''ರಿಯಲ್‌ಮಿ 3i'' ಬಿಡುಗಡೆಗೆ ಬೆದರಿದ ಶಿಯೋಮಿ!
ಚೀನಾದ ಜನಪ್ರಿಯ ಸ್ಮಾರ್ಟ್‌ಫೋನ್ ತಯಾರಕ ರಿಯಲ್‌ಮಿ ಕಂಪೆನಿಯು "ರಿಯಲ್‌ಮಿ 3i'' ಹೆಸರಿನ ಮತ್ತೊಂದು ಬಜೆಟ್ ಶ್ರೇಣಿಯ ಸ್ಮಾರ್ಟ್‌ಫೋನನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಎರಡು ಸ್ಟೋರೇಜ್ ಆಯ್ಕೆಗಳೊಂದಿಗೆ ಈ ನೂತನ ರಿಯಲ್‌ಮಿ 3i ಸ್ಮಾರ್ಟ್‌ಫೋನ್ ದೇಶದಲ್ಲಿ ಬಿಡುಗಡೆಯಾಗಿದ್ದು, ಶಕ್ತಿಯುತ ಮೀಡಿಯಾಟೆಕ್ ಹೆಲಿಯೊ P60 ಪ್ರೊಸೆಸರ್ ಮತ್ತು 4230mAh ಬ್ಯಾಟರಿಯಂತಹ ಅತ್ಯುತ್ತಮ ಫೀಚರ್ಸ್‌ಗಳನ್ನು ಹೊತ್ತು ಅತ್ಯಂತ ಕಡಿಮೆ ಬೆಲೆಗೆ ಮಾರುಕಟ್ಟೆಗೆ ಎಂಟ್ರಿ ನೀಡಿದೆ.

ಹೌದು, 3GB + 32GB ಮತ್ತು 4GB + 64GB ಸಾಮರ್ಥ್ಯದ ಎರಡು ಸ್ಟೋರೇಜ್ ಆಯ್ಕೆಗಳಲ್ಲಿ ರಿಯಲ್‌ಮಿ 3i ಸ್ಮಾರ್ಟ್‌ಫೋನ್ ಲಭ್ಯವಿದೆ. 3GB + 32GB ಮಾದರಿ ಫೋನ್ ಬೆಲೆ ಕೇವಲ 7,999 ರೂ. ಗಳಾಗಿವೆ. ಹಾಗೆಯೇ, ಇದರ 4GB + 64GB ರೂಪಾಂತರದ ಬೆಲೆ ಕೇವಲ 9,999 ರೂಗಳಾಗಿವೆ. ಮೀಡಿಯಾಟೆಕ್ ಹೆಲಿಯೊ P60 ಪ್ರೊಸೆಸರ್ ಮತ್ತು 4230mAh ಬ್ಯಾಟರಿ ಸಾಮರ್ಥ್ಯದ ಈ ಪೋನ್ ಬೆಲೆಗಳು ಶಿಯೋಮಿ ಸ್ಮಾರ್ಟ್‌ಫೋನ್‌ಗಳಿಗೆ ಸೆಡ್ಡುಹೊಡೆದಿವೆ ಎನ್ನಬಹುದು.
ಇನ್ನು ನೆನ್ನೆಯಷ್ಟೇ ಬಿಡುಗಡೆಯಾಗಿರುವ ಈ ಸ್ಮಾರ್ಟ್‌ಪೋನ್ ಇದೇ ಜುಲೈ 23 ರಂದು ಭಾರತದ ನಂ.1 ಇ ಕಾಮರ್ಸ್ ತಾಣ ಫ್ಲಿಪ್‌ಕಾರ್ಟ್‌ನಲ್ಲಿ ಮಾರಾಟಕ್ಕೆ ಬರಲಿದೆ. ಹಾಗಾದರೆ, ಅತ್ಯಂತ ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗಿರುವ ರಿಯಲ್‌ಮಿ 3i ಸ್ಮಾರ್ಟ್‌ಫೋನ್ ಹೇಗಿದೆ?, ರಿಯಲ್‌ಮಿ 3i ಸ್ಮಾರ್ಟ್‌ಫೋನ್ ಹೊಂದಿರುವ ಇತರೆ ಫೀಚರ್ಸ್ ಯಾವುವು? ಮತ್ತು ಈ ಸ್ಮಾರ್ಟ್‌ಫೋನಿನ ವಿಶೇಷತೆಗಳು ಯಾವುವು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

ಡಿಸ್‌ಪ್ಲೇ ಮತ್ತು ವಿನ್ಯಾಸ!
ನೂತನ ರಿಯಲ್‌ಮಿ 3i ಸ್ಮಾರ್ಟ್‌ಫೋನಿನಲ್ಲಿ 6.22-ಇಂಚಿನ ಎಚ್‌ಡಿ + ಡಿಸ್ಪ್ಲೇಯನ್ನು ಅಳವಡಿಸಲಾಗಿದೆ. ಮುಂಭಾಗದ ಕ್ಯಾಮೆರಾಕ್ಕಾಗಿ ವಾಟರ್-ಡ್ರಾಪ್ ನಾಚ್ ವಿನ್ಯಾಸವನ್ನು ಹೊಂದಿರುವ ಈ ಸ್ಮಾರ್ಟ್‌ಫೋನಿನ ದೇಹ ಅನುಪಾತವು 88.3 ಪರದೆಯಿಂದ ಆವೃತವಾಗಿದೆ. ಇನ್ನು ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಮತ್ತು ಫಿಂಗರ್‌ಪ್ರಿಂಟ್ ಫೀಚರ್ ಇರುವುದನ್ನು ನೋಡಬಹುದು.

ಪ್ರೊಸೆಸರ್ ಮತ್ತು RAM
3GB + 32GB ಮತ್ತು 4GB + 64GB ಸಾಮರ್ಥ್ಯದ ಎರಡು ಸ್ಟೋರೇಜ್ ಆಯ್ಕೆಗಳಲ್ಲಿ ಬಿಡುಗಡೆಯಾಗಿರುವ ರಿಯಲ್‌ಮಿ 3i ಸ್ಮಾರ್ಟ್‌ಫೋನ್, 2.0GHz ಮೀಡಿಯಾಟೆಕ್ ಹೆಲಿಯೊ P60 SoC ಪ್ರೊಸೆಸರ್‌ನಿಂದ ನಿಯಂತ್ರಿಸಲ್ಪಡುತ್ತದೆ. ಆಂಡ್ರಾಯ್ಡ್ 9 ಪೈ ಆಧರಿಸಿ ಕಲರ್‌ಓಎಸ್ 6 ನಲ್ಲಿ ಈ ಸ್ಮಾರ್ಟ್‌ಫೋನ್ ಕಾರ್ಯನಿರ್ವಹಿಸಲಿದೆ ಎಂದು ರಿಯಲ್‌ಮಿ ಕಂಪೆನಿ ತಿಳಿಸಿದೆ.

ಕ್ಯಾಮೆರಾ ಫೀಚರ್ಸ್
ರಿಯಲ್‌ಮಿ 3i ಸ್ಮಾರ್ಟ್‌ಫೋನಿನ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ನೀಡಲಾಗಿದೆ. 13MP + 2MP ಸಾಮರ್ಥ್ಯದ ಈ ಕ್ಯಾಮೆರಾವು ಇನೈಟ್ ಸ್ಕೇಪ್ 2.0 ಮತ್ತು ಕ್ರೋಮಾಬೂಸ್ಟ್‌ನಂತಹ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಸೆಲ್ಫಿ ಮತ್ತು ಫೇಸ್ ಅನ್‌ಲಾಕ್‌ಗಾಗಿ 13 ಎಂಪಿ ಎಫ್ / 2.0 ಸಾಮರ್ಥ್ಯದ ಕೃತಕ ಬುದ್ದಿಮತ್ತೆ ಕ್ಯಾಮೆರಾವನ್ನು ಹೊಂದಿದೆ.

ಬ್ಯಾಟರಿ ಮತ್ತು ಇತರೆ ಫೀಚರ್ಸ್
ರಿಯಲ್‌ಮಿ 3i ಸ್ಮಾರ್ಟ್‌ಫೋನಿನಲ್ಲಿ 4,230 mAh ಶಕ್ತಿಯ ಬ್ಯಾಟರಿಯನ್ನು ಅಳವಡಿಲಾಗಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈ-ಫೈ, ಜಿಪಿಎಸ್, ಬ್ಲೂಟೂತ್ ವಿ 4.20, ಮೈಕ್ರೋ-ಯುಎಸ್ಬಿ, 3 ಜಿ, ಮತ್ತು 4 ಜಿ ಸೇರಿವೆ (ಬ್ಯಾಂಡ್ 40 ಗೆ ಬೆಂಬಲದೊಂದಿಗೆ). ಫೋನ್‌ನಲ್ಲಿನ ಸಂವೇದಕಗಳಲ್ಲಿ ಅಕ್ಸೆಲೆರೊಮೀಟರ್, ಸಾಮೀಪ್ಯ ಸಂವೇದಕ ಮತ್ತು ಫಿಂಗರ್‌ಪ್ರಿಂಟ್ ಸಂವೇದಕ ಸೇರಿವೆ.

ಬಣ್ಣಗಳು ಮತ್ತು ಮಾರಾಟ
ರಿಯಲ್‌ಮಿ 3i ಸ್ಮಾರ್ಟ್‌ಫೋನ್ ಡೈಮಂಡ್ ಬ್ಲ್ಯಾಕ್, ಡೈಮಂಡ್ ಬ್ಲೂ ಮತ್ತು ಡೈಮಂಡ್ ರೆಡ್ ಬಣ್ಣಗಳಲ್ಲಿ ಬಿಡುಗಡೆ ಯಾಗಿದ್ದು, ಇದೇ ಜುಲೈ 23 ರಂದು ಭಾರತದ ನಂ.1 ಇ ಕಾಮರ್ಸ್ ತಾಣ ಫ್ಲಿಪ್‌ಕಾರ್ಟ್‌ನಲ್ಲಿ ಮಾರಾಟಕ್ಕೆ ಬರಲಿದೆ. ಜುಲೈ 23 ರಿಂದ ಮಧ್ಯಾಹ್ನ 12 ಗಂಟೆಗೆ ಸರಿಯಾಗಿ ಫ್ಲಿಪ್‌ಕಾರ್ಟ್ ಮತ್ತು ರಿಯಲ್‌ಮಿ ಅಧಿಕೃತ ವೆಬ್‌ಸೈಟ್‌ನಲ್ಲಿ ಮಾರಾಟವಾಗುತ್ತದೆ.


Click it and Unblock the Notifications








