Home
ಮೊಬೈಲ್

ಬಂದೇ ಬಿಡ್ತು Realme 14x 5G ಫೋನ್; 14000ಕ್ಕಿಂತ ಕಡಿಮೆ.. ರಾಶಿ ಫೀಚರ್ಸ್‌.. ಮುಗಿಬಿದ್ದ ಗ್ರಾಹಕರು!

ರಿಯಲ್‌ಮಿ ಪ್ರಿಯರಿಗೆ ಇಲ್ಲಿದೆ ಸಿಹಿಸುದ್ದಿ. ಬಹುನಿರೀಕ್ಷಿತ ರಿಯಲ್‌ಮಿ 14x 5G (Realme 14x 5G) ಮೊಬೈಲ್ ಭಾರತದಲ್ಲಿ ಬಿಡುಗಡೆಯಾಗಿದೆ. ಹೌದು, ರಿಯಲ್‌ಮಿ ತನ್ನ ರಿಯಲ್‌ಮಿ 14 ಸರಣಿಯಲ್ಲಿ ಈ ಫೋನನ್ನು ದೇಶಿಯ ಮಾರುಕಟ್ಟೆಗೆ ಪರಿಚಯಿಸಿದೆ. ಇದು 15,000 ರೂ.ಗಿಂತ ಕಡಿಮೆ ಬೆಲೆಯನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್ ತನ್ನ ಸ್ಟೈಲಿಶ್ ಲುಕ್ ಮತ್ತು ಅತ್ಯಾಕರ್ಷಕ ವೈಶಿಷ್ಟ್ಯಗಳೊಂದಿಗೆ ಮೊಬೈಲ್ ಪ್ರಿಯರನ್ನು ಆಕರ್ಷಿಸುತ್ತಿದೆ. ಬನ್ನಿ, ಈ ಹೊಸ ಫೋನಿನ ಬೆಲೆ ಮತ್ತು ವಿಶೇಷತೆಗಳನ್ನು ತಿಳಿಯೋಣ.

ರಿಯಲ್‌ಮಿ 14x 5G ಫೋನ್‌ ಎರಡು ಸ್ಟೋರೇಜ್‌ ಆಯ್ಕೆಯಲ್ಲಿ ಬಿಡುಗಡೆಯಾಗಿದೆ. ಇದು ನಿರೀಕ್ಷೆಯಂತೆಯೇ, 6000mAh ಸಾಮರ್ಥ್ಯದ ದೊಡ್ಡ ಬ್ಯಾಟರಿ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಕ್ಯಾಮೆರಾ ಲಭ್ಯವಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತದೆ. ಫೋನಿನಲ್ಲಿ 6.67 ಇಂಚಿನ ಡಿಸ್ಪ್ಲೇ ಲಭ್ಯವಿದೆ. ಜೊತೆಗೆ 128GB ಸ್ಟೋರೇಜ್‌, IP69 ರೇಟಿಂಗ್‌ ಮತ್ತು 45W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಭಾರತದಲ್ಲಿ Realme 14x 5G ಲಾಂಚ್; 14000ಕ್ಕಿಂತ ಕಡಿಮೆ.. ಮುಗಿಬಿದ್ದ ಗ್ರಾಹಕರು!

ರಿಯಲ್‌ಮಿ 14x 5G ಬೆಲೆ ಮತ್ತು ಲಭ್ಯತೆ

ರಿಯಲ್‌ಮಿ 14x 5G ಫೋನನ್ನು ಮೂರು ಬಣ್ಣಗಳ ಆಯ್ಕೆಯನ್ನು ಹೊಂದಿದೆ. ನೀವು ಕ್ರಿಸ್ಟಲ್ ಬ್ಲ್ಯಾಕ್, ಗೋಲ್ಡನ್ ಗ್ಲೋ ಮತ್ತು ಜ್ಯುವೆಲ್ ರೆಡ್ ಬಣ್ಣಗಳಲ್ಲಿ ಖರೀದಿಸಬಹುದು. ಫೋನಿನ 6GB + 128GB ಸ್ಟೋರೇಜ್‌ ರೂಪಾಂತರವನ್ನು14,999 ರೂ.ಗೆ ಬಿಡುಗಡೆ ಮಾಡಲಾಗಿದೆ. ಹಾಗೆಯೇ 8GB + 128GB ಸ್ಟೋರೇಜ್ ಆಯ್ಕೆಯ ಬೆಲೆ 15,999 ರೂ. ಆಗಿದೆ. ನೀವು, 1000 ತ್ವರಿತ ಬ್ಯಾಂಕ್ ಡಿಸ್ಕೌಂಟ್ ಪಡೆಯಬಹುದು. ಇದು ಫ್ಲಿಪ್‌ಕಾರ್ಟ್ ಮತ್ತು ಕಂಪನಿಯ ಅಧಿಕೃತ ವೆಬ್‌ಸೈಟ್ (realme.com) ಮತ್ತು ಆಫ್‌ಲೈನ್ ಸ್ಟೋರ್‌ಗಳಲ್ಲಿ ಖರೀದಿಗೆ ಲಭ್ಯವಿದೆ.

ರಿಯಲ್‌ಮಿ 14x 5G ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ರಿಯಲ್‌ಮಿ 14x 5G ಮೊಬೈಲ್ 6.67 ಇಂಚಿನ ಡಿಸ್ಪ್ಲೇ ಹೊಂದಿದೆ. ಇದು ಪೂರ್ಣ ಎಚ್‌ಡಿ ಪ್ಲಸ್ ಐಪಿಎಸ್‌ ಎಲ್‌ಸಿಡಿ ಆಗಿದೆ. ಡಿಸ್ಪ್ಲೇಯು 720×1604 ಪಿಕ್ಸೆಲ್‌ಗಳು ರೆಸಲ್ಯೂಶನ್‌ ಮತ್ತು 120Hz ರಿಫ್ರೆಶ್ ದರದ ಬೆಂಬಲ ಹೊಂದಿದೆ.

ಪ್ರೊಸೆಸರ್ ಸಾಮರ್ಥ್ಯ

ಕಂಪನಿಯು ರಿಯಲ್‌ಮಿ 14x 5G ಫೋನನ್ನು ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಆಕ್ಟಾಕೋರ್‌ ಪ್ರೊಸೆಸರ್‌ನೊಂದಿಗೆ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಇದು ಗ್ರಾಫಿಕ್ಸ್‌ಗಾಗಿ, ಆರ್ಮ್ ಮಾಲಿ-G57 MC2 ಜಿಪಿಯು ಸಹ ಹೊಂದಿದೆ. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್‌ 14 ಆಧಾರಿತ ರಿಯಲ್‌ಮಿ ಯುಐ 5.0 ಓಎಸ್‌ನಲ್ಲಿ ಕೆಲಸ ಮಾಡುತ್ತದೆ.

ಸ್ಟೋರೇಜ್ ಆಯ್ಕೆ

ರಿಯಲ್‌ಮಿ 14x 5G ಸ್ಮಾರ್ಟ್‌ಫೋನ್‌ 8GB ಮತ್ತು 6GB RAM ಹೊಂದಿದೆ. ಇದು 10GB ಡೈನಾಮಿಕ್ RAM ಹೊಂದಿದೆ. ಫೋನಿನಲ್ಲಿ 128GB ಸ್ಟೋರೇಜ್‌ ಆಯ್ಕೆ ಲಭ್ಯವಿದೆ. ನೀವು, ಮೈಕ್ರೊ ಎಸ್‌ಡಿ ಕಾರ್ಡ್‌ ಮೂಲಕ 2TB ವರೆಗೆ ಸ್ಟೋರೇಜ್ ಹೆಚ್ಚಿಸಬಹುದು.

ಭಾರತದಲ್ಲಿ Realme 14x 5G ಲಾಂಚ್; 14000ಕ್ಕಿಂತ ಕಡಿಮೆ.. ಮುಗಿಬಿದ್ದ ಗ್ರಾಹಕರು!

ಕ್ಯಾಮೆರಾ ಸೆಟಪ್

ಹೊಸ ರಿಯಲ್‌ಮಿ 14x 5G ಮೊಬೈಲ್ ಡ್ಯುಯಲ್‌ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ ಎಲ್‌ಇಡಿ ಫ್ಲ್ಯಾಷ್‌ನೊಂದಿಗೆ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಲಭ್ಯವಿದೆ. ಜೊತೆಗೆ 2 ಮೆಗಾಪಿಕ್ಸೆಲ್‌ ದ್ವಿತೀಯ ಕ್ಯಾಮೆರಾ ಇದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಮೊಬೈಲ್ 8 ಮೆಗಾಪಿಕ್ಸೆಲ್‌ ಫ್ರಂಟ್ ಕ್ಯಾಮೆರಾ ಹೊಂದಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ರಿಯಲ್‌ಮಿ 14x 5G ಫೋನ್ ನಿರೀಕ್ಷೆಯಂತೆಯೇ ಬಿಗ್ ಬ್ಯಾಟರಿ ಬ್ಯಾಕಪ್ ಹೊಂದಿದೆ. ಈ ಮೊಬೈಲ್‌ 6000mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯೊಂದಿಗೆ ಬಿಡುಗಡೆಯಾಗಿದೆ. ಇದನ್ನು ಚಾರ್ಜ್ ಮಾಡಲು, 45W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ.

ಇತರೆ ವೈಶಿಷ್ಟ್ಯಗಳು

ರಿಯಲ್‌ಮಿ 14x 5G ಸ್ಮಾರ್ಟ್‌ಫೋನ್ ಧೂಳು ಮತ್ತು ನೀರಿನ ವಿರುದ್ಧ ರಕ್ಷಣೆಗಾಗಿ IP68 + IP69 ರೇಟಿಂಗ್ ಪಡೆದಿದೆ. ಇದು ಸೈಡ್‌ ಮೌಂಟ್‌ ಫಿಂಗರ್‌ಫ್ರಿಂಟ್ ಸೆನ್ಸಾರ್ ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಈ ಫೋನ್‌ ಡ್ಯುಯಲ್ 4G VoLTE, ವೈ-ಫೈ 6, ಬ್ಲೂಟೂತ್ 5.3, ಜಿಪಿಎಸ್‌, ಯುಎಸ್‌ಬಿ ಟೈಪ್ ಸಿ ಸೇರಿದಂತೆ ಹಲವು ಸೌಲಭ್ಯಗಳಲ್ಲಿ ಒಳಗೊಂಡಿದೆ.

Best Mobiles in India

English summary
realme 14X 5G with 6000mAh battery launched in India starting at Rs.14,999: Features, specifications and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+