ಬೆಲೆಯೂ ಕಡಿಮೆ! 6000mAh ಬ್ಯಾಟರಿ, 50MP AI ಕ್ಯಾಮೆರಾ.. 1000 ಆಫರ್! ಮಾರುಕಟ್ಟೆಗೆ Realme 14T 5G ಎಂಟ್ರಿ
ರಿಯಲ್‌ಮಿ ಭಾರತದಲ್ಲಿ ಹೊಸ 5G ಫೋನನ್ನು ಬಿಡುಗಡೆ ಮಾಡುತ್ತಿದೆ. ಕಂಪನಿಯು ಇದನ್ನು ತನ್ನ ರಿಯಲ್‌ಮಿ 14 ಸರಣಿಯ ಅಡಿಯಲ್ಲಿ ಪರಿಚಯಿಸಿದೆ. ಹೌದು, ಯುವಜನತೆಯ ನೆಚ್ಚಿನ ರಿಯಲ್‌ಮಿ 14T 5G (Realme 14T 5G) ಇಂದು ಅಧಿಕೃತವಾಗಿ ದೇಶೀಯ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ. ಈ ಸ್ಮಾರ್ಟ್‌ಫೋನ್ ತನ್ನ ಅದ್ಭುತ ಡಿಸ್ಪ್ಲೇ, ಶಕ್ತಿಶಾಲಿ ಪ್ರೊಸೆಸರ್ ಮತ್ತು ಸೂಪರ್ ಬ್ಯಾಟರಿ ಬಾಳಿಕೆಯೊಂದಿಗೆ ಬರುತ್ತದೆ. ಇದು ಮಧ್ಯಮ ಶ್ರೇಣಿಯ ಬಜೆಟ್ ವಿಭಾಗದಲ್ಲಿ ಬರುತ್ತದೆ. ಗೇಮಿಂಗ್, ಬಹುಕಾರ್ಯಕ ಮತ್ತು ದಿನವಿಡೀ ಬ್ಯಾಕಪ್ ಬಯಸುವ ಬಳಕೆದಾರರಿಗೆ, ಈ ಸ್ಮಾರ್ಟ್‌ಫೋನ್ ಉತ್ತಮ ಆಯ್ಕೆಯಾಗಿದೆ. ಈ ಫೋನಿನ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ರಿಯಲ್‌ಮಿ 14T 5G ಸ್ಮಾರ್ಟ್‌ಫೋನ್ ಎರಡು ಸ್ಟೋರೇಜ್ ರೂಪಾಂತರಗಳಲ್ಲಿ ಬಿಡುಗಡೆಯಾಗಿದೆ. ಇದರ ಬೆಲೆ 20,000 ರೂ.ಗಿಂತಲೂ ಕಡಿಮೆ ಇದೆ. ಈ ಫೋನಿನ ವಿಶೇಷತೆಗಳೆಂದರೆ, ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಪ್ರೊಸೆಸರ್ ಹೊಂದಿದೆ. ಈ ಮೊಬೈಲ್ 6.67 ಇಂಚಿನ ಡಿಸ್ಪ್ಲೇಯೊಂದಿಗೆ ಬರಲಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ AI ಕ್ಯಾಮೆರಾ ಲಭ್ಯವಿದೆ. ಇದಲ್ಲದೆ, 8GB RAM + 256GB ಸ್ಟೋರೇಜ್, IP69 ರೇಟಿಂಗ್, 6,00mAh ಬ್ಯಾಟರಿ ಮತ್ತು 45W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ಉತ್ತಮ ಫೀಚರ್ ಒಳಗೊಂಡಿದೆ.

ರಿಯಲ್‌ಮಿ 14T 5G ಬೆಲೆ ಮತ್ತು ಲಭ್ಯತೆ
8GB RAM + 128GB ಸ್ಟೋರೇಜ್ ಬೆಲೆ = 17,999 ರೂ.
8GB RAM + 256GB ಸ್ಟೋರೇಜ್ ಬೆಲೆ = 19,999 ರೂ.
ರಿಯಲ್‌ಮಿ 14T 5G ಫೋನನ್ನು 8GB RAM ನೊಂದಿಗೆ ಬಿಡುಗಡೆ ಮಾಡಲಾಗಿದೆ. ಇದರ ಬೆಲೆ 17,999 ರೂ.ಗಳಿಂದ ಪ್ರಾರಂಭವಾಗುತ್ತದೆ. ಇದು ಆನ್‌ಲೈನ್ ಶಾಪಿಂಗ್ ಸೈಟ್ ಫ್ಲಿಪ್‌ಕಾರ್ಟ್ ಮತ್ತು ರಿಯಲ್‌ಮಿ ಅಧಿಕೃತ ವೆಬ್‌ಸೈಟ್‌ನಲ್ಲಿ ಖರೀದಿಗೆ ಲಭ್ಯವಿದೆ. ಈ ಸ್ಮಾರ್ಟ್‌ಫೋನ್ ಖರೀದಿ ಮೇಲೆ 1,000 ರೂ.ಗಳ ಬ್ಯಾಂಕ್ ಆಫರ್ ಸಹ ನೀಡಲಾಗುತ್ತಿದೆ. ಈ ಮೂಲಕ ಫೋನಿನ ಬೆಲೆ ಮತ್ತಷ್ಟು ಕಡಿಮೆಯಾಗಲಿದೆ. ಈ ಫೋನನ್ನು ಸರ್ಫ್ ಗ್ರೀನ್, ಲೈಟ್ನಿಂಗ್ ಪರ್ಪಲ್ ಮತ್ತು ಅಬ್ಸಿಡಿಯನ್ ಬ್ಲಾಕ್ ಬಣ್ಣಗಳ ಆಯ್ಕೆಯಲ್ಲಿ ಖರೀದಿಸಬಹುದು. ಈ ಆಫರ್‌ಗಳ ಲಾಭ ಪಡೆಯಲು, ಈ ಲಿಂಕ್ ಕ್ಲಿಕ್ ಮಾಡಿ.
ರಿಯಲ್‌ಮಿ 14T 5G ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ರಿಯಲ್‌ಮಿ 14T 5G ಸ್ಮಾರ್ಟ್‌ಫೋನ್ 6.67 ಇಂಚಿನ ಫುಲ್ ಎಚ್‌ಡಿ ಪ್ಲಸ್ ಅಮೋಲೆಡ್ ಡಿಸ್ಪ್ಲೇ ಹೊಂದಿದೆ. ಇದು 120Hz ರಿಫ್ರೆಶ್ ದರ ಮತ್ತು 2,000 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಪಡೆದಿದೆ. ಈ ಫೋನ್ TUV ರೈನ್‌ಲ್ಯಾಂಡ್ ಕಡಿಮೆ ಬೆಳಕಿನ ಪ್ರಮಾಣೀಕರಣದೊಂದಿಗೆ ಬರುತ್ತದೆ.
ಪ್ರೊಸೆಸರ್ ಸಾಮರ್ಥ್ಯ
ರಿಯಲ್‌ಮಿ 14T 5G ಮೊಬೈಲ್ ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಪ್ರೊಸೆಸರ್ ಹೊಂದಿದೆ. ಇದನ್ನು 6 ನ್ಯಾನೊಮೀಟರ್ ಫ್ಯಾಬ್ರಿಕೇಶನ್‌ಗಳ (ಆರ್ಕಿಟೆಕ್ಚರ್) ಮೇಲೆ ತಯಾರಿಸಲಾಗಿದೆ. ಈ ಪ್ರೊಸೆಸರ್ ಬಹುಕಾರ್ಯಕ ಮತ್ತು ಗೇಮಿಂಗ್‌ನಲ್ಲಿ ಅತ್ಯುತ್ತಮ ಕಾರ್ಯಕ್ಷಮತೆಯನ್ನು ಒದಗಿಸುತ್ತದೆ. ಇದು ಆಂಡ್ರಾಯ್ಡ್ 15 ಆಧಾರಿತ ರಿಯಲ್‌ಮಿ ಯುಐನೊಂದಿಗೆ ಕೆಲಸ ಮಾಡುತ್ತದೆ. ಈ ಫೋನ್ 8GB RAM ಜೊತೆಗೆ 128GB ಮತ್ತು 256GB ಸ್ಟೋರೇಜ್ ಆಯ್ಕೆಗಳೊಂದಿಗೆ ಬರುತ್ತದೆ.

ಕ್ಯಾಮೆರಾ ಸೆಟಪ್
ರಿಯಲ್‌ಮಿ 14T 5G ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಎಐ (AI) ಕ್ಯಾಮೆರಾ ಲಭ್ಯವಿದೆ. ಇದರೊಂದಿಗೆ 2 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನಿನಲ್ಲಿ 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಅಳವಡಿಸಲಾಗಿದೆ. ಇದು ಫೋಟೋಗ್ರಫಿಗೆ ಉತ್ತಮವಾಗಿದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ರಿಯಲ್‌ಮಿ 14T 5G ಸ್ಮಾರ್ಟ್‌ಫೋನ್ 6,000mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, ಇದು 45W ವೇಗದ ಚಾರ್ಜಿಂಗ್ ಸೌಲಭ್ಯ ಹೊಂದಿದೆ. ಈ ಮೊಬೈಲ್ ನೀರು ಮತ್ತು ಧೂಳಿನಿಂದ ರಕ್ಷಣೆಗೆ IP69 ರೇಟಿಂಗ್ ಪಡೆದಿದೆ.


Click it and Unblock the Notifications








