Realme C63 5G ಮಾರಾಟಕ್ಕೆ ಸಿದ್ಧ; ಕಡಿಮೆ ಬೆಲೆ.. ಡಿಸ್ಕೌಂಟ್ ಎಷ್ಟು?
ರಿಯಲ್‌ಮಿ (Realme) ಇತ್ತೀಚೆಗೆ ರಿಯಲ್‌ಮಿ C63 5G (Realme C63 5G) ಫೋನನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಕಂಪನಿಯು ಈ ಫೋನನ್ನು ಮೂರು ಸ್ಟೋರೇಜ್ ಆಯ್ಕೆ ಮತ್ತು ಎರಡು ಬಣ್ಣಗಳಲ್ಲಿ ಮಾರುಕಟ್ಟೆಗೆ ಪರಿಚಯಿಸಿದೆ. ಅಂದಹಾಗೆ ಈ ಫೋನ್, ಇಂದು (ಆಗಸ್ಟ್ 20) ಮಧ್ಯಾಹ್ನ 12 ಗಂಟೆಗೆ ರಿಯಲ್‌ಮಿ ಅಧಿಕೃತ ವೆಬ್‌ಸೈಟ್ ಮತ್ತು ಇ ಕಾಮರ್ಸ್ ವೆಬ್‌ಸೈಟ್ ಫ್ಲಿಪ್‌ಕಾರ್ಟ್ ಮೂಲಕ ತನ್ನ ಮೊದಲ ಮಾರಾಟವನ್ನು ಪ್ರಾರಂಭಿಸಲಿದೆ. ಈ ಹೊಸ ಫೋನಿನ ಬೆಲೆ, ಆಫರ್‌ಗಳು ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ ಬನ್ನಿ.
ರಿಯಲ್‌ಮಿ C63 5G ಫೋನ್ ಕಂಪನಿಯ ಇತ್ತೀಚಿನ 'C' ಸರಣಿಯ 5G ಸ್ಮಾರ್ಟ್‌ಫೋನ್ ಆಗಿದೆ. ಇದು 6.67 ಇಂಚಿನ HD+ ಡಿಸ್ಪ್ಲೇಯನ್ನು ಹೊಂದಿದೆ. ಇದು ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 6300 6nm ಪ್ರೊಸೆಸರ್ ಒಳಗೊಂಡಿದೆ. 32MP ಮುಖ್ಯ ಕ್ಯಾಮೆರಾ ಮತ್ತು 8MP ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಈ ಫೋನ್ 5,000mAh ಬ್ಯಾಟರಿ, 10W ಚಾರ್ಜಿಂಗ್ ಸೇರಿದಂತೆ ಹಲವು ವಿಶೇಷತೆಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.

ರಿಯಲ್‌ಮಿ C63 5G ಬೆಲೆ
ಕಂಪನಿಯು ರಿಯಲ್‌ಮಿ C63 5G ಫೋನನ್ನು ಮೂರು ಸ್ಟೋರೇಜ್ ಆಯ್ಕೆಗಳಲ್ಲಿ ಬಿಡುಗಡೆ ಮಾಡಿದೆ. ಇದು ಸ್ಟಾರ್ರಿ ಗೋಲ್ಡ್ ಮತ್ತು ಫಾರೆಸ್ಟ್ ಗ್ರೀನ್ ಬಣ್ಣಗಳಲ್ಲಿ ಲಭ್ಯವಿದೆ. 4GB ಮತ್ತು 128GB ಸ್ಟೋರೇಜ್ ಬೆಲೆ 10,999 ರೂ. ಆಗಿದೆ. 6GB ಮತ್ತು 128GB ಸ್ಟೋರೇಜ್ ಬೆಲೆ 11,999 ರೂ. ಇದೆ. ಮತ್ತು 8GB ಮತ್ತು 128GB ಸ್ಟೋರೇಜ್ ರೂಪಾಂತರವು 12,999 ರೂ.ಗೆ ಮಾರಾಟವಾಗಲಿದೆ.
ರಿಯಲ್‌ಮಿ C63 5G ಡಿಸ್ಕೌಂಟ್ ಬೆಲೆ
4GB + 128GB ಸ್ಟೋರೇಜ್ ಬೆಲೆ = 9,999 ರೂ.
6GB + 128GB ಸ್ಟೋರೇಜ್ ಬೆಲೆ = 10,999 ರೂ.
8GB + 128GB ಸ್ಟೋರೇಜ್ ಬೆಲೆ = 11,999 ರೂ.
ಕಂಪನಿಯು ರಿಯಲ್‌ಮಿ C63 5G ಫೋನಿನ ಎಲ್ಲಾ ರೂಪಾಂತರಗಳ ಮೇಲೆ 1,000 ರೂ. ರಿಯಾಯಿತಿ ಘೋಷಿಸಿದೆ. ಆಯ್ದ ಬ್ಯಾಂಕ್ ಕಾರ್ಡ್‌ಗಳನ್ನು ಬಳಸಿ ಈ ಫೋನ್ ಖರೀದಿಸಿದರೆ 1,000 ರೂ. ಡಿಸ್ಕೌಂಟ್ ಸಿಗುತ್ತದೆ. ರಿಯಾಯಿತಿಯೊಂದಿಗೆ ನೀವು ಈ ರಿಯಲ್‌ಮಿ ಫೋನನ್ನು ಕೇವಲ 9,999 ರೂ.ಗಳ ಆರಂಭಿಕ ಬೆಲೆಗೆ ಖರೀದಿಸಬಹುದು.
ರಿಯಲ್‌ಮಿ C63 5G ವೈಶಿಷ್ಟ್ಯಗಳು
ಡಿಸ್ಲ್ಪೇ: ರಿಯಲ್‌ಮಿ C63 5G ಸ್ಮಾರ್ಟ್‌ಫೋನ್ 6.67 ಇಂಚಿನ HD+ ಡಿಸ್ಲ್ಪೇಯನ್ನು ಹೊಂದಿದೆ. 720×1604 ಪಿಕ್ಸೆಲ್ ರೆಸಲ್ಯೂಶನ್, 120Hz ರಿಫ್ರೆಶ್ ದರ, 240Hz ಟಚ್ ಸ್ಯಾಂಪ್ಲಿಂಗ್ ದರ ಮತ್ತು 625 nits ಗರಿಷ್ಠ ಬ್ರೈಟ್‌ನೆಸ್ ಪಡೆದಿದೆ.
ಪ್ರೊಸೆಸರ್: ಇದು ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 6300 6nm ಪ್ರೊಸೆಸರ್ ಅನ್ನು ಹೊಂದಿದೆ. ಇದು ಆರ್ಮ್ ಮಾಲಿ G57 MC2 GPU ಜೊತೆಗೆ ಬರುತ್ತದೆ. ರಿಯಲ್‌ಮಿ UI 5.0 ಜೊತೆಗೆ Android 14 ಅನ್ನು ರನ್ ಮಾಡುತ್ತದೆ.

ಕ್ಯಾಮೆರಾ: ರಿಯಲ್‌ಮಿ C63 5G ಮೊಬೈಲ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದು f/1.85 ಅಪರ್ಚರ್ ಮತ್ತು LED ಫ್ಲ್ಯಾಷ್‌ನೊಂದಿಗೆ 32MP ಮುಖ್ಯ ಕ್ಯಾಮರಾವನ್ನು ಒಳಗೊಂಡಿದೆ. ಸೆಲ್ಫಿಗಳು ಮತ್ತು ವಿಡಿಯೋ ಕರೆಗಳಿಗಾಗಿ f/2.0 ದ್ಯುತಿರಂಧ್ರದೊಂದಿಗೆ 8MP ಮುಂಭಾಗದ ಕ್ಯಾಮೆರಾ ಕೂಡ ಇದೆ. ಇದು ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಒಳಗೊಂಡಿದೆ.
ಬ್ಯಾಟರಿ: ರಿಯಲ್‌ಮಿ C63 5G ಫೋನ್ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 10W ವೇಗದ ಚಾರ್ಜ್‌ರ್‌ನೊಂದಿಗೆ ಬರುತ್ತದೆ. ಈ ಫೋನ್ 165.6×76.1×7.94mm ಅಳತೆ ಮತ್ತು 190 ಗ್ರಾಂ ತೂಕ ಹೊಂದಿದೆ. ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP54 ರೇಟಿಂಗ್ ಪಡೆದಿದೆ.
ಇತರೆ ಫೀಚರ್ಸ್: ಈ ಫೋನ್ ಕನೆಕ್ಟಿವಿಟಿ ಆಯ್ಕೆಗಳಲ್ಲಿ 3.5mm ಆಡಿಯೋ ಜ್ಯಾಕ್, 1115 ಅಲ್ಟ್ರಾ ಲೀನಿಯರ್ ಬಾಟಮ್-ಪೋರ್ಟ್ ಮಾಡಿದ ಸ್ಪೀಕರ್ ಒಳಗೊಂಡಿದೆ. ಹೈಬ್ರಿಡ್ ಡ್ಯುಯಲ್ ಸಿಮ್, 5G SA/NSA, ಡ್ಯುಯಲ್ 4G VoLTE, Wi-Fi 802.11 ac, ಬ್ಲೂಟೂತ್, GPS5, ಗ್ಲೋನಾಸ್, ಗೆಲಿಲಿಯೋ, QZSS, USB ಟೈಪ್-ಸಿ ನಂತಹ ಸೌಲಭ್ಯಗಳನ್ನು ಒಳಗೊಂಡಿದೆ.


Click it and Unblock the Notifications








