ಶಿಯೋಮಿ ಫೋನ್ ಕೊಳ್ಳುವ ಪ್ಲಾನ್ ಇದ್ರೆ ಮುಂದಕ್ಕೆ ಹಾಕಿ: ಬರುತ್ತಿದೆ ಬೆಸ್ಟ್ ಫೋನ್..!
ರಿಯಲ್ ಮಿ 1 ಸ್ಮಾರ್ಟ್‌ಫೋನ್ ಮೂಲಕ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದ ಸದ್ದು ಮಾಡಿದ್ದ ಒಪ್ಪೋ ಸಬ್ ಬ್ರಾಂಡ್ ರಿಯಲ್ ಮಿ, ಈಗ ಮತ್ತೊಂದು ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಲು ಮುಂದಾಗಿದೆ. ಈಗಾಗಲೇ ಶಿಯೋಮಿ ಆವರಿಸಿಕೊಂಡಿರುವ ಮಾರುಕಟ್ಟೆಯನ್ನು ಕಸಿದುಕೊಳ್ಳಲು ಬರುತ್ತಿರುವ ರಿಯಲ್ ಮಿ 2 ಸ್ಮಾರ್ಟ್‌ಫೋನ್ ಫ್ಲಿಪ್‌ಕಾರ್ಟ್ ಎಕ್ಸ್‌ಕ್ಲೂಸಿವ್ ಆಗಿ ಸೇಲ್ ಆಗಲಿದೆ.

ಶಿಯೋಮಿ ಸ್ಮಾರ್ಟ್‌ಫೋನ್‌ಗಳಿಗೆ ಸೆಡ್ಡು ಹೊಡೆಯುವ ಸಲುವಾಗಿಯೇ ರಿಯಲ್ ಮಿ 2 ಸ್ಮಾರ್ಟ್‌ಪೋನ್ ತನ್ನ ವಿಶೇಷತೆಗಳಿಂದಲೇ ಹೆಚ್ಚಿನ ಬೇಡಿಕೆಯನ್ನು ಸೃಷ್ಟಿಸಿಕೊಳ್ಳಲಿದೆ. ಈ ಹಿಂದೆ ರಿಯಲ್ ಮಿ 1 ಸ್ಮಾರ್ಟ್‌ಫೋನ್ ಅಮೆಜಾನ್ ಎಕ್ಸ್‌ಕ್ಲೂಸಿವ್ ಆಗಿ ಕಾಣಿಸಿಕೊಂಡಿತ್ತು ಮತ್ತು ಬಿಸಿ ದೋಸೆಯಂತೆ ಎಲ್ಲಾ ಸೇಲ್‌ನಲ್ಲಿ ಈ ಸ್ಮಾರ್ಟ್‌ಫೋನ್ ಕ್ಷಣಗಳಲ್ಲೇ ಖಾಲಿಯಾಗಿತ್ತು. ಈ ಹಿನ್ನಲೆಯಲ್ಲಿ ಫ್ಲಿಪ್‌ಕಾರ್ಟ್ ರಿಯಲ್ ಮಿ 2 ಸ್ಮಾರ್ಟ್‌ಫೋನ್ ಅನ್ನು ತನ್ನ ತಾಣದಲ್ಲಿ ಮಾರಾಟ ಮಾಡಲು ಮುಂದಾಗಿದೆ.

ಆಗಸ್ಟ್ 28ಕ್ಕೆ ಲಾಂಚ್:
ರಿಯಲ್ ಮಿ 2 ಸ್ಮಾರ್ಟ್‌ಫೋನ್ ಫ್ಲಿಪ್‌ಕಾರ್ಟ್‌ನಲ್ಲಿ ಮಾರಾಟವಾಗಲಿದ್ದು, ಆಗಸ್ಟ್ 28ಕ್ಕೆ ಲಾಂಚ್ ಆಗಲಿದೆ ಎನ್ನುವ ಮಾಹಿತಿಯನ್ನು ಫ್ಲಿಪ್‌ಕಾರ್ಟ್ ಬಿಟ್ಟುಕೊಟ್ಟಿದೆ. ಈಗಾಗಲೇ ರಿಯಲ್ ಮಿ 1 ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಹಿಟ್ ಆಗಿರುವ ಹಿನ್ನಲೆಯಲ್ಲಿ ಈ ಹೊಸ ಸ್ಮಾರ್ಟ್‌ಫೋನ್ ಮೇಲೆ ನಿರೀಕ್ಷೆಗಳು ಹೆಚ್ಚಾಗಿದೆ.

ಬೆಲೆ ರೂ.10000ಕ್ಕಿಂತಕೂ ಕಡಿಮೆ:
ನೋಚ್ ಡಿಸ್‌ಪ್ಲೇ ಸೇರಿದಂತೆ ವಿಶೇಷ ವಿನ್ಯಾಸದೊಂದಿಗೆ ಬೊಂಬಾಟ್ ಆಯ್ಕೆಗಳನ್ನು ಹೊಂದಿರಲಿರುವ ರಿಯಲ್ ಮಿ 2 ಸ್ಮಾರ್ಟ್‌ಫೋನ್, ಶಿಯೋಮಿ ಫೋನ್‌ಗಳಿಗೆ ಸೆಡ್ಡು ಹೊಡೆಯುವ ಸಲುವಾಗಿ ರೂ.10000ದ ಒಳಗೆ ಮಾರಾಟವಾಗಲಿದೆ ಎನ್ನುವ ಸುದ್ದಿಯೂ ಮಾರುಕಟ್ಟೆಯಲ್ಲಿ ಹರಿದಾಡುತ್ತಿದೆ.

ಫೋಟೋ ಲೀಕ್ ಆಗಿದೆ
ರಿಯಲ್ ಮಿ 2 ಸ್ಮಾರ್ಟ್‌ಫೋನ್ ಕುರಿತ ಫೋಟೋವೊಂದು ಲೀಕ್ ಆಗಿದೆ, ತನ್ನ ವಿನ್ಯಾಸದಿಂದಲೇ ಸದ್ದು ಮಾಡುತ್ತಿರುವ ರಿಯಲ್ ಮಿ 2, ಶೀಘ್ರವೇ ಭಾರತೀಯ ಮಾರುಕಟ್ಟೆಯಲ್ಲಿ ತನ್ನದೇ ಹೊಸ ಅಧ್ಯಾಯವನ್ನು ಆರಂಭಿಸಿದರೂ ಆಶ್ಚರ್ಯಪಡಬೇಕಾಗಿಲ್ಲ. ಈ ಸ್ಮಾರ್ಟ್‌ಫೋನ್ ಬಿಡುಗಡೆ ಆಗುತ್ತಿರುವುದಕ್ಕೆ ಶಿಯೋಮಿ ಸೇರಿದಂತೆ ಹಲವು ಕಂಪನಿಗಳು ಬೆದರುತ್ತಿವೆ ಎನ್ನಲಾಗಿದೆ.

ನೋಚ್ ಡಿಸ್‌ಪ್ಲೇ:
ಮಾರುಕಟ್ಟೆಯಲ್ಲಿ ಹೊಸ ಟ್ರೆಂಡ್ ಹುಟ್ಟಿಹಾಕಿರುವ ನೋಚ್ ಡಿಸೈನ್ ಡಿಸ್‌ಪ್ಲೇಯನ್ನು ರಿಯಲ್ ಮಿ 2 ಸ್ಮಾರ್ಟ್‌ಫೋನಿನಲ್ಲಿ ಕಾಣಬಹುದಾಗಿದೆ. ಲೀಕ್ ಆಗಿರುವ ಮಾಹಿತಿಯ ಪ್ರಕಾರ ಇದು 6.23 ಇಂಚಿನದಾಗಿದ್ದು, 19:9 ಅನುಪಾತದಿಂದ ಕೂಡಿದೆ. ಇದಲ್ಲದೇ ದೊಡ್ಡ ಡಿಸ್‌ಪ್ಲೇಯಾಗಿರುವ ಕಾರಣದಿಂದಾಗಿ ವಿಡಿಯೋ ನೋಡುವ ಮತ್ತು ಗೇಮಿಂಗ್ ಅನುಭವನ್ನು ಉತ್ತಮ ಪಡಿಸಲಾಗಿದೆ.

ಡ್ಯುಯಲ್ ಕ್ಯಾಮೆರಾ ಸಾಧ್ಯತೆ:
ರಿಯಲ್ ಮಿ 2 ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ನೀವು ಡ್ಯುಯಲ್ ಕ್ಯಾಮೆರಾವನ್ನು ನೀಡುವ ಸಾಧ್ಯತೆ ಇದ್ದು, ಇದೇ ಸ್ಮಾರ್ಟ್‌ಫೋನ್ ಬೇಡಿಕೆಯ ಮೇಲೆ ಹೆಚ್ಚಿನ ಪರಿಣಾವನ್ನು ಬೀರಲಿದೆ ಎನ್ನಲಾಗಿದೆ. 16 + 2 MP ಕ್ಯಾಮೆರಾ ಸೆಟಪ್ ಅನ್ನು ರಿಯಲ್ ಮಿ 2 ಸ್ಮಾರ್ಟ್‌ಫೋನಿನಲ್ಲಿ ಅಳವಡಿಸುವ ಮಾತು ಕೇಳಿಬಂದಿದೆ.

ಮೂರು ಆವೃತ್ತಿ:
ರಿಯಲ್ ಮಿ 2 ಸ್ಮಾರ್ಟ್‌ಫೋನ್ ಮೂರು ಮಾದರಿಯಲ್ಲಿ ಕಾಣಿಸಿಕೊಳ್ಳಲಿದೆ ಎನ್ನಲಾಗಿದೆ. ಈ ಹಿಂದಿನ ಫೋನ್ ಸಹ ಮಾರುಕಟ್ಟೆಯಲ್ಲಿ ಮೂರು ಆವೃತ್ತಿಯಲ್ಲಿ ದೊರೆಯುತ್ತಿದ್ದ ಕಾರಣಕ್ಕಾಗಿಯೇ ಹೆಚ್ಚಿನ ಬೇಡಿಕೆಯನ್ನು ಸೃಷ್ಠಿಸಿಕೊಂಡಿತ್ತು. ಈ ಹಿನ್ನಲೆಯಲ್ಲಿ ರಿಯಲ್ ಮಿ 2 ಸ್ಮಾರ್ಟ್‌ಫೋನ್ ರೂ.10000ಕ್ಕೆ ಆರಂಭಿಕ ಆವೃತ್ತಿಯೂ ದೊರೆಯಲಿದೆ ಎನ್ನಲಾಗಿದೆ.


Click it and Unblock the Notifications








