ಸೆಪ್ಟೆಂಬರ್‌ನಲ್ಲಿ ಲಾಂಚ್‌ ಆಗಲಿದೆ ರಿಯಲ್‌ಮಿ 2 ಪ್ರೋ ಸ್ಮಾರ್ಟ್‌ಫೋನ್..!

By GizBot Bureau
|

ಭಾರತೀಯ ಮಾರುಕಟ್ಟೆಯಲ್ಲಿ ಒಪ್ಪೋ ಸಬ್ ಬ್ರಾಂಬ್ ರಿಯಲ್ ಮಿ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಮಾರುಕಟ್ಟೆಯ ಪಾಲನ್ನು ಹೊಂದು ಲಕ್ಷಣಗಳು ಕಾಣುತ್ತಿದೆ. ಈ ಹಿಂದೆ ರಿಯಲ್ ಮಿ 1 ಸ್ಮಾರ್ಟ್ ಫೋನ್ ಬಿಡುಗಡೆ ಮಾಡುವ ಮೂಲಕ ಸದ್ದು ಮಾಡಿದ್ದ ಕಂಪನಿಯೂ ಈ ಬಾರಿ ಮಾರುಕಟ್ಟೆಗೆ ರಿಯಲ್ ಮಿ 2 ಸ್ಮಾರ್ಟ್ ಫೋನ್ ಅನ್ನು ಪರಿಚಯ ಮಾಡಿದೆ. ನೋಚ್ ಡಿಸ್ ಪ್ಲೇ ಹಾಗೂ ಡ್ಯುಯಲ್ ಕ್ಯಾಮೆರಾ ಸೇರಿದಂತೆ ಬೆಸ್ಟ್ ಆಯ್ಕೆಗಳನ್ನು ಹೊಂದಿದ್ದು ಬೆಲೆ ಮಾತ್ರ ಭಾರೀ ಕಡಿಮೆ ಎನ್ನಲಾಗಿದೆ.

ಸೆಪ್ಟೆಂಬರ್‌ನಲ್ಲಿ ಲಾಂಚ್‌ ಆಗಲಿದೆ ರಿಯಲ್‌ಮಿ 2 ಪ್ರೋ ಸ್ಮಾರ್ಟ್‌ಫೋನ್..!

ಈಗಾಗಲೇ ರಿಯಲ್ ಮಿ 2 ಲಾಂಚ್ ಆಗಿದ್ದು, ಇದೇ ಸಂದರ್ಭದಲ್ಲಿ ರಿಯಲ್ ಮಿ ಕಂಪನಿಯೂ ಮತ್ತೊಂದು ಹೊಸ ಮಾಹಿತಿಯನ್ನು ಲೀಕ್ ಮಾಡಿದ್ದು, ಸೆಪ್ಟೆಂಬರ್ ನಲ್ಲಿ ಬಳಕೆದಾರರಿಗೆ ಮತ್ತೆರಡು ಸರ್ಪ್ರೇಸ್ ಅನ್ನು ನೀಡುವುದಾಗಿ ತಿಳಿಸಿದೆ. ಈಗಾಗಲೇ ರಿಯಲ್ ಮಿ 2 ಸ್ಮಾರ್ಟ್ ಫೋನ್ ಕುರಿತಂತೆ ಸಾಕಷ್ಟು ಚರ್ಚೆಗಳಾಗುತ್ತಿದೆ. ಇದರೊಂದಿಗೆ ಮಾರುಕಟ್ಟೆಗೆ ರಿಯಲ್ ಮಿ 2 ಪ್ರೋ ಸ್ಮಾರ್ಟ್ ಫೋನ್ ಲಾಂಚ್ ಮಾಡಬಹುದೇ ಎನ್ನುವ ವಿಷಯವು ಹರಿದಾಡುತ್ತಿದೆ.

ಸದ್ಯ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿರುವ ರಿಯಲ್ ಮಿ 2 ಸ್ಮಾರ್ಟ್ ಫೋನ್ ಗಿಂತಳೂ ಹೈ ಎಂಡ್ ಆಯ್ಕೆಗಳು ಹಾಗೂ ಹೆಚ್ಚಿನ ಪ್ರಮಾಣ RAM ನೊಂದಿಗೆ ರಿಯಲ್ ಮಿ 2 ಪ್ರೋ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಲಾಂಚ್ ಆಗಬಹುದು ಎಂದು ಲೆಕ್ಕಚಾರ ಹಾಕಲಾಗುತ್ತಿದೆ. ಒಂದು ವೇಳೆ ಇದು ಸತ್ಯವಾದರೆ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದ ಬದಲಾವಣೆಯನ್ನು ಕಾಣಬಹುದು. ಒಟ್ಟಿನಲ್ಲಿ ಮಾರುಕಟ್ಟೆಯಲ್ಲಿ ಶಿಯೋಮಿಗೆ ಸೆಡ್ಡು ಹೊಡೆಯಲಿದೆ ಎನ್ನಲಾಗಿದೆ.

ರಿಯಲ್ ಮಿ 2 ವಿಶೇಷತೆ:

ಸೆಪ್ಟೆಂಬರ್‌ನಲ್ಲಿ ಲಾಂಚ್‌ ಆಗಲಿದೆ ರಿಯಲ್‌ಮಿ 2 ಪ್ರೋ ಸ್ಮಾರ್ಟ್‌ಫೋನ್..!

ರಿಯಲ್ ಮಿ 2 ಸ್ಮಾರ್ಟ್ ಫೋನ್ 6.2 ಇಂಚಿನ HD+ ಗುಣಮಟ್ಟದ ಡಿಸ್ ಪ್ಲೇಯನ್ನು ಹೊಂದಿದೆ ಎನ್ನಲಾಗಿದೆ. ದೊಡ್ಡ ಮಟ್ಟದ ಡಿಸ್ ಪ್ಲೇ ಇದ್ದಾಗಿದ್ದು, ವಿಡಿಯೋ ನೋಡುವ ಅನುಭವು ಉತ್ತಮವಾಗಿದೆ. ಇದರಲ್ಲಿ 1.8GHz ವೇಗದ ಕ್ವಾಲ್ಕಮ್ ಸ್ನಾಪ್ ಡ್ರಾಗನ್ 450 ಪ್ರೋಸೆಸರ್ ಅನ್ನು ನೀಡಲಾಗಿದೆ. ಇದಲ್ಲದೇ ಕಲರ್ OS ಮತ್ತು ಆಂಡ್ರಾಯ್ಡ್ 8.1 ಓರಿಯೋವನ್ನು ಕಾಣಬಹುದಾಗಿದೆ.

ರಿಯಲ್ ಮಿ 2 ಸ್ಮಾರ್ಟ್ ಫೋನ್ ಎರಡು ಆವೃತ್ತಿಯಲ್ಲಿ ಕಾಣಿಸಿಕೊಂಡಿದೆ. 3 GB RAM + 32 GB ಮತ್ತು 4 GB RAM + 64 GB ಇಂಟರ್ನಲ್ ಮೆಮೊರಿಯೊಂದಿಗೆ ಮಾರಾಟವಾಗುತ್ತಿದೆ. ಕ್ರಮವಾಗಿ ರೂ.8990ಕ್ಕೆ ಮತ್ತು ರೂ.10990ಕ್ಕೆ ಲಭ್ಯವಿದೆ.

Best Mobiles in India

English summary
Realme 2 Pro may get launched in September. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X