ಭಾರತದಲ್ಲಿ Realme 16 Pro ಸರಣಿಯ ನಿರೀಕ್ಷಿತ ಬೆಲೆ ವಿವರಗಳು ಬಹಿರಂಗ!
ಜನವರಿ 6 ರಂದು ಭಾರತದಲ್ಲಿ realme 16 Pro ಸರಣಿ ಬಿಡುಗಡೆಯಾಗುವುದು ಈಗಾಗಲೇ ಅಧಿಕೃತವಾಗಿದೆ. ಈ ಸರಣಿಯಲ್ಲಿ realme 16 Pro ಮತ್ತು realme 16 Pro + ಎರಡು ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗುತ್ತಿದ್ದು, ದೇಶದ ಟೆಕ್ ವಲಯದಲ್ಲಿ ಈಗಾಗಲೇ ಸಾಕಷ್ಟು ಕುತೂಹಲ ಮೂಡಿಸಿದೆ. ಇದೀಗ ಬಿಡುಗಡೆಗೂ ಮುನ್ನವೇ ಆನ್‌ಲೈನ್‌ನಲ್ಲಿ ಲೀಕ್ ಆದ ಬೆಲೆ ಮಾಹಿತಿಗಳು, ಈ ಬಾರಿ realme ತನ್ನ Pro ಮತ್ತು Pro+ ಮಾದರಿಗಳ ನಡುವೆ ಸ್ಪಷ್ಟವಾದ ವ್ಯತ್ಯಾಸವನ್ನು ಇರಿಸಲು ತಯಾರಾಗಿದೆ ಎಂಬ ಸೂಚನೆ ನೀಡುತ್ತಿವೆ.
ಹೌದು, ಟಿಪ್‌ಸ್ಟರ್ ಡೆಬಯಾನ್ ರಾಯ್ (ಗ್ಯಾಜೆಟ್ಸ್‌ಡೇಟಾ) ಪ್ರಕಾರ, realme 16 Pro ಸ್ಮಾರ್ಟ್‌ಫೋನ್ ಭಾರತದ ಮಾರುಕಟ್ಟೆಯಲ್ಲಿ ಸುಮಾರು ₹25,000 ರಿಂದ ₹30,000 ದರದೊಳಗೆ ಲಭ್ಯವಾಗುವ ಸಾಧ್ಯತೆ ಇದೆ. ಇದರ ಮೂಲ ವೇರಿಯಂಟ್‌ನಲ್ಲಿ 8GB RAM ಮತ್ತು 128GB ಇಂಟರ್ನಲ್ ಸ್ಟೋರೇಜ್ ಇರಲಿದೆ ಎಂದು ಹೇಳಲಾಗುತ್ತಿದೆ. ಈ ಬೆಲೆ ಶ್ರೇಣಿಯಲ್ಲಿ, ಉತ್ತಮ ಕ್ಯಾಮೆರಾ ಸಾಮರ್ಥ್ಯ ಮತ್ತು ಆಧುನಿಕ ವಿನ್ಯಾಸದೊಂದಿಗೆ realme 16 Pro ಮಧ್ಯಮ ದರ್ಜೆಯ ಬಳಕೆದಾರರಿಗೆ ಆಕರ್ಷಕ ಆಯ್ಕೆಯಾಗುವ ನಿರೀಕ್ಷೆ ಇದೆ.
ಇನ್ನು realme 16 Pro+ ಮಾದರಿಯನ್ನು ಕಂಪನಿ ಇನ್ನಷ್ಟು ಮೇಲಿನ ವಿಭಾಗದಲ್ಲಿ ಸ್ಥಾನಗೊಳಿಸಲು ಮುಂದಾಗಿದೆ. ಈ ಫೋನ್‌ನ ನಿರೀಕ್ಷಿತ ಬೆಲೆ ₹35,000 ರಿಂದ ₹40,000 ನಡುವಿರಬಹುದು. ಆರಂಭಿಕ ಕಾನ್ಫಿಗರೇಶನ್ ಇಲ್ಲಿಯೂ 8GB RAM ಮತ್ತು 128GB ಸ್ಟೋರೇಜ್ ಆಗಿರಲಿದೆ. ಈ ದರದಲ್ಲಿ Pro+ ಮಾದರಿ ಉತ್ತಮ ಕ್ಯಾಮೆರಾ ವೈವಿಧ್ಯ, ಹೆಚ್ಚು ಶಕ್ತಿಶಾಲಿ ಚಿಪ್‌ಸೆಟ್ ಮತ್ತು ಒಟ್ಟಾರೆ ಪ್ರೀಮಿಯಂ ಅನುಭವವನ್ನು ನೀಡಲಿದೆ ಎಂಬ ನಿರೀಕ್ಷೆ ಗ್ರಾಹಕರಲ್ಲಿ ಇದೆ. ಒಟ್ಟಾರೆಯಾಗಿ ಇದು ಮಧ್ಯಮ ಮತ್ತು ಪ್ರೀಮಿಯಂ ಮಿಡ್-ರೇಂಜ್ ಗ್ರಾಹಕರನ್ನು ಪ್ರತ್ಯೇಕವಾಗಿ ಗುರಿಯಾಗಿಟ್ಟುಕೊಂಡ ತಂತ್ರವಾಗಿ ಕಾಣಿಸುತ್ತದೆ.
realme 16 Pro ಸರಣಿ: ಪ್ರಮುಖ ವೈಶಿಷ್ಟ್ಯಗಳು ಬಹಿರಂಗ!
ವೈಶಿಷ್ಟ್ಯಗಳ ವಿಚಾರಕ್ಕೆ ಬಂದರೆ, realme ಈಗಾಗಲೇ 16 Pro ಸರಣಿಯ ಕೆಲವು ಪ್ರಮುಖ ಅಂಶಗಳನ್ನು ದೃಢಪಡಿಸಿದೆ. ಎರಡೂ ಫೋನ್‌ಗಳಲ್ಲಿ 200MP ಮುಖ್ಯ ಕ್ಯಾಮೆರಾ ಇರಲಿದೆ. ಈ ಬಾರಿ ಕಂಪನಿ ಪೋರ್ಟ್ರೇಟ್ ಫೋಟೋಗ್ರಫಿಗೆ ವಿಶೇಷ ಆದ್ಯತೆ ನೀಡಿದ್ದು, ವಿವಿಧ ಬೆಳಕಿನ ಪರಿಸ್ಥಿತಿಗಳಲ್ಲೂ ನೈಸರ್ಗಿಕವಾಗಿ ಕಾಣುವ ಚಿತ್ರಗಳನ್ನು ನೀಡುವುದೇ ಮುಖ್ಯ ಗುರಿಯಾಗಿದೆ. ಇದು ಸೋಷಿಯಲ್ ಮೀಡಿಯಾ ಬಳಕೆದಾರರು ಮತ್ತು ಕ್ಯಾಮೆರಾ ಪ್ರಿಯರಿಗೆ ವಿಶೇಷವಾಗಿ ಉಪಯುಕ್ತವಾಗಬಹುದು.

ಡಿಸೈನ್ ವಿಷಯದಲ್ಲೂ realme ಹೊಸ ದಾರಿಯನ್ನು ಹಿಡಿದಿದೆ. ಪ್ರಸಿದ್ಧ ಇಂಡಸ್ಟ್ರಿಯಲ್ ಡಿಸೈನರ್ ನಾಓಟೊ ಫುಕಸಾವಾ ಅವರ ಸಹಯೋಗದಲ್ಲಿ ರೂಪುಗೊಂಡ ಈ ಸರಣಿಯ ಫೋನ್‌ಗಳು, ಬಯೋ-ಬೇಸ್‌ಡ್ ಸಿಲಿಕೋನ್ ಮೆಟೀರಿಯಲ್ ಬಳಸಿಕೊಂಡು ತಯಾರಾಗಿವೆ. ಮೃದುವಾದ ವಕ್ರತೆಗಳು ಮತ್ತು ಹಿಡಿತಕ್ಕೆ ಅನುಕೂಲಕರವಾದ ವಿನ್ಯಾಸ, ದಿನನಿತ್ಯದ ಬಳಕೆಯಲ್ಲಿ ಆರಾಮದ ಅನುಭವ ನೀಡುವಂತೆ ಮಾಡಲಾಗಿದೆ. ಆಕರ್ಷಕ ಫಿನಿಶ್‌ಗಿಂತಲೂ ಬಳಕೆದಾರ ಅನುಭವಕ್ಕೆ ಹೆಚ್ಚಿನ ಒತ್ತು ನೀಡಿರುವುದು ಇಲ್ಲಿ ಗಮನಾರ್ಹ.
ಕ್ಯಾಮೆರಾ ತಂತ್ರಜ್ಞಾನದಲ್ಲಿ realme ಹೊಸ LumaColor IMAGE ಸಿಸ್ಟಂ ಅನ್ನು ಪರಿಚಯಿಸುತ್ತಿದೆ. ಈ ಸಿಸ್ಟಂ ಬಣ್ಣಗಳ ನಿಖರತೆಯನ್ನು ಹೆಚ್ಚಿಸಿ, ಅತಿಯಾದ ಪ್ರೊಸೆಸಿಂಗ್ ಇಲ್ಲದೆ ಸಮತೋಲನದ ಮತ್ತು ನೈಸರ್ಗಿಕ ಚಿತ್ರಗಳನ್ನು ನೀಡಲು ಸಹಾಯ ಮಾಡುತ್ತದೆ ಎಂದು ಕಂಪನಿ ತಿಳಿಸಿದೆ. ಬಣ್ಣಗಳ ಆಯ್ಕೆಯಲ್ಲೂ realme 16 Pro ಸರಣಿಯು Master Gold, Master Grey, Camellia Pink ಮತ್ತು Orchid Purple ಸೇರಿದಂತೆ ನೈಸರ್ಗಿಕ ಪ್ರೇರಣೆಯಿಂದ ರೂಪುಗೊಂಡ ಬಣ್ಣಗಳಲ್ಲಿ ಲಭ್ಯವಾಗಲಿದೆ.
ಒಟ್ಟಾರೆಯಾಗಿ, ಬೆಲೆ, ಕ್ಯಾಮೆರಾ ನವೀನತೆ ಮತ್ತು ವಿಶಿಷ್ಟ ವಿನ್ಯಾಸದ ಸಂಯೋಜನೆಯೊಂದಿಗೆ realme 16 Pro ಸರಣಿ ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಗಮನ ಸೆಳೆಯುವ ಎಲ್ಲಾ ಲಕ್ಷಣಗಳನ್ನು ಹೊಂದಿದೆ. ಈ ಕುರಿತಂತೆ ಜನವರಿ 6 ರಂದು ನಮ್ಮೆಲ್ಲಾ ಪ್ರಶ್ನೆಗಳಿಗೂ ಸಂಪೂರ್ಣ ಉತ್ತರ ದೊರೆಯಲಿದೆ.


Click it and Unblock the Notifications








