Home
ಮೊಬೈಲ್

ಲಾಂಚ್ ಆಯ್ತು ರಿಯಲ್ ಮಿ 2: ಬೆಲೆ ಕೇಳಿದ್ರೆ ಶಿಯೋಮಿ ಕಡೆ ತಿರುಗಿಯೂ ನೋಡಲ್ಲ...!

By Srinidhi

ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಹುಟ್ಟುಹಾಕುವ ಸಲುವಾಗಿ ಒಪ್ಪೋ ಲಾಂಚ್ ಮಾಡಿದ ಸಬ್ ಬ್ರಾಂಡ್ ರಿಯಲ್ ಮಿ ಕ್ಲಿಕ್ ಆಗಿದೆ. ಈಗಾಗಲೇ ರಿಯಲ್ ಮಿ 1 ಸ್ಮಾರ್ಟ್‌ಫೋನ್ ಭಾರಿ ಪ್ರಮಾಣದಲ್ಲಿ ಬೇಡಿಕೆಯನ್ನು ಸೃಷ್ಠಿಸಿಕೊಂಡಿತ್ತು. ಇದೇ ಮಾದರಿಯಲ್ಲಿ ಮಾರುಕಟ್ಟೆಗೆ ಸದ್ಯ ರಿಯಲ್ ಮಿ 2 ಸ್ಮಾರ್ಟ್‌ಫೋನ್ ಪರಿಚಯ ಮಾಡಲಾಗಿದ್ದು, ಇನ್ನು ಮುಂದೆ ಭಾರತೀಯ ಮಾರುಕಟ್ಟೆಯಲ್ಲಿ ಶಿಯೋಮಿ ಪತನ ಶುರುವಾಗಲಿದ ಎಂಬ ಲೆಕ್ಕಚಾರ ಹಾಕಲಾಗುತ್ತಿದೆ.

ಲಾಂಚ್ ಆಯ್ತು ರಿಯಲ್ ಮಿ 2: ಬೆಲೆ ಕೇಳಿದ್ರೆ ಶಿಯೋಮಿ ಕಡೆ ತಿರುಗಿಯೂ ನೋಡಲ್ಲ...!

ತನ್ನದೇ ಅದ ವಿಶೇಷತೆಗಳಿಂದಲೇ ಸದ್ದು ಮಾಡುತ್ತಿದ್ದ ರಿಯಲ್ ಮಿ 2 ಸ್ಮಾರ್ಟ್‌ಫೋನ್ ನೋಚ್ ಡಿಸ್‌ಪ್ಲೇ. ಬಿಗ್ ಬ್ಯಾಟರಿ, ಡ್ಯುಯಲ್ VoLTE ಸೇರಿದಂತೆ ಸಾಕಷ್ಟು ಹೊಸ ಆಯ್ಕೆಗಳನ್ನು ಹೊಂದಿದೆ. ಮಾರುಕಟ್ಟೆಯಲ್ಲಿ ನೇರವಾಗಿ ಶಿಯೋಮಿ ಉತ್ಪನ್ನಗಳಿಗೆ ಸೆಡ್ಡು ಹೊಡೆಯುವ ಮಾದರಿಯಲ್ಲಿಯೇ ಇದೆ. ಇನ್ನು ಈ ಸ್ಮಾರ್ಟ್‌ಫೋನ್ ಬೆಲೆ ಕೇಳಿದವರು ಯಾರು ಶಿಯೋಮಿ ಕಡೆಗೆ ತಿರುಗಿಯೂ ನೋಡುವುದಿಲ್ಲ ಎನ್ನಲಾಗಿದೆ.

ಎರಡು ಆವೃತ್ತಿಯಲ್ಲಿ ಮಾರಾಟ:

ಎರಡು ಆವೃತ್ತಿಯಲ್ಲಿ ಮಾರಾಟ:

ರಿಯಲ್ ಮಿ 2 ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಒಟ್ಟು ಎರಡು ಆವೃತ್ತಿಯಲ್ಲಿ ಮಾರಾಟವಾಗಲಿದೆ ಎನ್ನಲಾಗಿದೆ. 3 GB RAM ಮತ್ತು 32 GB ಇಂಟರ್ನಲ್ ಮೆಮೊರಿಯ ಒಂದು ಆವೃತ್ತಿ, 4 GB RAM ಮತ್ತು 64 GB ಇಂಟರ್ನಲ್ ಮೆಮೊರಿಯ ಮತ್ತೊಂದು ಆವೃತ್ತಿಯೂ ಮಾರುಕಟ್ಟೆಗೆ ಪರಿಚಯವಾಗಲಿದೆ.

ಬೆಲೆ:

ಬೆಲೆ:

ರಿಯಲ್ ಮಿ 2 ಸ್ಮಾರ್ಟ್‌ಫೋನ್ 3 GB RAM ಮತ್ತು 32 GB ಇಂಟರ್ನಲ್ ಮೆಮೊರಿ ಆವೃತ್ತಿ ರೂ.8990ಕ್ಕೆ ಮಾರಾಟವಾಗಲಿದ್ದು, GB RAM ಮತ್ತು 64 GB ಇಂಟರ್ನಲ್ ಮೆಮೊರಿ ಆವೃತ್ತಿ ರೂ.10,990ಕ್ಕೆ ದೊರೆಯಲಿದೆ ಎನ್ನಲಾಗಿದೆ. ಈ ಸ್ಮಾರ್ಟ್‌ಫೋನ್ ಫ್ಲಿಪ್‌ಕಾರ್ಟ್‌ನಲ್ಲಿ ಮಾರಾಟವಾಗಲಿದ್ದು, ಸೆಪ್ಟೆಂಬರ್ 4 ರಂದು ಮೊದಲ ಸೇಲ್ ನಡೆಯಲಿದೆ.

ಲಾಂಚಿಂಗ್ ಆಫರ್:

ಲಾಂಚಿಂಗ್ ಆಫರ್:

ರಿಯಲ್ ಮಿ 2 ಸ್ಮಾರ್ಟ್‌ಫೋನ್ ಲಾಂಚಿಂಗ್ ಆಫರ್ ಜೋರಾಗಿದೆ. HDFC ಕಾರ್ಡುದಾರರು ರೂ.750 ಡಿಸ್ಕೌಂಟ್ ಪಡೆಯಬಹುದಾಗಿದೆ. ಅಲ್ಲದೇ ಜಿಯೋ ದಿಂದ 120 GB ಡೇಟಾ ಹಾಗೂ ರೂ.4200 ಮೌಲ್ಯದ ಲಾಭಗಳು ಲಭ್ಯವಿದೆ. ಅಲ್ಲದೇ ನೋ ಕಾಸ್ಟ್ EMI ಆಯ್ಕೆಯೂ ಇದರಲ್ಲಿದೆ.

ರಿಯಲ್ ಮಿ 2 ವಿಶೇಷತೆ:

ರಿಯಲ್ ಮಿ 2 ವಿಶೇಷತೆ:

ರಿಯಲ್ ಮಿ 2 ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 8.1 ನಲ್ಲಿ ಕಾರ್ಯನಿರ್ವಹಿಸಲಿದ್ದು, ಇದರೊಂದಿಗೆ ಕಲರ್ OS 5.1 ಅನ್ನು ಕಾಣಬಹುದಾಗಿದೆ. ಇದಲ್ಲದೇ ಇದರಲ್ಲಿ 6.2 ಇಂಚಿನ ಡಿಸ್‌ಪ್ಲೇಯನ್ನು ಅಳವಡಿಸಲಾಗಿದ್ದು, ನೋಚ್ ಡಿಸ್‌ಪ್ಲೇಯನ್ನು ನೋಡಬಹುದಾಗಿದೆ. ಅಲ್ಲದೇ ಇದು 19:9 ಅನುಪಾತದಿಂದ ಕೂಡಿದೆ.

ರಿಯಲ್ ಮಿ 2 ಪ್ರೋಸೆಸರ್:

ರಿಯಲ್ ಮಿ 2 ಪ್ರೋಸೆಸರ್:

ರಿಯಲ್ ಮಿ 2 ಸ್ಮಾರ್ಟ್‌ಫೊನಿನಲ್ಲಿ ಸ್ನಾಪ್‌ಡ್ರಾಗನ್ 450 ಪ್ರೋಸೆಸರ್ ಅನ್ನು ಕಾಣಬಹುದಾಗಿದೆ. ಇದಲ್ಲದೇ ಆಡಿನೋ 506 GPU ಅವನ್ನು ಅಳವಡಿಸಲಾಗಿದೆ. ಇದರೊಂದಿಗೆ 256 GB ವರೆಗೂ ಮೆಮೊರಿಯನ್ನು ವಿಸ್ತರಿಸಿಕೊಳ್ಳುವ ಅವಕಾಶವನ್ನು ಮಾಡಿಕೊಡಲಾಗಿದೆ.

ರಿಯಲ್ ಮಿ 2 ಕ್ಯಾಮೆರಾ:

ರಿಯಲ್ ಮಿ 2 ಕ್ಯಾಮೆರಾ:

ರಿಯಲ್ ಮಿ 2 ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ 13 MP + 2 MP ಡ್ಯುಯಲ್ ಕ್ಯಾಮೆರಾವನ್ನು ಕಾಣಬಹುದಾಗಿದ್ದು, ಇದೇ ಮಾದರಿಯಲ್ಲಿ ಮುಂಭಾಗದಲ್ಲಿ 8 MP ಸಿಂಗಲ್ ಕ್ಯಾಮೆರಾವನ್ನು ನೋಡಬಹುದಾಗಿದೆ. ಅಲ್ಲದೇ ದೊಡ್ಡದೆ ಎನ್ನುವ 4230mAh ಬ್ಯಾಟರಿಯನ್ನು ಇದರಲ್ಲಿ ಅಳವಡಿಸಲಾಗಿದೆ. ಹಿಂಭಾಗದಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಸಹ ಇದೆ.

Best Mobiles in India

English summary
Realme 2 With Display Notch, Fingerprint Sensor Launched in India. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+