Home
ಮೊಬೈಲ್

Realme 15 Pro 5G: ಜುಲೈ 24 ರಂದು ರಿಲೀಸ್, ಕಾರ್ಯಕ್ಷಮತೆಯ ವಿವರ ಬಹಿರಂಗ!

ಇದೇ ಜುಲೈ 24 ರಂದು ಭಾರತದಲ್ಲಿ Realme 15 5G ಸರಣಿ ಫೋನ್‌ಗಳು ಬಿಡುಗಡೆಯಾಗುವುದು ಈಗಾಗಲೇ ಅಧಿಕೃತವಾಗಿ ಖಚಿತವಾಗಿದೆ. ಇದಕ್ಕೂ ಮೊದಲೇ ಕಂಪೆನಿಯು Realme 15 5G ಸರಣಿ ಫೋನ್‌ಗಳ ಹಲವಾರು ವಿವರಗಳನ್ನು ಬಹಿರಂಗಪಡಿಸುತ್ತಿದ್ದು, ಇದೀಗ Realme 15 Pro 5G ಫೋನ್ ಸ್ನಾಪ್‌ಡ್ರಾಗನ್ 7 Gen ಸರಣಿಯ ಪ್ರೊಸೆಸರ್ ಹೊಂದಿರುವನ್ನು ಖಚಿಪಡಿಸಿದೆ. ಇನ್ನು ಈ ಪ್ರೊ ರೂಪಾಂತರವು 1.1 ಮಿಲಿಯನ್‌ಗಿಂತಲೂ ಹೆಚ್ಚು AnTuTu ಸ್ಕೋರ್ ಅನ್ನು ಹೊಂದಿದೆ ಎಂದು ಹೇಳಲಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿ ಈ ಕೆಳಕಂಡಂತಿದೆ.

Realme 15 Pro 5G ಚಿಪ್‌ಸೆಟ್ ಘೋಷಿಸಲಾಗಿದೆ
ಕಾರ್ಯಕ್ಷಮೆತೆಗಾಗಿ, Realme 15 Pro 5G ಫೋನ್ Snapdragon 7 Gen 4 ಚಿಪ್‌ಸೆಟ್ ಅನ್ನು ಹೊಂದಿರುತ್ತದೆ. ಇದನ್ನು 4nm ಪ್ರಕ್ರಿಯೆಯನ್ನು ಬಳಸಿಕೊಂಡು ನಿರ್ಮಿಸಲಾಗಿದ್ದು, CPU,GPU ಮತ್ತು NPU ಕಾರ್ಯಕ್ಷಮತೆಯ ವಿಷಯದಲ್ಲಿ ನವೀಕರಣಗಳನ್ನು ತರಲಿದೆ. ಹಾಗೂ ಈ ಪ್ರೊಸೆಸರ್ Realme 15 Pro 5G ನಲ್ಲಿ ಗೇಮಿಂಗ್, ಮಲ್ಟಿ-ಟಾಸ್ಕಿಂಗ್ ಮತ್ತು "ಮುಂದಿನ ಜನ್" AI ಸಾಮರ್ಥ್ಯಗಳಿಗೆ ಶಕ್ತಿ ನೀಡುವ ನಿರೀಕ್ಷೆಯಿದೆ ಎಂದು ಕಂಪನಿಯು ಪತ್ರಿಕಾ ಟಿಪ್ಪಣಿಯಲ್ಲಿ ತಿಳಿಸಿದೆ.

ಈ Realme 15 Pro 5G ಫೋನ್ GT Boost 3.0 ತಂತ್ರಜ್ಞಾನದಿಂದ ಚಾಲಿತವಾಗಲಿದೆ. ಇದು ಫ್ರೇಮ್-ಬೈ-ಫ್ರೇಮ್ ಆಧಾರದ ಮೇಲೆ ಕಾರ್ಯಕ್ಷಮತೆಯನ್ನು ಹೊಂದಿಸುತ್ತದೆ. ಫ್ರೀ ಫೈರ್‌ನಂತಹ ಆಟಗಳಲ್ಲಿ ಸ್ಥಿರವಾದ 120fps ಗೇಮ್‌ಪ್ಲೇ ಅನ್ನು ಸಾಧಿಸಬಹುದು ಎಂದು ಕಂಪನಿ ಹೇಳಿಕೊಂಡಿದೆ. ಇದಲ್ಲದೆ, ಈ ಫೋನ್ ಗೇಮಿಂಗ್ ಕೋಚ್ 2.0 ನೊಂದಿಗೆ ಪಾದಾರ್ಪಣೆ ಮಾಡಲಿದೆ, ಇದು ನೈಜ ಸಮಯದಲ್ಲಿ ಗೇಮಿಂಗ್‌ಗೆ ಕಾರ್ಯತಂತ್ರದ ಮಾರ್ಗದರ್ಶನವನ್ನು ಒದಗಿಸುತ್ತದೆ.

Realme 15 Pro 5G: ಜುಲೈ 24 ರಂದು ರಿಲೀಸ್, ಕಾರ್ಯಕ್ಷಮತೆಯ ವಿವರ ಬಹಿರಂಗ!

ಗೇಮಿಂಗ್ ಕೋಚ್ 2.0 ವೈಶಿಷ್ಟ್ಯವು AI ಅಲ್ಟ್ರಾ ಟಚ್ ಕಂಟ್ರೋಲ್ ಅನ್ನು ಹೊಂದಿದೆ ಎಂದು ದೃಢಪಡಿಸಲಾಗಿದೆ. ನಿಯಂತ್ರಣಗಳ ಸ್ಪಂದಿಸುವಿಕೆಯನ್ನು ಸುಧಾರಿಸುತ್ತದೆ ಮತ್ತು ಹೈ-ಆಕ್ಷನ್ ವಲಯಗಳಲ್ಲಿ ಸೂಕ್ಷ್ಮತೆಯನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗಿದೆ.

ಇಷ್ಟೇ ಅಲ್ಲದೆ, ಕಂಪನಿಯು ಮುಂಬರುವ Realme 15 Pro 5G ಫೋನ್ 1.1 ಮಿಲಿಯನ್‌ಗಿಂತಲೂ ಹೆಚ್ಚಿನ AnTuTu ಮಾನದಂಡದ ಸ್ಕೋರ್ ಅನ್ನು ಸಾಧಿಸಿದೆ ಎಂದು ಬಹಿರಂಗಪಡಿಸಿದೆ. ಇದು ಸಂಭಾವ್ಯವಾಗಿ ಈ ಫೋನ್ ಅನ್ನು Honor 200 Pro (1.162 ಮಿಲಿಯನ್), Motorola Edge 60 Pro (1.086 ಮಿಲಿಯನ್), ಮತ್ತು OnePlus Nord 4 (1.084 ಮಿಲಿಯನ್) ನಂತಹ ಮಧ್ಯಮ ಬೆಲೆ ವಿಭಾಗದ ಸ್ಪರ್ಧಾತ್ಮಕ ಫೋನ್‌ಗಳಿಗೆ ಸಮನಾಗಿರುವುದನ್ನು ನಾವು ನೋಡಬಹುದು.

ಇಲ್ಲಿಯವರೆಗೆ, Realme 15 Pro 5G ಫೋನ್ ಅನ್ನು ರಅತ್ಯಂತ ಮುಂದುವರಿದ "AI ಪಾರ್ಟಿ ಫೋನ್" ಎಂದು ಪ್ರಚಾರ ಮಾಡಲಾಗುತ್ತುತ್ತು. ಕಂಪೆನಿಯು ಈ ಫೋನ್ AI ಎಡಿಟ್ Genie ಮತ್ತು AI ಪಾರ್ಟಿಯಂತಹ AI ಇಮೇಜಿಂಗ್ ಪರಿಕರಗಳನ್ನು ಘೋಷಿಸಿತ್ತು. ಮೊದಲನೆಯದು ಧ್ವನಿ ಆಧಾರಿತ ಫೋಟೋ ಎಡಿಟಿಂಗ್ ಟೂಲ್ ಆಗಿ ಬರುವ ನಿರೀಕ್ಷೆಯಿದೆ, ಎರಡನೆಯದು ಪರಿಸರ ಪರಿಸ್ಥಿತಿಗಳಿಗೆ ಅನುಗುಣವಾಗಿ ಕಾಂಟ್ರಾಸ್ಟ್, ಸ್ಯಾಚುರೇಶನ್ ಮತ್ತು ಶಟರ್ ಸ್ಪೀಡ್‌ನಂತಹ ಸೆಟ್ಟಿಂಗ್‌ಗಳನ್ನು ನೈಜ ಸಮಯದಲ್ಲಿ ಹೊಂದಿಸಬಹುದು ಎಂದು ಮಾಹಿತಿಯನ್ನು ನೀಡಿತ್ತು.

ನಾವು ಈಗಾಗಲೇ ತಿಳಿದಿರುವಂತೆ, Realme 15 Pro 5G ಫೋನ್ ತನ್ನ ಮೂಲ ಮಾದರಿಯೊಂದಿಗೆ ಇದೇ ಜುಲೈ 24 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ. ಈ ಫೋನ್ ಅನ್ನು ರಿಯಲ್‌ಮಿ ಇಂಡಿಯಾ ಸ್ಟೋರ್ ಮತ್ತು ಫ್ಲಿಪ್‌ಕಾರ್ಟ್ ಮೂಲಕ ಫ್ಲೋಯಿಂಗ್ ಸಿಲ್ವರ್, ಸಿಲ್ಕ್ ಪರ್ಪಲ್ ಮತ್ತು ವೆಲ್ವೆಟ್ ಗ್ರೀನ್ ಸೇರಿದಂತೆ ಬಹು ಬಣ್ಣಗಳಲ್ಲಿ ಮಾರಾಟ ಮಾಡುವ ನಿರೀಕ್ಷೆಯಿದೆ. ಮುಂಬರುವ Realme 15 Pro 5G ಫೋನ್ ಕುರಿತು ನಿಮ್ಮ ಅನಿಸಿಕೆಗಳು ಏನು ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.

Best Mobiles in India

English summary
The Realme 15 Pro 5G is officially set to feature the Snapdragon 7 Gen 4 SoC and GT Boost 3.0 for enhanced gaming performance.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+