Home
ಮೊಬೈಲ್

7,699 ರೂ.ಗೆ ಹೊಸ Realme 5G ಫೋನ್ ಬಿಡುಗಡೆ!..6,300mAh ಬ್ಯಾಟರಿ, HD ವೀಡಿಯೊ!

ಭಾರತದ 5G ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯಂತ ಕಡಿಮೆ ಬೆಲೆಯ ವಿರಳ ಫೋನ್‌ಗಳ ಸಾಲಿಗೆ ಹೊಸ Realme ಫೋನ್ ಸೇರಿಕೊಂಡಿದೆ. ಜನಪ್ರಿಯ ಮೊಬೈಲ್ ಬ್ರ್ಯಾಂಡ್ Realme ಕಂಪೆನಿಯು ದೇಶದಲ್ಲಿಂದು Realme C71 5G ಫೋನನ್ನು ಬಿಡುಗಡೆಗೊಳಿಸಿದ್ದು, ಈ ಫೋನ್ ವೇಗದ ಚಾರ್ಜಿಂಗ್ ಜೊತೆಗೆ ರಿವರ್ಸ್ ಚಾರ್ಜಿಂಗ್ ಬೆಂಬಲದೊಂದಿಗೆ 6,300mAh ಬ್ಯಾಟರಿ, AI-ಬೆಂಬಲಿತ ಇಮೇಜಿಂಗ್ ಮತ್ತು ಎಡಿಟಿಂಗ್ ಮತ್ತು HD ವೀಡಿಯೊ ರೆಕಾರ್ಡಿಂಗ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಹಾಗಾದರೆ, ಹೊಸ Realme C71 5G ಫೋನ್ ಹೇಗಿದೆ ನೊಡೋಣ ಬನ್ನಿ.

Realme C71 5G ವೈಶಿಷ್ಟ್ಯಗಳು

ಹೊಸ Realme C71 5G ಫೋನ್ 6.74-ಇಂಚಿನ HD+ (720x1,600 ಪಿಕ್ಸೆಲ್‌ಗಳು) ಡಿಸ್ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇಯು 90Hz ರಿಫ್ರೆಶ್ ರೇಟ್, 180Hz ವರೆಗೆ ಟಚ್ ಸ್ಯಾಂಪ್ಲಿಂಗ್ ದರ ಮತ್ತು 563 nits ಗರಿಷ್ಠ ಬ್ರೈಟ್‌ನೆಸ್ ವೈಶಿಷ್ಟ್ಯಗಳನ್ನು ನೀಡುತ್ತದೆ.

ಕಾರ್ಯಕ್ಷಮತೆಗಾಗಿ, ಈ Realme C71 5G ಫೋನಿನಲ್ಲಿ 6GB ವರೆಗೆ RAM ಮತ್ತು 128GB ವರೆಗೆ ಆನ್‌ಬೋರ್ಡ್ ಸಂಗ್ರಹಣೆಯೊಂದಿಗೆ ಜೋಡಿಸಲ್ಪಟ್ಟಿರುವ ಆಕ್ಟಾ-ಕೋರ್ 12nm Unisoc T7250 SoC ಪ್ರೊಸೆಸರ್ ಇದೆ. ಹಾಗೂ, ಇದು ಆಂಡ್ರಾಯ್ಡ್ 15-ಆಧಾರಿತ Realme UI 6 ನೊಂದಿಗೆ ಕಾರ್ಯನಿರ್ವಹಿಸಲಿದೆ.

7,699 ರೂ.ಗೆ ಹೊಸ Realme 5G ಫೋನ್ ಬಿಡುಗಡೆ!..6,300mAh ಬ್ಯಾಟರಿ, HD ವೀಡಿಯೊ!

ಕ್ಯಾಮೆರಾ ವಿಭಾಗದಲ್ಲಿ, Realme C71 5G ಫೋನಿನ ಹಿಂಭಾಗದಲ್ಲಿ f/2.2 ಅಪಾರ್ಚರ್‌ನೊಂದಿಗೆ 13-ಮೆಗಾಪಿಕ್ಸೆಲ್ ಓಮ್ನಿವಿಷನ್ OV13B ಸಂವೇದವಿದೆ. ಇದು ಆಟೋಫೋಕಸ್ ಬೆಂಬಲಲಿಸುತ್ತದೆ. ಮುಂಭಾಗದಲ್ಲಿ, ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ 5-ಮೆಗಾಪಿಕ್ಸೆಲ್ ಕ್ಯಾಮೆರಾ ಇದೆ.

ಈ ಫೋನ್ HD ವೀಡಿಯೊ ರೆಕಾರ್ಡಿಂಗ್ ಮತ್ತು AI ಎರೇಸರ್, AI ಕ್ಲಿಯರ್ ಫೇಸ್, ಪ್ರೊ ಮೋಡ್ ಮತ್ತು ಡ್ಯುಯಲ್-ವ್ಯೂ ವೀಡಿಯೊದಂತಹ ಇತರ ವೈಶಿಷ್ಟ್ಯಗಳನ್ನು ಬೆಂಬಲಿಸುತ್ತದೆ. ಇದರ ಹಿಂಭಾಗದಲ್ಲಿರುವ ವೃತ್ತಾಕಾರದ ಪಲ್ಸ್ ಲೈಟ್ ಯೂನಿಟ್ ಅನ್ನು ಒಂಬತ್ತು ಬಣ್ಣಗಳಲ್ಲಿ ಮತ್ತು ಐದು ಹೊಳೆಯುವ ಮೋಡ್‌ಗಳಲ್ಲಿ ಕಸ್ಟಮೈಸ್ ಮಾಡಬಹುದು.

7,699 ರೂ.ಗೆ ಹೊಸ Realme 5G ಫೋನ್ ಬಿಡುಗಡೆ!..6,300mAh ಬ್ಯಾಟರಿ, HD ವೀಡಿಯೊ!

ಬ್ಯಾಟರಿ ವಿಭಾಗದಲ್ಲಿ, Realme C71 5G ಫೋನ್ 15W ವೈರ್ಡ್ ಫಾಸ್ಟ್ ಚಾರ್ಜಿಂಗ್ ಮತ್ತು 6W ವೈರ್ಡ್ ರಿವರ್ಸ್ ಚಾರ್ಜಿಂಗ್‌ನೊಂದಿಗೆ 6,300mAh ಬ್ಯಾಟರಿಯನ್ನು ಹೊಂದಿದೆ. ಸಂಪರ್ಕ ಆಯ್ಕೆಗಳಲ್ಲಿ 5G, 4G, ವೈ-ಫೈ, ಬ್ಲೂಟೂತ್ 5.2, GPS ಮತ್ತು USB ಟೈಪ್-C ಪೋರ್ಟ್ ಹೊಂದಿದೆ.

ಭದ್ರತೆಗಾಗಿ, Realme C71 5G ಫೋನ್ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್ ಅನ್ನು ಹೊಂದಿದೆ. ಸುರಕ್ಷತೆಗಾಗಿ, ಮಿಲಿಟರಿ-ಗ್ರೇಡ್ MIL-STD-810H ಆಘಾತ-ನಿರೋಧಕ ಮತ್ತು IP54-ರೇಟೆಡ್ ಧೂಳು ಮತ್ತು ನೀರು-ನಿರೋಧಕ ನಿರ್ಮಾಣವಿರುವ ಈ ಫೋನ್ ಸುಮಾರು 201g ತೂಗುತ್ತದೆ.

ಭಾರತದಲ್ಲಿ Realme C71 5G ಬೆಲೆ, ಲಭ್ಯತೆ

ಮೊದಲೇ ತಿಳಿಸಿದಂತೆ, ಭಾರತದಲ್ಲಿ Realme C71 5G ಫೋನ್ ಬೆಲೆ 4GB + 64GB ಆಯ್ಕೆಗೆ ರೂ. 7,699 ರಿಂದ ಪ್ರಾರಂಭವಾಗುತ್ತದೆ. ಇದರ 6GB + 128GB ಮಾದರಿಯು 8,699 ರೂ. ಬೆಲೆ ಹೊಂದಿದೆ. ಗ್ರಾಹಕರು ಅಬ್ಸಿಡಿಯನ್ ಕಪ್ಪು ಮತ್ತು ಸಮುದ್ರ ನೀಲಿ ಬಣ್ಣದ ಆಯ್ಕೆಗಳಲ್ಲಿ ಈ ಫೋನನ್ನು ಖರೀದಿಸಲು ಅವಕಾಶವಿದ್ದು, ಪ್ರಸ್ತುತ ದಿನದಿಂಲೇ ದೇಶದಲ್ಲಿ ಫ್ಲಿಪ್‌ಕಾರ್ಟ್, Realme ಇಂಡಿಯಾ ಇ-ಸ್ಟೋರ್ ಮತ್ತು ಆಯ್ದ ಆಫ್‌ಲೈನ್ ಚಿಲ್ಲರೆ ಅಂಗಡಿಗಳ ಮೂಲಕ ಖರೀದಿಸಲು ಲಭ್ಯವಿದೆ. ಈ ಫೋನ್ ಬೆಲೆ ಮತ್ತು ವೈಶಿಷ್ಟ್ಯಗಳ ಕುರತಂತೆ ನಿಮ್ಮ ಅಭಿಪ್ರಾಯ ಏನು ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.

Best Mobiles in India

English summary
The Realme C71 5G is equipped with a 6,300mAh battery, supporting 15W wired fast charging and 6W wired reverse charging capabilities.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+