ಕಡಿಮೆ ಬೆಲೆಗೆ ಐಫೋನ್ ಲುಕ್ ಫೋನ್: ದೇಶದಲ್ಲಿ Realme 15T ರಿಲೀಸ್ ಡೇಟ್ ಫಿಕ್ಸ್!
ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಮತ್ತೊಂದು ಹೊಸ ಫೋನ್ ಸಂಚಲನ ಮೂಡಿಸುವ ಸಮಯ ಬಂದಿದೆ. Realme ತನ್ನ ಬಹುನಿರೀಕ್ಷಿತ Realme 15T ಫೋನ್ ಅನ್ನುಇದೇ ಸೆಪ್ಟೆಂಬರ್ 2 ರಂದು ಮಧ್ಯಾಹ್ನ 12 ಗಂಟೆಗೆ ಅಧಿಕೃತವಾಗಿ ಬಿಡುಗಡೆ ಮಾಡುವುದಾಗಿ ತಿಳಿಸಿದೆ.! ಐಫೋನ್ ವಿನ್ಯಾಸದ ಫೋನ್ ಎಂಬ ವದಂತಿಯ ಸುದ್ದಿಗಳಿಂದಲೇ ಗಮನಸೆಳೆದಿರುವ ಈ ಹೊಸ ಫೋನ್ ಗ್ರಾಹಕರಲ್ಲಿ ಹೆಚ್ಚಿನ ಕುತೂಹಲವನ್ನು ಹುಟ್ಟಿಸಿದ್ದು, ಇದರ ಪ್ರಮುಖ ಪೀಚರ್ಸ್ ಯಾವುವು ಎಂಬುದು ಸಹ ಬಂಹಿರಂಗವಾಗಿವೆ. ಹಾಗಾದರೆ, ಮುಂಬರುವ Realme 15T ಫೋನ್ ಹೇಗಿರಲಿದೆ ಎಂಬುದನ್ನು ನೋಡೋಣ ಬನ್ನಿ.
Realme 15T : ವಿನ್ಯಾಸ
Realme 15T ತನ್ನ ಆಕರ್ಷಕ ವಿನ್ಯಾಸದಿಂದ ಗಮನ ಸೆಳೆಯಲಿದೆ. ಇದು ಫ್ಲೋಯಿಂಗ್ ಸಿಲ್ವರ್, ಸಿಲ್ಕ್ ಬ್ಲೂ ಮತ್ತು ಸೂಟ್ ಟೈಟಾನಿಯಂ ಎಂಬ ಮೂರು ವಿಭಿನ್ನ ಬಣ್ಣಗಳಲ್ಲಿ ಲಭ್ಯವಿದೆ. ಹಿಂಭಾಗದಲ್ಲಿ ನ್ಯಾನೊ-ಸ್ಕೇಲ್ ಮೈಕ್ರೋಕ್ರಿಸ್ಟಲಿನ್ ಲಿಥೋಗ್ರಫಿ ತಂತ್ರಜ್ಞಾನವನ್ನು ಬಳಸಿ ವಿನ್ಯಾಸಗೊಳಿಸಿದ ಟೆಕ್ಸ್ಚರ್ಡ್ ಮ್ಯಾಟ್ ಫಿನಿಶ್ ನೀಡಲಾಗಿದೆ. ಇದು ಬೆರಳಚ್ಚು ಕಲೆಗಳನ್ನು ತಡೆಯುವುದರ ಜೊತೆಗೆ ಹಿಡಿತವನ್ನು ಹೆಚ್ಚಿಸುತ್ತದೆ. ಮಿನಿ ಐಫೋನ್ ರಚನೆಯ ಕ್ಯಾಮೆರಾ ವ್ಯವಸ್ಥೆ ಹೊಂದಿರುವ ಈ ಫೋನ್ ಕೇವಲ 7.79mm ದಪ್ಪ ಮತ್ತು 181 ಗ್ರಾಂ ತೂಕ ಹೊಂದಿರಲಿದ್ದು, ಹಗುರ ಹಾಗೂ ಆಕರ್ಷಕ ವಿನ್ಯಾಸವನ್ನು ಹೊಂದಿದೆ.
ಡಿಸ್‌ಪ್ಲೇ ಮತ್ತು ಕಾರ್ಯಕ್ಷಮತೆ
Realme ಕಂಪೆನಿ ಖಚಿತಪಡಿಸಿರುವಂತೆ, ಮುಂಬರುವ ಈ Realme 15T ಫೋನಿನಲ್ಲಿ 6.7 ಇಂಚಿನ 4R Comfort+ AMOLED ಡಿಸ್‌ಪ್ಲೇ ಒದಗಿಸಲಾಗಿದ್ದು, ಇದು ಗರಿಷ್ಠ 4,000 ನಿಟ್ಸ್ ಪೀಕ್ ಬ್ರೈಟ್‌ನೆಸ್ ನೀಡಬಲ್ಲದು. 2,160Hz PWM ಡಿಮ್ಮಿಂಗ್ ಹಾಗೂ 10-ಬಿಟ್ ಕಲರ್ ಡೆಪ್ತ್ ಬೆಂಬಲದಿಂದ ದೃಶ್ಯ ಅನುಭವವನ್ನು ಮತ್ತಷ್ಟು ಶ್ರೀಮಂತಗೊಳಿಸಲಾಗಿದೆ. ಉತ್ತಮ ತಂಪುಗೊಳಿಸುವಿಕೆಗೆ 6,050 ಚದರ ಮಿಮೀ ಏರ್‌ಫ್ಲೋ ವೇಪರ್ ಚೇಂಬರ್ (VC) ಕೂಲಿಂಗ್ ಸಿಸ್ಟಮ್ ಅಳವಡಿಸಲಾಗಿದೆ, ಇದು ದೀರ್ಘಕಾಲೀನ ಬಳಕೆಯಲ್ಲೂ ಕಾರ್ಯಕ್ಷಮತೆಯನ್ನು ಕಾಯ್ದುಕೊಳ್ಳಲು ಸಹಕಾರಿಯಾಗಿದೆ.
ಕ್ಯಾಮೆರಾ ಸಾಮರ್ಥ್ಯಗಳು
ಫೋಟೋಗ್ರಫಿ ಪ್ರಿಯರಿಗಾಗಿ Realme 15T ಉತ್ತಮ ಕ್ಯಾಮೆರಾ ವ್ಯವಸ್ಥೆಯನ್ನು ಒದಗಿಸುತ್ತದೆ. ಇದರಲ್ಲಿ 50 ಮೆಗಾಪಿಕ್ಸೆಲ್ ಪ್ರಾಥಮಿಕ ಸೆನ್ಸಾರ್ ಒಳಗೊಂಡ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ನೀಡಲಾಗಿದ್ದು, 4K ವೀಡಿಯೋ ರೆಕಾರ್ಡಿಂಗ್ ಬೆಂಬಲಿಸುತ್ತದೆ. ಸೆಲ್ಫಿ ಪ್ರಿಯರಿಗೆ 50 ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾ ಒದಗಿಸಲಾಗಿದ್ದು, ಸ್ಪಷ್ಟ ಮತ್ತು ಉಜ್ವಲ ಚಿತ್ರಗಳನ್ನು ಪಡೆಯಲು ಸಹಾಯ ಮಾಡುತ್ತದೆ. ಫೋನ್‌ನಲ್ಲಿ AI Edit Genie, AI Snap Mode ಹಾಗೂ AI Landscape ಸೇರಿದಂತೆ ಕೃತಕ ಬುದ್ಧಿಮತ್ತೆ ಆಧಾರಿತ ವೈಶಿಷ್ಟ್ಯಗಳು ಲಭ್ಯವಿವೆ ಎಂದು ಕಂಪೆನಿ ತಿಳಿಸಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್
ಈ Realme 15T ನಲ್ಲಿ ಶಕ್ತಿಯುತ 7,000mAh ಬ್ಯಾಟರಿ ಅಳವಡಿಸಲಾಗಿದ್ದು, ಇದು ದೀರ್ಘಕಾಲಿನ ಬಳಕೆಗೆ ಅನುಕೂಲಕರವಾಗಿದೆ. ವೇಗದ ವೈರ್ಡ್ ಚಾರ್ಜಿಂಗ್ ಬೆಂಬಲದ ಜೊತೆಗೆ, 10W ರಿವರ್ಸ್ ಚಾರ್ಜಿಂಗ್ ವೈಶಿಷ್ಟ್ಯವೂ ಲಭ್ಯವಿದೆ. ಕಂಪನಿಯ ಪ್ರಕಾರ, ಈ ಫೋನ್ ಒಂದು ದಿನಕ್ಕಿಂತ ಹೆಚ್ಚು ಕಾಲ ಸೌಲಭ್ಯ ಒದಗಿಸುವ ಸಾಮರ್ಥ್ಯ ಹೊಂದಿದೆ ಹಾಗೂ ರಾತ್ರಿ ವೇಳೆಯಲ್ಲಿಯೂ 50% ಬ್ಯಾಟರಿ ಸಂಗ್ರಹ ಉಳಿಸಿಕೊಳ್ಳುತ್ತದೆ. ಜೊತೆಗೆ, ಧೂಳು ಮತ್ತು ನೀರಿನಿಂದ ರಕ್ಷಣೆ ಒದಗಿಸಲು ಈ ಫೋನ್ IP66, IP68 ಮತ್ತು IP69 ರೇಟಿಂಗ್ ಹೊಂದಿದೆ ಎಂದು ಕಂಪೆನಿಯು ತಿಳಿಸಿದೆ.
ಬೆಲೆ ಮತ್ತು ಲಭ್ಯತೆ
ಇದೀಗ ಸೋರಿಕೆಯಾಗಿರುವ ಮಾಹಿತಿ ಪ್ರಕಾರ, Realme 15T ಮೂರು ವಿಭಿನ್ನ ಆವೃತ್ತಿಗಳಲ್ಲಿ ಲಭ್ಯವಿರಲಿದೆ. ಇದರ 8GB + 128GB - ರೂ. 20,999, 8GB + 256GB - ರೂ. 22,999 ಮತ್ತು 12GB + 256GB - ರೂ. 24,999 ಬೆಲೆಗಳಲ್ಲಿ ಲಭ್ಯವಾಗಲಿದೆ ಎಂದು ಹೇಳಲಾಗಿದೆ. ಆದರೆ, ಕಂಪೆನಿಯು ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನು ಒದಗಿಸಿಲ್ಲ. ಆದರೆ, ಬಿಡುಗಡೆ ಬಳಿಕ Realme 15T ಫೋನ್ ಅನ್ನು Flipkart, Realme ಇಂಡಿಯಾ ಇ-ಸ್ಟೋರ್ ಮತ್ತು ಆಯ್ದ ಆಫ್‌ಲೈನ್ ಮಾರಾಟ ಮಳಿಗೆಗಳಲ್ಲಿ ಖರೀದಿಗೆ ಲಭ್ಯವಿರಲಿದೆ.
ದೇಶದಲ್ಲಿ ಈಗಾಗಲೇ ಮಾರುಕಟ್ಟೆಯಲ್ಲಿ ಇರುವ Realme 15 ಮತ್ತು Realme 15 Pro ಮಾದರಿಗಳೊಂದಿಗೆ ಸೇರಲಿರುವ ಈ Realme 15T ಫೋನ್ ಮಧ್ಯಮ ಶ್ರೇಣಿಯ ಬೆಲೆಯಲ್ಲಿ ಉತ್ತಮ ಆಯ್ಕೆಯಾಗುವ ಸಾಧ್ಯತೆ ಇದೆ.ಆಕರ್ಷಕ ವಿನ್ಯಾಸ, ಉನ್ನತ ಮಟ್ಟದ ಡಿಸ್‌ಪ್ಲೇ, ಶಕ್ತಿಯುತ ಬ್ಯಾಟರಿ ಮತ್ತು ಪ್ರೀಮಿಯಂ ಕ್ಯಾಮೆರಾ ಸಾಮರ್ಥ್ಯಗಳಿಂದ Realme 15T ಮಾರುಕಟ್ಟೆಯಲ್ಲಿ ಬಲವಾದ ಸ್ಪರ್ಧಿಯಾಗುವ ನಿರೀಕ್ಷೆಯಿದೆ. ಈ ಕುರಿತಂತೆ ನಿಮ್ಮ ಅನಿಸಿಕೆ ಏನು ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.


Click it and Unblock the Notifications








