Home
ಮೊಬೈಲ್

ಇಂದು 12 ಗಂಟೆಗೆ ರಿಯಲ್‌ಮಿ 3i ಮೊಟ್ಟ ಮೊದಲ ಸೇಲ್!..ಬೆಲೆ 7,999 ರೂ.!

ರಿಯಲ್‌ಮಿ ಎಕ್ಸ್ ಜೊತೆಗೆ ಭಾರತದಲ್ಲಿ ಬಿಡುಗಡೆ ಕಂಡ ಮತ್ತೊಂದು ಬಜೆಟ್ ಸ್ಮಾರ್ಟ್‌ಫೋನ್ ರಿಯಲ್‌ಮಿ 3i ಇಂದು ಮೊದಲ ಮಾರಾಟಕ್ಕೆ ಬರುತ್ತಿದೆ. ಇಂದು ಮಧ್ಯಾಹ್ನ 12 ಗಂಟೆಗೆ ಜನಪ್ರಿಯ ಇ ಕಾಮರ್ಸ್ ತಾಣ ಫ್ಲಿಪ್‌ಕಾರ್ಟ್ ಹಾಗೂ ರಿಯಲ್‌ಮಿ ಕಂಪೆನಿಯ ಅಧಿಕೃತ ವೆಬ್‌ಸೈಟ್‌ಗಳಲ್ಲಿ ಫ್ಲಾಶ್‌ಸೇಲ್‌ನಲ್ಲಿ ರಿಯಲ್‌ಮಿ 3i ಪೋನನ್ನು ಅನ್ನು ಖರೀದಿಸಬಹುದಾಗಿದೆ.

ಇಂದು 12 ಗಂಟೆಗೆ ರಿಯಲ್‌ಮಿ 3i ಮೊಟ್ಟ ಮೊದಲ ಸೇಲ್!..ಬೆಲೆ 7,999 ರೂ.!

ರಿಯಲ್‌ಮಿ 3i ಲಾಂಚ್ ಆಫರ್ ಆಗಿ ಆಕ್ಸಿಸ್ ಬ್ಯಾಂಕ್ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಬಳಕೆದಾರರು ಸ್ಮಾರ್ಟ್‌ಫೋನ್ ಖರೀದಿಸಿದರೆ ಯಾವುದೇ ವೆಚ್ಚವಿಲ್ಲದ ಇಎಂಐ ಮತ್ತು ಖರೀದಿಗೆ 5 ಪ್ರತಿಶತ ರಿಯಾಯಿತಿ ಪಡೆಯಬಹುದು. 5,300 ರೂ.ಗಳ ಮೌಲ್ಯದ ರಿಲಯನ್ಸ್ ಜಿಯೋ ಪ್ರಯೋಜನಗಳು ಮತ್ತು 1,500 ರೂ ಮೌಲ್ಯದ ಮೊಬಿಕ್ವಿಕ್ ಸೂಪರ್ ಕ್ಯಾಶ್ ಸಹ ಲಭ್ಯವಿವೆ..

ಶಕ್ತಿಯುತ ಮೀಡಿಯಾಟೆಕ್ ಹೆಲಿಯೊ P60 ಪ್ರೊಸೆಸರ್ ಮತ್ತು 4230mAh ಬ್ಯಾಟರಿಯಂತಹ ಅತ್ಯುತ್ತಮ ಫೀಚರ್ಸ್‌ಗಳನ್ನು ಹೊತ್ತು ಅತ್ಯಂತ ಕಡಿಮೆ ಬೆಲೆಗೆ ಮಾರುಕಟ್ಟೆಗೆ ಎಂಟ್ರಿ ನೀರುವ ಈ ಪೋನ್ ಶಿಯೋಮಿ ಫೋನ್‌ಗಳಿಗೆ ಸೆಡ್ಡುಹೊಡೆದಿದೆ. ಹಾಗಾದರೆ, ರಿಯಲ್‌ಮಿ 3i ಸ್ಮಾರ್ಟ್‌ಫೋನ್ ಹೇಗಿದೆ?, ಫೀಚರ್ಸ್ ಯಾವುದು ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಡಿಸ್‌ಪ್ಲೇ ಮತ್ತು ವಿನ್ಯಾಸ!

ಡಿಸ್‌ಪ್ಲೇ ಮತ್ತು ವಿನ್ಯಾಸ!

ನೂತನ ರಿಯಲ್‌ಮಿ 3i ಸ್ಮಾರ್ಟ್‌ಫೋನಿನಲ್ಲಿ 6.22-ಇಂಚಿನ ಎಚ್‌ಡಿ + ಡಿಸ್ಪ್ಲೇಯನ್ನು ಅಳವಡಿಸಲಾಗಿದೆ. ಮುಂಭಾಗದ ಕ್ಯಾಮೆರಾಕ್ಕಾಗಿ ವಾಟರ್-ಡ್ರಾಪ್ ನಾಚ್ ವಿನ್ಯಾಸವನ್ನು ಹೊಂದಿರುವ ಈ ಸ್ಮಾರ್ಟ್‌ಫೋನಿನ ದೇಹ ಅನುಪಾತವು 88.3 ಪರದೆಯಿಂದ ಆವೃತವಾಗಿದೆ. ಇನ್ನು ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಮತ್ತು ಫಿಂಗರ್‌ಪ್ರಿಂಟ್ ಫೀಚರ್ ಇರುವುದನ್ನು ನೋಡಬಹುದು.

ಪ್ರೊಸೆಸರ್ ಮತ್ತು RAM

ಪ್ರೊಸೆಸರ್ ಮತ್ತು RAM

3GB + 32GB ಮತ್ತು 4GB + 64GB ಸಾಮರ್ಥ್ಯದ ಎರಡು ಸ್ಟೋರೇಜ್ ಆಯ್ಕೆಗಳಲ್ಲಿ ಬಿಡುಗಡೆಯಾಗಿರುವ ರಿಯಲ್‌ಮಿ 3i ಸ್ಮಾರ್ಟ್‌ಫೋನ್, 2.0GHz ಮೀಡಿಯಾಟೆಕ್ ಹೆಲಿಯೊ P60 SoC ಪ್ರೊಸೆಸರ್‌ನಿಂದ ನಿಯಂತ್ರಿಸಲ್ಪಡುತ್ತದೆ. ಆಂಡ್ರಾಯ್ಡ್ 9 ಪೈ ಆಧರಿಸಿ ಕಲರ್‌ಓಎಸ್ 6 ನಲ್ಲಿ ಈ ಸ್ಮಾರ್ಟ್‌ಫೋನ್ ಕಾರ್ಯನಿರ್ವಹಿಸಲಿದೆ ಎಂದು ರಿಯಲ್‌ಮಿ ಕಂಪೆನಿ ತಿಳಿಸಿದೆ.

ಕ್ಯಾಮೆರಾ ಫೀಚರ್ಸ್

ಕ್ಯಾಮೆರಾ ಫೀಚರ್ಸ್

ರಿಯಲ್‌ಮಿ 3i ಸ್ಮಾರ್ಟ್‌ಫೋನಿನ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ನೀಡಲಾಗಿದೆ. 13MP + 2MP ಸಾಮರ್ಥ್ಯದ ಈ ಕ್ಯಾಮೆರಾವು ಇನೈಟ್ ಸ್ಕೇಪ್ 2.0 ಮತ್ತು ಕ್ರೋಮಾಬೂಸ್ಟ್‌ನಂತಹ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಸೆಲ್ಫಿ ಮತ್ತು ಫೇಸ್ ಅನ್‌ಲಾಕ್‌ಗಾಗಿ 13 ಎಂಪಿ ಎಫ್ / 2.0 ಸಾಮರ್ಥ್ಯದ ಕೃತಕ ಬುದ್ದಿಮತ್ತೆ ಕ್ಯಾಮೆರಾವನ್ನು ಹೊಂದಿದೆ.

ಬ್ಯಾಟರಿ ಮತ್ತು ಇತರೆ ಫೀಚರ್ಸ್

ಬ್ಯಾಟರಿ ಮತ್ತು ಇತರೆ ಫೀಚರ್ಸ್

ರಿಯಲ್‌ಮಿ 3i ಸ್ಮಾರ್ಟ್‌ಫೋನಿನಲ್ಲಿ 4,230 mAh ಶಕ್ತಿಯ ಬ್ಯಾಟರಿಯನ್ನು ಅಳವಡಿಲಾಗಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈ-ಫೈ, ಜಿಪಿಎಸ್, ಬ್ಲೂಟೂತ್ ವಿ 4.20, ಮೈಕ್ರೋ-ಯುಎಸ್ಬಿ, 3 ಜಿ, ಮತ್ತು 4 ಜಿ ಸೇರಿವೆ (ಬ್ಯಾಂಡ್ 40 ಗೆ ಬೆಂಬಲದೊಂದಿಗೆ). ಫೋನ್‌ನಲ್ಲಿನ ಸಂವೇದಕಗಳಲ್ಲಿ ಅಕ್ಸೆಲೆರೊಮೀಟರ್, ಸಾಮೀಪ್ಯ ಸಂವೇದಕ ಮತ್ತು ಫಿಂಗರ್‌ಪ್ರಿಂಟ್ ಸಂವೇದಕ ಸೇರಿವೆ.

ಬೆಲೆಗಳು ಮತ್ತು ಬಣ್ಣಗಳು

ಬೆಲೆಗಳು ಮತ್ತು ಬಣ್ಣಗಳು

ರಿಯಲ್‌ಮಿ 3i ಡೈಮಂಡ್ ಬ್ಲ್ಯಾಕ್, ಡೈಮಂಡ್ ಬ್ಲೂ ಮತ್ತು ಡೈಮಂಡ್ ರೆಡ್ ಬಣ್ಣಗಳಲ್ಲಿ ಬಿಡುಗಡೆ ಯಾಗಿದ್ದು, 3GB + 32GB ಮತ್ತು 4GB + 64GB ಸಾಮರ್ಥ್ಯದ ಎರಡು ಆಯ್ಕೆಗಳಲ್ಲಿ ಸ್ಮಾರ್ಟ್‌ಫೋನ್ ಲಭ್ಯವಿದೆ. 3GB + 32GB ಮಾದರಿ ಫೋನ್ ಬೆಲೆ7,999 ರೂ. ಗಳಾಗಿದ್ದರೆ, ಇದರ 4GB + 64GB ರೂಪಾಂತರದ ಬೆಲೆ ಕೇವಲ 9,999 ರೂ.ಗಳಾಗಿವೆ.

Best Mobiles in India

English summary
REALME 3I TO GO ON ITS FIRST SALE TODAY AT 12 PM: PRICE, LAUNCH OFFERS, SPECS. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+