13,499 ರೂ.ಗೆ 7,000mAh ಬ್ಯಾಟರಿಯ Realme C83 5G ಫೋನ್ ಲಾಂಚ್!
ಭಾರತದಲ್ಲಿ Realme ಕಂಪೆನಿಯು ತನ್ನ ಜನಪ್ರಿಯ C-ಸರಣಿಗೆ ಹೊಸ ಸೇರ್ಪಡೆಯಾಗಿ ಬಜೆಟ್ ಬೆಲೆಯ Realme C83 5G ಸ್ಮಾರ್ಟ್‌ಫೋನ್ ಅನ್ನು ಇಂದು (ಮಾರ್ಚ್ 6) ಪರಿಚಯಿಸಿದೆ. 7,000mAh ಟೈಟಾನ್ ಬ್ಯಾಟರಿಯೊಂದಿಗೆ ದೀರ್ಘ ಬ್ಯಾಟರಿ ಬ್ಯಾಕಪ್ ಬೇಕೆನ್ನುವ ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡು ಈ ಸಾಧನವನ್ನು ಬಿಡುಗಡೆ ಮಾಡಲಾಗಿದ್ದು, ₹13,499 ರೂ.ಗಳ ಆರಂಭಿಕ ಬೆಲೆಯೊಂದಿಗೆ ಗಮನಸೆಳೆಯುವಂತಿದೆ. ಹಾಗಾದರೆ, ಹೊಸ Realme C83 5G ಸ್ಮಾರ್ಟ್‌ಫೋನ್ ಹೇಗಿದೆ?, ಬೆಲೆಗಳು ಎಷ್ಟು? ಹಾಗೂ ಸಂಪೂರ್ಣ ಫೀಚರ್ಸ್ ಯಾವುವು? ಎಂಬುದನ್ನು ನೋಡೋಣ ಬನ್ನಿ.
Realme C83 5G: ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ Realme C83 5G ಫೋನ್ ಬೆಲೆ 4GB + 64GB RAM ಮಾದರಿಗೆ 13,499 ರೂ. ನಿಂದ ಪ್ರಾರಂಭವಾಗುತ್ತದೆ. ಒಟ್ಟು ಮೂರು ಸ್ಟೋರೇಜ್ ಮಾದರಿಗಳಲ್ಲಿ ಈ ಫೋನ್ ಬಿಡುಗಡೆಯಾಗಿದ್ದು, ಇದರ 4GB RAM ಹಾಗೂ ಸ್ವಲ್ಪ ಹೆಚ್ಚಿನ 128GB ಸ್ಟೋರೇಜ್ ಹೊಂದಿರುವ ಮಾದರಿಯ ಬೆಲೆ ₹14,499 ರೂ. ಹಾಗೂ 6GB RAM ಮತ್ತು 128GB ಸ್ಟೋರೇಜ್ ಇರುವ ಟಾಪ್ ವೇರಿಯಂಟ್ ಬೆಲೆ ₹17,499 ಗಳಾಗಿವೆ.

ಇನ್ನು ಲಭ್ಯತೆಯನ್ನು ನೋಡುವುದಾದರೆ, Realme C83 5G ಫೋನ್ ಇದೇ ಮಾರ್ಚ್ 7 ರಂದು ಮಧ್ಯಾಹ್ನ 12 ಗಂಟೆಯಿಂದ Flipkart ಮತ್ತು Realme ಆನ್‌ಲೈನ್ ಸ್ಟೋರ್‌ಗಳ ಮೂಲಕ ಮಾರಾಟಕ್ಕೆ ಬರಲಿದೆ. ಗ್ರಾಹಕರು ಬ್ಲೂಮಿಂಗ್ ಪರ್ಪಲ್ (Blooming Purple ) ಮತ್ತು ಸ್ಪ್ರೌಟಿಂಗ್ ಗ್ರೀನ್ (Sprouting Green) ಬಣ್ಣಗಳಲ್ಲಿ ಫೋನ್ ಅನ್ನು ಖರೀದಿಸಬಹುದಾಗಿದ್ದು, ಫೋನ್ ಖರೀದಿಸುವಾಗ ಆರು ತಿಂಗಳವರೆಗೆ ಬಡ್ಡಿಯಿಲ್ಲದ EMI ಆಯ್ಕೆಯೂ ದೊರೆಯುತ್ತದೆ ಎಂದು ಕಂಪೆನಿಯು ತಿಳಿಸಿದೆ.
Realme C83 5G: ಪ್ರಮುಖ ವೈಶಿಷ್ಟ್ಯಗಳು
ಹೊಸ Realme C83 5G ಫೋನ್ 6.8-ಇಂಚಿನ HD+ (720x1,570 ಪಿಕ್ಸೆಲ್‌ಗಳು) LCD ಡಿಸ್‌ಪ್ಲೆಯನ್ನು ಹೊಂದಿದೆ. ಈ ಡಿಸ್‌ಪ್ಲೆಯು 144Hz ವರೆಗೆ ರಿಫ್ರೆಶ್ ರೇಟ್, 900 nits ವರೆಗೆ ಗರಿಷ್ಠ ಹೊಳಪು, 16.7 ಮಿಲಿಯನ್ ಬಣ್ಣಗಳು ಮತ್ತು 180Hz ಟಚ್ ಸ್ಯಾಂಪ್ಲಿಂಗ್ ದರವನ್ನು ನೀಡುತ್ತದೆ.
ಕಾರ್ಯಕ್ಷಮತೆಯ ವಿಷಯದಲ್ಲಿ, ಈ ಫೋನ್‌ನಲ್ಲಿ 6nm ತಂತ್ರಜ್ಞಾನದಲ್ಲಿ ನಿರ್ಮಿತವಾದ MediaTek Dimensity 6300 ಆಕ್ಟಾ-ಕೋರ್ ಪ್ರೊಸೆಸರ್ ಬಳಕೆ ಮಾಡಲಾಗಿದೆ. ಜೊತೆಗೆ ARM Mali-G57 MC2 GPU ಒದಗಿಸಲಾಗಿದೆ. ಫೋನ್‌ನಲ್ಲಿ ಗರಿಷ್ಠ 6GB LPDDR4x RAM ಮತ್ತು 128GB ವರೆಗೆ eMMC 5.1 ಆನ್‌ಬೋರ್ಡ್ ಸ್ಟೋರೇಜ್ ಸೌಲಭ್ಯ ನೀಡಲಾಗಿದೆ.ಸಾಫ್ಟ್‌ವೇರ್ ವಿಭಾಗದಲ್ಲ, ಈ ಫೋನ್ Realme UI 7.0 ಮೇಲೆ ಕಾರ್ಯನಿರ್ವಹಿಸುತ್ತದೆ ಮತ್ತು ಇದು ಆಧಾರಿತವಾಗಿದೆ.
ಕ್ಯಾಮೆರಾ ವಿಭಾಗದಲ್ಲಿ Realme C83 5G ಒಂದೇ ಹಿಂಭಾಗದ ಕ್ಯಾಮೆರಾ ಹೊಂದಿದೆ. ಇದು 13 ಮೆಗಾಪಿಕ್ಸೆಲ್ ಸೆನ್ಸರ್ ಹೊಂದಿದ್ದು f/2.2 ಅಪರ್ಚರ್ ಮತ್ತು 77 ಡಿಗ್ರಿ ಫೀಲ್ಡ್ ಆಫ್ ವ್ಯೂ ಬೆಂಬಲ ನೀಡುತ್ತದೆ. ಜೊತೆಗೆ ಆಟೋಫೋಕಸ್ ಸೌಲಭ್ಯವೂ ಇದೆ. ಮುಂಭಾಗದಲ್ಲಿ ಸೆಲ್ಫಿ ಮತ್ತು ವಿಡಿಯೋ ಕಾಲ್‌ಗಾಗಿ 5 ಮೆಗಾಪಿಕ್ಸೆಲ್ ಕ್ಯಾಮೆರಾ ನೀಡಲಾಗಿದೆ. ಈ ಕ್ಯಾಮೆರಾ f/2.2 ಅಪರ್ಚರ್ ಮತ್ತು 78 ಡಿಗ್ರಿ ಫೀಲ್ಡ್ ಆಫ್ ವ್ಯೂ ಹೊಂದಿದೆ. ಎರಡೂ ಕ್ಯಾಮೆರಾಗಳಿಂದ ಗರಿಷ್ಠ 1080p 30fps ವಿಡಿಯೋ ರೆಕಾರ್ಡಿಂಗ್ ಸಾಧ್ಯವಾಗುತ್ತದೆ ಎಂದು ಕಂಪೆನಿ ತಿಳಿಸಿದೆ.
ಬ್ಯಾಟರಿ ವಿಷಯದಲ್ಲಿ ಈ ಫೋನ್ ಪ್ರಮುಖವಾಗಿ ಗಮನ ಸೆಳೆಯುತ್ತದೆ. Realme C83 5G ನಲ್ಲಿ ದೊಡ್ಡ 7,000mAh Titan Battery ನೀಡಲಾಗಿದೆ. ಜೊತೆಗೆ 15W ವೈರ್ಡ್ ಚಾರ್ಜಿಂಗ್ ಬೆಂಬಲವೂ ಇದೆ.

ಸಂಪರ್ಕ ಆಯ್ಕೆಗಳಾಗಿ 5G, 4G LTE, USB Type-C ಪೋರ್ಟ್ ಮತ್ತು 3.5mm ಆಡಿಯೋ ಜಾಕ್ ಸೇರಿವೆ. ಜೊತೆಗೆ BeiDou, GPS, GLONASS, Galileo ಮತ್ತು QZSS ನ್ಯಾವಿಗೇಶನ್ ವ್ಯವಸ್ಥೆಗಳಿಗೂ ಬೆಂಬಲ ಇದೆ. ಇದಲ್ಲದೆ, ಫೋನ್‌ನಲ್ಲಿ ಪ್ರಾಕ್ಸಿಮಿಟಿ ಸೆನ್ಸರ್, ಅಂಬಿಯಂಟ್ ಲೈಟ್ ಸೆನ್ಸರ್, ಇ-ಕಂಪಾಸ್ ಮತ್ತು ಅಕ್ಸಿಲರೋಮೀಟರ್ ಸೇರಿದಂತೆ ಹಲವು ಸೆನ್ಸರ್‌ಗಳನ್ನು ನೀಡಲಾಗಿದೆ.
Realme C83 5G ಫೋನ್ ಗಾತ್ರ 166.3 × 78.1 × 8.4 ಮಿಮೀ ಆಗಿದ್ದು, ತೂಕ ಸುಮಾರು 212 ಗ್ರಾಂ ಇದೆ. ಒಟ್ಟಾರೆಯಾಗಿ, 7,000mAh ದೊಡ್ಡ ಬ್ಯಾಟರಿ, 144Hz ಡಿಸ್ಪ್ಲೇ ಮತ್ತು 5G ಸಂಪರ್ಕದಂತಹ ವೈಶಿಷ್ಟ್ಯಗಳೊಂದಿಗೆ Realme C83 5G ಭಾರತದಲ್ಲಿ ಬಜೆಟ್ ಸ್ಮಾರ್ಟ್‌ಫೋನ್ ವಿಭಾಗದಲ್ಲಿ ಗಮನ ಸೆಳೆಯುವ ಸಾಧನವಾಗುವ ಸಾಧ್ಯತೆ ಇದೆ.


Click it and Unblock the Notifications