Home
ಮೊಬೈಲ್

₹ 6,999ಕ್ಕೆ ರಿಯಲ್‌ ಮಿ C1..! ಏರ್‌ಟೆಲ್‌ನಿಂದ ₹ 2,500 ಕ್ಯಾಶ್‌ಬ್ಯಾಕ್‌..!

ಭಾರತೀಯ ಸ್ಮಾರ್ಟ್‌ಫೋನ್‌ ಲೋಕಕ್ಕೆ ಇತ್ತೀಚೆಗೆ ತಾನೇ ಕಾಲಿಟ್ಟ ರಿಯಲ್‌ ಮಿ 2 ಪ್ರೋ ಜತೆ ಲಾಂಚ್‌ ಮಾಡಿದ್ದ ರಿಯಲ್‌ ಮಿ C1 ಸ್ಮಾರ್ಟ್‌ಫೋನ್‌ಗಳು ಫ್ಲಿಪ್‌ಕಾರ್ಟ್‌ನ ಬಿಗ್‌ ಬಿಲಿಯನ್‌ ಡೇ ಸೇಲ್‌ನಲ್ಲಿ ಮೊದಲು ಮಾರಾಟವಾಗುತ್ತಿವೆ. ಅದರಲ್ಲಿಯೂ ರಿಯಲ್‌ ಮಿ C1 ಸ್ಮಾರ್ಟ್‌ಫೋನ್‌ ಕೇವಲ ₹ 6,999ಕ್ಕೆ ಮಾರಾಟವಾಗುತ್ತಿದ್ದು, ಸ್ಮಾರ್ಟ್‌ಫೋನ್‌ ಪ್ರಿಯರಿಗೆ ಅತ್ಯುತ್ತಮ ಫೀಚರ್‌ಗಳನ್ನು ಹೊಂದಿರುವ ರಿಯಲ್‌ಮಿ C1 ಅತಿ ಕಡಿಮೆ ಬೆಲೆಗೆ ನೀಡುತ್ತಿದೆ.

₹ 6,999ಕ್ಕೆ ರಿಯಲ್‌ ಮಿ C1..! ಏರ್‌ಟೆಲ್‌ನಿಂದ ₹ 2,500 ಕ್ಯಾಶ್‌ಬ್ಯಾಕ್‌..!

ಭಾರತದಲ್ಲಿ ಹಬ್ಬದ ಸೀಸನ್‌ ಆರಂಭವಾಗಿದ್ದು, ಫ್ಲಿಪ್‌ಕಾರ್ಟ್‌ನಲ್ಲಿ ನಿನ್ನೇ ಮಧ್ಯರಾತ್ರಿಯಿಂದ ಸ್ಮಾರ್ಟ್‌ಫೋನ್‌ಗಳು ಭಾರೀ ಆಫರ್‌ನಲ್ಲಿ ಮಾರಾಟವಾಗುತ್ತಿವೆ. ನಿನ್ನೇ ತಾನೇ ಪ್ರಾರಂಭವಾಗಿದ್ದ ಫ್ಲಿಪ್‌ಕಾರ್ಟ್‌ನ 5ನೇ ಆವೃತ್ತಿಯ ಬಿಗ್‌ ಬಿಲಿಯನ್‌ ಡೇ ಸೇಲ್‌ನಲ್ಲಿ ಅನೇಕ ಎಕ್ಸ್‌ಕ್ಲೂಸಿವ್‌ ಆಫರ್‌ಗಳು ಲಭ್ಯವಿದ್ದು, ಅತಿ ಕಡಿಮೆ ಬೆಲೆಯಲ್ಲಿ ಉತ್ತಮ ಫೀಚರ್‌ಗಳನ್ನು ಹೊಂದಿದೆ ಸ್ಮಾರ್ಟ್‌ಫೋನ್‌ಗಳನ್ನು ನಿಮ್ಮ ಕೈಗೆ ಪಡೆಯಬಹುದಾಗಿದೆ.

ಕೇವಲ ₹ 6,999ಕ್ಕೆ ರಿಯಲ್‌ಮಿ C1

ಕೇವಲ ₹ 6,999ಕ್ಕೆ ರಿಯಲ್‌ಮಿ C1

ರೂ.6999ಕ್ಕೆ ಮಾರಾಟವಾಗಲಿರುವ ರಿಯಲ್ ಮಿ C1 ಸ್ಮಾರ್ಟ್‌ಫೋನ್ ಫ್ಲಿಪ್‌ಕಾರ್ಟ್‌ನಲ್ಲಿ ಎಕ್ಸ್‌ಕ್ಲೂಸಿವ್ ಆಗಿ ಮಾರಾಟವಾಗುತ್ತಿದೆ. ಈ ಸ್ಮಾರ್ಟ್‌ಫೋನ್‌ ಖರೀದಿಸುವುದಾದರೆ ಗ್ರಾಹಕನಿಗೆ ನೋ ಕಾಸ್ಟ್‌ EMI, ₹ 6450ರವರೆಗೆ ಎಕ್ಸ್‌ವೆಂಜ್‌ ಆಫರ್‌, ₹ 1991ರವರೆಗೆ ವಿಶೇಷ ರಿಯಾಯಿತಿ ದೊರೆಯುತ್ತದೆ.

ಹೆಚ್‌ಡಿಎಫ್‌ಸಿ ಗ್ರಾಹಕರಿಗೆ ಹೆಚ್ಚುವರಿ ಆಫರ್‌

ಹೆಚ್‌ಡಿಎಫ್‌ಸಿ ಗ್ರಾಹಕರಿಗೆ ಹೆಚ್ಚುವರಿ ಆಫರ್‌

ರಿಯಲ್‌ಮಿ C1 ಖರೀದಿಸುವಾಗ ಹೆಚ್‌ಡಿಎಫ್‌ಸಿ ಡೆಬಿಟ್‌ ಅಥವಾ ಕ್ರೆಡಿಟ್‌ ಕಾರ್ಡ್‌ ಬಳಸಿದರೆ ಶೇ.10ರಷ್ಟು ತ್ವರಿತ ರಿಯಾಯಿತಿ ದೊರೆಯುತ್ತದೆ. ಹಾಗೂ Axis Bank Buzz Credit Card ಬಳಸಿ ಖರೀದಿಸಿದರೆ ಶೇ.5ರಷ್ಟು ರಿಯಾಯಿತಿಯನ್ನು ಪಡೆಯಬಹುದಾಗಿದ್ದು, ಭಾರೀ ರಿಯಾಯಿತಿಯೊಂದಿಗೆ ರಿಯಲ್‌ಮಿ C1 ಸ್ಮಾರ್ಟ್‌ಫೋನ್‌ನ್ನು ಖರೀದಿಸಬಹುದು.

ಏರ್‌ಟೆಲ್‌, ಜಿಯೋದಿಂದಲೂ ಆಫರ್‌

ಏರ್‌ಟೆಲ್‌, ಜಿಯೋದಿಂದಲೂ ಆಫರ್‌

ರಿಯಲ್‌ಮಿ C1 ಖರೀದಿಸಿದರೆ ಏರ್‌ಟೆಲ್‌ನಿಂದ ₹ 2,500 ಕ್ಯಾಶ್‌ಬ್ಯಾಕ್‌ ಸಿಗಲಿದ್ದು, 100GB ಹೆಚ್ಚುವರಿ ಡೇಟಾ ಮತ್ತು ₹ 2,000 ಮೌಲ್ಯದ ಮೇಕ್‌ ಮೈಟ್ರಿಪ್‌ ವೋಚರ್ ಸಿಗಲಿದೆ. ಅದಲ್ಲದೇ ಜಿಯೋ ಕೂಡ ಆಫರ್‌ ನೀಡಿದ್ದು, ₹ 4,450 ಮೌಲ್ಯದ ಸೌಲಭ್ಯಗಳನ್ನು ಪಡೆಯಬಹುದಾಗಿದೆ. ₹199 ಅಥವಾ ₹ 299 ಕನಿಷ್ಟ ರಿಚಾರ್ಜ್‌ ಮಾಡಿಸಿದರೆ 1.1TBವರೆಗೂ ಉಚಿತ ಡೇಟಾ ಸಿಗಲಿದೆ.

ರಿಯಲ್‌ ಮಿ C1 ವಿನ್ಯಾಸ

ರಿಯಲ್‌ ಮಿ C1 ವಿನ್ಯಾಸ

ರಿಯಲ್ ಮಿ C1 ಸ್ಮಾರ್ಟ್‌ಫೋನ್‌ ಓಷಿಯನ್ ಬ್ಲೂ ಮತ್ತು ಡೀಪ್ ಬ್ಲಾಕ್ ಬಣ್ಣಗಳಲ್ಲಿ ಲಭ್ಯವಾಗಲಿದೆ. ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಹೊಂದಿದ್ದು, ಮುಂಭಾಗದದಲ್ಲಿ ಐಫೋನ್ X ಮಾದರಿಯ ನೋಚ್‌ನಲ್ಲಿ ಸೆಲ್ಫಿ ಕ್ಯಾಮೆರಾ ಹೊಂದಿದ್ದು, AI ಫೇಸ್‌ ಅನ್‌ಲಾಕ್ ಫೀಚರ್‌ ಇದೆ. ಯುನಿಬಾಡಿ ಗ್ಲಾಸಿ ವಿನ್ಯಾಸ ಹೊಂದಿದ್ದು, ಬೆಜಲ್‌ ಲೆಸ್‌ ಡಿಸ್‌ಪ್ಲೇ ಹೊಂದಿದೆ.

ಡಿಸ್‌ಪ್ಲೇ

ಡಿಸ್‌ಪ್ಲೇ

ರಿಯಲ್ ಮಿ C1 ಸ್ಮಾರ್ಟ್‌ಫೋನ್‌ 6.2 ಇಂಚಿನ HD+ ಗುಣಮಟ್ಟದ 19:9 ಅನುಪಾತನದ ಡಿಸ್‌ಪ್ಲೇ ಹೊಂದಿದೆ. ಹೊಸ ಮಾದರಿಯ ಐಫೋನ್ X ಮಾದರಿಯ ನೋಚ್ ಡಿಸ್‌ಪ್ಲೇ ಹಾಗೂ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ರಕ್ಷಣೆಯನ್ನು ಹೊಂದಿದೆ. ಇದು ವಿಡಿಯೋ ನೋಡುವ ಅನುಭವವನ್ನು ಉತ್ತಮ ಪಡಿಸಲಿದೆ. ಇದು ಆಂಡ್ರಾಯ್ಡ್ 8.1 ಓರಿಯೋ ಬೆಂಬಲಿತ ColorOS 5.1 ನಿಂದ ಕಾರ್ಯನಿರ್ವಹಿಸುತ್ತಿದ್ದು, ಆಂಡ್ರಾಯ್ಡ್ 9.0 ಪೈ ಅಪ್‌ಡೇಟ್ ದೊರೆಯಲಿದೆ.

ಪ್ರೊಸೆಸರ್

ಪ್ರೊಸೆಸರ್

ರಿಯಲ್ ಮಿ C1ನಲ್ಲಿ ಒಕ್ಟಾಕೋರ್‌ನ ಕ್ವಾಲ್‌ಕಾಮ್‌ ಸ್ನಾಪ್‌ಡ್ರಾಗನ್ 450 ಪ್ರೊಸೆಸರ್ ಅಳವಡಿಸಲಾಗಿದೆ. ಆಡ್ರಿನೋ 506 GPU ಕೂಡ ಕಾಣಬಹುದಾಗಿದ್ದು, ಗೇಮಿಂಗ್‌ ಮತ್ತೀತರ ಮಲ್ಟಿಮೀಡಿಯಾ ಅನುಭವಗಳನ್ನು ಉತ್ತಮಗೊಳಿಸಿತ್ತದೆ. ರಿಯಲ್‌ಮಿ C1ನ ವೇಗ 1.8GHz ಇದ್ದು, ಇಷ್ಟು ಕಡಿಮೆ ಬೆಲೆಯಲ್ಲಿ ದೊರೆಯುವ ಬೆಸ್ಟ್‌ ಸ್ಮಾರ್ಟ್‌ಫೋನ್‌ ಆಗಿದೆ.

ಮೆಮೊರಿ

ಮೆಮೊರಿ

ರಿಯಲ್ ಮಿ C1 ಒಂದೇ ಆವೃತ್ತಿಯಲ್ಲಿ ದೊರೆಯುತ್ತಿದ್ದು, 2 GB RAM ಮತ್ತು 16 GB ಇಂಟರ್ನಲ್ ಮೆಮೊರಿಯೊಂದಿಗೆ ದೊರೆಯುತ್ತಿದೆ. ಈ ಮೆಮೊರಿಯನ್ನು ಮೈಕ್ರೋ ಎಸ್‌ಡಿ ಕಾರ್ಡ್‌ ಮೂಲಕ 256 GBವರೆಗೂ ವಿಸ್ತರಿಸಿಕೊಳ್ಳಬಹುದಾಗಿದೆ.

ಕ್ಯಾಮೆರಾ

ಕ್ಯಾಮೆರಾ

ರಿಯಲ್ ಮಿ C1ನಲ್ಲಿ ಅತಿ ಕಡಿಮೆ ಬೆಲೆಗೆ ಡ್ಯುಯಲ್‌ ಕ್ಯಾಮೆರಾ ನೀಡಿದ್ದು, ಹಿಂಭಾಗದಲ್ಲಿ 13 MP+2 MP ಲೆನ್ಸ್‌ ಅಳವಡಿಸಲಾಗಿದೆ. ಮುಂಭಾಗದಲ್ಲಿ 5 MP ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದ್ದು, ಸೆಲ್ಫಿ ಕ್ಯಾಮೆರಾ AI ಬೆಂಬಲಿತವಾಗಿದ್ದು, ಉತ್ತಮ ಫೋಟೋಗಳನ್ನು ಸೆರೆಹಿಡಿಯಬಹುದಾಗಿದೆ.

ದೀರ್ಘ ಬ್ಯಾಟರಿ

ದೀರ್ಘ ಬ್ಯಾಟರಿ

ರಿಯಲ್ ಮಿ C1 ಸ್ಮಾರ್ಟ್‌ಫೋನ್‌ 4230mAh ಬ್ಯಾಟರಿ ಹೊಂದಿದ್ದು. ಎರಡು ದಿನಗಳ ಕಾಲ ಬ್ಯಾಟರಿ ಲೈಫ್ ನೀಡುತ್ತದೆ. ಅಲ್ಲದೇ ಪವರ್ ಸೇವಿಂಗ್ ಮೋಡ್ ಇದ್ದು, ದೀರ್ಘ ಬ್ಯಾಟರಿ ಬಾಳಿಕೆಯನ್ನು ಕಾಣಬಹುದು.

Best Mobiles in India

English summary
Realme C1 to Go on Sale in India for the First Time Tonight via Flipkart. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+