ಈ ಸ್ಮಾರ್ಟ್‌ಫೋನ್ ಶಿಯೋಮಿ ದಾಖಲೆ ಅಳಿಸುತ್ತೇ ಎನ್ನುವ ಮಾತು ಸತ್ಯ ಆಯ್ತು..!
ಭಾರತೀಯ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್ ಮಾರಾಟದಲ್ಲಿ ಸಾಕಷ್ಟು ದೊಡ್ಡ ಸದ್ದು ಮಾಡುತ್ತಿರುವ ರಿಯಲ್ ಮಿ ಸ್ಮಾರ್ಟ್‌ಫೋನ್ ಶಿಯೋಮಿ ದಾಖಲೆಯನ್ನು ಅಳಿಸಲಿದೆ ಎನ್ನುವುದಕ್ಕೆ ಸಾಕ್ಷಿಯೂ ದೊರೆತಿದೆ. ಮಾರುಕಟ್ಟೆಯಲ್ಲಿ ಕ್ಷಣ ಮಾತ್ರದಲ್ಲಿ ಸ್ಮಾರ್ಟ್‌ಫೋನ್ ಮಾರಾಟ ಮಾಡುತ್ತಿದ್ದ ಶಿಯೋಮಿ ದಾಖಲೆಯನ್ನು ಅಳಿಸಿ, ರಿಯಲ್ ಮಿ 2 ಕ್ಷಣ ಮಾತ್ರದಲ್ಲಿ ಮಾರಾಟವಾಗುವ ಮೂಲಕ ಹೊಸ ದಾಖಲೆಯನ್ನು ನಿರ್ಮಿಸಿದೆ ಎನ್ನಲಾಗಿದೆ.

ಇಂದು ಮಧ್ಯಾಹ್ನ 12 ಗಂಟೆಗೆ ಫ್ಲಿಪ್‌ಕಾರ್ಟ್‌ನಲ್ಲಿ ಫ್ಲಾಷ್ ಸೇಲ್‌ನಲ್ಲಿ ಕಾಣಿಸಿಕೊಂಡ ನೋಚ್ ಡಿಸ್‌ಪ್ಲೇ. ಬಿಗ್ ಬ್ಯಾಟರಿ, ಡ್ಯುಯಲ್ VoLTE ಸೇರಿದಂತೆ ಸಾಕಷ್ಟು ಹೊಸ ಆಯ್ಕೆಗಳನ್ನು ಹೊಂದಿರುವ ರಿಯಲ್ ಮಿ 2 ಸ್ಮಾರ್ಟ್‌ಫೋನ್ ಎರಡು ಮಾದರಿಯೂ ಕ್ಷಣದಲ್ಲಿ ಸೇಲ್ ಆಗಿದೆ ಎನ್ನಲಾಗಿದೆ. ಮೊದಲ ಸೇಲ್‌ನಲ್ಲಿಯೇ ಈ ಸ್ಮಾರ್ಟ್‌ಫೋನ್ ಖರೀದಿ ಮಾಡಬೇಕು ಎನ್ನುವವರಿಗೆ ಕೊಂಚ ನಿರಾಸೆಯೂ ಆಗಿದೆ ಎನ್ನಲಾಗಿದೆ.

2 ನಿಮಿಷದಲ್ಲಿ ಸೇಲ್:
ರಿಯಲ್ ಮಿ 2 ಸ್ಮಾರ್ಟ್‌ಫೋನ್ 3 GB RAM ಮತ್ತು 32 GB ಇಂಟರ್ನಲ್ ಮೆಮೊರಿ ಆವೃತ್ತಿ ಎರಡು ಬಣ್ಣದಲ್ಲಿ ಹಾಗೂ 4 GB RAM ಮತ್ತು 64 GB ಇಂಟರ್ನಲ್ ಮೆಮೊರಿ ಆವೃತ್ತಿ ಎರಡು ಮಾದರಿಯಲ್ಲಿ ದೊರೆಯುತ್ತಿತು. ಒಟ್ಟು ನಾಲ್ಕು ಮಾದರಿಯಲ್ಲಿ ಕಾಣಿಸಿಕೊಂಡಿದ್ದ ಸ್ಮಾರ್ಟ್‌ಪೋನ್‌ಗಳು ಫ್ಲಿಪ್‌ಕಾರ್ಟ್‌ನಲ್ಲಿ 2 ನಿಮಿಷದಲ್ಲಿ ಸೋಲ್ಡ್ ಔಟ್ ಆಗಿದೆ.

ಮುಂದಿನ ಸೇಲ್:
ರಿಯಲ್ ಮಿ 2 ಸ್ಮಾರ್ಟ್‌ಫೋನ್ ಮೊದಲ ಸೇಲ್‌ನಲ್ಲಿ ಸೋಲ್ಡ್ ಔಟ್ ಆಗಿದ್ದು, ಈ ಹಿನ್ನಲೆಯಲ್ಲಿ ಮತ್ತೊಂದು ಸೇಲ್‌ನಲ್ಲಿ ಈ ಸ್ಮಾರ್ಟ್‌ಫೋನ್ ಕಾಣಿಸಿಕೊಳ್ಳಲಿದೆ. ಸೆಪ್ಟೆಂಬರ್ 11 ರಂದು ಮಧ್ಯಾಹ್ನ 12ಕ್ಕೆ ಫ್ಲಾಷ್ ಸೇಲ್ ಆರಂಭವಾಗಲಿದೆ.

ಬೆಲೆಗಳು:
ರಿಯಲ್ ಮಿ 2 ಸ್ಮಾರ್ಟ್‌ಫೋನ್ 3 GB RAM ಮತ್ತು 32 GB ಇಂಟರ್ನಲ್ ಮೆಮೊರಿ ಆವೃತ್ತಿ ರೂ.8990ಕ್ಕೆ ಮಾರಾಟವಾಗಲಿದ್ದು, 4 GB RAM ಮತ್ತು 64 GB ಇಂಟರ್ನಲ್ ಮೆಮೊರಿ ಆವೃತ್ತಿ ರೂ.10,990ಕ್ಕೆ ದೊರೆಯಲಿದೆ.

ರಿಯಲ್ ಮಿ 2 ವಿಶೇಷತೆ:
ರಿಯಲ್ ಮಿ 2 ಸ್ಮಾರ್ಟ್‌ಫೊನಿನಲ್ಲಿ ಸ್ನಾಪ್‌ಡ್ರಾಗನ್ 450 ಪ್ರೋಸೆಸರ್ ಅನ್ನು ಕಾಣಬಹುದಾಗಿದೆ. ಇದಲ್ಲದೇ ಆಡಿನೋ 506 GPU ಅವನ್ನು ಅಳವಡಿಸಲಾಗಿದೆ. ಇದರೊಂದಿಗೆ 256 GB ವರೆಗೂ ಮೆಮೊರಿಯನ್ನು ವಿಸ್ತರಿಸಿಕೊಳ್ಳುವ ಅವಕಾಶವನ್ನು ಮಾಡಿಕೊಡಲಾಗಿದೆ.

ಆಂಡ್ರಾಯ್ಡ್ 8.1:
ರಿಯಲ್ ಮಿ 2 ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 8.1 ನಲ್ಲಿ ಕಾರ್ಯನಿರ್ವಹಿಸಲಿದ್ದು, ಇದರೊಂದಿಗೆ ಕಲರ್ OS 5.1 ಅನ್ನು ಕಾಣಬಹುದಾಗಿದೆ. ಇದಲ್ಲದೇ ಇದರಲ್ಲಿ 6.2 ಇಂಚಿನ ಡಿಸ್‌ಪ್ಲೇಯನ್ನು ಅಳವಡಿಸಲಾಗಿದ್ದು, ನೋಚ್ ಡಿಸ್‌ಪ್ಲೇಯನ್ನು ನೋಡಬಹುದಾಗಿದೆ. ಅಲ್ಲದೇ ಇದು 19:9 ಅನುಪಾತದಿಂದ ಕೂಡಿದೆ.

ಡ್ಯುಯಲ್ ಕ್ಯಾಮೆರಾ:
ರಿಯಲ್ ಮಿ 2 ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ 13 MP + 2 MP ಡ್ಯುಯಲ್ ಕ್ಯಾಮೆರಾವನ್ನು ಕಾಣಬಹುದಾಗಿದ್ದು, ಇದೇ ಮಾದರಿಯಲ್ಲಿ ಮುಂಭಾಗದಲ್ಲಿ 8 MP ಸಿಂಗಲ್ ಕ್ಯಾಮೆರಾವನ್ನು ನೋಡಬಹುದಾಗಿದೆ. ಅಲ್ಲದೇ 4230mAh ಬ್ಯಾಟರಿಯನ್ನು ಇದರಲ್ಲಿ ಅಳವಡಿಸಲಾಗಿದೆ. ಹಿಂಭಾಗದಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಸಹ ಇದೆ.


Click it and Unblock the Notifications




