂಕವನ್ನು ಘೋಷಿಸಿದೆ. ಹೌದು, ರಿಯಲ್‌ಮಿ 14 ಪ್ರೊ (Realme 14 Pro) ಸರಣಿಯು ಭಾರತಕ್ಕೆ ಬರಲು ಸಜ್ಜಾಗಿದೆ. ಇದೇ ಜನವರಿ 16 ರಂದು ರಿಯಲ್‌ಮಿ 14 ಪ್ರೊ ಸರಣಿಯನ್ನು ಅನಾವರಣಗೊಳಿಸಲಾಗುವುದು. ಇದರಲ್ಲಿ ರಿಯಲ್‌ಮಿ 14 ಪ್ರೊ (Realme 14 Pro 5G) ಮತ್ತು ರಿಯಲ್‌ಮಿ 14 ಪ್ರೊ+ (Realme 14 Pro + 5G) ಫೋನ್‌ಗಳು ಮಾರುಕಟ್ಟೆಗೆ ಎಂಟ್ರಿ ಕೊಡಲಿವೆ. ಇವು ಸ್ಟೈಲಿಶ್ ಲುಕ್ ಮತ್ತು ಅತ್ಯಾಕರ್ಷಕ ವೈಶಿಷ್ಟ್ಯಗಳನ್ನು ಹೊಂದಿವೆ.

ಹೌದು, ರಿಯಲ್‌ಮಿ 14 ಪ್ರೊ ಸರಣಿಯು ಜನವರಿ 16 ರಂದು ಅಧಿಕೃತವಾಗಿ ಬಿಡುಗಡೆಯಾಗಲಿದೆ. ಕಂಪನಿಯು ಮಧ್ಯಾಹ್ನ 12 ಗಂಟೆಗೆ ದೊಡ್ಡ ಕಾರ್ಯಕ್ರಮವನ್ನು ಆಯೋಜಿಸಿದೆ. ಈ ಸಂದರ್ಭದಲ್ಲಿ ರಿಯಲ್‌ಮಿ 14 ಪ್ರೊ ಮತ್ತು ರಿಯಲ್‌ಮಿ 14 ಪ್ರೊ+ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲಿವೆ. ಅಂದೇ ಎರಡೂ ಸ್ಮಾರ್ಟ್‌ಫೋನ್‌ಗಳ ಬೆಲೆ ಮತ್ತು ಲಭ್ಯತೆಯನ್ನು ಬಹಿರಂಗಪಡಿಸಲಾಗುತ್ತದೆ. ಕಂಪನಿಯ ವೆಬ್‌ಸೈಟ್, ಎಲ್ಲಾ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳು ಮತ್ತು ರಿಯಲ್‌ಮಿಯ ಯೂಟ್ಯೂಬ್ ಚಾನಲ್‌ಗಳಲ್ಲಿ ಈ ಸಮಾರಂಭವನ್ನು ಲೈವ್ ಆಗಿ ವೀಕ್ಷಿಸಬಹುದು. ಈಗಾಗಲೇ, ಫ್ಲಿಪ್‌ಕಾರ್ಟ್‌ನಲ್ಲಿ ಮೈಕ್ರೋ ಸೈಟ್ ಲೈವ್ ಮಾಡಲಾಗಿದೆ.

ಜ.16ಕ್ಕೆ Realme 14 Pro ಸರಣಿ ಲಾಂಚ್; ಬರ್ತಿವೆ ಎರಡು ಶಕ್ತಿಶಾಲಿ ಫೋನ್‌ಗಳು!

ರಿಯಲ್‌ಮಿ 14 ಪ್ರೊ ವೈಶಿಷ್ಟ್ಯಗಳು

ರಿಯಲ್‌ಮಿ 14 ಪ್ರೊ ಮೊಬೈಲ್ ಮೀಡಿಯಾಟೆಕ್ ಡೈಮೆನ್ಸಿಟಿ 7300 ಎನರ್ಜಿ ಪ್ರೊಸೆಸರ್ ಹೊಂದಿರಲಿದೆ. ಇದು ರಿಯಲ್‌ಮಿ 13 ಪ್ರೊ ಸರಣಿಯ ಸ್ನಾಪ್‌ಡ್ರಾಗಲ್ 7s ಜೆನ್ 2 ಗಿಂತ ವೇಗವಾದ ಪ್ರೊಸೆಸರ್ ಆಗಿದೆ. ಈ ಮೊಬೈಲ್ 120Hz ರಿಫ್ರೆಶ್‌ ದರದೊಂದಿಗೆ ಕರ್ವ್ ಡಿಸ್ಪ್ಲೇ ಹೊಂದಿರುತ್ತದೆ. ಇದು 1.5K ರೆಸಲ್ಯೂಶನ್ ಬೆಂಬಲದೊಂದಿಗೆ ಬರುತ್ತದೆ.

ರಿಯಲ್‌ಮಿ 14 ಪ್ರೊ ಫೋನ್ 6,000mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯೊಂದಿಗೆ ಬಿಡುಗಡೆಯಾಗಲಿದೆ. ಇದು ತೆಳುವಾದ (7.55m) ಫೋನ್ ಎಂದು ಹೇಳಲಾಗಿದೆ. ಇದು 45W ಚಾರ್ಜಿಂಗ್ ಸೌಲಭ್ಯ ಹೊಂದಿರುತ್ತದೆ. ಈ ಮೊಬೈಲ್‌ OIS ಜೊತೆಗೆ ಸೋನಿ ಮುಖ್ಯ ಕ್ಯಾಮೆರಾ ಹೊಂದಿದೆ. ಈ ಕ್ಯಾಮೆರಾ ಸೆಟಪ್ ಟ್ರಿಪಲ್ ಫ್ಲ್ಯಾಷ್ ಆಧಾರಿತ ಸ್ಟುಡಿಯೋ ಲೆವೆಲ್ ಫಿಲ್ ಲೈಟ್ ಹೊಂದಿರಲಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನಿನಲ್ಲಿ 16 ಮೆಗಾಪಿಕ್ಸೆಲ್ ಕ್ಯಾಮೆರಾ ಲಭ್ಯವಿರುತ್ತದೆ.

ಜ.16ಕ್ಕೆ Realme 14 Pro ಸರಣಿ ಲಾಂಚ್; ಬರ್ತಿವೆ ಎರಡು ಶಕ್ತಿಶಾಲಿ ಫೋನ್‌ಗಳು!

ರಿಯಲ್‌ಮಿ 14 ಪ್ರೊ+ ವೈಶಿಷ್ಟ್ಯಗಳು

ರಿಯಲ್‌ಮಿ 14 ಪ್ರೊ+ ಸ್ಮಾರ್ಟ್‌ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 7300 ಪ್ರೊಸೆಸರ್‌ನೊಂದಿಗೆ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ. ಇದು ರಿಯಲ್‌ಮಿ ಯುಐ 6.0 ಓಎಸ್‌ನಲ್ಲಿ ಕೆಲಸ ಮಾಡುತ್ತದೆ. ಈ ಮೊಬೈಲ್ 6.83 ಇಂಚಿನ 1.5K ಡಿಸ್ಪ್ಲೇಯನ್ನು ಹೊಂದಿರುತ್ತದೆ. ಇದು 120Hz ರಿಫ್ರೆಶ್ ದರದೊಂದಿಗೆ ಅಮೋಲೆಡ್ ಕ್ವಾಡ್ ಕರ್ವ್ಡ್ ಡಿಸ್ಪ್ಲೇ ಆಗಿದೆ.

ರಿಯಲ್‌ಮಿ 14 ಪ್ರೊ+ ಮೊಬೈಲ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಮೊಬೈಲ್‌ನಲ್ಲಿ 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇರುತ್ತದೆ. ಹಾಗೆಯೇ OIS ಜೊತೆಗೆ 50 ಮೆಗಾಪಿಕ್ಸೆಲ್ ಸೋನಿ ಮುಖ್ಯ ಕ್ಯಾಮೆರಾ ಮತ್ತು 50 ಮೆಗಾಪಿಕ್ಸೆಲ್ ಸೋನಿ ದ್ವಿತೀಯ ಕ್ಯಾಮೆರಾ ಮತ್ತು 8 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ಲಭ್ಯವಿರುತ್ತದೆ.

ರಿಯಲ್‌ಮಿ 14 ಪ್ರೊ+ ಫೋನ್ 6000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಭಾರತದಲ್ಲಿ ಬಿಡುಗಡೆ ಮಾಡಲಾಗುವುದು. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, ಈ ಸ್ಮಾರ್ಟ್‌ಫೋನ್ 80W ವೇಗದ ಚಾರ್ಜಿಂಗ್ ಸೌಲಭ್ಯ ಹೊಂದಿರುತ್ತದೆ. ಎರಡೂ ಫೋನ್‌ಗಳು ನೀರು ಮತ್ತು ಧೂಳಿನ ವಿರುದ್ಧ ರಕ್ಷಣೆಗೆ IP66 + IP68 + IP69 ರೇಟಿಂಗ್ ಪಡೆದಿವೆ.

Best Mobiles in India

English summary
Realme 14 Pro and Realme 14 Pro+ Official India Launch Date Confirmed; Know Details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+