Home
ಮೊಬೈಲ್

Realme: ಜೂನ್ 28ರಂದು ಬರುತ್ತೆ ಈ ಹೊಸ ಫೋನ್: 10,000ಕ್ಕಿಂತ ಕಡಿಮೆ ಬೆಲೆ?

ರಿಯಲ್‌ಮಿ (Realme) ಕಂಪನಿಯು ಟೆಕ್‌ ವಲಯದಲ್ಲಿ ಸಖತ್ ಸದ್ದು ಮಾಡುತ್ತಿದೆ. ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ ವಿಭಿನ್ನ ಶ್ರೇಣಿಯ ಫೋನ್‌ಗಳನ್ನು ಪರಿಚಯಿಸಿ ಮೊಬೈಲ್‌ ಪ್ರಿಯರ ದಿಲ್ ಕದ್ದಿದೆ. ಹೀಗಾಗಿಯೇ, ರಿಯಲ್‌ಮಿ ಸ್ಮಾರ್ಟ್‌ಫೋನ್‌ಗಳು ಗ್ರಾಹಕರ ಹಾಟ್ ಫೇವರಿಟ್ ಆಗಿವೆ. ಕಡಿಮೆ ಬೆಲೆಯಲ್ಲಿ ಅತ್ಯಾಕರ್ಷಕ ಫೀಚರ್ಸ್‌ ಹೊಂದಿರುವ ಮೊಬೈಲ್‌ಗಳನ್ನು ಬಿಡುಗಡೆಗೊಳಿಸುವ ಮೂಲಕ ಭಾರತದಲ್ಲಿ ಭರ್ಜರಿ ಡಿಮ್ಯಾಂಡ್‌ ಹೊಂದಿರುವ ರಿಯಲ್‌ಮಿ, ಇದೀಗ ನೂತನ ಮೊಬೈಲ್ ಒಂದನ್ನು ಭಾರತದ ಮಾರುಕಟ್ಟೆಗೆ ಬಿಡುಗಡಗೊಳಿಸಲು ಸಜ್ಜಾಗಿದೆ. ಈ ಹೊಸ ಫೋನ್ ಯಾವುದು? ಬೆಲೆ ಎಷ್ಟು? ಏನೆಲ್ಲಾ ಫೀಚರ್ಸ್‌ ಹೊಂದಿರಲಿದೆ? ಕಂಪ್ಲೀಟ್‌ ಡೀಟೈಲ್ಸ್‌ ಇಲ್ಲಿದೆ.

ರಿಯಲ್‌ಮಿ ಕಂಪನಿಯು ಇತ್ತೀಚೆಗೆ Realme GT 6 ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಿ ಸದ್ದು ಮಾಡಿತ್ತು. ಇದೀಗ, ಶೀಘ್ರದಲ್ಲೇ ಮತ್ತೊಂದು ಫೋನ್‌ ಬಿಡುಗಡೆಯಾಗುವುದು ಪಕ್ಕಾ ಆಗಿದೆ. ಈ ವಿವರಗಳನ್ನು ಪ್ರಸಿದ್ಧ ಇ-ಕಾಮರ್ಸ್ ಕಂಪನಿ ಫ್ಲಿಪ್‌ಕಾರ್ಟ್ ಬಹಿರಂಗಪಡಿಸಿದೆ. ಅದರಂತೆ, Realme C61 ಸ್ಮಾರ್ಟ್‌ಫೋನ್ ಭಾರತದಲ್ಲಿ ಜೂನ್ 28 ರಂದು ಬಿಡುಗಡೆಯಾಗಲಿದೆ. ಇದು ಐಫೋನ್ 15ರ ಪ್ರೀಮಿಯಂ ಮಾದರಿಗಳನ್ನು ಹೋಲುವ ಕ್ಯಾಮೆರಾ ಒಳಗೊಂಡಿರಲಿದೆ. ಈ ಮೊಬೈಲ್‌ ಕುರಿತ ಸಂಪೂರ್ಣ ವಿವರಗಳಿಗಾಗಿ ಮುಂದೆ ಓದಿ.

Realme: ಜೂನ್ 28ರಂದು ಬರುತ್ತೆ ಈ ಹೊಸ ಫೋನ್: 10,000ಕ್ಕಿಂತ ಕಡಿಮೆ ಬೆಲೆ?

ಫ್ಲಿಪ್‌ಕಾರ್ಟ್ ಫೋಟೋಗಳನ್ನು ಆಧರಿಸಿ, Realme C61 ಸ್ಮಾರ್ಟ್‌ಫೋನ್ ಮೆಟಾಲಿಕ್ ಫ್ರೇಮ್ (ಬಾಡಿ) ಸೇರಿದಂತೆ ಅತ್ಯಾಕರ್ಷಕ ಫೀಚರ್ಸ್‌ಗಳನ್ನು ಹೊಂದಿರುತ್ತದೆ. ಇದನ್ನು IP54 ರೇಟಿಂಗ್‌ನೊಂದಿಗೆ ನೀರು ಮತ್ತು ಧೂಳು ನಿರೋಧಕವಾಗಿ ಪ್ರಾರಂಭಿಸಲಾಗುವುದು. ಇದಲ್ಲದೆ, ಈ ಸ್ಮಾರ್ಟ್‌ಫೋನ್ (ಭಾರತದಲ್ಲಿ ರಿಯಲ್‌ಮಿ ಮುಂಬರುವ ಸ್ಮಾರ್ಟ್‌ಫೋನ್‌ಗಳು) ವಿನ್ಯಾಸದ ವಿಷಯದಲ್ಲಿ ಆಕರ್ಷಕವಾಗಿದೆ.

ಮೊಬೈಲ್‌ ಪ್ರಿಯರ ಗಮನ ಸೆಳೆದ ಫೀಚರ್ಸ್‌!

ಕೆಲವು ವರದಿಗಳ ಆಧಾರದ ಮೇಲೆ, ಈ ರಿಯಲ್‌ಮಿ ಸಿ61 ಸ್ಮಾರ್ಟ್‌ಫೋನ್ 1600*720 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ HD+ ಡಿಸ್‌ಪ್ಲೇಯನ್ನು ಹೊಂದಿದೆ. ಈ ಹೊಸ ಮೊಬೈಲ್ ಏರ್ ಗೆಸ್ಚರ್, ಡೈನಾಮಿಕ್ ಬಟನ್, ಮಿನಿ ಕ್ಯಾಪ್ಸುಲ್ 2.0 ನಾಚ್ ಮತ್ತು ರೈನ್ ಸ್ಮಾರ್ಟ್ ಟಚ್ ತಂತ್ರಜ್ಞಾನವನ್ನು ಒಳಗೊಂಡಿದೆ.

5000mAh ಸಾಮರ್ಥ್ಯದ ಮಸ್ತ್ ಬ್ಯಾಟರಿ

ರಿಯಲ್‌ಮಿ C61 ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 14 ಆಧಾರಿತ OS ಅನ್ನು ಹೊಂದಿರುವ ಸಾಧ್ಯತೆಯಿದೆ. ಮತ್ತು ಇದು Unisoc Speedtrum T612 ಚಿಪ್ ಸೆಟ್‌ನಲ್ಲಿ ರನ್ ಆಗುತ್ತದೆ. ಈ ರಿಯಲ್‌ಮಿ C61 ಫೊನ್‌ನ ಬ್ಯಾಟರಿ ಬಗ್ಗೆ ಹೇಳುವುದಾದರೆ, ಇದು 45W ಚಾರ್ಜಿಂಗ್ ಬೆಂಬಲದೊಂದಿಗೆ 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಹೊಂದಿರುವ ಸಾಧ್ಯತೆಯಿದೆ.

50MP ಕ್ಯಾಮೆರಾ, ಎರಡು ಸ್ಟೋರೇಜ್ ವೇರಿಯಂಟ್

ಇನ್ನೂ ಈ ಫೋನ್‌ನ ಕ್ಯಾಮೆರಾ ಬಗ್ಗೆ ಹೇಳುವುದಾದರೆ, ಇದು AI ಲೆನ್ಸ್‌ನೊಂದಿಗೆ 50MP ಮುಖ್ಯ ಕ್ಯಾಮೆರಾವನ್ನು ಹೊಂದಿರುವ ನಿರೀಕ್ಷೆಯಿದೆ. ಇದು 4GB RAM + 128GB ಇಂಟರ್ನಲ್ ಸ್ಟೋರೇಜ್‌ ಮತ್ತು 6GB RAM + 128GB ಇಂಟರ್ನಲ್ ಸ್ಟೋರೇಜ್ ವೇರಿಯಂಟ್‌ಗಳಲ್ಲಿ ಲಭ್ಯವಿರುತ್ತದೆ ಎಂದು ತಿಳಿದುಬಂದಿದೆ. ಈ ಫೋನ್ ಹಸಿರು ಮತ್ತು ಕಪ್ಪು ಬಣ್ಣಗಳಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.

ಬೆಲೆ 10,000ಕ್ಕಿಂತ ಕಡಿಮೆ ಸಾಧ್ಯತೆ!

ಆದಾಗ್ಯೂ, ಈ Realme C61 ಮೊಬೈಲ್‌ನ ಬೆಲೆಯ ಬಗ್ಗೆ ರಿಯಲ್‌ಮಿ ಕಂಪನಿ ಮತ್ತು ಫ್ಲಿಪ್‌ಕಾರ್ಟ್ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಆದರೆ, 10,000 ರೂ.ಗಿಂತ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಸಾಧ್ಯತೆ ಇದೆಯಂತೆ. ಇದಲ್ಲದೆ, Realme ಮತ್ತು Flipkart ಮೇಲೆ ತಿಳಿಸಲಾದ ಫೀಚರ್ಸ್‌ಗಳು ಮತ್ತು ವಿಶೇಷತೆಗಳ ಕುರಿತು ಯಾವುದೇ ಪ್ರಕಟಣೆಯನ್ನು ಹೊರಡಿಸಿಲ್ಲ. ಸೋರಿಕೆಯಾದ ಮಾಹಿತಿಯು ಕೇವಲ ಊಹಾಪೋಹಗಳಾಗಿವೆ. ಆದರೂ, ಮಯಬೈಲ್‌ ಪ್ರಿಯರು ಈ ಫೋನ್‌ ಬಗ್ಗೆ ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

Realme C61 ಮೊಬೈಲ್‌ ಸಂಪೂರ್ಣ ಫೀಚರ್ಸ್‌

*OS: ಆಂಡ್ರಾಯ್ಡ್ v14
ಸೈಡ್ ಫಿಂಗರ್‌ಪ್ರಿಂಟ್ ಸೆನ್ಸರ್

*ಡಿಸ್ಪ್ಲೇ: 6.74  ಇಂಚು, IPS ಸ್ಕ್ರೀನ್
720 x 1600 ಪಿಕ್ಸೆಲ್‌ಗಳು
260 ಪಿಪಿಐ
500ನಿಟ್ಸ್
90 Hz ರಿಫ್ರೆಶ್ ದರ, 180 Hz ಟಚ್ ಸ್ಯಾಂಪ್ಲಿಂಗ್ ದರ
ವಾಟರ್ ಡ್ರಾಪ್ ನಾಚ್ ಡಿಸ್ಪ್ಲೇ

*ಕ್ಯಾಮೆರಾ: 50 MP ಡ್ಯುಯಲ್ ಹಿಂಬದಿಯ ಕ್ಯಾಮೆರಾ
1080p @ 30 fps FHD ವಿಡಿಯೋ ರೆಕಾರ್ಡಿಂಗ್
8 MP ಫ್ರಂಟ್ ಕ್ಯಾಮೆರಾ

*ಪ್ರೊಸೆಸರ್: Unisoc T612 ಚಿಪ್ಸೆಟ್
ಆಕ್ಟಾ ಕೋರ್ ಪ್ರೊಸೆಸರ್
4 GB RAM + 4 GB ವರ್ಚುವಲ್ RAM
128 GB ಅಂತರ್ಗತ ಮೆಮೊರಿ
1 TB ವರೆಗೆ ವಿಸ್ತರಿಸಬಹುದಾದ ಮೆಮೊರಿ ಕಾರ್ಡ್ ಸ್ಲಾಟ್

*ಸಿಮ್: ನ್ಯಾನೋ + ನ್ಯಾನೋ ಸಿಮ್

*ಕನೆಕ್ಟಿವಿಟಿ ಆಯ್ಕೆಗಳು: 4G, VoLTE, ಬ್ಲೂಟೂತ್ v5.0, WiFi, NFC, USB-C v2.0

*ಬ್ಯಾಟರಿ: 5000 mAh ಬ್ಯಾಟರಿ
18W ವೇಗದ ಚಾರ್ಜಿಂಗ್ ಸಪೋರ್ಟ್‌
ರಿವರ್ಸ್ ಚಾರ್ಜಿಂಗ್

Best Mobiles in India

English summary
Realme C61 Set to Launch on June 28 in India; check price and specifications
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+