Home
ಮೊಬೈಲ್

ಭಾರತಕ್ಕೆ ಶೀಘ್ರವೇ Realme P4 Power 5G ಎಂಟ್ರಿ ಖಚಿತ: 10,000mAh ಬ್ಯಾಟರಿ?!

ಜನಪ್ರಿಯ ಮೊಬೈಲ್ ಬ್ರ್ಯಾಂಡ್ Realme ಕಂಪೆನಿಯು ಭಾರತದಲ್ಲಿ ಅತ್ಯಂತ ದೊಡ್ಡ ಬ್ಯಾಟರಿಯ ಪವರ್‌ಫೋಕಸ್‌ಡ್ ಸ್ಮಾರ್ಟ್‌ಫೋನ್ Realme P4 Power 5G ಫೋನ್ ಅನ್ನು ಬಿಡುಗಡೆ ಮಾಡುವ ಸೂಚನೆ ಇತ್ತಿಚಿಗಷ್ಟೇ ದೊರೆತಿತ್ತು. ಇದೀಗ ಈ ಸುದ್ದಿಯು ಅಧಿಕೃತಗೊಂಡಿದೆ. ಕಂಪನಿಯ ಮುಂದಿನ ಅತ್ಯಂತ ದೊಡ್ಡ ಬ್ಯಾಟರಿ ಹೊಂದಿರುವ ಫೋನ್ Realme P4 Power 5G ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆ ಆಗಲಿದೆ ಎಂಬುದನ್ನು ರಿಯಲ್‌ಮಿ ಅಧಿಕೃತವಾಗಿ ದೃಢಪಡಿಸಿದೆ. ಇತ್ತೀಚೆಗೆ ಫ್ಲಿಪ್‌ಕಾರ್ಟ್‌ನಲ್ಲಿ ಕಾಣಿಸಿಕೊಂಡ P ಸರಣಿಯ ಹೊಸ ಸೈಟ್ ಈಗ ಈ ಫೋನ್‌ಗೆ ಸಂಬಂಧಿಸಿದೆ ಎಂಬುದು ಸ್ಪಷ್ಟವಾಗಿದೆ.

ರಿಯಲ್‌ಮಿ ಗ್ಲೋಬಲ್ ಪ್ರಾಡೆಕ್ಟ್ ಹೆಡ್ ಫ್ರಾನ್ಸಿಸ್ ವಾಂಗ್ ಅವರು ಸಾಮಾಜಿಕ ಜಾಲತಾಣ X (ಹಿಂದಿನ ಟ್ವಿಟ್ಟರ್) ಮೂಲಕ ಮಾಹಿತಿ ಹಂಚಿಕೊಂಡಿದ್ದು, ಭಾರತದಲ್ಲಿ Realme P4 Power 5G ಲಾಂಚ್ ಸಮೀಪದಲ್ಲಿದೆ ಎಂದು ತಿಳಿಸಿದ್ದಾರೆ. ಈ ಫೋನ್ ಫ್ಲಿಪ್‌ಕಾರ್ಟ್ ಮೂಲಕ ಮಾರಾಟವಾಗಲಿದೆ ಎಂಬುದೂ ಈಗ ಖಚಿತವಾಗಿದೆ. ಲಾಂಚ್‌ಗೆ ಮುನ್ನ ಪ್ರಮುಖ ಫೀಚರ್‌ಗಳನ್ನು ಕಂಪನಿ ಟೀಸ್ ಮಾಡಿದ್ದು, ಇದು ಪವರ್ ಅನ್ನು ಗುರಿಯಾಗಿಸಿಕೊಂಡಿರುವುದು ಸ್ಪಷ್ಟವಾಗಿದೆ. ಇದಕ್ಕೆ ಉದಾಹರಣೆ ಎಂದರೆ, ಈ ಫೋನ್ ಒಂದೇ ಚಾರ್ಜ್‌ನಲ್ಲಿ 1.5ದಿನಗಳವರೆಗೆ ಬ್ಯಾಟರಿ ಬಾಳಿಕೆ ನೀಡುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ.

ನಿಖರವಾಗಿ, ಬ್ಯಾಟರಿಯ ಪ್ರಮುಖ ಫೀಚರ್ಸ್ ಕುರಿತು ತಿಳಿಸಲಾಗಿದ್ದು, Realme P4 Power 5G ಒಂದೇ ಚಾರ್ಜ್‌ನಲ್ಲಿ 1.5 ದಿನಗಳವರೆಗೆ ಬ್ಯಾಟರಿ ಬಾಳಿಕೆ ನೀಡುತ್ತದೆ. ಅಲ್ಲದೆ, ಶೇಕಡಾ 10 ರಷ್ಟು ಬ್ಯಾಟರಿಯಲ್ಲಿಯೂ ತಾಪಮಾನವನ್ನು ಕಾಯ್ದುಕೊಳ್ಳುವಾಗ ಫೋನ್ "ಸ್ಥಿರವಾದ FPS" ನೀಡುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಹೆಚ್ಚಿನ ಬಳಕೆಯ ಸಮಯದಲ್ಲಿ ಚಾರ್ಜರ್ ಕನೆಕ್ಟ್ ಮಾಡಿದರೂ ಬ್ಯಾಟರಿ ಮೇಲೆ ನೇರ ಒತ್ತಡ ಬಾರದಂತೆ ಇದು ಬೈಪಾಸ್ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ ಬಿಡುಗಡೆಯಾಗಲಿದೆ. ಹಾಗೂ 5G 27W ರಿವರ್ಸ್ ಚಾರ್ಜಿಂಗ್ ಬೆಂಬಲವನ್ನು ಸಹ ಹೊಂದಿರುತ್ತದೆ ಎಂದು ತಿಳಿಸಲಾಗಿದೆ.

ಭಾರತಕ್ಕೆ ಶೀಘ್ರವೇ Realme P4 Power 5G ಎಂಟ್ರಿ ಖಚಿತ: 10,000mAh ಬ್ಯಾಟರಿ?!

ಡಿಸೈನ್ ವಿಷಯದಲ್ಲಿ Realme P4 Power 5G ಸುಮಾರು 218 ಗ್ರಾಂ ತೂಕ ಹೊಂದಿರಲಿದೆ ಎಂದು ಟೀಸ್ ಮಾಡಲಾಗಿದೆ. ಇದರಿಂದ ದೊಡ್ಡ ಬ್ಯಾಟರಿ ಇದ್ದರೂ ಕೈಗೆ ಹಿಡಿಯಲು ಅನುಕೂಲವಾಗುವಂತೆ ಫೋನ್ ವಿನ್ಯಾಸಗೊಳಿಸಿರುವಂತೆ ಕಾಣುತ್ತದೆ. ಪ್ರಸ್ತುತ ಇಷ್ಟು ಮಾಹಿತಿಗಳು ಅಧಿಕೃತವಾಗಿದ್ದು, Realme P4 Power 5G ಚಿಪ್‌ಸೆಟ್, ಬ್ಯಾಟರಿ ಸಾಮರ್ಥ್ಯ, ವಿನ್ಯಾಸ, ಬಣ್ಣಗಳು, ಬೆಲೆ ಮತ್ತು ನಿಖರವಾದ ಬಿಡುಗಡೆ ದಿನಾಂಕ ಸೇರಿದಂತೆ ಫೋನ್‌ನ ಕುರಿತು ಹೆಚ್ಚಿನ ವಿವರಗಳನ್ನು ಮುಂದಿನ ದಿನಗಳಲ್ಲಿ ಬಹಿರಂಗಪಡಿಸುವ ನಿರೀಕ್ಷೆಯಿದೆ. ಆದರೆ, ಇದಕ್ಕೂ ಮೊದಲೇ ಒಂದು ಕುತೂಹಲದ ಅಂಶವೊಂದು ಹೊರಬಿದ್ದಿದೆ.

ಇತ್ತೀಚೆಗೆ, RMX5107 ಮಾದರಿ ಸಂಖ್ಯೆಯೊಂದಿಗೆ ರಿಯಲ್‌ಮಿ ಪಿ ಸರಣಿಯ ಫೋನ್ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ನಿಂದ ಅನುಮೋದನೆ ಪಡೆದಿದೆ ಎಂದು ವರದಿಯೊಂದು ಹೈಲೈಟ್ ಮಾಡಿದೆ. ಈ ಫೋನ್ ಭಾರತದಲ್ಲಿ ರಿಯಲ್‌ಮಿ ಪಿ4 ಪವರ್ 5G ಆಗಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಇದು 10,000mAh ಬ್ಯಾಟರಿಯನ್ನು ಪ್ಯಾಕ್ ಮಾಡುವ ಸಾಧ್ಯತೆಯಿದೆ. ಈ ಹ್ಯಾಂಡ್‌ಸೆಟ್ ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಅನ್ನು ಹೊಂದಿರಬಹುದು, ಇದರಲ್ಲಿ 50-ಮೆಗಾಪಿಕ್ಸೆಲ್ ಮುಖ್ಯ ಶೂಟರ್, 8-ಮೆಗಾಪಿಕ್ಸೆಲ್ ಸೆಕೆಂಡರಿ ಕ್ಯಾಮೆರಾ ಮತ್ತು ಇನ್ನೊಂದು 2-ಮೆಗಾಪಿಕ್ಸೆಲ್ ಕ್ಯಾಮೆರಾ ಸೇರಿವೆ.!

ನೆನಪಿಸಿಕೊಂಡು ಹೇಳುವುದಾದರೆ, 2025ರಲ್ಲಷ್ಟೇ ಬಿಡುಗಡೆಯಾಗಿದ್ದ Realme P4 5G ಭಾರತದಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಇದೀಗ ಬರುತ್ತಿರುವ Realme P4 Power 5G, ಇನ್ನಷ್ಟು ದೊಡ್ಡ ಬ್ಯಾಟರಿ ಮತ್ತು ಪವರ್-ಸೆಂಟ್ರಿಕ್ ಫೀಚರ್‌ಗಳೊಂದಿಗೆ Realme P ಸರಣಿಯನ್ನು ಹೊಸ ಮಟ್ಟಕ್ಕೆ ಕರೆದೊಯ್ಯುವ ಸಾಧ್ಯತೆ ಇದೆ. ದೀರ್ಘ ಬ್ಯಾಟರಿ ಲೈಫ್ ಬೇಕು ಎನ್ನುವ ಭಾರತೀಯ ಬಳಕೆದಾರರಿಗೆ ಈ ಫೋನ್ ಗಮನಾರ್ಹ ಆಯ್ಕೆಯಾಗಬಹುದು. ಇದರೊಂದಿಗೆ ಲಾಂಚ್ ದಿನಾಂಕ, ಬೆಲೆ ಮತ್ತು ಹಾರ್ಡ್‌ವೇರ್ ವಿವರಗಳು ಶೀಘ್ರದಲ್ಲೇ ಬಹಿರಂಗವಾಗುವ ನಿರೀಕ್ಷೆ ಇದೆ.

Best Mobiles in India

English summary
Realme has officially confirmed the launch of its upcoming power-focused smartphone, the Realme P4 Power 5G, in India. The device is expected to feature the largest battery ever on a Realme phone, with its Flipkart microsite already live, hinting at an imminent launch.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+