ಜಸ್ಟ್ 8,199 ರೂ.! Realme C61 ಬೆಲೆ ಭಾರೀ ಕುಸಿತ.. ಆಫರ್, ಫೀಚರ್‌ಗಳೇನು?
ಅಗ್ಗದ ಮೊಬೈಲ್ ಖರೀದಿಸಲು ಬಯಸುವವರಿಗೆ ಫ್ಲಿಪ್‌ಕಾರ್ಟ್ ಒಳ್ಳೆಯ ಸುದ್ದಿ ನೀಡಿದೆ. ಪ್ರಸ್ತುತ, ಫ್ಲಿಪ್‌ಕಾರ್ಟ್‌ನ ಬಿಗ್ ಸೇವಿಂಗ್ಸ್ ಡೇಸ್ ಸೇಲ್ ಅತ್ಯುತ್ತಮ ಡೀಲ್ ನೀಡುತ್ತಿದೆ. ಹೌದು, ರಿಯಲ್‌ಮಿ C61 (Realme C61) ಸ್ಮಾರ್ಟ್‌ಫೋನ್ 9,000 ರೂ.ಗಿಂತ ಕಡಿಮೆ ಬೆಲೆಗೆ ಲಭ್ಯವಿದೆ. ಹೆಚ್ಚುವರಿಯಾಗಿ ಶೇ.5 ರಷ್ಟು ಕ್ಯಾಶ್‌ಬ್ಯಾಕ್, ಬ್ಯಾಂಕ್ ರಿಯಾಯಿತಿ ಮತ್ತು ಎಕ್ಸ್‌ಚೇಂಜ್ ಬೋನಸ್ ಸಹ ಸಿಗುತ್ತದೆ. ಅಗ್ಗದ ದರವೆಂಬ ಕಾರಣಕ್ಕೆ ಫೀಚರ್ಸ್ ಮತ್ತು ಕಾರ್ಯಕ್ಷಮತೆಯಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ. ಬನ್ನಿ, ಈ ಫೋನಿನ ಹೊಸ ಬೆಲೆ ಮತ್ತು ವಿಶೇಷತೆಗಳನ್ನು ತಿಳಿಯೋಣ.
ರಿಯಲ್‌ಮಿ C61 ಮೊಬೈಲ್ ಮೂರು ಸ್ಟೋರೇಜ್ ಆಯ್ಕೆಗಳಲ್ಲಿ ಮಾರಾಟವಾಗುತ್ತಿದೆ. ಈ ಫೋನಿನಲ್ಲಿ 32 ಮೆಗಾಪಿಕ್ಸೆಲ್ ಕ್ಯಾಮೆರಾ ಲಭ್ಯವಿದೆ. ಇದು ಯುನಿಸಾಕ್ T612 ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತದೆ. ಈ ಸ್ಮಾರ್ಟ್‌ಫೋನ್ 6.78 ಇಂಚಿನ ಡಿಸ್ಪ್ಲೇ ಹೊಂದಿದೆ. ಜೊತೆಗೆ 6GB RAM + 128GB ಸ್ಟೋರೇಜ್, 5000mAh ಬ್ಯಾಟರಿ ಮತ್ತು 10W ಫಾಸ್ಟ್ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಪ್ರಸ್ತುತ, ಇದು ಬಿಡುಗಡೆ ಬೆಲೆಗಿಂತ ಕಡಿಮೆಗೆ ಮಾರಾಟವಾಗುತ್ತಿದೆ.

ರಿಯಲ್‌ಮಿ C61 ಹೊಸ ಬೆಲೆ
ರಿಯಲ್‌ಮಿ C61 ಫೋನಿನ ಆರಂಭಿಕ ಬೆಲೆ 7,699 ರೂ. ಆಗಿದೆ. ಪ್ರಸ್ತುತ, ಫ್ಲಿಪ್‌ಕಾರ್ಟ್‌ನಲ್ಲಿ 6GB RAM + 128GB ಸ್ಟೋರೇಜ್ ಬೆಲೆ 8,199 ರೂ.ಗಳಿಗೆ ಲಭ್ಯವಿದೆ. ನೀವು ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕಾರ್ಡ್ ಬಳಸಿ ಈ ಫೋನ್ ಖರೀದಿಸಿದರೆ, ಶೇ.5 ರಷ್ಟು ಕ್ಯಾಶ್‌ಬ್ಯಾಕ್ ಪಡೆಯಬಹುದು. ಜೊತೆಗೆ ತಿಂಗಳಿಗೆ ಕೇವಲ 299 ರೂ.ಗಳ ಇಎಂಐನಲ್ಲಿ ಈ ಮೊಬೈಲ್ ಖರೀದಿಸಬಹುದು. ಎಕ್ಸ್‌ಚೇಂಜ್ ಆಫರ್ ಅಡಿಯಲ್ಲಿ ನೀವು 7,650 ರೂ.ಗಳ ಲಾಭ ಪಡೆಯಬಹುದು. ಈ ಸ್ಮಾರ್ಟ್‌ಫೋನ್ ಸಫಾರಿ ಹಸಿರು ಮತ್ತು ಮಾರ್ಬಲ್ ಕಪ್ಪು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ.
ರಿಯಲ್‌ಮಿ C61 ವೈಶಿಷ್ಟ್ಯಗಳು
ಡಿಸ್ಪ್ಲೇ ಹೇಗಿದೆ
ರಿಯಲ್‌ಮಿ C61 ಸ್ಮಾರ್ಟ್‌ಫೋನ್ 6.78 ಇಂಚಿನ ಎಚ್‌ಡಿ ಪ್ಲಸ್ ಡಿಸ್ಪ್ಲೇ ಹೊಂದಿದೆ. ಇದು ಐಪಿಎಸ್ ಎಲ್‌ಸಿಡಿ ಡಿಸ್ಪ್ಲೇ ಆಗಿದೆ. ಈ ಡಿಸ್ಪ್ಲೇಯು 1600 x 720 ಪಿಕ್ಸೆಲ್‌ಗಳ ರೆಸಲ್ಯೂಶನ್, 90Hz ರಿಫ್ರೆಶ್ ದರ, 180Hz ಟಚ್ ಸ್ಯಾಂಪ್ಲಿಂಗ್ ದರ ಮತ್ತು 560 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಹೊಂದಿದೆ.
ಪ್ರೊಸೆಸರ್ ಯಾವುದು?
ರಿಯಲ್‌ಮಿ C61 ಮೊಬೈಲ್ ಯುನಿಸಾಕ್ T612 ಆಕ್ಟಾಕೋರ್ 12nm ಪ್ರೊಸೆಸರ್ ಹೊಂದಿದೆ. ಇದು ಗ್ರಾಫಿಕ್ಸ್‌ಗಾಗಿ, ಮಾಲಿ G57 ಜಿಪಿಯು ಸಹ ಹೊಂದಿದೆ. ಈ ಫೋನ್ ಆಂಡ್ರಾಯ್ಡ್ 14 ಆಧಾರಿತ ರಿಯಲ್‌ಮಿ ಯುಐ ಜೊತೆಗೆ ಕೆಲಸ ಮಾಡುತ್ತದೆ.
RAM ಮತ್ತು ಸ್ಟೋರೇಜ್
ರಿಯಲ್‌ಮಿ C61 ಫೋನ್ 4GB ಮತ್ತು 6GB RAM ಹೊಂದಿದೆ. ಜೊತೆಗೆ 64GB ಮತ್ತು 128GB ಸ್ಟೋರೇಜ್ ಆಯ್ಕೆ ಒಳಗೊಂಡಿದೆ. ನೀವು, ಮೈಕ್ರೊ ಎಸ್‌ಡಿ ಕಾರ್ಡ್ ಮೂಲಕ 2TB ವರೆಗೆ ಸ್ಟೋರೇಜ್ ವಿಸ್ತರಿಸಬಹುದು.

ಸೂಪರ್ ಕ್ಯಾಮೆರಾ
ರಿಯಲ್‌ಮಿ C61 ಸ್ಮಾರ್ಟ್‌ಫೋನ್ ಫೋಟೋಗ್ರಾಫಿಗಾಗಿ ಅದ್ಭುತ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 32 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಇದು ಡೆಪ್ತ್ ಸೆನ್ಸರ್, ಎಲ್‌ಇಡಿ ಫ್ಲಾಷ್ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನಿನಲ್ಲಿ 5 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇದೆ.
ಪವರ್ ಫುಲ್ ಬ್ಯಾಟರಿ
ರಿಯಲ್‌ಮಿ C61 ಮೊಬೈಲ್ 5000mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಈ ಬ್ಯಾಟರಿಯನ್ನು ಜಾರ್ಜ್ ಮಾಡಲು, 10W ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ.
ಇತರೆ ವೈಶಿಷ್ಟ್ಯಗಳು
ರಿಯಲ್‌ಮಿ C61 ಫೋನ್ ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್, 3.5 ಎಂಎಂ ಆಡಿಯೋ ಜ್ಯಾಕ್, ಬಾಟಮ್ ಪೋರ್ಟೆಡ್ ಸ್ಪೀಕರ್ ಹೊಂದಿದೆ. ಇದು ಧೂಳು ಮತ್ತು ನೀರಿನ ವಿರುದ್ಧ ರಕ್ಷಣೆಗಾಗಿ IP64 ರೇಟಿಂಗ್ ಪಡೆದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಇದು ಡ್ಯುಯಲ್ ಸಿಮ್, ಡ್ಯುಯಲ್ 4G VoLTE, ವೈ-ಫೈ, ಬ್ಲೂಟೂತ್ 5.0, ಜಿಪಿಎಸ್ ಮತ್ತು ಯುಎಸ್‌ಬಿ ಟೈಪ್ ಸಿ ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ.


Click it and Unblock the Notifications








