ಐಫೋನ್ ಲುಕ್‌ನಲ್ಲಿ ಬರುತ್ತಿರುವ Realme 15T ಬೆಲೆ 20 ಸಾವಿರಕ್ಕಿಂತ ಕಡಿಮೆ!
ಸಣ್ಣ ಐಫೋನ್ ಎಂದು ಕರೆಯಲಾಗುತ್ತಿರುವ ರಿಯಲ್‌ಮಿ 15T ಫೋನ್‌ನ ಬಿಡುಗಡೆಗಾಗಿ ಕಾತರದಿಂದ ಕಾಯುತ್ತಿರುವವರಿಗೆ ಮತ್ತಷ್ಟು ಸಿಹಿಸುದ್ದಿಗಳು ದೊರೆತಿವೆ. ಇತ್ತೀಚೆಗೆ, ದೇಶದಲ್ಲಿ ರಿಯಲ್‌ಮಿ 15T ಬಿಡುಗಡೆಯಾಗಲಿದೆ ಎಂಬ ಸುದ್ದಿಯು ಹೊರಬಿದ್ದಿತ್ತು. ಇದೀಗ ಈ ಪೋನ್ ಬೆಲೆ, ವಿನ್ಯಾಸ ಮತ್ತು ವಿಶೇಷತೆಗಳ ಕುರಿತು ಪ್ರಮುಖ ವಿವರಗಳು ಆನ್‌ಲೈನ್‌ನಲ್ಲಿ ಸೋರಿಕೆಯಾಗಿವೆ. ಸೋರಿಕೆಯ ಮಾಹಿತಿಯಂತೆ ರಿಯಲ್‌ಮಿ 15T ಭಾರತದಲ್ಲಿ ₹20,000 ಕ್ಕಿಂತ ಕಡಿಮೆ ಬೆಲೆಯ ವಿಭಾಗದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.!
ಹೌದು, ಜನಪ್ರಿಯ ಟೆಕ್ ಟಿಪ್‌ಸ್ಟರ್ ಅಭಿಷೇಕ್ ಯಾದವ್ ಅವರು ತಮ್ಮ ಎಕ್ಸ್ (ಹಿಂದಿನ ಟ್ವಿಟರ್) ಖಾತೆಯಲ್ಲಿ ರಿಯಲ್‌ಮಿ 15T ಫೋನ್‌ನ ಮಾರ್ಕೆಟಿಂಗ್ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಈ ಸೋರಿಕೆಯಾದ ಮಾರ್ಕೆಟಿಂಗ್ ಚಿತ್ರಗಳು ಮುಂಬರಲಿರುವ ಈ ಸ್ಮಾರ್ಟ್‌ಫೋನ್ ಬಗ್ಗೆ ಹಲವಾರು ಆಸಕ್ತಿದಾಯಕ ಅಂಶಗಳನ್ನು ಬಹಿರಂಗಪಡಿಸುತ್ತವೆ. ಅಭಿಷೇಕ್ ಯಾದವ್ ಅವರು ಒದಗಿಸಿರುವ ಮಾಹಿತಿಯ ಪ್ರಕಾರ, ಈ ಫೋನ್ ಎರಡು ವಿಭಿನ್ನ ಆವೃತ್ತಿಗಳಲ್ಲಿ ಲಭ್ಯವಾಗಲಿದೆ: ಒಂದು 7.79mm ದಪ್ಪ ಮತ್ತು 181 ಗ್ರಾಂ ತೂಗಿದರೆ, ಇನ್ನೊಂದು ಆವೃತ್ತಿಯು 8.25mm ದಪ್ಪ ಮತ್ತು 199 ಗ್ರಾಂ ತೂಗುತ್ತದೆ.
ರಿಯಲ್‌ಮಿ 15T ಭಾರತದಲ್ಲಿ ₹20,000 ಕ್ಕಿಂತ ಕಡಿಮೆ ಬೆಲೆಯ ವಿಭಾಗದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಈ ಬೆಲೆಯು ವೈಶಿಷ್ಟ್ಯಗಳ ಆಧಾರದ ಮೇಲೆ ಗ್ರಾಹಕರಿಗೆ ಒಂದು ಆಕರ್ಷಕ ಆಯ್ಕೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಫೋನ್‌ನ ಪ್ರಮುಖ ವೈಶಿಷ್ಟ್ಯಗಳೆಂದರೆ, ಅದರಲ್ಲಿರುವ ಮೀಡಿಯಾಟೆಕ್ ಡೈಮೆನ್ಸಿಟಿ 6400 ಮ್ಯಾಕ್ಸ್ ಚಿಪ್‌ಸೆಟ್, ಇದು 6nm ಪ್ರಕ್ರಿಯೆಯಲ್ಲಿ ನಿರ್ಮಿತವಾಗಿದ್ದು, 480K+ AnTuTu ಸ್ಕೋರ್‌ನೊಂದಿಗೆ ಉತ್ತಮ ಕಾರ್ಯಕ್ಷಮತೆಯನ್ನು ನೀಡುವ ಸಾಮರ್ಥ್ಯ ಹೊಂದಿದೆ. ಜೊತೆಗೆ ದೊಡ್ಡ ಪರದೆ ಮತ್ತು ಶಕ್ತಿಯುತ ಬ್ಯಾಟರಿ ವ್ಯವಸ್ಥೆಯನ್ನೂ ಇದು ಒಳಗೊಂಡಿದೆ ಎನ್ನಲಾಗಿದೆ.
ರಿಯಲ್‌ಮಿ 15T ಫೋನ್ ವಿನ್ಯಾಸದ ವಿಷಯದಲ್ಲಿ ಕೂಡ ಗಮನ ಸೆಳೆಯುತ್ತದೆ. ಸೋರಿಕೆಯಾದ ಚಿತ್ರಗಳ ಪ್ರಕಾರ, ಈ ಫೋನ್ "ಸಣ್ಣ ಐಫೋನ್" ಎಂದು ಗುರುತಿಸಲ್ಪಟ್ಟಿದೆ. ಅದರ ಸ್ಲಿಮ್ ಮತ್ತು ಹಗುರವಾದ ವಿನ್ಯಾಸವು ಕೈಯಲ್ಲಿ ಹಿಡಿದುಕೊಳ್ಳಲು ಅತ್ಯಂತ ಆರಾಮದಾಯಕವಾಗಿದೆ. ವಿನ್ಯಾಸದ ಭಾಗವಾಗಿ, ಇದು ಚದರ ಆಕಾರದ ಹಿಂಬದಿ ಕ್ಯಾಮರಾ ಮಾಡ್ಯೂಲ್ ಹೊಂದಿದ್ದು, ಮೂರು ಸೆನ್ಸರ್‌ಗಳು ಮತ್ತು ಎಲ್‌ಇಡಿ ಫ್ಲಾಷ್ ಅನ್ನು ಒಳಗೊಂಡಿದೆ. ಮುಂಭಾಗದಲ್ಲಿ, ಸೆಲ್ಫಿ ಕ್ಯಾಮರಾಕ್ಕಾಗಿ ಪಂಚ್-ಹೋಲ್ ಕಟೌಟ್ ಇದೆ. ಇದು ನೋಡಲು ಐಫೋನ್ ವಿನ್ಯಾಸವನ್ನು ಹೋಲುವುದನ್ನು ಸಹ ನಾವು ಕಾಣಬಹುದು.

ಸೋರಿಕೆಯ ಮಾಹಿತಿಗಳನ್ನು ನಂಬುವುದಾದರೆ, ಈ ಫೋನ್ 6.57-ಇಂಚಿನ AMOLED ಡಿಸ್‌ಪ್ಲೇಯೊಂದಿಗೆ ಬರುತ್ತದೆ. ಬ್ಯಾಟರಿ ಸಾಮರ್ಥ್ಯವು ಗಮನಾರ್ಹವಾಗಿದ್ದು, 7,000mAh ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯು 60W ವೇಗದ ಚಾರ್ಜಿಂಗ್ ಬೆಂಬಲವನ್ನು ಹೊಂದಿದ್ದು, ಬಾಕ್ಸ್‌ನಲ್ಲಿ 80W ಅಡಾಪ್ಟರ್ ಅನ್ನು ಸೇರಿಸಲಾಗಿದೆ ಎಂದು ಹೇಳಲಾಗಿದೆ. ಇದು 5 ವರ್ಷಗಳ ಬ್ಯಾಟರಿ ಆರೋಗ್ಯ ಭರವಸೆ, ಬೈಪಾಸ್ ಚಾರ್ಜಿಂಗ್, ಮತ್ತು ರಿವರ್ಸ್ ಚಾರ್ಜಿಂಗ್ ಬೆಂಬಲವನ್ನೂ ಒಳಗೊಂಡಿದೆ. ಜೊತೆಗೆ 50MP ಡ್ಯುಯಲ್ ಕ್ಯಾಮರಾ ಸೆಟಪ್ ಮತ್ತು ಸೆಲ್ಫಿಗಾಗಿ 50MP ಮುಂಭಾಗದ ಕ್ಯಾಮರಾ ಇರುವ ಸಾಧ್ಯತೆ ಇದೆ.
ರಿಯಲ್‌ಮಿ ಕಂಪೆನಿಯು ತನ್ನ ಮುಂಬರುವ ಈ ರಿಯಲ್‌ಮಿ 15T ಫೋನಿನ ಬಿಡುಗಡೆಯ ದಿನಾಂಕದ ಬಗ್ಗೆ ಯಾವುದೇ ಅಧಿಕೃತ ಘೋಷಣೆಯನ್ನು ನೀಡಿಲ್ಲ. ಅಧಿಕೃತ ಘೋಷಣೆಯು ಇಲ್ಲವಾದರೂ ಸಹ, ಸೋರಿಕೆಯ ಈ ಎಲ್ಲಾ ಮಾಹಿತಿಗಳು ಫೋನ್ ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿದೆ ಎಂಬುದನ್ನು ಸೂಚಿಸುತ್ತವೆ. ರಿಯಲ್‌ಮಿ ಸಂಸ್ಥೆ ಈ ಕುರಿತು ಶೀಘ್ರದಲ್ಲೇ ಅಧಿಕೃತ ಮಾಹಿತಿ ನೀಡಬಹುದು ಎಂದು ನಿರೀಕ್ಷಿಸಬಹುದು. ಈ ಹೊಸ ಫೋನ್ ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಹೇಗೆ ಸ್ಪರ್ಧಿಸಲಿದೆ ಎಂಬುದನ್ನು ಕಾದು ನೋಡಬೇಕು. ಈ ಕುರಿತಂತೆ ನಿಮ್ಮ ಅನಿಸಕೆಗಳನ್ನು ಕಾಮೆಂಟ್ ಮಾಡಿ ತಿಳಿಸಿ.


Click it and Unblock the Notifications








