Home
ಮೊಬೈಲ್

ಆ.12ಕ್ಕೆ ಬರುತ್ತೆ ಚಿರತೆ ವೇಗದ ಫೋನ್; ಅಬ್ಬಾ..! ಏನಿದೆ ವಿಶೇಷತೆ?

ಆಷಾಢ ಕಳೆಯಿತು.. ಶ್ರವಣ ಮಾಸ ಮರಳಿತು..! ಭಾರತೀಯ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್‌ಗಳ ಬಿಡುಗಡೆ ಭರಾಟೆ ಜೋರಾಯಿತು. ಸ್ಮಾರ್ಟ್‌ಫೋನ್ ಪ್ರಿಯರಿಗೆ ಹಬ್ಬವೋ ಹಬ್ಬ! ಹೌದು, ರಿಯಲ್‌ಮಿ (Realme) ಕಂಪನಿಯ ಹೊಸ ಫೋನ್‌ ಎಂಟ್ರಿಗೆ ದಿನಾಂಕ ಫಿಕ್ಸ್ ಆಗಿದೆ. ಕಂಪನಿಯು ತನ್ನ 'C' ಸರಣಿಯಲ್ಲಿ 4G ಆವೃತ್ತಿಯ ರಿಯಲ್‌ಮಿ ಸಿ63 (Realme C63) ಫೋನನ್ನು ಕಳೆದ ತಿಂಗಳು ಬಿಡುಗಡೆ ಮಾಡಿತ್ತು. ಇದೀಗ, ಈ ಫೋನಿನ 5G ಆವೃತ್ತಿಯನ್ನು ಬಿಡುಗಡೆ ಮಾಡುತ್ತಿದೆ. ಬನ್ನಿ, ಈ ಫೋನಿನ ಬಿಡುಗಡೆ ದಿನಾಂಕ ಮತ್ತು ಫೀಚರ್ಸ್‌ಗಳನ್ನು ತಿಳಿಯೋಣ.

ಮುಂಬರುವ Realme C63 5G ಸ್ಮಾರ್ಟ್‌ಫೋನಿನ ಟೀಸರ್ ಅನ್ನು ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಹಂಚಿಕೊಳ್ಳಲಾಗಿದೆ. ಟೀಸರ್ ಚಿತ್ರದ ಪ್ರಕಾರ, Realme C63 5G ಫೋನ್ ಆಗಸ್ಟ್ 12 ರಂದು ಬಿಡುಗಡೆಯಾಗಲಿದೆ. ಕಂಪನಿಯು ಈ ಫೋನ್ ಅನ್ನು ಗೋಲ್ಡನ್ ಮತ್ತು ಗ್ರೀನ್ ಎಂಬ ಎರಡು ಬಣ್ಣದ ಆಯ್ಕೆಗಳಲ್ಲಿ ತೋರಿಸಿದೆ. ಕಂಪನಿಯ ಪೋಸ್ಟ್ ಪ್ರಕಾರ, ಈ ಫೋನ್ ಸ್ಪೀಡ್‌, ಸ್ವಿಫ್ಟ್, ಸ್ಮೂತ್ ಮತ್ತು 5G ಚಾಂಪಿಯನ್ ಆಗಿರಲಿದೆ.

ಆ.12ಕ್ಕೆ ಬರುತ್ತೆ ಚಿರತೆ ವೇಗದ ಫೋನ್; ಅಬ್ಬಾ..! ಏನಿದೆ ವಿಶೇಷತೆ?

Realme C63 5G ಬಿಡುಗಡೆ ವಿವರ

ರಿಯಲ್‌ಮಿ ಸಿ63 5G (Realme C63 5G) ಫೋನ್ ಭಾರತದಲ್ಲಿ ಆಗಸ್ಟ್ 12 ರಂದು ಮಧ್ಯಾಹ್ನ 12 ಗಂಟೆಗೆ ಬಿಡುಗಡೆಯಾಗಲಿದೆ. ಕಂಪನಿಯು ಬಿಡುಗಡೆ ದಿನಾಂಕವನ್ನು ಖಚಿತಪಡಿಸುವುದರ ಜೊತೆಗೆ, ಈ ಫೋನಿನ ಮೊದಲ ನೋಟವನ್ನು ಬಹಿರಂಗಪಡಿಸಿದೆ. ಮುಂಬರುವ ಫೋನ್ ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆಯಾದ Realme V60 ಫೋನಿನಂತೆಯೇ ಕಾಣುತ್ತದೆ. ಪ್ರಸ್ತುತ, ಕಂಪನಿಯು ಇತರ ವಿವರಗಳನ್ನು ಬಹಿರಂಗಪಡಿಸಿಲ್ಲ.

Realme C63 5G ಫೋನಿನ ವಿಶೇಷತೆಗಳು

Realme C63 5G ಹಿಂಭಾಗದ ಫಲಕದಲ್ಲಿ ದೊಡ್ಡ ಬಾಗಿದ ಚದರ ಆಕಾರದ ಕ್ಯಾಮೆರಾ ಮಾಡ್ಯೂಲ್ ಅನ್ನು ಹೊಂದಿದೆ. ಇದು ಡ್ಯುಯಲ್ ಕ್ಯಾಮೆರಾ ಸೆಟಪ್ ಮತ್ತು ಎಲ್ಇಡಿ ಫ್ಲ್ಯಾಷ್ ಹೊಂದಿದೆ. ಈ ಫೋನ್‌ನ ಮುಂಭಾಗದ ಫಲಕವು ಪಂಚ್-ಹೋಲ್ ಫ್ಲಾಟ್ ಡಿಸ್ಪ್ಲೇಯನ್ನು ಹೊಂದಿದೆ. ಫೋನಿನ ಪೋಸ್ಟರ್‌ನಲ್ಲಿ ಚಿರತೆಯನ್ನು ತೋರಿಸಲಾಗಿದೆ. ಈ ಫೋನಿನ ಹಿಂಭಾಗದಲ್ಲಿ ರಿಯಲ್‌ಮಿ ಬ್ರ್ಯಾಂಡಿಂಗ್ ಕಾಣಬಹುದು.

ಮೈಕ್ರೋಸೈಟ್ ಪ್ರಕಾರ, Realme C63 5G ಫ್ಲಾಟ್ ಫ್ರೇಮ್‌ನೊಂದಿಗೆ ಬಾಕ್ಸ್ ಡಿಸೈನ್ ಹೊಂದಿದೆ. ಬಲಭಾಗದಲ್ಲಿರುವ ಪವರ್ ಬಟನ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಆಗಿಯೂ ಕೆಲಸ ಮಾಡಲಿದೆ. ಮುಂಭಾಗದಲ್ಲಿ, ಮಧ್ಯದಲ್ಲಿ ಜೋಡಿಸಲಾದ ಪಂಚ್-ಹೋಲ್ ಕಟೌಟ್ ಡಿಸ್ಲ್ಪೇ ಇದೆ. ಇದು ಗ್ರೀನ್ ಮತ್ತು ಗೋಲ್ಡ್ ಬಣ್ಣದ ಆಯ್ಕೆಗಳಲ್ಲಿ ಬರುತ್ತದೆ. ಹುಡ್ ಅಡಿಯಲ್ಲಿ 5G ಹೊಂದಾಣಿಕೆಯ ಪ್ರೊಸೆಸರ್ ನಿರೀಕ್ಷಿಸಬಹುದು. ಇದು ರಿಯಲ್‌ಮಿ ಸಿ63 4G ಫೋನನ್ನು ಹೋಲುತ್ತದೆ.

ಈ ಸುದ್ದಿ ಓದಿದ್ದೀರಾ?: 50 ಸಾವಿರಕ್ಕೆ ಬಿಡುಗಡೆಯಾದ ಫೋನ್.. ಆ.13ಕ್ಕೆ ಸೇಲ್; ವಿಶೇಷತೆಗಳೇನು?

Realme V60 ಫೋನಿನ ಫೀಚರ್ಸ್‌

ಮುಂಬರು Realme C63 5G ಫೊನಿನ ​ಫೀಚರ್ಸ್‌ಗಳನ್ನು ಕಂಪನಿಯು ಇನ್ನೂ ಬಹಿರಂಗಪಡಿಸಿಲ್ಲ. ನೀವು ಇದೇ ರೀತಿಯ ವಿನ್ಯಾಸವನ್ನು ಹೊಂದಿರುವ Realme V60 ಫೋನಿನ ವೈಶಿಷ್ಟ್ಯಗಳನ್ನು ಕಾಣಬಹುದು.

ಡಿಸ್‌ಪ್ಲೇ: Realme V60 ಸ್ಮಾರ್ಟ್‌ಫೋನ್ 6.67 ಇಂಚಿನ HD+ LCD ಡಿಸ್ಪ್ಲೇಯನ್ನು ಹೊಂದಿದೆ. ಜೊತೆಗೆ 720×1604 ಪಿಕ್ಸೆಲ್‌ಗಳ ರೆಸಲ್ಯೂಶನ್, 120Hz ರಿಫ್ರೆಶ್ ರೇಟ್ ಮತ್ತು 625 nits ಬ್ರೈಟ್‌ನೆಸ್ ಹೊಂದಿದೆ.

ಪ್ರೊಸೆಸರ್: ಈ ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 6300 SoC ಪ್ರೊಸೆಸರ್‌ನೊಂದಿಗೆ ಕೆಲಸ ನಿರ್ವಹಿಸಲಿದೆ. ಈ ಫೋನ್ 8GB RAM + 256GB ಇಂಟರ್ನಲ್ ಸ್ಟೋರೇಜ್‌ ಬರುತ್ತದೆ.

ಕ್ಯಾಮೆರಾ: Realme V60 ಫೋನ್ 32MP ಪ್ರಾಥಮಿಕ ಹಿಂಬದಿಯ ಕ್ಯಾಮೆರಾ ಸಂವೇದಕವನ್ನು ಹೊಂದಿದೆ. ಸೆಲ್ಫಿಗಳು ಮತ್ತು ವಿಡಿಯೋ ಕರೆಗಳಿಗಾಗಿ 8MP ಫ್ರಂಟ್ ಕ್ಯಾಮೆರಾ ಇದೆ.

ಬ್ಯಾಟರಿ: Realme V60 ಫೋನ್ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ.

Best Mobiles in India

English summary
Realme C63 5G To Launch On August 12 In India: Check Price, specifications and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+