Realme C63 ಫೋನ್ ಬಿಡುಗಡೆ: ಬೆಲೆ, ಫೀಚರ್ಸ್ ಬಗ್ಗೆ ಇಲ್ಲಿದೆ ಮಾಹಿತಿ
ರಿಯಲ್‌ಮಿ (Realme) ಕಂಪನಿಯು ಇಂಡೋನೇಷ್ಯಾದಲ್ಲಿ ತನ್ನ 'ಸಿ' ಸರಣಿಯ Realme C63 ನೂತನ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಇದು Unisoc T612 SoC ಪ್ರೊಸೆಸರ್ ಹೊಂದಿದೆ. ಜೊತೆಗೆ, Android 14 ಅನ್ನು ರನ್ ಮಾಡುತ್ತದೆ ಮತ್ತು 8GB RAM ಮತ್ತು 256GB ಸ್ಟೋರೇಜ್ ಹೊಂದಿದೆ. ಉಳಿದಂತೆ, ಕೆಲವು ಹಳೆಯ ಮಾದರಿಗಳಂತೆಯೇ ಫೀಚರ್ಸ್ ಮತ್ತು ವಿನ್ಯಾಸವನ್ನು ಹೊಂದಿದೆ. ಈ ಮೊಬೈಲ್ ಜೂನ್ 5 ರಂದು ಮಲೇಷ್ಯಾದಲ್ಲಿ ಬಿಡುಗಡೆಯಾಗಲಿದೆ. ಹಾಗಿದ್ರೆ, ಈ ಸ್ಮಾರ್ಟ್‌ಫೋನ್ ಏನೆಲ್ಲಾ ಫೀಚರ್ಸ್ ಹೊಂದಿದೆ ಎಂಬ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
ರಿಯಲ್‌ಮಿ ಸಂಸ್ಥೆ ತನ್ನ 'ಸಿ' ಸರಣಿಯ Realme C63 ಸ್ಮಾರ್ಟ್‌ಫೋನ್ ಬಿಡುಗಡೆ ಕುರಿತು ಇತ್ತೀಚೆಗೆ ಮಾಹಿತಿ ಹಂಚಿಕೊಂಡಿತ್ತು. ಈ ಮೂಲಕ ಮೊಬೈಲ್ ಪ್ರಿಯರಲ್ಲಿ ನಿರೀಕ್ಷೆ ಹುಟ್ಟುಹಾಕಿತ್ತು. ಇದೀಗ, ಅಧಿಕೃತವಾಗಿ ರಿಯಲ್‌ಮಿ C63 ಮೊಬೈಲ್ ಅನ್ನು ಮಾರುಕಟ್ಟೆಹೆ ಪರಿಚಯಿಸಿದೆ. ಈ ಫೋನ್ 7.74mm ದಪ್ಪ ಇದೆ. 6.74 ಇಂಚಿನ HD+ 90Hz LCD ಡಿಸ್ಪೇ ಮತ್ತು 8MP ಸೆಲ್ಫಿ (U-ಆಕಾರದ ನಾಚ್)ಕ್ಯಾಮೆರಾವನ್ನು ಹೊಂದಿದೆ.

Realme C63 8GB RAM ಮತ್ತು ಹೆಚ್ಚುವರಿ 8GB ವರ್ಚುವಲ್ RAM ಹೊಂದಿದೆ. ಡಿಸ್ಪ್ಲೇಯು 560 nits ಗರಿಷ್ಠ Brightness ಹೊಂದಿದೆ. 50MP ಹಿಂಬದಿಯ ಕ್ಯಾಮರಾ, ಫೋನ್ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಹೊಂದಿದೆ. 45W ವೇಗದ ಚಾರ್ಜಿಂಗ್‌ನೊಂದಿಗೆ 5000mAh ಬ್ಯಾಟರಿ ಬ್ಯಾಕಪ್ ಒದಗಿಸುತ್ತದೆ. ಇದು ಏರ್ ಗೆಸ್ಚರ್‌ಗಳನ್ನು ಹೊಂದಿದ್ದು, ಕಾಲ್‌ಗಳಿಗೆ ಉತ್ತರಿಸಲು, ಇನ್‌ಕಮಿಂಗ್ ಕರೆಗಳನ್ನು ಮ್ಯೂಟ್ ಮಾಡಲು ಮತ್ತು ವೀಡಿಯೊ ಸ್ಟ್ರೀಮ್‌ಗಳ ನಡುವೆ ಮೇಲಕ್ಕೆ/ಕೆಳಗೆ ಸ್ವೈಪ್ ಮಾಡುವ ಆಯ್ಕೆಯನ್ನು ಹೊಂದಿದೆ.
Realme C63 ಮೊಬೈಲ್‌ನ ವಿಶೇಷತೆಗಳೇನು?
- 6.74 ಇಂಚಿನ (1600 x 720 ಪಿಕ್ಸೆಲ್‌ಗಳು) HD+ IPS LCD ಡಿಸ್ಲ್ಪೇ ಜೊತೆಗೆ 90Hz ರಿಫ್ರೆಶ್ ದರ, 180Hz ಟಚ್ ಸ್ಯಾಂಪ್ಲಿಂಗ್ ರೇಟ್, 450 nits ಗರಿಷ್ಠ Brightness.
- UNISOC T612 ಆಕ್ಟಾ-ಕೋರ್ 12nm ಪ್ರೊಸೆಸರ್ ಜೊತೆಗೆ Mali-G57 GPU.
- 6GB/8GB LPDDR4X RAM ಜೊತೆಗೆ 128GB ಸ್ಟೋರೇಜ್, ಮೈಕ್ರೊ SD ಜೊತೆಗೆ 2TB ವರೆಗೆ ವಿಸ್ತರಿಸಬಹುದಾದ ಮೆಮೊರಿ.
- ಡ್ಯುಯಲ್ ಸಿಮ್ (ನ್ಯಾನೋ + ನ್ಯಾನೋ + ಮೈಕ್ರೊ ಎಸ್‌ಡಿ).
- ರಿಯಲ್‌ಮಿ UI T ಆವೃತ್ತಿಯೊಂದಿಗೆ Android 13.
- 50MP ಹಿಂಬದಿಯ ಕ್ಯಾಮೆರಾ (ಜೊತೆಗೆ f/1.8 aperture, depth sensor, LED flash).
- 8MP ಫ್ರಂಟ್ ಕ್ಯಾಮರಾ (ಜೊತೆಗೆ f/2.0 aperture).
- ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್.
- 3.5mm ಆಡಿಯೋ ಜ್ಯಾಕ್(bottom-ported speaker).
- ಅಳತೆ: 167.26×76.67×7.74 mm, ತೂಕ: 189g (Jade Green) / 191g (Leather Blue).
- ಡ್ಯುಯಲ್ 4G VoLTE, Wi-Fi 802.11 ac (2.4GHz + 5GHz), ಬ್ಲೂಟೂತ್ 5.=0, GPS + ಗ್ಲೋನಾಸ್, USB ಟೈಪ್-ಸಿ.
- 45W SuperVOOC ವೇಗದ ಚಾರ್ಜಿಂಗ್ ಜೊತೆಗೆ 5000mAh ಬ್ಯಾಟರಿ ಬ್ಯಾಕಪ್.
ಜೂನ್ 5 ರಿಂದ Realme C63 ಮಾರಾಟ
Realme C63 ಸ್ಮಾರ್ಟ್‌ಫೋನ್ ಇದೇ ಜೂನ್ 5 ರಿಂದ ಇಂಡೋನೇಷ್ಯಾದಲ್ಲಿ ಸೇಲ್ ಆರಂಭಿಸಲಿದೆ. ಇನ್ನೂ ಇಂಡೋನೇಷಿಯನ್ ವೆಬ್‌ಸೈಟ್‌ನಲ್ಲಿ Realme C63 ಮೈಬೈಲ್ ದರ ಲಭ್ಯವಿದೆ. 6GB/128GBಯ ಸ್ಮಾರ್ಟ್‌ಫೋನ್ 10,250 ರೂಪಾಯಿ (IDR1,999,000 = $125/€115) ಇದೆ. 8GB/128GB ಸ್ಮಾರ್ಟ್‌ಫೋನ್ ಬೆಲೆ 11,790 ರೂಪಾಯಿ (IDR2,299,000 = $140/€130) ಇದೆ.
ಗಿಜ್‌ಬಾಟ್ ಕನ್ನಡ ವೆಬ್‌ಸೈಟ್ ತಂತ್ರಜ್ಞಾನ ಸಂಬಂಧಿಸಿದ ಸುದ್ದಿಗಳನ್ನು ತ್ವರಿತವಾಗಿ ನೀಡುತ್ತದೆ. ಜೊತೆಗೆ, ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚೆಗೆ ಬಿಡುಗಡೆಯಾದ ಸ್ಮಾರ್ಟ್‌ಪೋನ್, ಕಂಪ್ಯೂಟರ್, ಗ್ಯಾಡ್ಜೆಟ್‌ಗಳ ಮತ್ತು ಆನ್‌ಲೈನ್ ಜಗತ್ತಿನ ಕ್ಷಣ-ಕ್ಷಣದ ಸುದ್ದಿ, ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಎಕ್ಸ್ ಖಾತೆ, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳನ್ನು ತಪ್ಪದೇ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








