Home
ಮೊಬೈಲ್

Realme C63 5G: ಅಗ್ಗದ ಫೋನ್ ಲಾಂಚ್.. 10 ಸಾವಿರಕ್ಕಿಂತ ಕಡಿಮೆ!

ಕಾಯುವಿಕೆ ಮುಗಿಯಿತು..! ಹೊಸ ರಿಯಲ್‌ಮಿ ಫೋನ್ ಭಾರತಕ್ಕೆ ಲಗ್ಗೆ ಇಟ್ಟಿದೆ. ಅದು ಕೂಡ ಕಡಿಮೆ ಬೆಲೆಗೆ 5G ಸ್ಮಾರ್ಟ್‌ಫೋನ್. ಹೌದು, ರಿಯಲ್‌ಮಿ (Realme) ಕಂಪನಿಯು ರಿಯಲ್‌ಮಿ C63 5G (Realme C63 5G) ಸ್ಮಾರ್ಟ್‌ಫೋನ್‌ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದು ಕಂಪನಿಯ ಇತ್ತೀಚಿನ 'C' ಸರಣಿಯ 5G ಸ್ಮಾರ್ಟ್‌ಫೋನ್ ಆಗಿದೆ. ಈ ನೂತನ ಫೋನ್ ಇತ್ತೀಚೆಗೆ ಬಿಡುಗಡೆಯಾದ ರಿಯಲ್‌ಮಿ C63 4G (Realme C63 4G) ಮೊಬೈಲ್‌ನ 5G ಆವೃತ್ತಿಯಾಗಿದೆ.

ರಿಯಲ್‌ಮಿ C63 5G ಸ್ಮಾರ್ಟ್‌ಫೋನ್ 6.67 ಇಂಚಿನ HD+ ಡಿಸ್ಪ್ಲೇಯನ್ನು ಹೊಂದಿದೆ. ಇದು ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 6300 6nm ಪ್ರೊಸೆಸರ್‌ ಒಳಗೊಂಡಿದೆ. 6GB RAM ಮತ್ತು 8GB ವರೆಗಿನ ವರ್ಚುವಲ್ RAM ಅನ್ನು ಹೊಂದಿದೆ. ಇದು 32MP ಮುಖ್ಯ ಕ್ಯಾಮೆರಾ ಮತ್ತು 8MP ಫ್ರಂಟ್‌ ಕ್ಯಾಮೆರಾವನ್ನು ಹೊಂದಿದೆ. ಆಂಡ್ರಾಯ್ಡ್ 14 ಆಧಾರಿತ One UI 5.0 ಅನ್ನು ರನ್ ಮಾಡುತ್ತದ. ಈ ಫೋನ್ 5,000mAh ಬ್ಯಾಟರಿ ಹೊಂದಿದೆ.

Realme C63 5G: ಅಗ್ಗದ ಫೋನ್ ಲಾಂಚ್.. 10 ಸಾವಿರಕ್ಕಿಂತ ಕಡಿಮೆ!

ರಿಯಲ್‌ಮಿ C63 5G ಬೆಲೆ ಮತ್ತು ಆಫರ್‌

4GB + 128GB ಸ್ಟೋರೇಜ್‌ ಬೆಲೆ = 10,999 ರೂ.
6GB + 128GB ಸ್ಟೋರೇಜ್‌ ಬೆಲೆ = 11,999 ರೂ.
8GB + 128GB ಸ್ಟೋರೇಜ್‌ ಬೆಲೆ = 12,999 ರೂ.

ರಿಯಲ್‌ಮಿ C63 5G ಸ್ಮಾರ್ಟ್‌ಫೋನ್ ಮೂರು ಸ್ಟೋರೇಜ್‌ ಆಯ್ಕೆಗಳಲ್ಲಿ ಬಿಡುಗಡೆಯಾಗಿದೆ. 4GB + 128GB ಸ್ಟೋರೇಜ್‌ ಬೆಲೆ 10,999 ರೂ. ಇದೆ. 6GB + 128GB ಸ್ಟೋರೇಜ್‌ ಬೆಲೆ 11,999 ಇದೆ. ಮತ್ತು 8GB + 128GB ಸ್ಟೋರೇಜ್‌ ಬೆಲೆ 12,999 ಆಗಿದೆ. ಈ ಫೋನ್ ಆಗಸ್ಟ್ 20 ರಂದು ಮಧ್ಯಾಹ್ನ 12 ಗಂಟೆಯಿಂದ ತನ್ನ ಮೊದಲ ಮಾರಾಟವನ್ನು ಪ್ರಾರಂಭಿಸಲಿದೆ.

ಕಂಪನಿಯು ಲಾಂಚ್ ಆಫರ್‌ಗಳನ್ನು ಘೋಷಿಸಿದೆ. ಆಯ್ದ ಬ್ಯಾಂಕ್ ಕಾರ್ಡ್‌ಗಳನ್ನು ಬಳಸಿ ಈ ಫೋನ್ ಖರೀದಿಸಿದರೆ ಎಲ್ಲಾ ರೂಪಾಂತರಗಳ ಮೇಲೆ 1,000 ರೂ. ಡಿಸ್ಕೌಂಟ್‌ ನೀಡಲಾಗುತ್ತದೆ. ಆಫರ್‌ನೊಂದಿಗೆ ನೀವು ಈ ರಿಯಲ್‌ಮಿ ಫೋನನ್ನು ಕೇವಲ 9,999 ರೂ.ಗಳ ಆರಂಭಿಕ ಬೆಲೆಗೆ ಖರೀದಿಸಬಹುದು. 6GB + 128GB ಮಾದರಿಯನ್ನು 10,999 ರೂ.ಗೆ ಮತ್ತು 8GB + 128GB ರೂಪಾಂತರವನ್ನು 11,999 ರೂ.ಗೆ ಖರೀದಿಸಬಹುದು.

ರಿಯಲ್‌ಮಿ C63 5G ಫೋನಿನ ಫೀಚರ್ಸ್‌

ಡಿಸ್ಲ್ಪೇ: ರಿಯಲ್‌ಮಿ C63 5G ಸ್ಮಾರ್ಟ್‌ಫೋನ್ 6.67 ಇಂಚಿನ HD+ ಡಿಸ್ಲ್ಪೇಯನ್ನು ಹೊಂದಿದೆ. ಜೊತೆಗೆ 50, 60, 90 ಮತ್ತು 120Hz ಡೈನಾಮಿಕ್ ರಿಫ್ರೆಶ್ ರೇಟ್, 240Hz ಟಚ್ ಸ್ಯಾಂಪ್ಲಿಂಗ್ ದರ, 1604 x 720 ಪಿಕ್ಸೆಲ್‌ ರೆಸುಲ್ಯೂಷನ್, 625 nits ಗರಿಷ್ಠ ಬ್ರೈಟ್‌ನೆಸ್ ಪಡೆದಿದೆ.

ಪ್ರೊಸೆಸರ್: ಕಂಪನಿಯು ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 6300 6nm ಪ್ರೊಸೆಸರ್ ಅನ್ನು ರಿಯಲ್‌ಮಿ C63 5G ಸ್ಮಾರ್ಟ್‌ಫೋನಿನಲ್ಲಿ ಅಳವಡಿಸಿದೆ. ಇದು ಆರ್ಮ್ ಮಾಲಿ G57 MC2 GPU ಜೊತೆಗೆ ಬರುತ್ತದೆ. ರಿಯಲ್‌ಮಿ UI 5.0 ಜೊತೆಗೆ Android 14 ಅನ್ನು ರನ್ ಮಾಡುತ್ತದೆ. 4GB, 6GB, 8GB RAM ಹಾಗೂ 64GB, 128GB ಸ್ಟೋರೇಜ್‌ ಒಳಗೊಂಡಿದೆ. ಮೈಕ್ರೊ SD ಜೊತೆಗೆ 2TB ವರೆಗೆ ಮೆಮೊರಿಯನ್ನು ವಿಸ್ತರಿಸಬಹುದು.

ಕ್ಯಾಮೆರಾ: ರಿಯಲ್‌ಮಿ C63 5G ಮೊಬೈಲ್ 32MP ಹಿಂಬದಿಯ ಕ್ಯಾಮೆರಾ (f/1.85 ಅಪರ್ಚರ್), LED ಫ್ಲ್ಯಾಶ್, f/2.0 ಅಪರ್ಚರ್‌ನೊಂದಿಗೆ 8MP ಮುಂಭಾಗದ ಕ್ಯಾಮೆರಾ ಹೊಂದಿದೆ. ಇದು ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಒಳಗೊಂಡಿದೆ.

ಬ್ಯಾಟರಿ: ರಿಯಲ್‌ಮಿ C63 5G ಫೋನ್ 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಹೊಂದಿದೆ. ಇದು 10W ವೇಗದ ಚಾರ್ಜ್‌ನೊಂದಿಗೆ ಬರುತ್ತದೆ. ಈ ಫೋನ್ 165.6×76.1×7.94mm ಅಳತೆ ಮತ್ತು 190 ಗ್ರಾಂ ತೂಕ ಹೊಂದಿದೆ. ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP54 ರೇಟಿಂಗ್ ಪಡೆದುಕೊಂಡಿದೆ.

ಇತರೆ ಫೀಚರ್ಸ್: ಇದು 3.5mm ಆಡಿಯೋ ಜ್ಯಾಕ್, 1115 ಅಲ್ಟ್ರಾ ಲೀನಿಯರ್ ಬಾಟಮ್-ಪೋರ್ಟ್ ಮಾಡಿದ ಸ್ಪೀಕರ್ ಒಳಗೊಂಡಿದೆ. ಹೈಬ್ರಿಡ್ ಡ್ಯುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೊ ಎಸ್‌ಡಿ), 5G SA / NSA, ಡ್ಯುಯಲ್ 4G VoLTE, Wi-Fi 802.11 ac (2.4GHz + 5GHz.), ಬ್ಲೂಟೂತ್, GPS5 , ಗ್ಲೋನಾಸ್, ಗೆಲಿಲಿಯೋ, QZSS, USB ಟೈಪ್-ಸಿ ನಂತಹ ಸೌಲಭ್ಯಗಳನ್ನು ಹೊಂದಿದೆ.

Best Mobiles in India

English summary
Realme C63 5G with launched in India starting at Rs. 9999. first sale is scheduled from August 20: Check Price, offer and More
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+