ರಿಯಲ್‌ಮಿ ಸಂಸ್ಥೆಯು ಭಾರತೀಯ ಮಾರುಕಟ್ಟೆಗೆ ತನ್ನ ಹೊಸ ಮತ್ತು ವಿಶೇಷ ಆವೃತ್ತಿಯ ಸ್ಮಾರ್ಟ್‌ಫೋನ್ ಅನ್ನು ಪರಿಚಯಿಸಲು ಸಿದ್ಧತೆ ನಡೆಸಿದೆ. ಈ ಬಾರಿ ಕಂಪನಿಯು ಜನಪ್ರಿಯ ಟಿವಿ ಶೋ 'ಗೇಮ್ ಆಫ್ ಥ್ರೋನ್ಸ್' (Game of Thrones) ಥೀಮ್‌ನಲ್ಲಿ Realme 15 Pro 5G ಲಿಮಿಟೆಡ್ ಎಡಿಷನ್ ಅನ್ನು ಬಿಡುಗಡೆ ಮಾಡುವುದಾಗಿ ಟೀಸರ್ ಮೂಲಕ ಖಚಿತಪಡಿಸಿದೆ. ಈ ಹೊಸ ವಿಶೇಷ ರೂಪಾಂತರವು, ಈ ವರ್ಷದ ಜುಲೈನಲ್ಲಿ ಭಾರತದಲ್ಲಿ ಬಿಡುಗಡೆಯಾದ ಸ್ಟ್ಯಾಂಡರ್ಡ್ Realme 15 Pro 5G ಮಾದರಿಯನ್ನೇ ಆಧರಿಸಿದೆ ಎನ್ನಲಾಗಿದೆ.
Realme 15 Pro 5G ಗೇಮ್ ಆಫ್ ಥ್ರೋನ್ಸ್ ಲಿಮಿಟೆಡ್ ಎಡಿಷನ್‌ನ ನಿಖರ ಬೆಲೆ ಮತ್ತು ಬಿಡುಗಡೆ ದಿನಾಂಕವನ್ನು ಕಂಪನಿಯು ಇನ್ನೂ ಘೋಷಿಸಿಲ್ಲ. 'ಗೇಮ್ ಆಫ್ ಥ್ರೋನ್ಸ್' ಥೀಮ್‌ನಲ್ಲಿ ಬರಲಿರುವ ಮುಂಬರು Realme 15 Pro 5G ಲಿಮಿಟೆಡ್ ಎಡಿಷನ್ ಫೋನ್‌ನ ಬಗ್ಗೆ ರಿಯಲ್‌ಮಿ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಿಲ್ಲವಾದರೂ, ಇದು ಹೊಸ ವಿಶಿಷ್ಟ ಬಣ್ಣ ಮತ್ತು ವಿನ್ಯಾಸದೊಂದಿಗೆ ಬರಬಹುದೆಂದು ನಿರೀಕ್ಷಿಸಲಾಗಿದೆ. ಜೊತೆಗೆ, ಹಿಂದಿನ ಮಾದರಿಯಂತೆಯೇ ಇದೂ ಕೂಡ ಅದೇ ಸಾಮರ್ಥ್ಯ ಮತ್ತು ವೈಶಿಷ್ಟ್ಯಗಳನ್ನು ಒಳಗೊಂಡಿರುವ ನಿರೀಕ್ಷೆ ಇದೆ.
Photo Credit:
Photo credit: realme
ಜುಲೈನಲ್ಲಿ ಬಿಡುಗಡೆಯಾದಾಗ Realme 15 Pro 5G ಮಾದರಿಯ 8GB RAM + 128GB ಸ್ಟೋರೇಜ್ ಹೊಂದಿರುವ ಸ್ಟ್ಯಾಂಡರ್ಡ್ ಮಾದರಿಯು ₹31,999 ಬೆಲೆಯಲ್ಲಿ ಬಿಡುಗಡೆಯಾಗಿತ್ತು. ವಿಶೇಷ ಆವೃತ್ತಿಯಾಗಿರುವುದರಿಂದ, ಇದು ಸ್ವಲ್ಪ ಹೆಚ್ಚು ಬೆಲೆ ಹೊಂದಿರುವ ಸಾಧ್ಯತೆಯೂ ಇದೆ. ಈ ವಿಶೇಷ ಆವೃತ್ತಿಯು 'ಗೇಮ್ ಆಫ್ ಥ್ರೋನ್ಸ್' ಅಭಿಮಾನಿಗಳಿಗೆ ಒಂದು ವಿಶೇಷ ಟ್ರೀಟ್ ಆಗುವುದರಲ್ಲಿ ಸಂದೇಹವಿಲ್ಲ. ಹಾಗಾದರೆ, ಈ ಮೊದಲು ಪರಿಚಯಗೊಂಡಿದ್ದ Realme 15 Pro 5G ಫೋನ್ ಫೀಚರ್ಸ್ ಯಾವುವು ಎಂಬುದನ್ನು ಸಗ ನೋಡೋಣ ಬನ್ನಿ
Realme 15 Pro 5G ವೈಶಿಷ್ಟ್ಯಗಳು ಡಿಸ್ಪ್ಲೇ ಮತ್ತು ವಿನ್ಯಾಸ: ಫೋನ್ 6.8-ಇಂಚಿನ 4D Curve+ AMOLED ಡಿಸ್ಪ್ಲೇ ಯನ್ನು ಹೊಂದಿದ್ದು, 144Hz ರಿಫ್ರೆಶ್ ರೇಟ್ ನೀಡುತ್ತದೆ. ಇದು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 7i ರಕ್ಷಣೆಯನ್ನು ಹೊಂದಿದೆ. ಪ್ರೊಸೆಸರ್ ಮತ್ತು ಕಾರ್ಯಕ್ಷಮತೆ: ಇದು ಶಕ್ತಿಯುತ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 7 ಜೆನ್ 4 (Snapdragon 7 Gen 4) 5G ಪ್ರೊಸೆಸರ್‌ನಿಂದ ಚಾಲಿತವಾಗಿದೆ. ಜೊತೆಗೆ 8GB ಅಥವಾ 12GB RAM ಮತ್ತು 128GB/256GB/512GB UFS 3.1 ಸಂಗ್ರಹಣೆಯ ಆಯ್ಕೆಗಳಲ್ಲಿ ಲಭ್ಯವಿದೆ. ಕ್ಯಾಮೆರಾ ಸಾಮರ್ಥ್ಯ: ಪೋಟೋಗ್ರಫಿಗಾಗಿ, ಇದು ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ: 50-ಮೆಗಾಪಿಕ್ಸೆಲ್ ಸೋನಿ IMX896 OIS ಪ್ರೈಮರಿ ಕ್ಯಾಮೆರಾ ಮತ್ತು 50-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಕ್ಯಾಮೆರಾ. ಸೆಲ್ಫಿಗಳಿಗಾಗಿ, ಮುಂಭಾಗದಲ್ಲಿ 50-ಮೆಗಾಪಿಕ್ಸೆಲ್ ಕ್ಯಾಮೆರಾ ಇದೆ. ಎಲ್ಲಾ ಕ್ಯಾಮೆರಾಗಳಲ್ಲಿ 4K 60fps ವಿಡಿಯೋ ರೆಕಾರ್ಡಿಂಗ್ ಸಾಮರ್ಥ್ಯವು ಗಮನಾರ್ಹವಾಗಿದೆ. ಬ್ಯಾಟರಿ ಮತ್ತು ಚಾರ್ಜಿಂಗ್: ಫೋನ್ 7000mAh ಸಾಮರ್ಥ್ಯದ ದೈತ್ಯ ಬ್ಯಾಟರಿ ಹೊಂದಿದ್ದು, ಇದಕ್ಕೆ ಬೆಂಬಲವಾಗಿ 80W ಅಲ್ಟ್ರಾ ಚಾರ್ಜ್ (SUPERVOOC) ವೇಗದ ಚಾರ್ಜಿಂಗ್ ತಂತ್ರಜ್ಞಾನವನ್ನು ನೀಡಲಾಗಿದೆ. ಇತರ ವೈಶಿಷ್ಟ್ಯಗಳು: ಇದು Android 15 ಆಧಾರಿತ Realme UI 6 ಮೇಲೆ ಕಾರ್ಯನಿರ್ವಹಿಸುತ್ತದೆ. ಜೊತೆಗೆ, ಇದು ಸ್ಟೀರಿಯೋ ಸ್ಪೀಕರ್‌ಗಳು, ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಮತ್ತು ನೀರು-ಧೂಳಿನ ಪ್ರತಿರೋಧಕ್ಕಾಗಿ IP69 ರೇಟಿಂಗ್‌ಗಳನ್ನು ಒಳಗೊಂಡಿದೆ.
ಗೇಮ್ ಆಫ್ ಥ್ರೋನ್ಸ್ ಆವೃತ್ತಿಯು ಸ್ಟ್ಯಾಂಡರ್ಡ್ ಮಾದರಿಯ ವೈಶಿಷ್ಟ್ಯಗಳನ್ನು ಮುಂದುವರಿಸುವ ನಿರೀಕ್ಷೆಯಿದೆ. Realme 15 Pro 5G ಗೇಮ್ ಆಫ್ ಥ್ರೋನ್ಸ್ ಆವೃತ್ತಿಯು ವಿಶೇಷ ಥೀಮ್‌ನ ಜೊತೆಗೆ ಶಕ್ತಿಯುತ ಕಾರ್ಯಕ್ಷಮತೆ ಮತ್ತು ಉತ್ತಮ ವೈಶಿಷ್ಟ್ಯಗಳ ಸಮಾಗಮವಾಗಿದ್ದು, ಟೆಕ್ ಮತ್ತು 'ಗೇಮ್ ಆಫ್ ಥ್ರೋನ್ಸ್' ಅಭಿಮಾನಿಗಳನ್ನು ಆಕರ್ಷಿಸುವ ನಿರೀಕ್ಷೆ ಇದೆ. ಹೆಚ್ಚಿನ ವಿವರಗಳಿಗಾಗಿ, ಕಂಪನಿಯ ಅಧಿಕೃತ ಘೋಷಣೆಗಾಗಿ ಕಾದುನೋಡೋಣ. ಈ ಕುರಿತು ಹೆಚ್ಚಿನ ಅಪ್‌ಡೇಟ್‌ಗಾಗಿ ನಿಮ್ಮ ಕನ್ನಡ ಗಿಜ್‌ಬಾಟ್‌ನಲ್ಲಿ ಯಾವಾಗಲೂ ಲೈವ್ ಆಗಿರಿ.