Home
ಮೊಬೈಲ್

ಭಾರತಕ್ಕೆ Realme 16 Pro ಸರಣಿ ಎಂಟ್ರಿ: ಬೆಲೆ ಮತ್ತು ಫೀಚರ್ಸ್ ನೋಡಿ!

ಭಾರತೀಯ ಸ್ಮಾರ್ಟ್‌ಫೋನ್ ಪ್ರಿಯರು ಬಹುನಿರೀಕ್ಷೆಯಿಂದ ಎದುರುನೋಡುತ್ತಿದ್ದ Realme 16 Pro ಸರಣಿಯು ಇಂದು (ಜ.6, ಮಂಗಳವಾರ) ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆಯಾಗಿದೆ. ನಿರೀಕ್ಷೆಯಂತೆಯೇ, ಈ ಸರಣಿಯಲ್ಲಿ Realme 16 Pro 5G ಮತ್ತು Realme 16 Pro+ 5G ಎಂಬ ಎರಡು ಸ್ಮಾರ್ಟ್‌ಫೋನ್‌ಗಳು ಪರಿಚಯಗೊಂಡಿದ್ದು, ದೇಶದಲ್ಲಿ ಮಧ್ಯಮ-ಪ್ರೀಮಿಯಂ ವಿಭಾಗವನ್ನು ಗುರಿಯಾಗಿಸಿಕೊಂಡು ಬಂದಿವೆ. ಹಾಗಾದರೆ, ಹೊಸ Realme 16 Pro 5G ಮತ್ತು Realme 16 Pro+ 5G ಫೋನ್‌ಗಳು ಹೇಗಿವೆ?, ಬೆಲೆಗಳು ಎಷ್ಟು ಎಂಬ ಸಂಪೂರ್ಣ ಮಾಹಿತಿಯನ್ನು ನೋಡೋಣ ಬನ್ನಿ.

ಭಾರತದಲ್ಲಿ ಬೆಲೆ ಮತ್ತು ಲಭ್ಯತೆ
Realme 16 Pro 5G ಫೋನ್‌ನ ಬೆಲೆ 8GB RAM + 128GB ಸ್ಟೋರೇಜ್ ರೂಪಾಂತರಕ್ಕೆ ₹31,999 ರಿಂದ ಆರಂಭವಾಗುತ್ತದೆ. 8GB + 256GB ಮಾದರಿಯ ಬೆಲೆ ₹33,999 ಆಗಿದ್ದು, 12GB RAM + 256GB ಸ್ಟೋರೇಜ್ ಹೊಂದಿರುವ ಟಾಪ್ ವೇರಿಯಂಟ್‌ಗೆ ₹36,999 ನಿಗದಿಯಾಗಿದೆ. ಆಯ್ದ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳ ಮೂಲಕ ಖರೀದಿಸಿದರೆ ₹3,000 ತಕ್ಷಣದ ರಿಯಾಯಿತಿ ಕೂಡ ಲಭ್ಯವಿದೆ.

ಭಾರತಕ್ಕೆ Realme 16 Pro ಸರಣಿ ಎಂಟ್ರಿ: ಬೆಲೆ ಮತ್ತು ಫೀಚರ್ಸ್ ನೋಡಿ!

ಇನ್ನೊಂದೆಡೆ, Realme 16 Pro+ 5G ಫೋನ್‌ 8GB + 128GB ರೂಪಾಂತರಕ್ಕೆ ₹39,999 ದರದಲ್ಲಿದ್ದು, 8GB + 256GB ಮಾದರಿ ₹41,999ಕ್ಕೆ ಸಿಗಲಿದೆ. 12GB RAM ಮತ್ತು 256GB ಸ್ಟೋರೇಜ್ ಹೊಂದಿರುವ ಟಾಪ್ ವೇರಿಯಂಟ್ ಬೆಲೆ ₹44,999 ಆಗಿದೆ. ಈ ಫೋನ್ ಮೇಲೆ ಆಯ್ದ ಕಾರ್ಡ್‌ಗಳಿಗೆ ₹4,000 ತಕ್ಷಣದ ಡಿಸ್ಕೌಂಟ್ ನೀಡಲಾಗುತ್ತಿದೆ. ಎರಡೂ ಫೋನ್‌ಗಳು ಜನವರಿ 9 ರಿಂದ ಮಾರಾಟಕ್ಕೆ ಬರಲಿವೆ.

Realme 16 Pro 5G ಫೋನ್‌ Master Gold, Pebble Grey ಮತ್ತು ಭಾರತಕ್ಕೆ ವಿಶೇಷವಾದ Orchid Purple ಬಣ್ಣಗಳಲ್ಲಿ ಲಭ್ಯವಾಗಲಿದೆ. Realme 16 Pro+ 5G ಫೋನ್‌ Master Gold, Master Grey ಹಾಗೂ ಭಾರತಕ್ಕೆ ಮಾತ್ರ ಲಭ್ಯವಿರುವ Camellia Pink ಬಣ್ಣಗಳಲ್ಲಿ ಮಾರಾಟವಾಗಲಿದೆ.

Realme 16 Pro 5G ಮತ್ತು Realme 16 Pro+ 5G: ಪ್ರಮುಖ ವೈಶಿಷ್ಟ್ಯಗಳು
ಡಿಸ್‌ಪ್ಲೇ ವೈಶಿಷ್ಟ್ಯಗಳು
Realme 16 Pro+ 5G ನಲ್ಲಿ 6.8 ಇಂಚಿನ ದೊಡ್ಡ AMOLED ಡಿಸ್ಪ್ಲೇ ನೀಡಲಾಗಿದ್ದು, 144Hz ರಿಫ್ರೆಶ್ ರೇಟ್, 240Hz ಟಚ್ ಸ್ಯಾಂಪ್ಲಿಂಗ್ ರೇಟ್ ಮತ್ತು 6,500 ನಿಟ್ಸ್ ಪೀಕ್ ಬ್ರೈಟ್‌ನೆಸ್ ಬೆಂಬಲವಿದೆ. ಇದು 100% DCI-P3 ಕಲರ್ ಗ್ಯಾಮಟ್ ಮತ್ತು 1.07 ಬಿಲಿಯನ್ ಬಣ್ಣಗಳನ್ನು ತೋರಿಸುವ ಸಾಮರ್ಥ್ಯ ಹೊಂದಿದೆ Realme 16 Pro 5G ಫೋನ್‌ನಲ್ಲಿ ಸ್ವಲ್ಪ ಚಿಕ್ಕದಾದ 6.78 ಇಂಚಿನ AMOLED ಡಿಸ್ಪ್ಲೇ ಇದ್ದು, 144Hz ರಿಫ್ರೆಶ್ ರೇಟ್ ಮತ್ತು 1,400 ನಿಟ್ಸ್ ಪೀಕ್ ಬ್ರೈಟ್‌ನೆಸ್‌ನ್ನು ನೀಡುತ್ತದೆ.

ಭಾರತಕ್ಕೆ Realme 16 Pro ಸರಣಿ ಎಂಟ್ರಿ: ಬೆಲೆ ಮತ್ತು ಫೀಚರ್ಸ್ ನೋಡಿ!

ಪ್ರೊಸೆಸರ್ ಮತ್ತು ಕಾರ್ಯಕ್ಷಮತೆ
Realme 16 Pro+ 5G ಫೋನ್‌ನಲ್ಲಿ Qualcomm Snapdragon 7 Gen 4 (4nm) ಪ್ರೊಸೆಸರ್ ಬಳಸಲಾಗಿದ್ದು, ಇದು 2.8GHz ಗರಿಷ್ಠ ಕ್ಲಾಕ್ ಸ್ಪೀಡ್‌ನ್ನು ಒದಗಿಸುತ್ತದೆ. ಇದರೊಂದಿಗೆ Adreno 722 GPU ಕೂಡ ಇದೆ. Realme 16 Pro 5G ಫೋನ್‌ನಲ್ಲಿ MediaTek Dimensity 7300 Max 5G ಚಿಪ್‌ಸೆಟ್ ಹಾಗೂ Mali G615 GPU ನೀಡಲಾಗಿದೆ. ಸಾಫ್‌ವೇರ್ ವಿಭಾಗದಲ್ಲಿ, ಈ ಎರಡೂ ಸ್ಮಾರ್ಟ್‌ಫೋನ್‌ಗಳು Android 16 ಆಧಾರಿತ Realme UI 7.0 ಮೇಲೆ ಕಾರ್ಯನಿರ್ವಹಿಸುತ್ತವೆ.

ಕ್ಯಾಮೆರಾ ಸಾಮರ್ಥ್ಯ
ಈ Realme 16 Pro ಸರಣಿಯ ಪ್ರಮುಖ ಹೈಲೈಟ್ ಎಂದರೆ 200 ಮೆಗಾಪಿಕ್ಸೆಲ್ ಪ್ರೈಮರಿ ರಿಯರ್ ಕ್ಯಾಮೆರಾ. Pro ಮಾದರಿಯಲ್ಲಿ 8MP ಅಲ್ಟ್ರಾ ವೈಡ್ ಕ್ಯಾಮೆರಾ ಇದ್ದರೆ, Pro+ ಮಾದರಿಯಲ್ಲಿ 50MP ಅಲ್ಟ್ರಾ ವೈಡ್ ಕ್ಯಾಮೆರಾ ನೀಡಲಾಗಿದೆ. ಸೆಲ್ಫಿ ಮತ್ತು ವಿಡಿಯೋ ಕಾಲ್‌ಗಳಿಗಾಗಿ ಎರಡೂ ಫೋನ್‌ಗಳಲ್ಲಿ 50MP ಫ್ರಂಟ್ ಕ್ಯಾಮೆರಾ ಇದೆ. Pro+ ಫೋನ್‌ 4K ವೀಡಿಯೊವನ್ನು 60fps ನಲ್ಲಿ ರೆಕಾರ್ಡ್ ಮಾಡುವ ಸಾಮರ್ಥ್ಯವನ್ನೂ ಹೊಂದಿದೆ.

ಬ್ಯಾಟರಿ ಸಾಮರ್ಥ್ಯ ಮತ್ತು ರಕ್ಷಣೆ
Realme 16 Pro 5G ಮತ್ತು Realme 16 Pro+ 5G ಎರಡೂ ಸ್ಮಾರ್ಟ್‌ಫೋನ್‌ಗಳು 7,000mAh ದೊಡ್ಡ Titan ಬ್ಯಾಟರಿಯನ್ನು ಹೊಂದಿದ್ದು, 80W ಫಾಸ್ಟ್ ಚಾರ್ಜಿಂಗ್ ಬೆಂಬಲ ನೀಡುತ್ತವೆ. 5G, Wi-Fi 6, Bluetooth 5.4 ಮತ್ತು USB Type-C ಸೇರಿದಂತೆ ಆಧುನಿಕ ಕನೆಕ್ಟಿವಿಟಿ ಆಯ್ಕೆಗಳು ಕೂಡ ಲಭ್ಯವಿವೆ. ಇನ್ನು ಈ ಎರಡೂ ಫೋನ್‌ಗಳು IP66, IP68, IP69 ಮತ್ತು IP69K ರೇಟಿಂಗ್‌ಗಳೊಂದಿಗೆ ಧೂಳು ಮತ್ತು ನೀರಿಗೆ ಹೆಚ್ಚಿನ ರಕ್ಷಣೆ ನೀಡುತ್ತವೆ.

Best Mobiles in India

English summary
Realme has launched the Realme 16 Pro 5G and Realme 16 Pro+ 5G in India, targeting the mid-premium segment with powerful performance, advanced cameras, premium design, and full 5G support.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+