BIS ಸೈಟ್‌ನಲ್ಲಿ Realme 16T 5G ಲಿಸ್ಟ್: ಭಾರತದಲ್ಲಿ ಬಿಡುಗಡೆ ಸಮೀಪ!
ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ Realme ಕಂಪನಿಯು ಶೀಘ್ರದಲ್ಲೇ Realme 16T 5G ಮತ್ತು Realme P4R 5G ಎಂಬ ಎರಡು ಹೊಸ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ. ಈಗಾಗಲೇ ಈ ಎರಡು ಸ್ಮಾರ್ಟ್‌ಫೋನ್‌ಗಳ ಕುರಿತು ಹಲವಾರು ವದಂತಿಯ ಸುದ್ದಿಗಳು ಹರಿದಾಡಿವೆ. ಇದೀಗ ಹೊಸ ಬೆಳವಣಿಗೆಯಾಗಿ, Realme 16T 5G ಫೋನ್‌ನ ಮಾದರಿ ಸಂಖ್ಯೆಯು ಈಗ ಭಾರತೀಯ ಪ್ರಮಾಣೀಕರಣ (Bureau of Indian Standards (BIS) ತಾಣದಲ್ಲಿ ಕಾಣಿಸಿಕೊಂಡಿದೆ. !
ಹೌದು, BIS ವೆಬ್‌ಸೈಟ್‌ನಲ್ಲಿ RMX5268 ಎಂಬ ಮಾದರಿ ಸಂಖ್ಯೆಯ Realme ಸ್ಮಾರ್ಟ್‌ಫೋನ್ ಕಾಣಿಸಿಕೊಂಡಿದೆ. ಈ ಮಾದರಿ ಸಂಖ್ಯೆಯು Realme 16T 5G ಗೆ ಸಂಬಂಧಿಸಿದೆ ಎಂದು ಹಿಂದಿನ ಲೀಕ್‌ಗಳಲ್ಲಿ ಹೇಳಲಾಗಿತ್ತು. BIS ಪಟ್ಟಿಯಲ್ಲಿ ಫೋನ್‌ನ ಸ್ಪೆಸಿಫಿಕೇಶನ್‌ಗಳು ಅಥವಾ ಫೀಚರ್‌ಗಳ ಬಗ್ಗೆ ಯಾವುದೇ ವಿವರಗಳನ್ನು ನೀಡಲಾಗಿಲ್ಲ. ಆದಾಗ್ಯೂ, ಪ್ರಮಾಣೀಕರಣ ಪ್ರಕ್ರಿಯೆ ಪೂರ್ಣಗೊಂಡಿರುವುದರಿಂದ ಈ ಫೋನ್ ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.
ಲೀಕ್‌ಗಳ ಪ್ರಕಾರ, Realme 16T 5G ಮೂರು ವಿಭಿನ್ನ RAM ಮತ್ತು ಸ್ಟೋರೇಜ್ ಆಯ್ಕೆಗಳಲ್ಲಿ ಲಭ್ಯವಾಗುವ ನಿರೀಕ್ಷೆಯಿದೆ. ಇದರಲ್ಲಿ 6GB RAM + 128GB ಸ್ಟೋರೇಜ್, 8GB RAM + 128GB ಸ್ಟೋರೇಜ್, ಮತ್ತು 8GB RAM + 256GB ಸ್ಟೋರೇಜ್ ವೇರಿಯಂಟ್‌ಗಳು ಸೇರಬಹುದು. ಬಣ್ಣ ಆಯ್ಕೆಗಳಾಗಿ Aurora Green, Starlight Black, ಮತ್ತು Starlight Red ಎಂಬ ಆಕರ್ಷಕ ಫಿನಿಷ್‌ಗಳು ಲಭ್ಯವಾಗಬಹುದು ಎಂದು ವರದಿಗಳು ಸೂಚಿಸುತ್ತವೆ. ಆದರೆ, ಫೋನ್‌ನ ಇತರ ತಾಂತ್ರಿಕ ವಿವರಗಳು ಇನ್ನೂ ಬಹಿರಂಗವಾಗಿಲ್ಲ.

Realme 15T 5G : ಸ್ವಲ್ಪ ಹೆಚ್ಚು ಅಪ್‌ಡೇಟ್ ಸಾಧ್ಯತೆ
ನಾವು ಗಮನಿಸುವುದಾದರೆ, ಇದಕ್ಕೂ ಮುನ್ನ ಬಿಡುಗಡೆಯಾಗಿರುವ ಹಿಂದಿನ Realme 15T 5G ಮಾದರಿಯು ಭಾರತದಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದಿದೆ. ಈ ಫೋನ್ 8GB + 128GB, 8GB + 256GB, ಮತ್ತು 12GB + 256GB ವೇರಿಯಂಟ್‌ಗಳಲ್ಲಿ ಲಭ್ಯವಿದೆ. ಇದರಲ್ಲಿ 6.57 ಇಂಚಿನ ಫುಲ್-HD+ AMOLED ಡಿಸ್ಪ್ಲೇ, ಮತ್ತು MediaTek Dimensity 6400 Max ಪ್ರೊಸೆಸರ್ ನೀಡಲಾಗಿದೆ. ಜೊತೆಗೆ, 7,000mAh ಸಾಮರ್ಥ್ಯದ ದೊಡ್ಡ ಬ್ಯಾಟರಿ ಹೊಂದಿದ್ದು, 60W SuperVOOC ಫಾಸ್ಟ್ ಚಾರ್ಜಿಂಗ್ ಹಾಗೂ 10W ರಿವರ್ಸ್ ಚಾರ್ಜಿಂಗ್ ಬೆಂಬಲವನ್ನೂ ಒದಗಿಸುತ್ತದೆ.
ಫೋಟೋಗ್ರಫಿ ವಿಭಾಗದಲ್ಲಿ Realme 15T 5G ಫೋನ್ 50 ಮೆಗಾಪಿಕ್ಸೆಲ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಮತ್ತು 50 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ. ಜೊತೆಗೆ, ಹೆಚ್ಚಿನ ಬಳಕೆಯ ಸಮಯದಲ್ಲಿ ಫೋನ್ ತಾಪಮಾನ ನಿಯಂತ್ರಣಕ್ಕಾಗಿ 6,050 ಚದರ ಮಿಮೀ VC ಕೂಲಿಂಗ್ ಸಿಸ್ಟಮ್ ಹಾಗೂ 13,774 ಚದರ ಮಿಮೀ ಗ್ರಾಫೈಟ್ ಶೀಟ್ ವ್ಯವಸ್ಥೆಯನ್ನು ಒಳಗೊಂಡಿದೆ. ಉತ್ಪಾದಕತೆ ಹಾಗೂ AI ಆಧಾರಿತ ಹಲವು ಫೀಚರ್‌ಗಳನ್ನೂ ಈ ಫೋನ್ ನೀಡುತ್ತದೆ. ಹಾಗಾಗಿ, ಇದರ ಮುಂದಿನ ತಲೆಮಾರಿನನ Realme 16T 5G ಫೋನ್‌ನಲ್ಲಿ ಸ್ವಲ್ಪ ಹೆಚ್ಚಿನ ಅಪ್‌ಡೇಟ್‌ಗಳನ್ನು ನಿರೀಕ್ಷಿಸಬಹುದು.
Realme P4R 5G: ಬಿಡುಗಡೆಗೆ ಹತ್ತಿರ?
Realme 16T 5G ಜೊತೆಗೆ ಚರ್ಚೆಗೆ ಗ್ರಾಸವಾಗಿರುವ ಮತ್ತೊಂದು ಫೋನ್ ಎಂದರೆ Realme P4R 5G. ಈ ಸ್ಮಾರ್ಟ್‌ಫೋನ್ ಕೂಡ ಹಲವು RAM ಮತ್ತು ಸ್ಟೋರೇಜ್ ಆಯ್ಕೆಗಳಲ್ಲಿ ಬಿಡುಗಡೆಯಾಗಬಹುದು ಎಂದು ವರದಿಗಳು ಹೇಳುತ್ತವೆ. ಅದರಲ್ಲಿ 4GB + 128GB, 6GB + 128GB, ಮತ್ತು 6GB + 256GB ವೇರಿಯಂಟ್‌ಗಳು ಇರಬಹುದೆಂದು ನಿರೀಕ್ಷಿಸಲಾಗಿದೆ. ಬಣ್ಣ ಆಯ್ಕೆಗಳಾಗಿ Lavender Glare, Silver Glare, ಮತ್ತು Titanium Glare ಫಿನಿಷ್‌ಗಳು ಲಭ್ಯವಾಗಬಹುದು. ಹಾಗೂ, ಇದು ಬಜೆಟ್ ಬೆಲೆಯಲ್ಲಿ ಬರಬಹುದು ಎಂದು ವರದಿಗಳು ಹೇಳಿವೆ.
ಒಟ್ಟಿನಲ್ಲಿ, Realme 16T 5G BIS ಪ್ರಮಾಣೀಕರಣ ತಾಣದಲ್ಲಿ ಕಾಣಿಸಿಕೊಂಡಿರುವುದು Realme ಕಂಪನಿಯುಶೀಘ್ರದಲ್ಲೇ ಭಾರತದಲ್ಲಿ ಹೊಸ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಲು ಸಜ್ಜಾಗುತ್ತಿದೆ ಎಂಬ ಸೂಚನೆಯನ್ನು ನೀಡುತ್ತದೆ. ಮುಂದಿನ ಕೆಲವು ವಾರಗಳಲ್ಲಿ ಕಂಪನಿ ಅಧಿಕೃತವಾಗಿ ಲಾಂಚ್ ದಿನಾಂಕ ಮತ್ತು ಸಂಪೂರ್ಣ ಸ್ಪೆಸಿಫಿಕೇಶನ್‌ಗಳನ್ನು ಪ್ರಕಟಿಸುವ ಸಾಧ್ಯತೆ ಇದೆ. ಹೊಸ 5G ಫೋನ್ ಖರೀದಿಸಲು ಯೋಚಿಸುತ್ತಿರುವ ಬಳಕೆದಾರರಿಗೆ Realmeನ ಈ ಸಾಧನಗಳು ಮತ್ತೊಂದು ಆಕರ್ಷಕ ಆಯ್ಕೆಯಾಗುವ ಸಾಧ್ಯತೆ ಇದೆ.


Click it and Unblock the Notifications








