ಈ ಫೋನ್ ಬೆಲೆ ತುಂಬಾ ಕಡಿಮೆ: ಜೂನ್ 14ರಿಂದ ಸೇಲ್ ಆರಂಭ: ಬೆಲೆ ಎಷ್ಟೆಂದು ತಿಳಿದ್ರೆ ವಾವ್ ಅಂತೀರಾ!
ಇತ್ತೀಚೆಗೆ ತನ್ನ ವಿಭಿನ್ನ ಲುಕ್ ಮತ್ತು ಅಪ್ಡೇಟೆಡ್ ಫೀಚರ್ಸ್‌ಗಳೊಂದಿಗೆ Realme C65 5G ಸ್ಮಾರ್ಟ್‌ಫೋನ್ ಅನ್ನು ಪರಿಚಯಿಸಲಾಗಿತ್ತು. ರಿಯಲ್‌ಮಿ ಕಂಪನಿಯ ಈ ಮೊಬೈಲ್ ಬೆಲೆ, ಡಿಸೈನ್ ಹಾಗೂ ಅದ್ಭುತ ಫೀಚರ್ಸ್‌ಗಳಿಂದ ಗಮನ ಸೆಳೆದಿತ್ತು. ಈ ಮೊಬೈಲ್ ಜೂನ್ 14 ರಂದು ತನ್ನ ಮೊದಲ ಮಾರಾಟ ಪ್ರಾರಂಭಿಸಲಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 6300 SoC ಪ್ರೊಸೆಸರ್ ಹೊಂದಿದೆ. 4GB + 64 GB, 4GB + 128 GB ಹಾಗೂ 6GB + 128 GB ವೇರಿಯಂಟ್ ಆಯ್ಕೆಯನ್ನು ಹೊಂದಿದೆ. ಈ ಅಗ್ಗದ ಸ್ಮಾರ್ಟ್‌ಫೋನ್ ಖರೀದಿಸಲು ಮೊಬೈಲ್ ಪ್ರಿಯರು ತುದಿಗಾಲಿನಲ್ಲಿ ನಿಂತಿದ್ದಾರೆ.
ಚೀನಾ ಮೂಲದ ರಿಯಲ್‌ಮಿ ಕಂಪನಿ ಮಾರುಕಟ್ಟೆಯಲ್ಲಿ ಧೂಳ್ಳೆಬಿಸಲು ಸಜ್ಜಾಗಿದೆ. ಗ್ರಾಹಕರನ್ನು ತನ್ನತ್ತ ಸೆಳೆಯಲು ದೊಡ್ಡ ಪ್ಲ್ಯಾನ್ ಮಾಡಿಕೊಂಡಿದೆ. ಬಜೆಟ್ ಫ್ರೆಂಡ್ಲಿ Realme C65 5G ಫೋನ್‌ನ ಸೇಲ್ ಆರಂಭಿಸಲು ಸಿದ್ಧವಾಗಿದೆ. ಇದು ಚೀನಾ ಕಂಪನಿಯ ಅಗ್ಗದ 5ಜಿ ಸ್ಮಾರ್ಟ್‌ಫೋನ್ ಆಗಿದೆ. ರಿಯಲ್‌ಮಿ ಇಂಡಿಯಾ ತನ್ನ ಸೋಷಿಯಲ್ ಮೀಡಿಯಾದಲ್ಲಿ ಈ ಮೊಬೈಲ್ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದೆ. ಭಾರತದ ಮಾರುಕಟ್ಟೆಯಲ್ಲಿರುವ POCO, Lava, Infinix, itel ಕಂಪನಿಗಳ ಜೊತೆ ಪೈಪೋಟಿ ನಡೆಸಲಿದೆ.

ರಿಯಲ್‌ಮಿ C65 5G ಸ್ಮಾರ್ಟ್‌ಫೋನ್ ಫೀಚರ್ಸ್‌ಗಳು
Realme C65 5G ಮೀಡಿಯಾ ಟೆಕ್ ಡೈಮೆನ್ಸಿಟಿ 6300 SoC ಪ್ರೊಸೆಸರ್ ಸೌಲಭ್ಯ ಹೊಂದಿದೆ. ಅಲ್ಲದೇ 4GB+64GB, 4GB+128GB ಹಾಗೂ 6GB+128GB ವೇರಿಯಂಟ್ ಆಯ್ಕೆಗಳಲ್ಲಿ ಲಭ್ಯವಿದೆ. ಈ ಸ್ಮಾರ್ಟ್‌ಫೋನ್ ಡಿಸ್‌ಪ್ಲೇಯು 1604×720 ಪಿಕ್ಸಲ್ ರೆಸಲ್ಯೂಶನ್ ಸೌಲಭ್ಯ ಹೊಂದಿದೆ. ಜೊತೆಗೆ, 6.67 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಮತ್ತು 625 nits HBM ಬ್ರೈಟ್‌ನೆಸ್ ಸಪೋರ್ಟ್ ಒಳಗೊಂಡಿದೆ. ಈ ಡಿಸ್‌ಪ್ಲೇಯು 120Hz ರಿಫ್ರೆಶ್ ರೇಟ್ ಮತ್ತು 1500:1 ಅನುಪಾತವನ್ನು ಹೊಂದಿದೆ.
ಈ ಫೋನ್‌ನ ಡಿಸ್‌ಪ್ಲೇ ಹೇಗಿರಲಿದೆ?
Realme C65 5G ಸ್ಮಾರ್ಟ್‌ಫೋನ್ 6.67 ಇಂಚಿನ ಎಚ್‌ಡಿ ಪ್ಲಸ್ ಡಿಸ್‌ಪ್ಲೇ ಹೊಂದಿದ್ದು, ಸಂಪೂರ್ಣ ಎಚ್‌ಡಿ ರೆಸಲ್ಯೂಶನ್ ಹೊಂದಿದೆ. ಈ ಮೊಬೈಲ್ ಮಿಡಿಯಾಟೆಕ್ ಹೆಲೋ ಜಿ85 ಪ್ರೊಸೆಸರ್ ಹೊಂದಿದೆ. ಅಲ್ಲದೆ 8ಜಿಬಿ ರ್ಯಾಮ್ ಹಾಗೂ 256 ಜಿಬಿ ಇಂಟರ್ನಲ್ ಸ್ಟೋರೇಜ್ ಹೊಂದಿದೆ. ಅಲ್ಲದೆ, ಈ ಫೋನ್‌ನ ರ್ಯಾಮ್ 8ಜಿಬಿ ವರೆಗೂ ವಿಸ್ತರಿಸಬಹುದಾಗಿದೆ. ಅಲ್ಲದೆ ಇಂಟರ್ನಲ್ ಸ್ಟೋರೆಜ್ ಸಹ, ಮೈಕ್ರೊ ಎಸ್‌ಡಿ ಕಾರ್ಡ್ ಮೂಲಕ 2 ಟಿಬಿ ವರೆಗೆ ವಿಸ್ತರಿಸಿಕೊಳ್ಳಬಹುದು.
ಈ ಫೋನ್‌ನ ಕ್ಯಾಮೆರಾ ಸೆಟಪ್ ಹೇಗಿದೆ?
ರಿಯಲ್‌ಮಿ C65 5G ಮೊಬೈಲ್ ಹಿಂಭಾಗದಲ್ಲಿ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. Realme C65 5G ಮೊಬೈಲ್‌ನ ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಫಿಕ್ಸೆಲ್ ಎಐ ಆಧಾರಿತ ತಂತ್ರಜ್ಞಾನವನ್ನು ಹೊಂದಿದೆ. ಎರಡನೇ ಕ್ಯಾಮೆರಾವು 2 ಮೆಗಾ ಫಿಕ್ಸೆಲ್ ಸೆನ್ಸಾರ್ ಜೊತೆಗೆ, ಎಲ್‌ಇಡಿ ಫ್ಲ್ಯಾಶ್ ಲೈಟ್ ಸೌಲಭ್ಯ ಕೂಡ ಹೊಂದಿದೆ. ಈ ಸ್ಮಾರ್ಟ್‌ಫೋನ್ ಮುಂಭಾಗದಲ್ಲಿ ವಿಡಿಯೋ ಹಾಗೂ ಸೆಲ್ಫಿಗಾಗಿ (ಸೆಲ್ಫಿ ಶೂಟರ್) 8 ಮೆಗಾ ಫಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ.
ಬ್ಯಾಟರಿ ಬ್ಯಾಕಪ್ ಮತ್ತು ಇತರೆ ಫೀಚರ್ಸ್
ಈ Realme C65 5G ಸ್ಮಾರ್ಟ್‌ಫೋನ್ ಬ್ಯಾಟರಿ ಬಗ್ಗೆ ಹೇಳುವುದಾದರೆ, ಇದು 15W ವೇಗದ ಚಾರ್ಜಿಂಗ್ ಸಪೋರ್ಟ್ ಬೆಂಬಲದೊಂದಿಗೆ 5,500mAh ಬ್ಯಾಟರಿ ಬ್ಯಾಕಪ್ ಸಾಮರ್ಥ್ಯ ಹೊಂದಿದೆ. ಇದರ ಜೊತೆಗೆ ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೌಲಭ್ಯದ ಆಯ್ಕೆ ಇದೆ. ಇನ್ನೂ, ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್ ಸಿಮ್, 5G, ವೈಫೈ 5 802.11 a/b/g/n/ac, ಬ್ಲೂಟೂತ್ 5.3 ಸೌಲಭ್ಯಗಳನ್ನು ಒಳಗೊಂಡಿದೆ.
ಈ ಸ್ಮಾರ್ಟ್‌ಫೋನ್‌ನ ಬೆಲೆ ಎಷ್ಟು?
ಇನ್ನೂ Realme C65 5G ಫೋನ್ ಬೆಲೆ ಬಗ್ಗೆ ನೋಡುವುದಾದರೆ, ಮೂರು ರೂಪಾಂತರಗಳಲ್ಲಿ ಮಾರಾಟ ಆರಂಭಿಸಲಿದೆ. 6GB RAM + 128GB ಇಂಟರ್ನಲ್ ಸ್ಟೋರೆಜ್ ಹೊಂದಿರುವ ಫೋನ್ ಬೆಲೆ 12,499 ರೂ., 4GB RAM + 128GB ಇಂಟರ್ನಲ್ ಸ್ಟೋರೆಜ್ ಹೊಂದಿರುವ ಫೋನ್ ಬೆಲೆ 11,499 ರೂ. ಹಾಗೂ 4GB RAM + 64GB ಇಂಟರ್ನಲ್ ಸ್ಟೋರೆಜ್ ಹೊಂದಿರುವ ಫೋನ್ ಅನ್ನು 10,499 ರೂ.ಗೆ ಖರೀದಿಸಬಹುದು.


Click it and Unblock the Notifications








