ಇಂದು ಬಿಡುಗಡೆ ಆಗ್ತಿದೆ Realme C63 5G ಬಜೆಟ್ ಫೋನ್! ಬೆಲೆ, ಫೀಚರ್ಸ್ ಏನಿದೆ?
ರಿಯಲ್‌ಮಿ ಸ್ಮಾರ್ಟ್‌ಫೋನ್‌ಗಳಿಗೆ ಭಾರತದಲ್ಲಿ ಭಾರೀ ಡಿಮ್ಯಾಂಡ್ ಇದೆ. ಕಂಪನಿಯು ಬೇಡಿಕೆಗೆ ತಕ್ಕಂತೆ ಹೊಸ ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಅದರಂತೆ, ರಿಯಲ್‌ಮಿ (Realme) ಸಂಸ್ಥೆಯು ಇಂದು ತನ್ನ ರಿಯಲ್‌ಮಿ C63 5G (Realme C63 5G) ಫೋನನ್ನು ಭಾರತದಲ್ಲಿ ಬಿಡುಗಡೆ ಮಾಡಲಿದೆ. ರಿಯಲ್‌ಮಿ C63 5G ಇತ್ತೀಚೆಗೆ ಬಿಡುಗಡೆಯಾದ ರಿಯಲ್‌ಮಿ C63 4G (Realme C63 4G) ಫೋನಿನ 5G ಆವೃತ್ತಿಯಾಗಿದೆ. ಬನ್ನಿ, ಈ ಫೋನಿನ ವಿಶೇಷತೆಗಳನ್ನು ತಿಳಿಯೋಣ.
ಮೈಕ್ರೋಸೈಟ್ ಪ್ರಕಾರ, ಈ ನೂತನ ಫೋನ್ ರಿಯಲ್‌ಮಿ C63 4G ಮೊಬೈಲ್‌ಗೆ ಹೋಲಿಸಿದರೆ ಹೊಸ ಅಪ್ಡೇಟ್‌ಗಳೊಂದಿಗೆ ಲಾಂಚ್ ಆಗುವ ನಿರೀಕ್ಷೆಯಿದೆ. ಕಂಪನಿಯು ಈವರಗೆ ಯಾವುದೇ ವಿವರಗಳನ್ನು ಬಹಿರಂಗಪಡಿಸಿಲ್ಲ. ಆದರೂ, ಹೊಸ ಫೋನ್ ಫ್ಲಾಟ್ ಬೆಜೆಲ್‌ಗಳು ಮತ್ತು ರೌಂಡ್ ಕ್ಯಾಮೆರಾ ಲೈಟ್ ಹೊಂದಿರುತ್ತದೆ ಎಂದು ತಿಳಿದುಬಂದಿದೆ. ಈ ಫೋನ್ ಗೋಲ್ಡ್ (ಹಳದಿ) ಮತ್ತು ಗ್ರೀನ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರುತ್ತದೆ.

Realme C63 5G ಫೋನಿನ ಬಿಡುಗಡೆ ವಿವರ
ರಿಯಲ್‌ಮಿ C63 5G ಫೋನನ್ನು ಇಂದು (ಆಗಸ್ಟ್ 12) ಮಧ್ಯಾಹ್ನ 12 ಗಂಟೆಗೆ ಭಾರತದಲ್ಲಿ ಬಿಡುಗಡೆ ಮಾಡಲಾಗುತ್ತದೆ. ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಈ ಫೋನ್ ಅನ್ನು ಎರಡು ಬಣ್ಣದ ಆಯ್ಕೆಗಳೊಂದಿಗೆ ತೋರಿಸಿದೆ. ಇದು ಹಳದಿ ಮತ್ತು ಹಸಿರು ಬಣ್ಣದ ಆಯ್ಕೆಗಳನ್ನು ಒಳಗೊಂಡಿದೆ.
Realme C63 5G ಫೋನಿನ ವಿಶೇಷತೆಗಳು
ಮೈಕ್ರೋಸೈಟ್ ಪ್ರಕಾರ, ರಿಯಲ್‌ಮಿ C63 5G ಫ್ಲಾಟ್ ಫ್ರೇಮ್‌ನೊಂದಿಗೆ ಬಾಕ್ಸ್ ಡಿಸೈನ್ ಹೊಂದಿದೆ. ಬಲಭಾಗದಲ್ಲಿರುವ ಪವರ್ ಬಟನ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಆಗಿಯೂ ಕೆಲಸ ಮಾಡಲಿದೆ. ಮುಂಭಾಗದಲ್ಲಿ, ಮಧ್ಯದಲ್ಲಿ ಜೋಡಿಸಲಾದ ಪಂಚ್-ಹೋಲ್ ಕಟೌಟ್ ಡಿಸ್ಲ್ಪೇ ಇದೆ. ಇದು ಗ್ರೀನ್ ಮತ್ತು ಗೋಲ್ಡ್ ಬಣ್ಣದ ಆಯ್ಕೆಗಳಲ್ಲಿ ಬರುತ್ತದೆ. ಹುಡ್ ಅಡಿಯಲ್ಲಿ 5G ಹೊಂದಾಣಿಕೆಯ ಪ್ರೊಸೆಸರ್ ನಿರೀಕ್ಷಿಸಬಹುದು. ಇದು ರಿಯಲ್‌ಮಿ ಸಿ63 4G ಫೋನನ್ನು ಹೋಲುತ್ತದೆ.
ರಿಯಲ್‌ಮಿ C63 5G ಫೋನಿನ ಹಿಂಭಾಗದ ಫಲಕದಲ್ಲಿ ದೊಡ್ಡ ಬಾಗಿದ ಚದರ ಆಕಾರದ ಕ್ಯಾಮೆರಾ ಮಾಡ್ಯೂಲ್ ಅನ್ನು ಹೊಂದಿದೆ. ಇದು ಡ್ಯುಯಲ್ ಕ್ಯಾಮೆರಾ ಸೆಟಪ್ ಮತ್ತು ಎಲ್ಇಡಿ ಫ್ಲ್ಯಾಷ್ ಹೊಂದಿದೆ. ಈ ಫೋನ್‌ನ ಮುಂಭಾಗದ ಫಲಕವು ಪಂಚ್-ಹೋಲ್ ಫ್ಲಾಟ್ ಡಿಸ್ಪ್ಲೇಯನ್ನು ಹೊಂದಿದೆ. ಫೋನಿನ ಪೋಸ್ಟರ್‌ನಲ್ಲಿ ಚಿರತೆಯನ್ನು ತೋರಿಸಲಾಗಿದೆ. ಈ ಫೋನಿನ ಹಿಂಭಾಗದಲ್ಲಿ ರಿಯಲ್‌ಮಿ ಬ್ರ್ಯಾಂಡಿಂಗ್ ಕಾಣಬಹುದು.
ರಿಯಲ್‌ಮಿ C63 4G ಫೋನಿನ ಫೀಚರ್ಸ್
ರಿಯಲ್‌ಮಿ C63 4G ಫೋನ್ ಗ್ರೀನ್ ಮತ್ತು ಲೆದರ್ ಬ್ಲೂ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ. ಭಾರತದಲ್ಲಿ ಇದರ ಬೆಲೆ 8,999 ರೂ. ಇದೆ. 6.74 ಇಂಚಿನ HD + ಡಿಸ್ಪ್ಲೇಯನ್ನು ಹೊಂದಿದೆ. ಜೊತೆಗೆ 90Hz ರಿಫ್ರೆಶ್ ದರವನ್ನು ಪಡೆದಿದೆ. ಇದು Unisoc T612 ಪ್ರೊಸೆಸರ್‌ನೊಂದಿಗೆ ಕೆಲಸ ಮಾಡುತ್ತದೆ. 4GB RAM ಮತ್ತು 128GB ಸ್ಟೋರೇಜ್ ಆಯ್ಕೆ ಒಳಗೊಂಡಿದೆ. ಇದು Android 14 OS ನಲ್ಲಿ ರನ್ ಆಗುತ್ತದೆ.
ರಿಯಲ್‌ಮಿ C63 4G ಫೋನ್ 50MP ಮುಖ್ಯ ಕ್ಯಾಮೆರಾ ಮತ್ತು 8MP ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 45W SUPERVOOC ಚಾರ್ಜಿಂಗ್ ಬೆಂಬಲ ಪಡೆದಿದೆ.
ರಿಯಲ್‌ಮಿ V60 ಫೋನಿನ ಫೀಚರ್ಸ್
ರಿಯಲ್‌ಮಿ V60 ಫೋನ್ 6.67 ಇಂಚಿನ HD+ LCD ಡಿಸ್ಪ್ಲೇಯನ್ನು ಹೊಂದಿದೆ. 720×1604 ಪಿಕ್ಸೆಲ್‌ಗಳ ರೆಸಲ್ಯೂಶನ್, 120Hz ರಿಫ್ರೆಶ್ ರೇಟ್ ಹೊಂದಿದೆ. ಮೀಡಿಯಾ ಟೆಕ್ ಡೈಮೆನ್ಸಿಟಿ 6300 SoC ಪ್ರೊಸೆಸರ್‌ನೊಂದಿಗೆ ಕಾರ್ಯನಿರ್ವಹಿಸಲಿದೆ. ಇದು 8GB RAM+256GB ಇಂಟರ್ನಲ್ ಸ್ಟೋರೇಜ್ ಬರುತ್ತದೆ. ನೀವು 32MP ಪ್ರಾಥಮಿಕ ಕ್ಯಾಮೆರಾ ಪಡೆಯಹುದು. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 8MP ಫ್ರಂಟ್ ಕ್ಯಾಮೆರಾ ಇದೆ. ಈ ಫೋನ್ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ.


Click it and Unblock the Notifications








