Home
ಮೊಬೈಲ್

iPhone Air ಶೈಲಿಯ Realme 16 5G: ಭಾರತದಲ್ಲಿ ಶೀಘ್ರವೇ ಬಿಡುಗಡೆ ಸುಳಿವು!

ಭಾರತೀಯ ಮಾರುಕಟ್ಟೆಗೆ ಶೀಘ್ರದಲ್ಲೇ iPhone Air ಮಾದರಿಯಂತೆ ಕಾಣುವ Realme 16 5G ಸ್ಮಾರ್ಟ್‌ಫೋನ್ ಬಿಡುಗಡೆಯಾಗಲಿದೆ ಎಂಬ ಸುಳಿವುಗಳು ಲಭ್ಯವಾಗಿವೆ. ಈಗಾಗಲೇ ಕೆಲವು ಜಾಗತಿಕ ಮಾರುಕಟ್ಟೆಗಳಲ್ಲಿ ಅನಾವರಣಗೊಂಡಿರುವ Realme 16 5G ಫೋನ್, ಅದೇ ರೀತಿಯ ಫೀಚರ್ಸ್ ಮತ್ತು ಸ್ಪೆಸಿಫಿಕೇಶನ್‌ಗಳೊಂದಿಗೆ ಭಾರತದಲ್ಲೂ ಪ್ರವೇಶಿಸುವ ಸಾಧ್ಯತೆ ಇದೆ ಎಂದು ಜನಪ್ರಿಯ ಟೆಕ್ ಬ್ಲಾಗರ್ ಒಬ್ಬರು ತಿಳಿಸಿದ್ದಾರೆ. ವಿಶೇಷವಾಗಿ, iPhone Air ಮಾದರಿಯಂತಿರುವ ಇದರ ಡಿಸೈನ್ ಈ ಫೋನ್‌ನ ಪ್ರಮುಖ ಆಕರ್ಷಣೆಯಾಗಿ ಕಾಣಿಸಿಕೊಳ್ಳುತ್ತಿದೆ.

ಜನಪ್ರಿಯ ಸಾಮಾಜಿಕ ಜಾಲತಾಣ X ನಲ್ಲಿ ಟೆಕ್ ಬ್ಲಾಗರ್ ಪ್ಯಾರಾಸ್ ಗುಗ್ಲಾನಿ (@passionategkeez) ಅವರು ಭಾರತದಲ್ಲಿ Realme 16 5G ಪೋನ್ ಬಿಡುಗಡೆಗೆ Realme ಕಂಪೆನಿ ಸಜ್ಜಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ. ಈ ಹೊಸ Realme 16 5G ಫೋನಿನ ವಿಶೇಷಣಗಳು ಮತ್ತು ವಿನ್ಯಾಸವು ಜಾಗತಿಕ ರೂಪಾಂತರವನ್ನು ಹೋಲುತ್ತದೆ ಎಂದು ಹೇಳಿದ್ದಾರೆ. ದೇಶದಲ್ಲಿ ಶೀಘ್ರವೇ Realme 16T ಫೋನ್ ಅನಾವರಣಗೊಳ್ಳುವ ನಿರೀಕ್ಷೆ ಇರುವುದರಿಂದ, Realme 16 5G ಪೋನ್ ಕೂಡ Realme 16T ಬಿಡುಗಡೆಯನ್ನು ಅನುಸರಿಸಬಹುದು ಎಂದು ಹೇಳಲಾಗಿದೆ.

iPhone Air ಶೈಲಿಯ Realme 16 5G: ಭಾರತದಲ್ಲಿ ಶೀಘ್ರವೇ ಬಿಡುಗಡೆ ಸುಳಿವು!

ಗಮನಿಸುವುದಾದರೆ, Realme 16 5G ಫೋನ್ ಅನ್ನು ಜನವರಿಯಲ್ಲಿ ವಿಯೆಟ್ನಾಂನಲ್ಲಿ ಬಿಡುಗಡೆ ಮಾಡಲಾಯಿತು, iPhone Air ಮತ್ತು Google Pixel 10 ಫೋನ್‌ಗಳಂತೆಯೇ ಸಮತಲ ಹಿಂಭಾಗದ ಕ್ಯಾಮೆರಾ ಬಾರ್ ಅನ್ನು ಹೊಂದಿರುವದು ಈ ಫೋನಿನ ಪ್ರಮುಖ ವಿಶೇಷತೆಯಾಗಿದೆ. ಇದೊಂದು ವೈಶಿಷ್ಟ್ಯದಿಂದಲೇ ಫೋನ್ ಹೆಚ್ಚು ಗಮನಸೆಳೆದಿತ್ತು ಎಂಬುದನ್ನು ನಾವು ಗಮನಿಸಬಹುದು. ಡಿಸ್‌ಪ್ಲೆ ವಿಭಾಗದಲ್ಲಿ, ಈ ಫೋನ್ 120Hz ವರೆಗೆ ರಿಫ್ರೆಶ್ ರೇಟ್‌ನೊಂದಿಗೆ 6.57-ಇಂಚಿನ ಪೂರ್ಣ HD+ (1,080x2,372 ಪಿಕ್ಸೆಲ್‌ಗಳು) ಹೊಂದಿಕೊಳ್ಳುವ AMOLED ಡಿಸ್ಪ್ಲೇಯನ್ನು ಹೊಂದಿದೆ.

ಕಾರ್ಯಕ್ಷಮತೆ ವಿಚಾರಕ್ಕೆ ಬಂದರೆ, Realme 16 5G ನಲ್ಲಿ MediaTek Dimensity 6400 Turbo ಪ್ರೊಸೆಸರ್ ಬಳಕೆ ಮಾಡಲಾಗಿದೆ. ಇದಕ್ಕೆ 12GB ವರೆಗೆ RAM ಮತ್ತು 256GB ವರೆಗೆ ಇಂಟರ್ನಲ್ ಸ್ಟೋರೇಜ್ ಆಯ್ಕೆಗಳು ಲಭ್ಯವಿವೆ. ಕ್ಯಾಮೆರಾ ವಿಭಾಗದಲ್ಲೂ ಈ ಫೋನ್ ಗಮನ ಸೆಳೆಯುತ್ತದೆ. ಹಿಂಭಾಗದಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ಮೋನೋಕ್ರೋಮ್ ಸೆನ್ಸರ್ ಹೊಂದಿದ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್ ನೀಡಲಾಗಿದೆ. ಸೆಲ್ಫಿ ಮತ್ತು ವಿಡಿಯೋ ಕಾಲ್‌ಗಳಿಗೆ 50 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿದೆ.

ಬ್ಯಾಟರಿ ಸಾಮರ್ಥ್ಯದಲ್ಲಿ ಈ ಫೋನ್ ಬಹಳ ಶಕ್ತಿಶಾಲಿಯಾಗಿದ್ದು,7,000mAh ಸಾಮರ್ಥ್ಯದ ಬ್ಯಾಟರಿ ಇದ್ದು, 60W ಫಾಸ್ಟ್ ಚಾರ್ಜಿಂಗ್ ಮತ್ತು ರಿವರ್ಸ್ ಚಾರ್ಜಿಂಗ್ ಸಪೋರ್ಟ್ ಕೂಡ ಇದೆ. ಜೊತೆಗೆ IP66, IP68, IP69 ಮತ್ತು IP69K ರೇಟಿಂಗ್‌ಗಳೊಂದಿಗೆ ಧೂಳು ಮತ್ತು ನೀರಿನ ವಿರುದ್ಧ ಉತ್ತಮ ರಕ್ಷಣೆ ನೀಡುತ್ತದೆಬೆಲೆ ವಿಚಾರದಲ್ಲಿ, ವಿಯೆಟ್ನಾಂನಲ್ಲಿ ಈ ಫೋನ್ 8GB + 256GB ಮಾದರಿಗಾಗಿ ಸುಮಾರು ₹40,000 ಹಾಗೂ 12GB + 256GB ಮಾದರಿಗಾಗಿ ₹44,000 ಬೆಲೆ ಹೊಂದಿದೆ. ಭಾರತದಲ್ಲಿ ಇದರ ಬೆಲೆ ಕೂಡ ಇದೇ ಮಟ್ಟದಲ್ಲಿರಬಹುದು ಎಂದು ನಿರೀಕ್ಷಿಸಲಾಗಿದೆ.

ಇನ್ನು ಬ್ಲಾಕ್ ಕ್ಲೌಡ್ ಮತ್ತು ವೈಟ್ ಸ್ವಾನ್ ಬಣ್ಣಗಳಲ್ಲಿ ಈ Realme 16 5G ಫೋನ್ ಜಾಗತಿಕ ಮಾರುಕಟ್ಟೆಯಲ್ಲಿ ಲಭ್ಯವಿದೆ. ಒಟ್ಟಾರೆಯಾಗಿ, ಆಕರ್ಷಕ ಡಿಸೈನ್, ದೊಡ್ಡ ಬ್ಯಾಟರಿ ಮತ್ತು ಶಕ್ತಿಶಾಲಿ ಫೀಚರ್‌ಗಳೊಂದಿಗೆ Realme 16 5G ಮಧ್ಯಮ-ಹೈಎಂಡ್ ಸೆಗ್ಮೆಂಟ್‌ನಲ್ಲಿ ಗಮನಾರ್ಹ ಸ್ಪರ್ಧೆ ನೀಡುತ್ತಿದೆ. ಇದೀಗ ಈ ಫೋನ್ ಭಾರತದ ಮಾರುಕಟ್ಟೆಗೆ ಬರುವ ಸಾಧತೆ ಇರುವರಿಂದ ಅಧಿಕೃತ ಘೋಷಣೆಗೆ ತಂತ್ರಜ್ಞಾನ ಪ್ರಿಯರು ಕಾತರದಿಂದ ಕಾಯುತ್ತಿದ್ದಾರೆ. ನೀವು ಕೂಡ iPhone Air ಮಾದರಿಯಂತೆ ಕಾಣುವ Realme 16 5G ಪೋನ್ ಆಗಮನಕ್ಕೆ ಕಾಯುತ್ತಿದ್ದೀರಾ? ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.

Best Mobiles in India

English summary
Realme is expected to launch the Realme 16 5G in India soon, featuring a sleek design inspired by the iPhone Air. The smartphone, already unveiled in select global markets, is likely to arrive with similar specifications and could debut alongside or after the Realme 16T.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+