ಭಾರತಕ್ಕೆ ಬರುವ ಮೊದಲೇ ಜಾಗತಿಕವಾಗಿ Realme 16 5G ಫೋನ್ ಬಿಡುಗಡೆ!
ಭಾರತದ ಮೊಬೈಲ್ ಮಾರುಕಟ್ಟೆಗೆ ಶೀಘ್ರವೇ ಬಿಡುಗಡೆಯಾಗುವ ನಿರೀಕ್ಷೆಯಿರುವ Realme 16 5G ಸ್ಮಾರ್ಟ್‌ಫೋನ್ ಇದೀಗ ಜಾಗತಿಕ ಮಾರುಕಟ್ಟೆಗೆ ಪರಿಚಯಗಗೊಂಡಿದೆ. Realme 16 5G ಅನ್ನು ಜಾಗತಿಕವಾಗಿ ವಿಯೆಟ್ನಾಂನಲ್ಲಿ ಮೊದಲು ಬಿಡುಗಡೆ ಮಾಡಲಾಗಿದ್ದು, ಈ ಫೋನ್ ಮಿಡ್-ಪ್ರೀಮಿಯಂ ಸೆಗ್ಮೆಂಟ್‌ನಲ್ಲಿ ಸ್ಪರ್ಧೆ ನೀಡುವಂತಹ ಬೆಲೆ, ಕ್ತಿಶಾಲಿ ಬ್ಯಾಟರಿ, ಆಕರ್ಷಕ AMOLED ಡಿಸ್ಪ್ಲೇ ಮತ್ತು ಉತ್ತಮ ರಕ್ಷಣಾ ರೇಟಿಂಗ್‌ಗಳೊಂದಿಗೆ ಬಂದಿದೆ. ಹಾಗಾದರೆ, ಭಾರತಕ್ಕೆ ಮುಂಬರಬಹುದಾದ Realme 16 5G ಸ್ಮಾರ್ಟ್‌ಫೋನ್ ಹೇಗಿದೆ ಮತ್ತು ಜಾಗತಕ ಬೆಲೆ ಎಷ್ಟು ಎಂಬುದನ್ನು ನೋಡೋಣ ಬನ್ನಿ.
Realme 16 5G: ಬೆಲೆ ಮತ್ತು ಲಭ್ಯತೆ
ಪ್ರಸ್ತುತ ವಿಯೆಟ್ನಾಂ ಮಾರುಕಟ್ಟೆಯಲ್ಲಿ Realme 16 5G ಬೆಲೆ 8GB RAM + 256GB ಸ್ಟೋರೇಜ್ ವೇರಿಯಂಟ್‌ಗೆ VND 11,490,000 (ಸುಮಾರು ₹40,000) ಆಗಿದೆ. ಇದರ12GB RAM + 256GB ಸ್ಟೋರೇಜ್ ಮಾದರಿಯ ಬೆಲೆ VND 12,490,000 (ಸುಮಾರು ₹44,000) ಇದೆ. ಈ ಫೋನ್ Black Cloud ಮತ್ತು White Swan ಎಂಬ ಎರಡು ಪ್ರೀಮಿಯಂ ಬಣ್ಣಗಳಲ್ಲಿ ಅಲ್ಲಿ ಲಭ್ಯವಿದೆ. ಈ ಬೆಲೆಗಳನ್ನು ಗಮನಿಸಿದರೆ, ಭಾರತದಲ್ಲೂ ಸಹ ಇದೇ ಬೆಲೆಗಳಲ್ಲಿ Realme 16 5G ಫೋನನ್ನು ನಾವು ನಿರೀಕ್ಷಿಸಬಹುದು.
Realme 16 5G: ಪ್ರಮುಖ ವೈಶಿಷ್ಟ್ಯಗಳು
6.57-ಇಂಚಿನ ಫುಲ್ HD+ (1,080x2,372 ಪಿಕ್ಸೆಲ್‌ಗಳು) ಫ್ಲೆಕ್ಸಿಬಲ್ AMOLED ಡಿಸ್ಪ್ಲೇಯನ್ನು ಹೊಂದಿದೆ. ಇದು 93 ಪ್ರತಿಶತ ಸ್ಕ್ರೀನ್-ಟು-ಬಾಡಿ ಅನುಪಾತ, 397ppi ಪಿಕ್ಸೆಲ್ ಸಾಂದ್ರತೆ ಮತ್ತು 120Hz ವರೆಗೆ ರಿಫ್ರೆಶ್ ರೇಟ್ ಹಾಗೂ 240Hz ಟಚ್ ಸ್ಯಾಂಪ್ಲಿಂಗ್ ರೇಟ್ ನೀಡುತ್ತದೆ. ಇದರಿಂದ ಸ್ಮೂತ್ ಸ್ಕ್ರೋಲಿಂಗ್ ಹಾಗೂ ಗೇಮಿಂಗ್ ಅನುಭವ ನಿರೀಕಷಿಸಬಹುದು. ಇನ್ನು ಈ ಡಿಸ್‌ಪ್ಲೆಯುಗರಿಷ್ಠ 4,200 ನಿಟ್ಸ್ ಬ್ರೈಟ್ನೆಸ್ ಹೊಂದಿದ್ದು, ಹೊರಾಂಗಣದಲ್ಲಿ ಸಹ ಸ್ಪಷ್ಟ ವೀಕ್ಷಣೆಗೆ ಸಹಾಯ ಮಾಡುತ್ತದೆ. ಹಾಗೂ, ಈ ಡಿಸ್‌ಪ್ಲೆಯು DT ಸ್ಟಾರ್ D+ ಗ್ಲಾಸ್ ರಕ್ಷಣೆಯನ್ನು ಹೊಂದಿದೆ.

ಕಾರ್ಯಕ್ಷಮತೆಗಾಗಿ, Realme 16 5G ನಲ್ಲಿ MediaTek Dimensity 6400 Turbo ಆಕ್ಟಾ-ಕೋರ್ ಚಿಪ್‌ಸೆಟ್ ಬಳಸಲಾಗಿದೆ. Mali-G57 MC2 GPU, 12GB ವರೆಗೆ LPDDR4x RAM ಮತ್ತು 256GB ವರೆಗೆ UFS 2.2 ಸ್ಟೋರೇಜ್ ಇದ್ದು, ದಿನನಿತ್ಯದ ಬಳಕೆ, ಮಲ್ಟಿಟಾಸ್ಕಿಂಗ್ ಮತ್ತು ಗೇಮಿಂಗ್‌ಗೆ ಇದು ಸಮರ್ಪಕ ಕಾರ್ಯಕ್ಷಮತೆ ನೀಡುತ್ತದೆ. ಬ್ಯಾಟರಿ ವಿಭಾಗದಲ್ಲಿ, ಈ ಫೋನಿನಲ್ಲಿ 7,000mAh ದೊಡ್ಡ ಬ್ಯಾಟರಿ ನೀಡಲಾಗಿದೆ. ಇದಕ್ಕೆ 60W ವೈಯರ್ಡ್ ಫಾಸ್ಟ್ ಚಾರ್ಜಿಂಗ್ ಮತ್ತು ರಿವರ್ಸ್ ಚಾರ್ಜಿಂಗ್ ಬೆಂಬಲವಿದ್ದು, ದೀರ್ಘಕಾಲ ಫೋನ್ ಬಳಕೆಗೆ ಸೂಕ್ತವಾಗಿರುವಂತೆ ಬಂದಿದೆ.
ಫೋಟೋಗ್ರಫಿಗಾಗಿ Realme 16 5G ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಹೊಂದಿದ್ದು, 50MP ಪ್ರೈಮರಿ ಸೆನ್ಸರ್ ಮತ್ತು 2MP ಮೊನೋಕ್ರೋಮ್ ಕ್ಯಾಮೆರಾ ಸೇರಿವೆ. ಮುಂಭಾಗದಲ್ಲಿ 50MP ಸೆಲ್ಫಿ ಕ್ಯಾಮೆರಾ ನೀಡಲಾಗಿದೆ. ಈ ಫೋನಿನಲ್ಲಿ ನೈಟ್ ಮೋಡ್, ಪೋರ್ಟ್ರೇಟ್, ಸಿನೆಮಾಟಿಕ್, ಸ್ಲೋ ಮೋಷನ್ ಮತ್ತು ಡ್ಯುಯಲ್ ವ್ಯೂ ವೀಡಿಯೋ ಸೇರಿದಂತೆ ಹಲವು ಕ್ಯಾಮೆರಾ ಮೋಡ್‌ಗಳು ಲಭ್ಯವಿವೆ ಎಂದು ಕಂಪೆನಿಯು ತಿಳಿಸಿದೆ. ಕನೆಕ್ಟಿವಿಟಿ ವಿಭಾಗದಲ್ಲಿ, 5G, 4G LTE, Wi-Fi 6, Bluetooth 5.3, USB Type-C ಸೇರಿದಂತೆ ಆಧುನಿಕ ಕನೆಕ್ಟಿವಿಟಿ ಆಯ್ಕೆಗಳನ್ನು ಒಳಗೊಂಡಿದೆ.
ಧೂಳು ಮತ್ತು ನೀರಿನಿಂದ ಉತ್ತಮ ರಕ್ಷಣೆಗಾಗಿ IP66, IP68, IP69 ಮತ್ತು IP69K ರೇಟಿಂಗ್ ಇದೆ. ಜೊತೆಗೆ ಇನ್-ಡಿಸ್ಪ್ಲೇ ಅಲ್ಟ್ರಾಸೋನಿಕ್ ಫಿಂಗರ್‌ಪ್ರಿಂಟ್ ಸೆನ್ಸರ್ ಮತ್ತು ಫೇಸ್ ಅನ್ಲಾಕ್ ಭದ್ರತೆ ಇದೆ. ಒಟ್ಟಾರೆಯಾಗಿ, ಬಲಿಷ್ಠ ಬ್ಯಾಟರಿ, ಹೈ-ರಿಫ್ರೆಶ್ ರೇಟ್ AMOLED ಡಿಸ್ಪ್ಲೇ ಮತ್ತು ಉತ್ತಮ ವಾಟರ್-ಡಸ್ಟ್ ರಕ್ಷಣೆಯೊಂದಿಗೆ ಇದು ಗಮನ ಸೆಳೆಯುವ ಸ್ಮಾರ್ಟ್‌ಫೋನ್ ಆಗಿದೆ. ಭಾರತದಲ್ಲಿ ಬಿಡುಗಡೆ ಆದ ಬಳಿಕ ಇದರ ಬೆಲೆ ಮತ್ತು ವೈಶಿಷ್ಟ್ಯಗಳು ಗ್ರಾಹಕರಿಗೆ ಎಷ್ಟು ಆಕರ್ಷಕವಾಗುತ್ತವೆ. ಆದರೆ, ಭಾರತದಲ್ಲಿ ಬಿಡುಗಡೆ ಮತ್ತು ಬೆಲೆ ಬಗ್ಗೆ ಕಂಪನಿ ಇನ್ನೂ ಅಧಿಕೃತ ಘೋಷಣೆ ಮಾಡಿಲ್ಲ. ಆದರೆ, ಶೀಘ್ರದಲ್ಲೇ ನಿರೀಕ್ಷಿಸಬಹುದು.


Click it and Unblock the Notifications