Home
ಮೊಬೈಲ್

₹14,999 ರೂ.ಗೆ Realme C85 5G ಲಾಂಚ್: 7,000mAh ಬ್ಯಾಟರಿ, 144Hz ಡಿಸ್‌ಪ್ಲೇ!

ಜನಪ್ರಿಯ ಸ್ಮಾರ್ಟ್‌ಫೋನ್ ಬ್ರ್ಯಾಂಡ್ Realme ಭಾರತೀಯ ಮಾರುಕಟ್ಟೆಗೆ ತನ್ನ ಹೊಸ ಬಜೆಟ್ ಸ್ನೇಹಿ 5G ಫೋನ್ 'Realme C85 5G' ಅನ್ನು ಇಂದು (ನವೆಂಬರ್ 28, ಶುಕ್ರವಾರ) ಭರ್ಜರಿಯಾಗಿ ಬಿಡುಗಡೆಗೊಳಿಸಿದೆ. ಮಾರುಕಟ್ಟೆಯ ನಿರೀಕ್ಷೆಯಂತೆಯೇ, ಈ ಫೋನ್ MediaTek Dimensity 6300 ಪ್ರೊಸೆಸರ್, 7,000mAh ದೊಡ್ಡ ಬ್ಯಾಟರಿ, ಮತ್ತು 144Hz ಅಲ್ಟ್ರಾ-ಸ್ಮೂತ್ ಡಿಸ್‌ಪ್ಲೇ ಸೇರಿದಂತೆ ಶಕ್ತಿಶಾಲಿ ವೈಶಿಷ್ಟ್ಯಗಳೊಂದಿಗೆ ಪರಿಚಯಗೊಂಡಿದ್ದು, ದೇಶದ ಎಂಟ್ರಿ-ಲೆವೆಲ್ 5G ವಿಭಾಗದಲ್ಲಿ ತನ್ನ ಸ್ಪರ್ಧೆಯನ್ನು ಮತ್ತಷ್ಟು ತೀವ್ರಗೊಳಿಸಿದೆ.! ಹಾಗಾದರೆ, ಹೊಸ ಬಜೆಟ್ ಸ್ನೇಹಿ 5G ಸ್ಮಾರ್ಟ್‌ಫೋನ್ Realme C85 5G ಫೋನಿನ ಸಂಪೂರ್ಣ ಫೀಚರ್ಸ್ ಯಾವುದು ಮತ್ತು ಬೆಲೆಗಳು ಎಷ್ಟು ಎಂಬುದನ್ನು ನೋಡೋಣ ಬನ್ನಿ.

Realme C85 5G: ಪ್ರಮುಖ ಫಿಚರ್ಸ್ ಮತ್ತು ವೈಶಿಷ್ಟ್ಯಗಳು
ಹೊಸ Realme C85 5G ಫೋನಿನಲ್ಲಿ 6.8-ಇಂಚಿನ HD+ (720x1,570 ಪಿಕ್ಸೆಲ್‌ಗಳು) ರೆಸಲ್ಯೂಶನ್ ಹೊಂದಿರುವ LCD ಡಿಸ್‌ಪ್ಲೇ ಇದೆ. ಇದು 144Hz ವರೆಗೆ ರಿಫ್ರೆಶ್ ರೇಟ್, 1,200 nits ವರೆಗೆ ಗರಿಷ್ಠ ಹೊಳಪು, 180Hz ವರೆಗೆ ಟಚ್ ಸ್ಯಾಂಪ್ಲಿಂಗ್ ದರವನ್ನು ಬೆಂಬಲಿಸುತ್ತದೆ. 90.4 ಪ್ರತಿಶತ ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಹೊಂದಿರುವ ಈ ಡಿಸ್‌ಪ್ಲೇಯು 100 ಪ್ರತಿಶತ sRGB, 83 ಪ್ರತಿಶತ DCI-P3 ಬಣ್ಣದ ಗ್ಯಾಮಟ್, 16.7 ಮಿಲಿಯನ್ ಬಣ್ಣಗಳನ್ನು ಸಪೋರ್ಟ್ ಮಾಡುತ್ತದೆ. ಮತ್ತು ಸುರಕ್ಷತೆಗಾಗಿ, ಕಾರ್ನಿಂಗ್ ಗ್ಲಾಸ್ ರಕ್ಷಣೆಯನ್ನು ಹೊಂದಿದೆ.

₹14,999 ರೂ.ಗೆ Realme C85 5G ಲಾಂಚ್: 7,000mAh ಬ್ಯಾಟರಿ, 144Hz ಡಿಸ್‌ಪ್ಲೇ!

ಕಾರ್ಯಕ್ಷಮತೆಗಾಗಿ, Realme C85 5G ಸ್ಮಾರ್ಟ್‌ಫೋನ್ ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. 6GB ವರೆಗೆ RAM ಮತ್ತು 12GB ಡೈನಾಮಿಕ್ RAM ಸಮಯೋಜಿಸಲಾದ ಈ ಪ್ರೊಸೆಸರ್ ಅನ್ನು ARM ಮಾಲಿ-G57 MC2 GPU ಜೊತೆಗೆ ಜೋಡಿಸಲಾಗಿದೆ. ಜೊತೆಗೆ 128GB ಆನ್‌ಬೋರ್ಡ್ ಮೆಮೊರಿ ಹೊಂದಿದೆ. ಈ ಫೋನ್ ಏಕಕಾಲದಲ್ಲಿ 17 ಆಪ್‌ಗಳನ್ನು ಸುಲಭವಾಗಿ ನಿರ್ವಹಿಸಬಲ್ಲದು ಎಂದು ಕಂಪನಿ ಹೇಳಿಕೊಂಡಿದೆ. ದೀರ್ಘಕಾಲದ ಬಳಕೆಯ ಶಾಖ ನಿರ್ವಹಣೆಗಾಗಿ, ಫೋನಿನಲ್ಲಿ 5,300 sq mm ವ್ಯಾಪಿಂಗ್ ಚೇಂಬರ್ ಕೂಲಿಂಗ್ ಸಿಸ್ಟಂ ಇದೆ.

ಕ್ಯಾಮೆರಾ ವಿಭಾಗದಲ್ಲಿ, Realme C85 5G ಫೋನ್ 50-ಮೆಗಾಪಿಕ್ಸೆಲ್ ಸಾಮರ್ಥ್ಯ ಸೋನಿ IMX852 ಫ್ರಾಥಮಿಕ ಲೆನ್ಸ್ ಹೊಂದಿರುವ ಹಿಂಬದಿಯ ಕ್ಯಾಮೆರಾ ಘಟಕವನ್ನು ಹೊಂದಿದೆ. ಇದು 30 fps ನಲ್ಲಿ 1080p ರೆಸಲ್ಯೂಶನ್ ವೀಡಿಯೊಗಳನ್ನು ರೆಕಾರ್ಡ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ಕಂಪೆನಿ ತಿಳಿಸಿದೆ. ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ, ಫೋನಿನ ಮುಂಬಾಗದಲ್ಲಿ 8-ಮೆಗಾಪಿಕ್ಸೆಲ್ ಕ್ಯಾಮೆರಾ ಇದೆ. ಇದು ಕೂಡ ಬಳಕೆದಾರರಿಗೆ 30 fps ನಲ್ಲಿ 1080p ವೀಡಿಯೊಗಳನ್ನು ಶೂಟ್ ಮಾಡಲು ಅನುವು ಮಾಡಿಕೊಡುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ.

₹14,999 ರೂ.ಗೆ Realme C85 5G ಲಾಂಚ್: 7,000mAh ಬ್ಯಾಟರಿ, 144Hz ಡಿಸ್‌ಪ್ಲೇ!

ಸಂಪರ್ಕ ಆಯ್ಕೆಗಳ ವಿಷಯದಲ್ಲಿ, Realme C85 5G ಫೋನ್ 5G, 4G LTE, USB ಟೈಪ್-C ಪೋರ್ಟ್, ಡ್ಯುಯಲ್ ಬ್ಯಾಂಡ್ Wi-Fi, ಬ್ಲೂಟೂತ್ 5.3, Beidou, GPS, GLONASS, Galileo ಮತ್ತು QZSS ಅನ್ನು ಒಳಗೊಂಡಿದೆ. ಆನ್‌ಬೋರ್ಡ್ ಸಂವೇದಕಗಳ ಪಟ್ಟಿಯಲ್ಲಿ ಸಾಮೀಪ್ಯ ಸಂವೇದಕ, ಸುತ್ತುವರಿದ ಬೆಳಕಿನ ಸಂವೇದಕ, ಬಣ್ಣ ತಾಪಮಾನ ಸಂವೇದಕ, ಇ-ದಿಕ್ಸೂಚಿ, ವೇಗವರ್ಧಕ ಮಾಪಕ ಮತ್ತು ಗೈರೊಸ್ಕೋಪ್ ಸೇರಿವೆ. ಇನ್ನು ಈ ಫೋನ್ IP69 ಪ್ರಮಾಣಿತ ಧೂಳು ಮತ್ತು ನೀರು ನಿರೋಧಕತೆಯ ರೇಟಿಂಗ್‌ನೊಂದಿಗೆ ಬಂದಿದೆ.

Realme C85 5G ಬೆಲೆ ಮತ್ತು ಲಭ್ಯತೆ
Realme C85 5G ಅನ್ನು ದೇಶದಲ್ಲಿ 4GB RAM + 128GB ಮತ್ತು 6GB RAM + 128GB ಸಾಮರ್ಥ್ಯದ ಎರಡು ರೂಪಾಂತರಗಳಲ್ಲಿ ಬಿಡುಗಡೆ ಮಾಡಲಾಗಿದೆ, ಇದರಲ್ಲಿ 4GB RAM + 128GB ಸ್ಟೋರೇಜ್ ಮಾದರಿಯು ₹16,499 ( ಪರಿಚಯಾತ್ಮಕ ಕೊಡುಗೆಯ ಭಾಗವಾಗಿ ಆರಂಭಿಕ ರಿಯಾಯಿತಿ ಬೆಲೆ: ₹14,999), ಮತ್ತು 6GB RAM + 128GB ಸ್ಟೋರೇಜ್ ₹17,999 (ಪರಿಚಯಾತ್ಮಕ ಕೊಡುಗೆಯ ಭಾಗವಾಗಿ ಆರಂಭಿಕ ರಿಯಾಯಿತಿ ಬೆಲೆ: ₹16,499) ಬೆಲೆಗಳಲ್ಲಿ ಪರಿಚಯಗೊಂಡಿವೆ. .

ಇನ್ನು ಗ್ರಾಹಕರು ಈ Realme C85 5G ಫೋನ್ ಅನ್ನು ಡಿಸೆಂಬರ್ 1 ರಂದು ಮಧ್ಯಾಹ್ನ 12 ಗಂಟೆಯಿಂದ ಫ್ಲಿಪ್‌ಕಾರ್ಟ್ ಮತ್ತು ಕಂಪನಿಯ ಅಧಿಕೃತ ವೆಬ್‌ಸೈಟ್‌ಗಳ ಮೂಲಕ Parrot Purple ಮತ್ತು Peacock Green ಎಂಬ ಆಕರ್ಷಕ ಬಣ್ಣಗಳಲ್ಲಿ ಖರೀದಿಸಬಹುದು ಎಂದು ಕಂಪೆನಿ ತಿಳಿಸಿದೆ.

ಒಟ್ಟಾರೆ ಸಾರಾಂಶವಾಗಿ, ದೇಶದ ಬಜೆಟ್ 5G ಮಾರುಕಟ್ಟೆಯಲ್ಲಿ ತೀವ್ರ ಸ್ಪರ್ಧೆ ಏರುತ್ತಿರುವ ಸಂದರ್ಭದಲ್ಲಿ, Realme C85 5G ಫೋನ್ ತನ್ನ ದೊಡ್ಡ 7,000mAh ಬ್ಯಾಟರಿ, 144Hz ರಿಫ್ರೆಶ್ ರೇಟ್ ಡಿಸ್ಪ್ಲೇ ಮತ್ತು ಆಕ್ರಮಣಕಾರಿ ಆರಂಭಿಕ ಬೆಲೆಗಳ ಸಂಯೋಜನೆಯಿಂದ ಗಮನಾರ್ಹವಾಗಿ ಎದ್ದು ಕಾಣುತ್ತದೆ. ಈ ವೈಶಿಷ್ಟ್ಯಗಳು ಸ್ಮಾರ್ಟ್‌ಫೋನ್ ಅನ್ನು ಕಾರ್ಯಕ್ಷಮತೆ ಮತ್ತು ಬಾಳಿಕೆ ಬಯಸುವ ಎಂಟ್ರಿ-ಲೆವೆಲ್ 5G ಗ್ರಾಹಕರಿಗೆ ಒಂದು ಆಕರ್ಷಕ ಆಯ್ಕೆಯನ್ನಾಗಿ ಮಾಡುತ್ತದೆ. ಈ ಕುರಿತಂತೆ ನಿಮ್ಮ ಅನಿಸಿಕೆ ಏನು ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.

Best Mobiles in India

English summary
Realme has launched the budget-friendly Realme C85 5G in India today (Friday, November 28), offering a MediaTek Dimensity 6300 processor, a huge 7,000mAh battery, and a 144Hz ultra-smooth display.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+