Realme 14 ಸರಣಿ ಬಿಡುಗಡೆಗೆ ಸಿದ್ಧ; ಒಂದಲ್ಲ.. ನಾಲ್ಕು ಹೊಸ ಫೋನ್! ವಿಶೇಷತೆಗಳೇನು?
ರಿಯಲ್‌ಮಿ ಸ್ಮಾರ್ಟ್‌ಫೋನ್ ಪ್ರಿಯರಿಗೆ ದೊಡ್ಡ ಉಡುಗೊರೆ ನೀಡಲು ಸಜ್ಜಾಗಿದೆ. ಶೀಘ್ರದಲ್ಲೇ ನಾಲ್ಕು ಹೊಸ ಮೊಬೈಲ್ ಗ್ರಾಹಕರ ಕೈ ಸೇರಲಿವೆ. ಈ ಮೂಲಕ ರೆಡ್ಮಿಗೆ ಪೈಪೋಟಿ ನೀಡಲು ಸಿದ್ಧವಾಗಿದೆ. ಹೌದು, ರಿಯಲ್‌ಮಿ 14 (Realme 14) ಸರಣಿಯ ಬಗ್ಗೆ ದೊಡ್ಡ ಅಪ್ಡೇಟ್ ಲಭ್ಯವಾಗಿದೆ. ವರದಿಯ ಪ್ರಕಾರ, ಭಾರತದಲ್ಲಿ ರಿಯಲ್‌ಮಿ 14 ಸರಣಿಯನ್ನು 2025ರ ಜನವರಿಯಲ್ಲಿ ಬಿಡುಗಡೆ ಮಾಡಲಾಗುತ್ತದೆ. ವಿಶೇಷವೆಂದರೆ, Redmi Note 14 ಸರಣಿಯು ಡಿಸೆಂಬರ್ ತಿಂಗಳಲ್ಲಿ ಬಿಡುಗಡೆಯಾಗಲಿದೆ. ಎರಡೂ ಕಂಪನಿಗಳ ಮಧ್ಯೆ ಭಾರೀ ಪೈಪೋಟಿ ನಡೆಯಲಿದೆ.
ಹೌದು, ರಿಯಲ್‌ಮಿ ಮೊಬೈಲ್‌ಗಳಿಗೆ ಭಾರತೀಯ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಇದೆ. ಕಂಪನಿಯು ಈಗಾಗಲೇ, ರಿಯಲ್‌ಮಿ 13 (Realme 13) ಸರಣಿಯನ್ನು ಆಗಸ್ಟ್‌ನಲ್ಲಿ ಬಿಡುಗಡೆ ಮಾಡಿದೆ. ಇದರಲ್ಲಿ Realme 13 Pro ಮತ್ತು Realme 13 Pro+ ಫೋನ್‌ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಜೊತೆಗೆ Realme 13 ಮತ್ತು Realme 13+ ಮೊಬೈಲ್ ಅನ್ನು ಸೆಪ್ಟೆಂಬರ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಇದೀಗ, ಕಂಪನಿಯು ಎರಡು ತಿಂಗಳ ಬಳಿಕ ರಿಯಲ್‌ಮಿ 14 ಸರಣಿಯನ್ನು ಲಾಂಚ್ ಮಾಡಲು ಸಜ್ಜಾಗಿದೆ.

ರಿಯಲ್‌ಮಿ 14 ಸರಣಿಯ ಫೋನ್‌ಗಳು
ಟೆಕ್ ವೆಬ್‌ಸೈಟ್ ಸ್ಮಾರ್ಟ್‌ಪ್ರಿಕ್ಸ್ (Smartprix) ರಿಯಲ್‌ಮಿ 14 ಸರಣಿಯ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ಕಂಪನಿಯು ತನ್ನ 14 ಸರಣಿಯಲ್ಲಿ ನಾಲ್ಕು ಮೊಬೈಲ್‌ಗಳನ್ನು ಬಿಡುಗಡೆ ಮಾಡಲಿದೆ. ಇವು Realme 14, Realme 14 Plus, Realme 14 Pro ಮತ್ತು Realme 14 Pro Plus ಹೆಸರಿನೊಂದಿಗೆ ಮಾರುಕಟ್ಟೆಗೆ ಎಂಟ್ರಿ ಕೊಡಲಿವೆ. ಕಂಪನಿಯು ಹೊಸ ಸರಣಿಯನ್ನು 2025ರ ಹೊಸ ವರ್ಷಕ್ಕೆ ಪ್ರಾರಂಭಿಸಲಿದೆ. ಈ ಮೊಬೈಲ್‌ಗಳು ಜನವರಿಯಲ್ಲಿ ಖರೀದಿಗೆ ಲಭ್ಯವಿರುತ್ತವೆ.
ರೆಡ್ಮಿ ನೋಟ್ 14 ಸರಣಿಗೆ ಭಾರೀ ಪೈಪೋಟಿ
ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ರಿಯಲ್‌ಮಿ ಮತ್ತು ರೆಡ್ಮಿ ಪ್ರಬಲ ಪ್ರತಿಸ್ಪರ್ಧಿಗಳು. ಹೀಗಾಗಿ, ರಿಯಲ್‌ಮಿಯ 14 ಸರಣಿ ಮತ್ತು ರೆಡ್ಮಿಯ ನೋಟ್ 14 ಸರಣಿಯ ನಡುವೆ ನೇರ ಪೈಪೋಟಿ ಏರ್ಪಡಲಿದೆ. ರೆಡ್ಮಿ ನೋಟ್ 14 ಸರಣಿಯು (Redmi Note 14) ಡಿಸೆಂಬರ್ ತಿಂಗಳಲ್ಲಿ ಬಿಡುಗಡೆಯಾಗಲಿದೆ. ಹೊಸ ರೆಡ್ಮಿ ಫೋನ್‌ಗಳು ಮಾರುಕಟ್ಟೆಗೆ ಬಂದ ಕೆಲವೇ ದಿನಗಳಲ್ಲಿ, ರಿಯಲ್‌ಮಿ 14 ಸರಣಿಯು ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ. ಈ ಮೂಲಕ ರೆಡ್ಮಿ ಕಂಪನಿಗೆ ಸವಾಲು ಹಾಕಲಿದೆ.
ರಿಯಲ್‌ಮಿ 13 ಸರಣಿಯ ಬೆಲೆ
ರಿಯಲ್‌ಮಿ 13 5G ಬೆಲೆ
8GB RAM + 128GB ಸ್ಟೋರೇಜ್ = 17,999 ರೂ.
8GB RAM + 256GB ಸ್ಟೋರೇಜ್ = 19,999 ರೂ.
ಬಣ್ಣಗಳು = ಡಾರ್ಕ್ ಪರ್ಪಲ್ ಮತ್ತು ಸ್ಪೀಡ್ ಗ್ರೀನ್
ರಿಯಲ್‌ಮಿ 13 ಪ್ರೊ 5G ಬೆಲೆ
8GB RAM + 128GB ಸ್ಟೋರೇಜ್ = 26,999 ರೂ.
8GB RAM + 256GB ಸ್ಟೋರೇಜ್ = 28,999 ರೂ.
12GB RAM + 512GB ಸ್ಟೋರೇಜ್ = 31,999 ರೂ.
ಬಣ್ಣಗಳು = ಮೋನೆಟ್ ಗೋಲ್ಡ್, ಮೊನೆಟ್ ಪರ್ಪಲ್ ಮತ್ತು ಎಮರಾಲ್ಡ್ ಗ್ರೀನ್
ರಿಯಲ್‌ಮಿ 13 ಪ್ರೊ ಪ್ಲಸ್ 5G ಬೆಲೆ
8GB RAM + 256GB ಸ್ಟೋರೇಜ್ = 32,999 ರೂ.
12GB RAM + 256GB ಸ್ಟೋರೇಜ್ = 34,999 ರೂ.
12GB RAM + 512GB ಸ್ಟೋರೇಜ್ = 36,999 ರೂ.
ಬಣ್ಣಗಳು = ಮೋನೆಟ್ ಗೋಲ್ಡ್ ಮತ್ತು ಎಮರಾಲ್ಡ್ ಗ್ರೀನ್
ರಿಯಲ್‌ಮಿ 13 ಪ್ಲಸ್ 5G ಬೆಲೆ
8GB RAM + 128GB ಸ್ಟೋರೇಜ್ = 22,999 ರೂ.
8GB RAM + 256GB ಸ್ಟೋರೇಜ್ = 24,999 ರೂ.
12GB RAM + 256GB ಸ್ಟೋರೇಜ್ = 26,999 ರೂ.
ಬಣ್ಣಗಳು = ವಿಕ್ಟರಿ ಗೋಲ್ಡ್, ಸ್ಪೀಡ್ ಗ್ರೀನ್ ಮತ್ತು ಡಾರ್ಕ್ ಪರ್ಪಲ್


Click it and Unblock the Notifications








