Home
ಮೊಬೈಲ್

8 GB RAM ರಿಯಲ್ ಮಿ 2 ಪ್ರೋ ಲಾಂಚ್: ಬೆಲೆ ಕೇಳಿ ಬುಕ್‌ ಮಾಡಕ್ಕೆ ಕ್ಯೂ ನಿಂತಿದ್ದಾರೆ...!

ಭಾರತೀಯ ಮಾರುಕಟ್ಟೆಯಲ್ಲಿ ರಿಯಲ್ ಮಿ 2 ಪ್ರೋ ಸ್ಮಾರ್ಟ್‌ಫೋನ್ ಲಾಂಚ್ ಆಗಿದ್ದು, ಇದರ ವಿಶೇಷತೆಗಳನ್ನು ಕೇಳಿದರೆ ಮೊದಲ ಸೇಲ್‌ನಲ್ಲಿಯೇ ಈ ಸ್ಮಾರ್ಟ್‌ಫೋನ್ ಹೊಸದೊಂದು ದಾಖಲೆಯನ್ನು ನಿರ್ಮಿಸಲಿದೆ ಎನ್ನಲಾಗಿದೆ. ಶಿಯೋಮಿ ಸೇರಿದಂತೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಎಲ್ಲಾ ಸ್ಮಾರ್ಟ್‌ಫೋನ್‌ ಕಂಪನಿಗಳು ಲಾಂಚ್ ಮಾಡಿರುವ ಮಧ್ಯಮ ಸರಣಿಯ ಸ್ಮಾರ್ಟ್‌ಫೋನ್‌ಗಳಿಗೆ ಇದು ಸೆಡ್ಡು ಹೊಡೆಯಲಿದೆ. ಇದರಲ್ಲಿರುವ ವಿಶೇಷತೆಗಳು ಮಾರುಕಟ್ಟೆಯಲ್ಲಿ ಬೇಡಿಕೆಯನ್ನು ಕ್ರಿಯೇಟ್ ಮಾಡಲಿದೆ.

ರಿಯಲ್ ಮಿ 2 ಪ್ರೋ ಲಾಂಚ್: ಬೆಲೆ ಕೇಳಿ ಬುಕ್‌ ಮಾಡಕ್ಕೆ ಕ್ಯೂ ನಿಂತಿದ್ದಾರೆ...!

ರಿಯಲ್ ಮಿ ಕಂಪನಿ ಈಗಾಗಲೇ ಮಾರುಕಟ್ಟೆಯಲ್ಲಿ ರಿಯಲ್ ಮಿ 2 ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಹೊಸ ಮಾದರಿಯ ದಾಖಲೆಯನ್ನು ನಿರ್ಮಾಣ ಮಾಡಿದ್ದು, ಈ ಹಿನ್ನಲೆಯಲ್ಲಿ ರಿಯಲ್ ಮಿ 2 ಪ್ರೋ ಸ್ಮಾರ್ಟ್‌ಫೋನ್ ಕುರಿತಂತೆ ಸಾಕಷ್ಟು ಕುತೂಹಲವು ನಿರ್ಮಾಣವಾಗಿದೆ. ಈ ಸ್ಮಾರ್ಟ್‌ಫೋನ್ ಫ್ಲಿಪ್‌ಕಾರ್ಟ್‌ನಲ್ಲಿ ಎಕ್ಸ್‌ಕ್ಲೂಸಿವ್ ಆಗಿ ಸೇಲ್‌ ಆಗಲಿದೆ. ಈ ಹಿನ್ನಲೆಯಲ್ಲಿ ರಿಯಲ್ ಮಿ 2 ಪ್ರೋ ಕುರಿತ ಸಂಪೂರ್ಣ ಮಾಹಿತಿಯೂ ಮುಂದಿದೆ.

ವಿನ್ಯಾಸ:

ವಿನ್ಯಾಸ:

ರಿಯಲ್ ಮಿ 2 ಪ್ರೋ ಸ್ಮಾರ್ಟ್‌ಫೋನ್‌ ಬಾಡಿಯನ್ನು ಪಾಲಿಕಾರ್ನೋನಿಕ್ ರಿಸೈನ್ ನಿಂದ ಮಾಡಲಾಗಿದ್ದು, ಹಿಂಭಾಗದಲ್ಲಿ ಗ್ಲಾಸ್ ಡಿಸೈನ್ ಅನ್ನು ಹೊಂದಿದೆ. ಇದು ಬ್ಲಾಕ್ ಸಿ, ಬ್ಲೂ ಓಷಿಯನ್, ಐಸ್ ಲೈಕ್ ಬಣ್ಣಗಳಲ್ಲಿ ಮಾರಾಟವಾಗಲಿದೆ. ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಮುಂಭಾಗದ ಮಧ್ಯ ಭಾಗದಲ್ಲಿ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ ಎನ್ನಲಾಗಿದೆ.

AI ಪ್ರೋಸೆಸರ್:

AI ಪ್ರೋಸೆಸರ್:

ರಿಯಲ್ ಮಿ 2 ಪ್ರೋ ಸ್ಮಾರ್ಟ್‌ಫೋನ್‌ ವಿಶೇಷತೆಗಳಲ್ಲಿ ಇದು ಒಂದು ಎನ್ನಲಾಗಿದ್ದು, ಮಾರುಕಟ್ಟೆಯಲ್ಲಿ ಹೊಸದಾದ ಪ್ರೋಸೆಸರ್ ಇದು ಎನ್ನಲಾಗಿದೆ. ರಿಯಲ್ ಮಿ 2 ಪ್ರೋ ಸ್ಮಾರ್ಟ್‌ಫೋನಿನಲ್ಲಿ ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 660 ಪ್ರೋಸೆಸರ್ ಅನ್ನು ಅಳವಡಿಸಲಾಗಿದ್ದು, ಇದು ಕೃತಕ ಬುದ್ದಿಮತ್ತೆಯನ್ನು ಹೊಂದಿದೆ. ಇದರೊಂದಿಗೆ ಆಡ್ರಿನೋ 512 GPUವನ್ನು ಕಾಣಬಹುದಾಗಿದೆ. ಇದು ಮಧ್ಯಮ ಸರಣಿಯಲ್ಲಿ ಬೆಸ್ಟ್‌ ಪ್ರೋಸೆಸರ್ ಎನ್ನಿಸಿಕೊಳ್ಳಲಿದೆ.

ಡಿಸ್‌ಪ್ಲೇ:

ಡಿಸ್‌ಪ್ಲೇ:

ರಿಯಲ್ ಮಿ 2 ಪ್ರೋ ಸ್ಮಾರ್ಟ್ ಫೋನ್ 6.3 ಇಂಚಿನ 2340 x 1080 p FHD+ ಗುಣಮಟ್ಟದ 19.5:9 ಅನುಪಾತನದ ಡಿಸ್ ಪ್ಲೇಯನ್ನು ಅಳವಡಿಸಲಾಗಿದೆ. ಇದರಲ್ಲಿ ಹೊಸ ಮಾದರಿಯ ವಾಟರ್ ಡ್ರಾಪ್ ನೋಚ್ ಡಿಸ್ ಪ್ಲೇ ಹೊಂದಿದೆ. ಅಲ್ಲದೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಪ್ರೋಟೆಕ್ಷನ್ ಹೊಂದಿದೆ. ಇದು ವಿಡಿಯೋ ನೋಡುವ ಅನುಭವವು ಉತ್ತಮ ಪಡಿಸಲಿದೆ. ಇದರಲ್ಲಿ ಕಲರ್ OS ಮತ್ತು ಆಂಡ್ರಾಯ್ಡ್ 8.1 ಓರಿಯೋವನ್ನು ಕಾಣಬಹುದಾಗಿದೆ. ಆಂಡ್ರಾಯ್ಡ್ ಪೈ ಅಪ್‌ಡೇಟ್ ದೊರೆಯಲಿದೆ.

 ಮೂರು ಆವೃತ್ತಿ:

ಮೂರು ಆವೃತ್ತಿ:

ರಿಯಲ್ ಮಿ 2 ಪ್ರೋ ಸ್ಮಾರ್ಟ್ ಫೋನ್ ಒಟ್ಟು ಮೂರು ಆವೃತ್ತಿಯಲ್ಲಿ ಕಾಣಿಸಿಕೊಳ್ಳಲಿದೆ. 4 GB / 6 GB / 8 GB RAM ಮತ್ತು 64 GB / 128 GB ಇಂಟರ್ನಲ್ ಮೆಮೊರಿಯೊಂದಿಗೆ ದೊರೆಯುತ್ತಿದೆ ಎನ್ನಲಾಗಿದೆ. ಇಲ್ಲದೇ ರಿಯಲ್ ಮಿ 2 ಪ್ರೋ ಸ್ಮಾರ್ಟ್‌ಫೋನಿನಲ್ಲಿ ಮೈಕ್ರೋ SD ಕಾರ್ಡ್ ಹಾಕಿಕೊಳ್ಳುವ ಮೂಲಕ 256 GB ವರೆಗೂ ಮೆಮೊರಿಯನ್ನು ವಿಸ್ತರಿಸಿಕೊಳ್ಳಬಹುದಾಗಿದೆ.

ಕ್ಯಾಮೆರಾ:

ಕ್ಯಾಮೆರಾ:

ರಿಯಲ್ ಮಿ 2 ಪ್ರೋ ಸ್ಮಾರ್ಟ್ ಫೋನ್ ಹಿಂಭಾಗದಲ್ಲಿ 16 MP Sony IMX398 ಲೆನ್ಸ್ + 2 MP ಲೆನ್ಸ್ ಅನ್ನು ಹೊಂದಿದೆ ಎನ್ನಲಾಗಿದೆ. ಇದೇ ಮಾದರಿಯಲ್ಲಿ ಮುಂಭಾಗದಲ್ಲಿ 16 MP ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದ್ದು, ಬಳಕೆದಾರರಿಗೆ ಸೆಲ್ಫಿ ಮತ್ತು ಸಾಮಾನ್ಯ ಫೋಟೋಗಳನ್ನು ತೆಗೆಯುವ ಸಲುವಾಗಿ ಕೃತಕ ಬುದ್ದಿಮತ್ತೆಯನ್ನು ಅಳವಡಿಸಲಾಗಿದೆ.

ಬ್ಯಾಟರಿ:

ಬ್ಯಾಟರಿ:

ರಿಯಲ್ ಮಿ 2 ಪ್ರೋ ಸ್ಮಾರ್ಟ್ ಫೋನ್ 3500mAh ಬ್ಯಾಟರಿಯನ್ನು ಹೊಂದಿದ್ದು. ಎರಡು ದಿನಗಳ ಕಾಲ ಬ್ಯಾಟರಲಿ ಲೈಫ್ ನೀಡಲಿದೆ. ಅಲ್ಲದೇ ಇದರಲ್ಲಿ ಪವರ್ ಸೇವಿಂಗ್ ಮೋಡ್ ಅನ್ನು ಕಾಣಬಹದಾಗಿದೆ. 4G VoLTE, ಡ್ಯುಯಲ್ ಸಿಮ್ ಕಾರ್ಡ್ ಹಾಕಿಕೊಳ್ಳುವ ಅವಕಾಶವು ಇದೆ.

ಬೆಲೆ:

ಬೆಲೆ:

ರಿಯಲ್ ಮಿ 2 ಪ್ರೋ ಸ್ಮಾರ್ಟ್ ಫೋನ್ ಒಟ್ಟು ಮೂರು ಆವೃತ್ತಿಯಲ್ಲಿ ಕಾಣಿಸಿಕೊಳ್ಳಲಿದೆ. 4 GB RAM ಮತ್ತು 64 GB ಇಂಟರ್ನಲ್ ಮೆಮೊರಿಯ ಆವೃತ್ತಿಯೂ ರೂ.13,990ಕ್ಕೆ ಹಾಗೂ 6 GB RAM ಮತ್ತು 64 GB ಇಂಟರ್ನಲ್ ಮೆಮೊರಿಯ ಆವೃತ್ತಿಯೂ ರೂ.15,990ಕ್ಕೆ ಲಭ್ಯವಿದೆ. ಟಾಪ್ ಎಂಡ್ ಆವೃತ್ತಿ 8 GB RAM ಮತ್ತು 128 GB ಇಂಟರ್ನಲ್ ಮೆಮೊರಿಯೂ ರೂ.17,990ಕ್ಕೆ ಮಾರಾಟವಾಗಲಿದೆ. ಆಕ್ಟೋಬರ್ 11ಕ್ಕೆ ಮೊದಲಿಗೆ ಮಾರಾಟದಲ್ಲಿ ದೊರೆಯಲಿದೆ.

Best Mobiles in India

English summary
Realme 2 Pro launch highlights: Price starts Rs. 13,990, to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+