Home
ಮೊಬೈಲ್

ಜುಲೈ 4ಕ್ಕೆ ಎಂಟ್ರಿ ಕೊಡಲಿದೆ Realmeಯ ಈ ಹೊಸ ಫೋನ್: ಖರೀದಿಗೆ ಕ್ಯೂ ಗ್ಯಾರಂಟಿ!

ರಿಯಲ್‌ಮಿ ಕಂಪನಿ ಮೊಬೈಲ್ ಪ್ರಿಯರಿಗೆ ಕೊನೆಗೂ ಖುಷಿ ಸುದ್ದಿ ನೀಡಿದೆ. ತನ್ನ 'C' ಸರಣಿಯ ಹೊಚ್ಚ ಹೊಸ ಮೊಬೈಲ್ ಅನ್ನು ಇದೇ ಜುಲೈ 3ರಂದು ಭಾರತದಲ್ಲಿ ಬಿಡುಗಡೆ ಮಾಡಲಿದೆ. ಹೌದು, ರಿಯಲ್‌ಮಿ ಕಂಪನಿಯು ಟೆಕ್‌ ವಲಯದಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ ವಿಭಿನ್ನ ಶ್ರೇಣಿಯ ಫೋನ್‌ಗಳನ್ನು ಪರಿಚಯಿಸಿ ಗ್ರಾಹಕರ ಮನಸ್ಸನ್ನೂ ಗೆದ್ದಿದೆ. ಹೀಗಾಗಿ, ರಿಯಲ್‌ಮಿ ಸ್ಮಾರ್ಟ್‌ಫೋನ್‌ಗಳು ಗ್ರಾಹಕರ ಹಾಟ್ ಫೇವರಿಟ್‌ ಎನಿಸಿವೆ. ಕಡಿಮೆ ಬೆಲೆಯಲ್ಲಿ ಭರಪೂರ ಫೀಚರ್ಸ್‌ನೊಂದಿದೆ ಮೊಬೈಲ್‌ಗಳನ್ನು ಬಿಡುಗಡೆಗೊಳಿಸುವ ಮೂಲಕ ಸಖತ್ ಬೇಡಿಕೆ ಹೊಂದಿರುವ ರಿಯಲ್‌ಮಿ, ಇದೀಗ ನೂತನ ಮೊಬೈಲ್ ಒಂದನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಲು ಸಜ್ಜಾಗಿದೆ. ಈ ಹೊಸ ಫೋನ್ ಯಾವುದು? ಬೆಲೆ ಮತ್ತು ಫೀಚರ್ಸ್‌ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

ರಿಯಲ್‌ಮಿ ಕಂಪನಿಯು ಇತ್ತೀಚೆಗೆ Realme GT 6 ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಿ ಸದ್ದು ಮಾಡಿತ್ತು. ಇದೀಗ, ಶೀಘ್ರದಲ್ಲೇ ಮತ್ತೊಂದು ಫೋನ್‌ ಬಿಡುಗಡೆಯಾಗುವುದು ಪಕ್ಕಾ ಆಗಿದೆ. Realme C63 ಸ್ಮಾರ್ಟ್‌ಫೋನ್ ಭಾರತದಲ್ಲಿ ಜುಲೈ 4 ರಂದು ಬಿಡುಗಡೆಯಾಗಲಿದೆ. ಇದು 50MP ಕ್ಯಾಮೆರಾ, 5000mAh ಬ್ಯಾಟರಿ, UNISOC T612 ಆಕ್ಟಾ-ಕೋರ್ 12 nm ಪ್ರೊಸೆಸರ್ ಹೊಂದಿದೆ. ಈ ಮೊಬೈಲ್‌ ಕುರಿತ ಸಂಪೂರ್ಣ ವಿವರಗಳಿಗಾಗಿ ಮುಂದೆ ಓದಿ.

ಜುಲೈ 4ಕ್ಕೆ ಎಂಟ್ರಿ ಕೊಡಲಿದೆ Realmeಯ ಈ ಹೊಸ ಫೋನ್: ಖರೀದಿಗೆ ಕ್ಯೂ ಗ್ಯಾರಂಟಿ!

ಇಂಡೋನೇಷ್ಯಾದಲ್ಲಿ ಇತ್ತೀಚೆಗೆ ತನ್ನ 'C' ಸರಣಿಯ ರಿಯಲ್‌ಮಿ C63 ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿತ್ತು. ಈ ಮೊಬೈಲ್‌ ಜೂನ್ 5 ರಂದು ಮಲೇಷ್ಯಾದಲ್ಲಿಯೂ ಬಿಡುಗಡೆಯಾಗಿತ್ತು. ಬಳಿಕ, Realme C63 ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡುವ ಕುರಿತು ಮಾಹಿತಿ ಹಂಚಿಕೊಂಡಿತ್ತು. ಈ ಮೂಲಕ ಮೊಬೈಲ್‌ ಪ್ರಿಯರಲ್ಲಿ ನಿರೀಕ್ಷೆ ಹುಟ್ಟುಹಾಕಿತ್ತು. ಅದರಂತೆ, ಅಧಿಕೃತವಾಗಿ ರಿಯಲ್‌ಮಿ C63 ಮೊಬೈಲ್‌ ಅನ್ನು ಮಾರುಕಟ್ಟೆಗೆ ಪರಿಚಯಿಸಲಿದೆ.

50MP ಮುಖ್ಯ ಕ್ಯಾಮರಾ ಮತ್ತು8MP ಫ್ರಂಟ್ ಕ್ಯಾಮರಾ

ರಿಯಲ್‌ಮಿ C63 ಫೋನ್ ಕೇವಲ 7.74mm ದಪ್ಪವನ್ನು ಹೊಂದಿದೆ. ಇದು 8GB RAM ಮತ್ತು ಹೆಚ್ಚುವರಿ 8GB ವರ್ಚುವಲ್ RAM ಪಡೆದಿದೆ. Unisoc T612 SoC ಪ್ರೊಸೆಸರ್‌ನೊಂದಿಗೆ (ಜೊತೆಗೆ Mali-G57 GPU) ಕಾರ್ಯನಿರ್ವಹಿಸಲಿದೆ. ಡಿಸ್ಪ್ಲೇಯು 560nits ಗರಿಷ್ಠ ಬ್ರೈಟ್‌ನೆಸ್ ಹೊಂದಿದೆ. 50MP ಹಿಂಬದಿಯ ಕ್ಯಾಮರಾ, 8MP ಫ್ರಂಟ್ ಕ್ಯಾಮರಾ ಇದೆ. ಫೋನ್ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಹೊಂದಿದೆ.

5000mAh ಬ್ಯಾಟರಿ, 45W ವೇಗದ ಚಾರ್ಜಿಂಗ್‌

ಈ ಫೋನ್‌ನ ಬ್ಯಾಟರಿ ಬ್ಯಾಕಪ್ ಅದ್ಭುತವಾಗಿದೆ. ಇದು 45W ವೇಗದ ಚಾರ್ಜಿಂಗ್‌ನೊಂದಿಗೆ 5000mAh ಬ್ಯಾಟರಿ ಬ್ಯಾಕಪ್ ಅನ್ನು ಒದಗಿಸುತ್ತದೆ. ಇದು ಏರ್ ಗೆಸ್ಚರ್‌ಗಳನ್ನು ಹೊಂದಿದ್ದು, ಕಾಲ್‌ಗಳಿಗೆ ಉತ್ತರಿಸಲು, ಇನ್‌ಕಮಿಂಗ್ ಕರೆಗಳನ್ನು ಮ್ಯೂಟ್ ಮಾಡಲು ಮತ್ತು ವೀಡಿಯೊ ಸ್ಟ್ರೀಮ್‌ಗಳ ನಡುವೆ ಮೇಲಕ್ಕೆ/ಕೆಳಗೆ ಸ್ವೈಪ್ ಮಾಡುವ ಆಯ್ಕೆಯನ್ನು ಹೊಂದಿದೆ.

ಈ ಹೊಸ ಫೋನ್‌ನ ಬೆಲೆ ಎಷ್ಟು?

ರಿಯಲ್‌ಮಿ C63 ಇದೇ ಜೂನ್ 5 ರಿಂದ ಇಂಡೋನೇಷ್ಯಾದಲ್ಲಿ ತನ್ನ ಮಾರಾಟ ಆರಂಭಿಸಿತ್ತು. ಇಂಡೋನೇಷಿಯನ್ ವೆಬ್‌ಸೈಟ್‌ನಲ್ಲಿ ಇದರ ಆರಂಭಿಕ ಬೆಲೆ 10,250 ರೂ. ಇತ್ತು. 6GB/128GB ಸ್ಟೋರೇಜ್ ವೇರಿಯಂಟ್‌ನ ಬೆಲೆ 10,250 ರೂಪಾಯಿ (IDR1,999,000 = $125/€115). 8GB/128GB ಸ್ಟೋರೇಜ್‌ ಮಾದರಿಯ ಬೆಲೆ 11,790 ರೂಪಾಯಿ (IDR2,299,000 = $140/€130) ಇದೆ. ಭಾರತದಲ್ಲಿ ಇದೇ ಬೆಲೆಗೆ ಬಿಡುಗಡೆಯಾಗುತ್ತಾ? ಅಥವಾ ಬೇರೆ ಬೆಲೆಯೊಂದಿಗೆ ಲಾಂಚ್‌ ಆಗುತ್ತಾ? ಅನ್ನೋದನ್ನು ಕಾದುನೋಡಬೇಕಿದೆ.

ಜುಲೈ 4ಕ್ಕೆ ಎಂಟ್ರಿ ಕೊಡಲಿದೆ Realmeಯ ಈ ಹೊಸ ಫೋನ್: ಖರೀದಿಗೆ ಕ್ಯೂ ಗ್ಯಾರಂಟಿ!

Realme C63 ಸಂಪೂರ್ಣ ಫೀಚರ್ಸ್‌ಗಳು

  • ಡಿಸ್ಲ್ಪೇ: 6.74 ಇಂಚಿನ (1600 x 720 ಪಿಕ್ಸೆಲ್‌ಗಳು) HD+ IPS LCD ಡಿಸ್ಲ್ಪೇ ಜೊತೆಗೆ 90Hz ರಿಫ್ರೆಶ್ ದರ, 180Hz ಟಚ್ ಸ್ಯಾಂಪ್ಲಿಂಗ್ ರೇಟ್, 450nits ಗರಿಷ್ಠ ಬ್ರೈಟ್‌ನೆಸ್.
  • ಪ್ರೊಸೆಸರ್: UNISOC T612 ಆಕ್ಟಾ-ಕೋರ್ 12nm ಪ್ರೊಸೆಸರ್ ಜೊತೆಗೆ Mali-G57 GPU.
  • ಸ್ಟೋರೇಜ್: 6GB/8GB LPDDR4X RAM ಜೊತೆಗೆ 128GB ಸ್ಟೋರೇಜ್, ಮೈಕ್ರೊ SD ಜೊತೆಗೆ 2TB ವರೆಗೆ ವಿಸ್ತರಿಸಬಹುದಾದ ಮೆಮೊರಿ.
  • ಸಿಮ್: ಡ್ಯುಯಲ್ ಸಿಮ್ (ನ್ಯಾನೋ + ನ್ಯಾನೋ + ಮೈಕ್ರೊ ಎಸ್‌ಡಿ).
  • ಓಎಸ್: ರಿಯಲ್‌ಮಿ UI T ಆವೃತ್ತಿಯೊಂದಿಗೆ Android 13.
  • ಕ್ಯಾಮೆರಾ: 50MP ಹಿಂಬದಿಯ ಕ್ಯಾಮೆರಾ (ಜೊತೆಗೆ f/1.8 aperture, depth sensor, LED flash).
  • ಫ್ರಂಟ್ ಕ್ಯಾಮೆರಾ: 8MP ಫ್ರಂಟ್ ಕ್ಯಾಮೆರಾ (ಜೊತೆಗೆ f/2.0 aperture), ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್.
  • ಆಡಿಯೋ ಜ್ಯಾಕ್: 3.5mm ಆಡಿಯೋ ಜ್ಯಾಕ್ (bottom-ported speaker).
  • ಅಳತೆ: 167.26×76.67×7.74 mm, ತೂಕ: 189g (Jade Green) / 191g (Leather Blue)
  • ಬ್ಯಾಟರಿ: 5000mAh ಬ್ಯಾಟರಿ ಬ್ಯಾಕಪ್.
  • ಚಾರ್ಜಿಂಗ್: 45W SuperVOOC ವೇಗದ ಚಾರ್ಜಿಂಗ್.
  • ಕನೆಕ್ಟಿವಿಟಿ ಆಯ್ಕೆಗಳು: ಡ್ಯುಯಲ್ 4G VoLTE, Wi-Fi 802.11 ac (2.4GHz + 5GHz), ಬ್ಲೂಟೂತ್ 5.=0, GPS + ಗ್ಲೋನಾಸ್, USB ಟೈಪ್-ಸಿ.
Best Mobiles in India

English summary
Realme C63 Launching on July 3 in India, With 50MP Primary Camera and 45W Charging. Check price and specifications
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+