Home
ಮೊಬೈಲ್

ಖುಷಿ ಸುದ್ದಿ! Realme C63 5G ಲಾಂಚ್ ಡೇಟ್‌ ಬಹಿರಂಗ; ಹೊಸ ಫೋನಿನಲ್ಲಿದೆ ಈ ಫೀಚರ್ಸ್‌!

ರಿಯಲ್‌ಮಿ ಅಭಿಮಾನಿಗಳಿಗೆ ಮತ್ತೊಂದು ಖುಷಿ ಸುದ್ದಿ ಇದೆ. ರಿಯಲ್‌ಮಿ (Realme) ಕಂಪನಿಯು ತನ್ನ 'C' ಸರಣಿಯಲ್ಲಿ ಹೊಸ ಫೋನನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಹೌದು, ಕಂಪನಿಯು 4G ಆವೃತ್ತಿಯ ರಿಯಲ್‌ಮಿ C63 (Realme C63) ಫೋನನ್ನು ಕಳೆದ ತಿಂಗಳು ಬಿಡುಗಡೆ ಮಾಡಿತ್ತು. ಇದೀಗ, ಈ ಫೋನಿನ 5G ಆವೃತ್ತಿಯನ್ನು ಲಾಂಚ್ ಮಾಡುತ್ತಿದೆ. ರಿಯಲ್‌ಮಿ C63 5G (Realme C63 5G) ಫೋನಿನ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಗಿದೆ. ಇದರೊಂದಿಗೆ, ಭಾರತದಲ್ಲಿ ರಿಯಲ್‌ಮಿ ಸಿ63 5G ಫೋನಿನ ಬಿಡುಗಡೆ ದಿನಾಂಕ ಬಹಿರಂಗಪಡಿಸಲಾಗಿದೆ.

ಹೌದು, ರಿಯಲ್‌ಮಿ C63 5G ಫೋನನ್ನು ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಲಾಗಿದೆ. ಕಂಪನಿಯು ತನ್ನ ಭಾರತೀಯ ಗ್ರಾಹಕರಿಗಾಗಿ 'C' ಸರಣಿಯಲ್ಲಿ ಹೊಸ ಫೋನನ್ನು ಪರಿಚಯಿಸುತ್ತಿರುವುದು ದೃಢವಾಗಿದೆ. ಶೀಘ್ರದಲ್ಲೇ ಭಾರತದಲ್ಲಿ ರಿಯಲ್‌ಮಿ C63 5G ಫೋನ್ ಲಾಂಚ್ ಆಗಲಿದೆ. ಈಗಾಗಲೇ ರಿಯಲ್‌ಮಿ C63 4G ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ. ಇದೀಗ, 5G ಆವೃತ್ತಿಯು ಗ್ರಾಹಕರ ಕೈ ಸೇರಲು ಸಿದ್ಧವಾಗಿದೆ. ಬನ್ನಿ, ಈ ಫೋನಿನ ಬಿಡುಗಡೆ ದಿನಾಂಕ ಮತ್ತು ವಿಶೇಷತೆಗಳನ್ನು ತಿಳಿಯೋಣ.

ಖುಷಿ ಸುದ್ದಿ! Realme C63 5G ಲಾಂಚ್ ಡೇಟ್‌ ಬಹಿರಂಗ; ಹೊಸ ಫೋನಿನಲ್ಲಿದೆ ಈ ಫೀಚರ್

ಆ.12 ರಂದು ಚಿರತೆ ವೇಗದ ಫೋನ್ ಬಿಡುಗಡೆ

ರಿಯಲ್‌ಮಿ C63 5G (Realme C63 5G) ಫೋನ್ ಭಾರತದಲ್ಲಿ ಆಗಸ್ಟ್ 12 ರಂದು ಬಿಡುಗಡೆಯಾಗಲಿದೆ. ಕಂಪನಿಯು ಬಿಡುಗಡೆ ದಿನಾಂಕವನ್ನು ಖಚಿತಪಡಿಸುವುದರ ಜೊತೆಗೆ, ಈ ಫೋನಿನ ಮೊದಲ ನೋಟವನ್ನು ತೋರಿಸಲಾಗಿದೆ. ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಈ ಫೋನ್ ಅನ್ನು ಎರಡು ಬಣ್ಣದ ಆಯ್ಕೆಗಳಲ್ಲಿ ಕಾಣಬಹುದಾಗಿದೆ. ಹಳದಿ ಮತ್ತು ಹಸಿರು ಬಣ್ಣದ ಆಯ್ಕೆಗಳಲ್ಲಿ ಫೋನನ್ನು ಪರಿಚಯಿಸಲಾಗುತ್ತಿದೆ. ಕಂಪನಿಯು ಈ ಫೋನಿನ ಪೋಸ್ಟರ್ ಹಂಚಿಕೊಂಡಿದೆ.

ಹೊಸ ರಿಯಲ್‌ಮಿ ಫೋನಿನ ವಿಶೇಷತೆಗಳೇನು?

ಫೋನಿನ ಪೋಸ್ಟರ್‌ನಲ್ಲಿ ಚಿರತೆಯನ್ನು ತೋರಿಸಲಾಗಿದೆ. ಪೋಸ್ಟರ್‌ನಲ್ಲಿ ನೀಡಲಾದ ಮಾಹಿತಿ ಪ್ರಕಾರ, ಈ ಫೋನ್ ಸ್ವಿಫ್ಟ್, ಸ್ಮೂತ್ ಮತ್ತು 5G ಚಾಂಪಿಯನ್ ಆಗಿರುತ್ತದೆ. ಫೋನನ್ನು ಹಿಂಭಾಗದಿಂದ ತೋರಿಸಲಾಗಿದೆ. ಹಿಂಭಾಗದಿಂದ ಚದರ ಕ್ಯಾಮೆರಾ ಮಾಡ್ಯೂಲ್‌ನೊಂದಿಗೆ ಗೋಚರಿಸುತ್ತದೆ. ಈ ಫೋನನ್ನು ಮೂರು ಕ್ಯಾಮೆರಾ ಸೆನ್ಸರ್‌ಗಳು ಮತ್ತು ಎಲ್‌ಇಡಿ ಫ್ಲ್ಯಾಷ್ ಲೈಟ್‌ನೊಂದಿಗೆ ಪ್ರಾರಂಭಿಸಬಹುದು. ಈ ಫೋನಿನ ಹಿಂಭಾಗದಲ್ಲಿ ರಿಯಲ್‌ಮಿ ಬ್ರ್ಯಾಂಡಿಂಗ್ ಕಾಣಬಹುದು.

ಮೈಕ್ರೋಸೈಟ್ ಪ್ರಕಾರ, ರಿಯಲ್‌ಮಿ C63 5G ಫ್ಲಾಟ್ ಫ್ರೇಮ್‌ನೊಂದಿಗೆ ಬಾಕ್ಸ್ ವಿನ್ಯಾಸವನ್ನು ಹೊಂದಿದೆ. ಅದರ ಬಲಭಾಗದಲ್ಲಿರುವ ಪವರ್ ಬಟನ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಆಗಿಯೂ ಕಾರ್ಯನಿರ್ವಹಿಸುತ್ತದೆ. ಮುಂಭಾಗದಲ್ಲಿ, ಮಧ್ಯದಲ್ಲಿ ಜೋಡಿಸಲಾದ ಪಂಚ್-ಹೋಲ್ ಕಟೌಟ್ ಡಿಸ್ಲ್ಪೇ ಇದೆ. ಇದು ಗ್ರೀನ್ ಮತ್ತು ಗೋಲ್ಡ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಹುಡ್ ಅಡಿಯಲ್ಲಿ 5G ಹೊಂದಾಣಿಕೆಯ ಪ್ರೊಸೆಸರ್ ಅನ್ನು ನಿರೀಕ್ಷಿಸಬಹುದು. ಪ್ರಸ್ತುತ, ಕಂಪನಿಯು ಇತರ ವಿವರಗಳನ್ನು ಬಹಿರಂಗಪಡಿಸಿಲ್ಲ. ಆದರೆ, ಇದು ರಿಯಲ್‌ಮಿ C63 4G ಫೋನನ್ನು ಹೋಲುತ್ತದೆ.

Realme C63 4G ಫೋನಿನ ಫೀಚರ್ಸ್‌

Realme C63 4G ಫೋನ್ 6.74 ಇಂಚಿನ HD + ಡಿಸ್ಪ್ಲೇ ಜೊತೆಗೆ 90Hz ರಿಫ್ರೆಶ್ ದರವನ್ನು ಹೊಂದಿದೆ. ಇದು Unisoc T612 ಪ್ರೊಸೆಸರ್‌ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಜೊತೆಗೆ, 4GB RAM ಮತ್ತು 128GB ಸ್ಟೋರೇಜ್‌ ಆಯ್ಕೆ ಒಳಗೊಂಡಿದೆ. ಇದು Android 14 OS ನಲ್ಲಿ ಕಾರ್ಯನಿರ್ವಹಿಸುತ್ತದೆ

ಈ ಫೋನ್ 50MP ಮುಖ್ಯ ಕ್ಯಾಮೆರಾ ಮತ್ತು 8MP ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 45W SUPERVOOC ಚಾರ್ಜಿಂಗ್ ಸಫೋರ್ಟ್‌ ಪಡೆದಿದೆ. ಈ ರಿಯಲ್‌ಮಿ ಫೋನ್ ಜೇಡ್ ಗ್ರೀನ್ ಮತ್ತು ಲೆದರ್ ಬ್ಲೂ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ. ಮತ್ತು ಭಾರತದಲ್ಲಿ ಇದರ ಬೆಲೆ 8,999 ರೂ. ಇದೆ.

Best Mobiles in India

English summary
Realme C63 5G India Launch Confirmed on August 12; Check Expected Features and Specifications.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+