Home
ಮೊಬೈಲ್

ಶಿಯೋಮಿಗೆ ಶಾಕ್: ರೂ.6999ಕ್ಕೆ ಡ್ಯುಯಲ್ ಕ್ಯಾಮೆರಾ ರಿಯಲ್ ಮಿ C1 ಸ್ಮಾರ್ಟ್‌ಫೋನ್ ಲಾಂಚ್..!

ಭಾರತೀಯ ಮಾರುಕಟ್ಟೆಯಲ್ಲಿ ರಿಯಲ್ ಮಿ 2 ಪ್ರೋ ಸ್ಮಾರ್ಟ್‌ಫೋನ್ ನೊಂದಿಗೆ ಮತ್ತೊಂದು ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್‌ವೊಂದನ್ನು ಲಾಂಚ್ ಮಾಡಿದ್ದು, ಮಾರುಕಟ್ಟೆಗೆ ಶಾಕ್ ಅನ್ನು ನೀಡಲು ಮುಂದಾಗಿದೆ. ಶಿಯೋಮಿ ಮಾರುಕಟ್ಟೆಗೆ ಲಾಂಚ್ ಮಾಡಿರುವ ಬಜೆಟ್‌ ಫೋನ್‌ಗಳಿಗೆ ಸೆಡ್ಡು ಹೊಡೆಯುವ ಮಾದರಿಯಲ್ಲಿ ರಿಯಲ್ ಮಿ C1 ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಿದೆ.

ರೂ.6999ಕ್ಕೆ ಡ್ಯುಯಲ್ ಕ್ಯಾಮೆರಾ ರಿಯಲ್ ಮಿ C1 ಸ್ಮಾರ್ಟ್‌ಫೋನ್ ಲಾಂಚ್..!

ಮಾರುಕಟ್ಟೆಯಲ್ಲಿ ರೂ.6999ಕ್ಕೆ ಲಾಂಚ್ ಆಗರುವ ರಿಯಲ್ ಮಿ C1 ಸ್ಮಾರ್ಟ್‌ಫೋನ್ ಡ್ಯುಯಲ್ ಕ್ಯಾಮೆರಾ ಸೇರಿದಂತೆ AI ಫೇಸ್‌ ಅನ್‌ಲಾಕ್ ಸೇರಿದಂತೆ ಹಲವು ಹೊಸ ಮಾದರಿಯ ಆಯ್ಕೆಗಳನ್ನು ಹೊಂದಿದೆ. ಬಜೆಟ್ ಬೆಲೆಯಲ್ಲಿ ಲಾಂಚ್ ಆಗಲಿರುವ ಸ್ಮಾರ್ಟ್‌ಫೋನ್‌ನಲ್ಲಿ ಟಾಪ್ ಎಂಡ್ ಆಯ್ಕೆಗಳನ್ನು ಇದರಲ್ಲಿ ಕಾಣಬಹುದಾಗಿದೆ.

ರಿಯಲ್ ಮಿ C1 ಸ್ಮಾರ್ಟ್‌ಫೋನ್ ಬೆಲೆ:

ರಿಯಲ್ ಮಿ C1 ಸ್ಮಾರ್ಟ್‌ಫೋನ್ ಬೆಲೆ:

ರೂ.6999ಕ್ಕೆ ಮಾರಾಟವಾಗಲಿರುವ ರಿಯಲ್ ಮಿ C1 ಸ್ಮಾರ್ಟ್‌ಫೋನ್ ಫ್ಲಿಪ್‌ಕಾರ್ಟ್‌ನಲ್ಲಿ ಎಕ್ಸ್‌ಕ್ಲೂಸಿವ್ ಆಗಿ ಸೇಲ್‌ ಆಗಲಿದೆ ಎನ್ನಲಾಗಿದೆ. ಅಕ್ಟೋಬರ್ 11 ರಂದು ಈ ಸ್ಮಾರ್ಟ್‌ಫೋನ್ ಲಾಂಚ್ ಆಗಲಿದೆ. ಇದಲ್ಲದೇ ಜಿಯೋ ರೂ.4450 ಕ್ಯಾಷ್ ಬ್ಯಾಕ್ ಅನ್ನು ನೀಡಲು ಮುಂದಾಗಿದೆ. ಇದರಿಂದಾಗಿ ಬಳಕೆದಾರರಿಗೆ ಹೆಚ್ಚಿನ ಲಾಭವಾಗಲಿದೆ.

ವಿನ್ಯಾಸ:

ವಿನ್ಯಾಸ:

ರಿಯಲ್ ಮಿ C1 ಸ್ಮಾರ್ಟ್‌ಫೋನ್‌ ಓಷಿಯನ್ ಬ್ಲೂ ಮತ್ತು ಡೀಪ್ ಬ್ಲಾಕ್ ಬಣ್ಣಗಳಲ್ಲಿ ಮಾರಾಟವಾಗಲಿದೆ. ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಮುಂಭಾಗದ ಮಧ್ಯ ಭಾಗದಲ್ಲಿ ಐಫೋನ್ X ಮಾದರಿಯಲ್ಲಿ ನೋಚ್ ನಲ್ಲಿ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ ಎನ್ನಲಾಗಿದೆ. AI ಫೇಸ್‌ ಅನ್‌ಲಾಕ್ ಇದರಲ್ಲಿ ನೋಡಬಹುದಾಗಿದೆ.

ಡಿಸ್‌ಪ್ಲೇ:

ಡಿಸ್‌ಪ್ಲೇ:

ರಿಯಲ್ ಮಿ C1 ಸ್ಮಾರ್ಟ್‌ಫೋನ್‌ 6.2 ಇಂಚಿನ HD+ ಗುಣಮಟ್ಟದ 19:9 ಅನುಪಾತನದ ಡಿಸ್ ಪ್ಲೇಯನ್ನು ಅಳವಡಿಸಲಾಗಿದೆ. ಇದರಲ್ಲಿ ಹೊಸ ಮಾದರಿಯ ಐಫೋನ್ X ಮಾದರಿಯ ನೋಚ್ ಡಿಸ್ ಪ್ಲೇ ಹೊಂದಿದೆ. ಅಲ್ಲದೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ಪ್ರೋಟೆಕ್ಷನ್ ಹೊಂದಿದೆ. ಇದು ವಿಡಿಯೋ ನೋಡುವ ಅನುಭವವು ಉತ್ತಮ ಪಡಿಸಲಿದೆ. ಇದರಲ್ಲಿ ಕಲರ್ OS ಮತ್ತು ಆಂಡ್ರಾಯ್ಡ್ 8.1 ಓರಿಯೋವನ್ನು ಕಾಣಬಹುದಾಗಿದೆ. ಆಂಡ್ರಾಯ್ಡ್ ಪೈ ಅಪ್‌ಡೇಟ್ ದೊರೆಯಲಿದೆ.

ಪ್ರೋಸೆಸರ್:

ಪ್ರೋಸೆಸರ್:

ರಿಯಲ್ ಮಿ C1 ಸ್ಮಾರ್ಟ್‌ಫೋನ್‌ ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 450 ಪ್ರೋಸೆಸರ್ ಅನ್ನು ಅಳವಡಿಸಲಾಗಿದ್ದು, ಆಡ್ರಿನೋ 506 GPUವನ್ನು ಕಾಣಬಹುದಾಗಿದೆ. ಇದು ಬಜೆಟ್ ಸರಣಿಯಲ್ಲಿ ಬೆಸ್ಟ್‌ ಪ್ರೋಸೆಸರ್ ಎನ್ನಿಸಿಕೊಳ್ಳಲಿದೆ.

ಒಂದೇ ಆವೃತ್ತಿ:

ಒಂದೇ ಆವೃತ್ತಿ:

ರಿಯಲ್ ಮಿ C1 ಸ್ಮಾರ್ಟ್‌ಫೋನ್‌ 2 GB RAM ಮತ್ತು 16 GB ಇಂಟರ್ನಲ್ ಮೆಮೊರಿಯೊಂದಿಗೆ ದೊರೆಯುತ್ತಿದೆ ಎನ್ನಲಾಗಿದೆ. ಇಲ್ಲದೇರಿಯಲ್ ಮಿ C1 ಸ್ಮಾರ್ಟ್‌ಫೋನ್‌ ಸ್ಮಾರ್ಟ್‌ಫೋನಿನಲ್ಲಿ ಮೈಕ್ರೋ SD ಕಾರ್ಡ್ ಹಾಕಿಕೊಳ್ಳುವ ಮೂಲಕ 256 GB ವರೆಗೂ ಮೆಮೊರಿಯನ್ನು ವಿಸ್ತರಿಸಿಕೊಳ್ಳಬಹುದಾಗಿದೆ.

ಕ್ಯಾಮೆರಾ:

ಕ್ಯಾಮೆರಾ:

ರಿಯಲ್ ಮಿ C1 ಸ್ಮಾರ್ಟ್‌ಫೋನ್‌ ಹಿಂಭಾಗದಲ್ಲಿ 13 MP ಲೆನ್ಸ್ + 2 MP ಲೆನ್ಸ್ ಅನ್ನು ಹೊಂದಿದೆ ಎನ್ನಲಾಗಿದೆ. ಇದೇ ಮಾದರಿಯಲ್ಲಿ ಮುಂಭಾಗದಲ್ಲಿ 5 MP ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದ್ದು, ಬಳಕೆದಾರರಿಗೆ ಸೆಲ್ಫಿ ಮತ್ತು ಸಾಮಾನ್ಯ ಫೋಟೋಗಳನ್ನು ತೆಗೆಯುವ ಸಲುವಾಗಿ ಕೃತಕ ಬುದ್ದಿಮತ್ತೆಯನ್ನು ಅಳವಡಿಸಲಾಗಿದೆ.

ಬ್ಯಾಟರಿ:

ಬ್ಯಾಟರಿ:

ರಿಯಲ್ ಮಿ C1 ಸ್ಮಾರ್ಟ್‌ಫೋನ್‌ 4230mAh ಬ್ಯಾಟರಿಯನ್ನು ಹೊಂದಿದ್ದು. ಎರಡು ದಿನಗಳ ಕಾಲ ಬ್ಯಾಟರಿ ಲೈಫ್ ನೀಡಲಿದೆ. ಅಲ್ಲದೇ ಇದರಲ್ಲಿ ಪವರ್ ಸೇವಿಂಗ್ ಮೋಡ್ ಅನ್ನು ಕಾಣಬಹದಾಗಿದೆ. 4G VoLTE, ಡ್ಯುಯಲ್ ಸಿಮ್ ಕಾರ್ಡ್ ಹಾಕಿಕೊಳ್ಳುವ ಅವಕಾಶವು ಇದೆ.

Best Mobiles in India

English summary
Realme C1 with dual cameras and AI Face Unlock launched for Rs. 6,999, to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+