Realme 15 Lite 5G: ಅಮೆಜಾನ್‌ನಲ್ಲಿ ಕಾಣಿಸಿತು ಹೊಸ ಬಜೆಟ್ 5G ಫೋನ್!
ಭಾರತದಲ್ಲಿ Realme 15 Lite 5G ಎಂಬ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್ ಒಂದು ಬಿಡುಗಡೆಯಾಗುತ್ತಿದೆ ಎಂಬ ಒಂದು ಸುಳಿವು ಕೂಡ ಇರಲಿಲ್ಲ. ಆದರೆ, ಈ ಹೆಸರಿನಲ್ಲಿ ಒಂದು ಸ್ಮಾರ್ಟ್‌ಫೋನ್ ಅಮೆಜಾನ್ ವೆಬ್‌ಸೈಟ್‌ನಲ್ಲಿ ಕಾಣಿಸಿಕೊಂಡು ಆಶ್ಚರ್ಯ ಮೂಡಿಸಿದೆ.! ಅಮೆಜಾನ್‌ನಲ್ಲಿ ನಾವು ಈ ಹಿಂದೆ ತಿಳಿದಿಲ್ಲದ Realme 15 Lite 5G ಸ್ಮಾರ್ಟ್‌ಫೋನನ್ನು ಪಟ್ಟಿ ಮಾಡಲಾಗಿದ್ದು, ಈ ಫೋನಿನ ಪ್ರಮುಖ ವೈಶಿಷ್ಟ್ಯಗಳು ಮತ್ತು ಬೆಲೆಯನ್ನು ಸಹ ಬಹಿರಂಗಪಡಿಸಲಾಗಿದೆ.! ಹಾಗಾದರೆ, ಮುಂಬರಲಿರುವ Realme 15 Lite 5G ಸ್ಮಾರ್ಟ್‌ಫೋನ್ ಹೇಗಿದೆ?, ಬೆಲೆ ಎಷ್ಟು ಎಂಬೆಲ್ಲಾ ಮಾಹಿತಿಯನ್ನು ನೋಡೋಣ ಬನ್ನಿ.
Realme 15 Lite 5G: ಬೆಲೆ ಮತ್ತು ಲಭ್ಯತೆ
ಅಮೆಜಾನ್‌ನಲ್ಲಿ ಮೊದಲ Realme 15 Lite 5G ಲಿಸ್ಟಿಂಗ್ ಆಗಿರುವುದನ್ನು Gadgets 360 ಗುರುತಿಸಿದೆ. ವೆಬ್‌ಸೈಟ್‌ನಲ್ಲಿ ಕಂಡುಬಂದ ಮಾಹಿತಿಯಂತೆ, 8GB RAM + 128GB ಮೆಮೊರಿ ಸಾಮರ್ಥ್ಯ ಹೊಂದಿರುವ Realme 15 Lite 5G ಫೋನನ್ನು ₹20,999 ಗೆ ಪಟ್ಟಿ ಮಾಡಲಾಗಿದೆ. ಆದರೆ ಪ್ರಸ್ತುತ ಅಮೆಜಾನ್ ವಿಶೇಷ ರಿಯಾಯಿತಿ ನೀಡುತ್ತಿದ್ದು, ಈ ಫೋನ್ ಅನ್ನು ₹17,999 ಗೆ ಖರೀದಿಸಬಹುದು. ಈ ಲಿಸ್ಟಿಂಗ್‌ನಲ್ಲಿ ಈಗ ಒಂದೇ ವೇರಿಯಂಟ್ ಮಾತ್ರ ಲಭ್ಯವಿದ್ದು, ಇತರ ಮೆಮೊರಿ ಆಯ್ಕೆಗಳ ಬಗ್ಗೆ ಯಾವುದೇ ಮಾಹಿತಿ ಇಲ್ಲ.
Realme 15 Lite 5G : ಪ್ರಮುಖ ವೈಶಿಷ್ಟ್ಯಗಳು
ಅಮೆಜಾನ್‌ನಲ್ಲಿ ಪಟ್ಟಿ ಮಾಡಿರುವಂತೆ, ಈ ಹೊಸ Realme 15 Lite 5G ಫೋನ್ 6.78 ಇಂಚಿನ OLED ಡಿಸ್‌ಪ್ಲೇಯನ್ನು(1,280 x 2,800 ಪಿಕ್ಸೆಲ್‌ಗಳು) ಹೊಂದಿದೆ. ಇದು 120Hz ರಿಫ್ರೆಶ್ ರೇಟ್ ಮತ್ತು 453 PPI ಪಿಕ್ಸೆಲ್ ಸಾಂದ್ರತೆಯನ್ನು ನೀಡುತ್ತದೆ. ಮುಂದೆ ಸೆಲ್ಫಿಗಾಗಿ ಹೋಲ್-ಪಂಚ್ ಕ್ಯಾಮೆರಾ ವಿನ್ಯಾಸವಿದೆ. ಮತ್ತು ಈ ಫೋನ್ ಸುಮಾರು 187 ಗ್ರಾಂ ತೂಕವಿದೆ.

ಕಾರ್ಯಕ್ಷಮತೆಗಾಗಿ, Realme 15 Lite 5G ನಲ್ಲಿ 8GB RAM ಮತ್ತು 128GB ಸ್ಟೋರೇಜ್ ಜೊತೆಗೆ ಸಂಯೋಜಿಸಲಾದ MediaTek Dimensity 8000 ಚಿಪ್‌ಸೆಟ್ ಬಳಸಲಾಗಿದೆ. 2.8GHz ವೇಗದ ಈ ಪ್ರೊಸೆಸರ್ ಗೇಮಿಂಗ್ ಮತ್ತು ಮಲ್ಟಿಟಾಸ್ಕಿಂಗ್‌ಗೆ ಸಾಕಷ್ಟು ಸಾಮರ್ಥ್ಯ ಹೊಂದಿದೆ ಎಂಬುದನ್ನು ನಾವು ಗಮನಿಸಬಹುದು. ಇನ್ನು ಈ ಫೋನ್ Android 15 ನಲ್ಲಿ ಕಾರ್ಯನಿರ್ವಹಿಸಲಿದೆ.
ಕ್ಯಾಮೆರಾ ಸಾಮರ್ಥ್ಯದಲ್ಲಿ, ಈ ಫೋನಿನ ಹಿಂಭಾಗದಲ್ಲಿ ಎರಡು 50MP ಕ್ಯಾಮೆರಾಗಳು ನೀಡಲಾಗುತ್ತಿದ್ದು, 20X ಡಿಜಿಟಲ್ ಜೂಮ್ ಸಹ ಬೆಂಬಲಿಸುತ್ತದೆ. ಸೆಲ್ಫಿ ಮತ್ತು ವೀಡಿಯೊ ಕರೆಗಳಿಗಾಗಿ 50MP ಕ್ಯಾಮೆರಾ ಒದಗಿಸಲಾಗಿದೆ. ಬ್ಯಾಟರಿ ವಿಭಾಗದಲ್ಲಿ, 5,000mAh ಬ್ಯಾಟರಿ ನೀಡಲಾಗಿದೆ. ಇನ್ನುಳಿದಂತೆ, 5G, Wi-Fi, Bluetooth, GPS ಮತ್ತು USB Type-C ಸೇರಿದಂತೆ ಸಾಮಾನ್ಯ ಸಂಪರ್ಕ ವೈಶಿಷ್ಟ್ಯಗಳನ್ನೂ ನೀಡಲಾಗಿದೆ.
ಭಾರತದಲ್ಲಿ ತನ್ನ 5G ಸ್ಮಾರ್ಟ್‌ಫೋನ್‌ಗಳ ಶ್ರೇಣಿಯನ್ನು ವೇಗವಾಗಿ ವಿಸ್ತರಿಸುತ್ತಿರುವ Realme, ಇದೀಗ Amazon ವೆಬ್‌ಸೈಟ್‌ನಲ್ಲಿ ಕಾಣಿಸಿಕೊಂಡಿರುವ ಹೊಸ ಲಿಸ್ಟಿಂಗ್‌ನಿಂದ ಮತ್ತೊಮ್ಮೆ ಸುದ್ದಿಯಲ್ಲಿದೆ. ಅಧಿಕೃತ ಘೋಷಣೆ ಇನ್ನೂ ಹೊರಬಿದ್ದಿಲ್ಲ. ಈ ಲಿಸ್ಟಿಂಗ್ ಅನೌಪಚಾರಿಕವಾಗಿರುವುದರಿಂದ, ಕಂಪನಿ ಅಧಿಕೃತ ಮಾಹಿತಿ ಹಂಚುವವರೆಗೆ ಕೆಲವು ವೈಶಿಷ್ಟ್ಯಗಳು ಬದಲಾಗುವ ಸಾಧ್ಯತೆ ಇದೆ.
ಆದರೂ, ಲಭ್ಯವಾದ ಈ ಪ್ರಾಥಮಿಕ ವಿವರಗಳಿಂದ ನೋಡಿದರೆ, Realme 15 Lite 5G ಬಜೆಟ್ 5G ವಿಭಾಗದಲ್ಲಿ ಹೊಸ ಸ್ಪರ್ಧಿಯಾಗಿ ಹೊರಹೊಮ್ಮುವ ನಿರೀಕ್ಷೆ ಇದೆ. ಈ ಫೋನ್ ಮಧ್ಯಮ ಶ್ರೇಣಿಗೆ ಸೇರಿದಾಗಿದ್ದು, ಉತ್ತಮ ಗುಣಮಟ್ಟದ ಡಿಸ್ಪ್ಲೇ, ಶಕ್ತಿಯುತ ಚಿಪ್‌ಸೆಟ್ ಹಾಗೂ ಸುಧಾರಿತ ಕ್ಯಾಮೆರಾ ಸಾಮರ್ಥ್ಯಗಳೊಂದಿಗೆ ಬರಲಿದೆ ಎಂದು ಲಿಸ್ಟಿಂಗ್ ಸೂಚಿಸುತ್ತದೆ. ಈಗ ಆಗಮನವನ್ನು ನಿರೀಕ್ಷಿಸಲಾಗುತ್ತಿದೆ.


Click it and Unblock the Notifications








